
ಉಡುಪಿ ಹೋಟೆಲ್, ಉಡುಪಿ ಗ್ರ್ಯಾಂಡ್, ನ್ಯೂ ಉಡುಪಿ ಹೋಟೆಲ್… ಹೀಗೆ ಉಡುಪಿ ಎಂಬ ಪದ ಬಳಸಿ ಇಂದು ಭಾರತದಲ್ಲಿ ಅನೇಕ ಹೋಟೆಲ್ಗಳು ಹುಟ್ಟುಕೊಂಡಿವೆ. ಭಾರತದ ಮೂಲೆ ಮೂಲೆಯಲ್ಲೂ ಈ ಹೆಸರಿನ ಹೋಟೆಲ್ಗಳಿವೆ. ಕರ್ನಾಟಕದ ಬೀದಿಗಳಿಂದ ದೆಹಲಿಯ ಟಿಫಿನ್ ಅಂಗಡಿಗಳವರೆಗೆ ಉಡುಪಿ ಹೆಸರಿನ ಹೋಟೆಲ್ಗಳಿವೆ. ನೀವು ಎಲ್ಲೇ ಪ್ರಯಾಣಿಸಿದರೂ ಕನಿಷ್ಠ ಒಂದು ಉಡುಪಿಯ ರೆಸ್ಟೊರೆಂಟ್ ಅನ್ನು ನೋಡಿಯೇ ಇರುತ್ತೀರಿ. ಇದು ಮೊದಲಿಗೆ ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ‘ಉಡುಪಿ’ ಟ್ಯಾಗ್ ಅನ್ನು ಸೇರಿಸಿ ದೇಶದೆಲ್ಲೆಡೆ ವಿಸ್ತರಿಸಿಕೊಂಡಿದೆ. ಹಾಗಾದರೆ, ಈ ಉಡುಪಿ ಹೋಟೆಲ್ ಯಾಕಿಷ್ಟು ಫೇಮಸ್ ಆಗಿದೆ?. ಈ ಹೆಸರಿಗೂ ಮಹಭಾರತಕ್ಕೂ ಏನು ಸಂಬಂಧ?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಉಡುಪಿ ಹೋಟೆಲ್ಗಳು ದೇಶದ ವಿವಿಧ ಭಾಗಗಳಿಗೆ ಹೇಗೆ ತಲುಪಿದವು ಎಂಬುದರ ಕುರಿತು ಹಲವಾರು ಕಥೆಗಳಿವೆ. ಈ ಹೆಸರು ಇಂದು ಭಾರತದಾದ್ಯಂತ ಪಸರಿಸಲು ಕಾರಣ ಮಾಲೀಕತ್ವದ ಕೊರತೆ. ಆದರೆ, ಈ ಹೋಟೆಲ್ ಅನ್ನು ಯಾರು ಪ್ರಾರಂಭಿಸಿದರು ಎಂಬುದನ್ನು ನೋಡುವ ಮೊದಲು, ಅದರ ಹಿಂದಿನ ಸಂಪ್ರದಾಯವನ್ನು ತಿಳಿದುಕೊಳ್ಳೋಣ. ಕರ್ನಾಟಕದ ಉತ್ತರ ಭಾಗದ ಉಡುಪಿಯಲ್ಲಿ ಪ್ರಸಿದ್ಧವಾದ ಕೃಷ್ಣ ಮಠವಿದೆ. ಐತಿಹಾಸಿಕವಾಗಿ, ದೇವಾಲಯಕ್ಕೆ ಭೇಟಿ ನೀಡುವ ಎಲ್ಲಾ ಯಾತ್ರಾರ್ಥಿಗಳಿಗೆ ಅರ್ಚಕರು ಸ್ಥಳೀಯ ಅಡುಗೆ ಭಟ್ಟರ ಸಹಾಯದಿಂದ ಅನ್ನದಾನವನ್ನು (ಆಹಾರದ ನೈವೇದ್ಯ) ಒದಗಿಸುತ್ತಿದ್ದರು. ಬಾಳೆಎಲೆಯಲ್ಲಿ ಆಹಾರವನ್ನು ನೀಡುವುದು ವಾಡಿಕೆಯಾಗಿತ್ತು. ವರದಿಯ ಪ್ರಕಾರ, ಸಮಯ ಕಳೆದಂತೆ, ಉಡುಪಿಯ ಅಡುಗೆ ಭಟ್ಟರು ಸ್ಥಳಾಂತರಗೊಂಡು ತಾವು ನೆಲೆಸಿದ ಸ್ಥಳಗಳಲ್ಲಿ ಹೋಟೆಲ್ ತೆರೆದು ಇದಕ್ಕೆ ಉಡುಪಿ ಹೋಟೆಲ್ ಎಂದು ಹೆಸರಿಟ್ಟರು. ಆದರೆ, ಉಡುಪಿಯ ರೆಸ್ಟೊರೆಂಟ್‌ಗಳ ಟ್ರೆಂಡ್ ಹೇಗೆ...
Published On - 12:10 pm, Mon, 22 April 24