ಅಕ್ಷಯ ತೃತೀಯಕ್ಕೆ ಚಿನ್ನದ ಅಂಗಡಿ ಓಪನ್ ಇರುತ್ತಾ? ಗೋಲ್ಡ್ ರೇಟ್ ಹೇಗಿದೆ?

ಬೆಂಗಳೂರು: ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಎಲ್ರೂ ಆಭರಣ ಖರೀದಿ ಮಾಡುತ್ತಾರೆ. ಆದ್ರೆ ಈ ಬಾರಿ ಲಾಕ್​ಡೌನ್​ ಇರುವ ಹಿನ್ನೆಲೆಯಲ್ಲಿ ಎಲ್ಲಾ ಚಿನ್ನದ ಮಳಿಗೆಗಳು ಕ್ಲೋಸ್ ಆಗಲಿವೆ. ಆದ್ರೆ ಆನ್​ಲೈನ್ ಮೂಲಕ ಆಭರಣಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಈಗ ಆನ್​ಲೈನ್​ನಲ್ಲಿ ಬುಕ್ಕಿಂಗ್ ಮಾಡಿದ್ರೂ ಲಾಕ್ ಡೌನ್ ಮುಗಿದ ಬಳಿಕವಷ್ಟೇ ಚಿನ್ನ ಮನೆ ಬಾಗಿಲಿಗೆ ಬರಲಿದೆ. ಹಾಗಾಗಿ ಲಾಕ್​ಡೌನ್ ಮುಗಿಯೋವರೆಗೂ ಚಿನ್ನದ ಆಸೆ ಮರೆಯೋದೆ ಲೇಸು. ಏ.26 ಅಕ್ಷಯ ತೃತೀಯ ಮಳಿಗೆ ಓಪನ್ ಇಲ್ಲ, ಆನ್​ಲೈನ್ ಮೂಲಕ ಬುಕ್​​ ಮಾಡಿ: ಏ.26ರಂದು […]

ಅಕ್ಷಯ ತೃತೀಯಕ್ಕೆ ಚಿನ್ನದ ಅಂಗಡಿ ಓಪನ್ ಇರುತ್ತಾ? ಗೋಲ್ಡ್ ರೇಟ್ ಹೇಗಿದೆ?
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​

Updated on: Apr 22, 2020 | 4:39 PM

ಬೆಂಗಳೂರು: ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಎಲ್ರೂ ಆಭರಣ ಖರೀದಿ ಮಾಡುತ್ತಾರೆ. ಆದ್ರೆ ಈ ಬಾರಿ ಲಾಕ್​ಡೌನ್​ ಇರುವ ಹಿನ್ನೆಲೆಯಲ್ಲಿ ಎಲ್ಲಾ ಚಿನ್ನದ ಮಳಿಗೆಗಳು ಕ್ಲೋಸ್ ಆಗಲಿವೆ. ಆದ್ರೆ ಆನ್​ಲೈನ್ ಮೂಲಕ ಆಭರಣಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಈಗ ಆನ್​ಲೈನ್​ನಲ್ಲಿ ಬುಕ್ಕಿಂಗ್ ಮಾಡಿದ್ರೂ ಲಾಕ್ ಡೌನ್ ಮುಗಿದ ಬಳಿಕವಷ್ಟೇ ಚಿನ್ನ ಮನೆ ಬಾಗಿಲಿಗೆ ಬರಲಿದೆ. ಹಾಗಾಗಿ ಲಾಕ್​ಡೌನ್ ಮುಗಿಯೋವರೆಗೂ ಚಿನ್ನದ ಆಸೆ ಮರೆಯೋದೆ ಲೇಸು.

ಏ.26 ಅಕ್ಷಯ ತೃತೀಯ ಮಳಿಗೆ ಓಪನ್ ಇಲ್ಲ, ಆನ್​ಲೈನ್ ಮೂಲಕ ಬುಕ್​​ ಮಾಡಿ:
ಏ.26ರಂದು ಅಕ್ಷಯ ತೃತೀಯದಂದು ಚಿನ್ನದ ಮಳಿಗೆ ಓಪನ್ ಇರಲ್ಲ. ಆನ್​ಲೈನ್ ಮೂಲಕ ಆಭರಣ‌ ಬುಕ್​​ ಮಾಡಬಹುದು. ಲಾಕ್​ಡೌನ್ ಬಳಿಕ ಚಿನ್ನ ನಿಮ್ಮ ‌ಮನೆ ಬಾಗಿಲಿಗೇ ಬರುತ್ತೆ ಎಂದು ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ‌.ಶರವಣ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಅಕ್ಷಯ ತೃತೀಯದಂದು ಯಾರಾದ್ರೂ ಚಿನ್ನದ ಮಳಿಗೆ ಓಪನ್ ಮಾಡಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ಇದೇ ವೇಳೆ ಎಚ್ಚರಿಕೆ ಕೊಟ್ಟಿದ್ದಾರೆ.

ಲಾಕ್​ಡೌನ್ ನಡುವೆಯೂ ಚಿನ್ನ ದುಬಾರಿ:
ಅಕ್ಷಯ ತೃತೀಯದಂದು ಬೆಂಗಳೂರಿನಲ್ಲಿ ಪ್ರತಿ ವರ್ಷ ಬರೋಬ್ಬರಿ 100 ಕೆಜಿ ಹಳದಿ ಲೋಹ ಸೇಲಾಗುತ್ತಿತ್ತು. ಆದ್ರೆ ಈ ಬಾರಿ‌ 10 ಕೆಜಿ ಸೇಲಾಗೋದು ಸಹ ಡೌಟಾಗಿದೆ. ಲಾಕ್​ಡೌನ್ ನಡುವೆಯೂ ಚಿನ್ನದ ಬೆಲೆ ದುಬಾರಿಯಾಗಿದ್ದು, 1 ಗ್ರಾಂನ 24 ಕ್ಯಾರೆಟ್ ಗೋಲ್ಡ್ ರೇಟ್ 4,800 ರೂಪಾಯಿ ಇದೆ.

Published On - 4:22 pm, Wed, 22 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us