ಬದುಕುಳಿದರೂ, ಅಡಿಯಿಂದ ಮುಡಿಯವರೆಗೆ ಕಾಡಲಿದೆ ಕೊರೊನಾ ಕ್ರಿಮಿ! ಏನದು?

ಎಷ್ಟೇ ಪ್ರಯತ್ನಪಟ್ರೂ ಹೆಮ್ಮಾರಿ ಕೊರೊನಾ ನಿಯಂತ್ರಣ ಮಾಡಲು ಆಗುತ್ತಿಲ್ಲ. ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಾ ಜನರನ್ನ ಬೆಚ್ಚಿ ಬೀಳಿಸುತ್ತಿದೆ. ಇದೀಗ ಬದುಕುಳಿದರೂ ಅಡಿಯಿಂದ ಮುಡಿಯವರೆಗೆ ಕೊರೊನಾ ಕ್ರಿಮಿ ಕಾಡಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಶ್ವಾಸಕೋಶಗಳಿಗೆ ಅಟ್ಯಾಕ್ ಆಗುವ ಕೊರೊನಾ ಕ್ರಿಮಿ, ನಿಧಾನವಾಗಿ ತಲೆಯಿಂದ ಕಾಲಿನ ಬೆರಳಿನವರೆಗೂ ವೈರಸ್​ನಿಂದ ರಕ್ತ ಹೆಪ್ಪುಗಟ್ಟುತ್ತಿರುವುದು ಗೋಚರವಾಗುತ್ತಿದೆ. ಇದು ಕಳೆದ ಎರಡು ತಿಂಗಳಲ್ಲಿ ವಿಶ್ಯದಾದ್ಯಂತ ಅನೇಕ ವೈದ್ಯರ ಗಮನಕ್ಕೆ ಬಂದಿದ್ದು, ಅದರ ಆಧಾರದ ಮೇಲೆ ಈ ರೋಗ ಲಕ್ಷಣಗಳು ಪತ್ತೆಯಾಗಿವೆ. 1. […]

ಬದುಕುಳಿದರೂ, ಅಡಿಯಿಂದ ಮುಡಿಯವರೆಗೆ ಕಾಡಲಿದೆ ಕೊರೊನಾ ಕ್ರಿಮಿ! ಏನದು?
ಸಾಧು ಶ್ರೀನಾಥ್​

Updated on: May 05, 2020 | 3:15 PM

ಎಷ್ಟೇ ಪ್ರಯತ್ನಪಟ್ರೂ ಹೆಮ್ಮಾರಿ ಕೊರೊನಾ ನಿಯಂತ್ರಣ ಮಾಡಲು ಆಗುತ್ತಿಲ್ಲ. ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಾ ಜನರನ್ನ ಬೆಚ್ಚಿ ಬೀಳಿಸುತ್ತಿದೆ. ಇದೀಗ ಬದುಕುಳಿದರೂ ಅಡಿಯಿಂದ ಮುಡಿಯವರೆಗೆ ಕೊರೊನಾ ಕ್ರಿಮಿ ಕಾಡಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.

ಶ್ವಾಸಕೋಶಗಳಿಗೆ ಅಟ್ಯಾಕ್ ಆಗುವ ಕೊರೊನಾ ಕ್ರಿಮಿ, ನಿಧಾನವಾಗಿ ತಲೆಯಿಂದ ಕಾಲಿನ ಬೆರಳಿನವರೆಗೂ ವೈರಸ್​ನಿಂದ ರಕ್ತ ಹೆಪ್ಪುಗಟ್ಟುತ್ತಿರುವುದು ಗೋಚರವಾಗುತ್ತಿದೆ. ಇದು ಕಳೆದ ಎರಡು ತಿಂಗಳಲ್ಲಿ ವಿಶ್ಯದಾದ್ಯಂತ ಅನೇಕ ವೈದ್ಯರ ಗಮನಕ್ಕೆ ಬಂದಿದ್ದು, ಅದರ ಆಧಾರದ ಮೇಲೆ ಈ ರೋಗ ಲಕ್ಷಣಗಳು ಪತ್ತೆಯಾಗಿವೆ.

1. ಸೋಂಕಿತರಲ್ಲಿ ಮಾರಣಾಂತಿಕವಾಗಿ ರಕ್ತ ಹೆಪ್ಪುಗಟ್ಟಬಹುದು. ಇದಕ್ಕೆ ದೀರ್ಘಕಾಲಿಕ ಚಿಕಿತ್ಸೆ ನೀಡಬೇಕಾಗುತ್ತದೆ.
2. ಪಾದದ ಮೇಲೆ,ಕಾಲಿನ ಬೆರಳುಗಳ ಸುತ್ತ ಗಂಟುಗಳು ಆಗುವುದು. ಅದನ್ನು ವೈದ್ಯರು ಕೊವಿಡ್ ಟೊ (covid toe) ಎಂದು ಕರೆಯತೊಡಗಿದ್ದಾರೆ
3. ಅಲ್ಲದೆ, ಕೊರೊನಾ ಸೋಂಕಿನ ಪ್ರಭಾವದಿಂದ ಪಾರ್ಶ್ವವಾಯು ಸಹ ಕಾಣಿಸಬಹುದು.

Published On - 3:07 pm, Tue, 5 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us