ದಿನಭವಿಷ್ಯ | ಜನವರಿ 06, 2021
ಜನವರಿ 6, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನಭವಿಷ್ಯ.
ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣಪಕ್ಷ, ಅಷ್ಟಮಿ, ಬುಧವಾರ, ಜನವರಿ 06, 2021. ಹಸ್ತ ನಕ್ಷತ್ರ, ರಾಹುಕಾಲ: ಮಧ್ಯಾಹ್ನ 12ರಿಂದ 1.30. ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಿಗ್ಗೆ 6.47. ಸೂರ್ಯಾಸ್ತ: ಸಂಜೆ 5.55
ರಾಶಿ ಭವಿಷ್ಯ
ಮೇಷ: ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುವುದು. ಶುಭ ಸಂಖ್ಯೆ 1
ವೃಷಭ: ವಿನಯಪೂರ್ವಕ ಕಾರ್ಯ ಸಾಧಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ವಿವಿಧ ಮೂಲದಿಂದ ಧನಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಯೋಗವಿದೆ. ವಾಹನ ಖರೀದಿ ಯೋಗವಿರುವುದು. ಶುಭ ಸಂಖ್ಯೆ 8
ಮಿಥುನ: ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವುದು. ಶುಭ ಸಂಖ್ಯೆ 5
ಕಟಕ: ಅನಾವಶ್ಯಕ ತಿರುಗಾಟದಿಂದ ಆಲಸ್ಯ. ದುರ್ಜನರ ಸಹವಾಸ ದೋಷ ಕಂಡುಬರುವುದು. ಐಷಾರಾಮಿ ವಸ್ತುಗಳ ಖರೀದಿ ಸಂಭವ. ವ್ಯಾಪಾರ-ಉದ್ಯಮಗಳಲ್ಲಿ ತೃಪ್ತಿದಾಯಕ ಲಾಭವಿರುವುದು. ವಿದ್ಯಾರ್ಥಿಗಳಿಗೆ ಹಿನ್ನಡೆ ಇರುವುದು. ಶುಭ ಸಂಖ್ಯೆ 6
ಸಿಂಹ: ಸಹನೆಗೆ ತಕ್ಕ ಫಲ ದೊರೆಯುವುದು. ಬಹು ದಿನದ ಕನಸು ನನಸಾಗುವ ಕಾಲವಿದೆ. ಕೊರ್ಟಿನಲ್ಲಿದ್ದ ವ್ಯಾಜ್ಯಗಳಲ್ಲಿ ಜಯ ದೊರೆಯುವುದು. ಸಂತಾನಫಲದ ಅಪೇಕ್ಷೆ ಈಡೇರುವುದು. ಆರ್ಥಿಕ ವ್ಯವಹಾರಗಳ ಅದೃಷ್ಟ ಲಾಭತರುವವು. ಶುಭ ಸಂಖ್ಯೆ 7
ಕನ್ಯಾ: ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವದು. ಶುಭ ಸಂಖ್ಯೆ 9
ತುಲಾ: ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಶುಭ ಸಂಖ್ಯೆ 3
ವೃಶ್ಚಿಕ: ನಿಶ್ಚಿತ ಆರ್ಥಿಕ ಸ್ಥಿತಿ ಇರುವದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಶುಭ ಸಂಖ್ಯೆ 4
ಧನು: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ 6
ಮಕರ: ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿಬಂದು, ದೇಹಾಲಸ್ಯವು ತಲೆ ದೋರುವುದು, ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ. ಶುಭ ಸಂಖ್ಯೆ 2
ಕುಂಭ: ವ್ಯಥಾ ಚಿಂತೆ, ತಪ್ಪು ಕಲ್ಪನೆ, ನಿಷ್ಟುರ ಮಾತುಗಳನ್ನು ಕೇಳುವ ಸಂಭವ, ಜನ್ಮಸ್ಥ ಶುಕ್ರ ಇರುವದರಿಂದ ಆರ್ಥಿಕ ಸುಭದ್ರತೆ ಇರುವದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅವಶ್ಯಕ. ಮನೆಯಲ್ಲಿ ಸಂತೋಷವಿರುವದು. ಗೋಸೇವೆಯಿಂದ ಕಷ್ಟಪರಿಹಾರ. ಶುಭ ಸಂಖ್ಯೆ 1
ಮೀನ ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವದು. ಉತ್ಸಾಹ ಮೂಡುವದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ. ಶುಭ ಸಂಖ್ಯೆ 5.
(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 99728 48937)