ಹಾವಿನ ರಕ್ತ, ಹಾವಿನ ಸೂಪ್ ಕುಡಿಯುತ್ತಾರೆ ಈ ಜನ: ಇದರಿಂದಾಗುವ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ!

Snake Blood: ಹಾವಿನ ರಕ್ತವನ್ನು ಕುಡಿಯುವ ದೇಶವೊಂದಿದೆ. ಇಲ್ಲಿನ ಜನರು ಇದನ್ನು ನೀರಿನಂತೆ ಕುಡಿಯುತ್ತಾರೆ. ಹಾಗಾದರೆ, ಈ ಜನರು ಹಾವಿನ ರಕ್ತವನ್ನು ಏಕೆ ಕುಡಿಯುತ್ತಾರೆ?, ಇದನ್ನು ಕುಡಿಯುವುದರಿಂದ ಏನು ಪ್ರಯೋಜನ?, ಭಾರತೀಯರೂ ಇದನ್ನು ಕುಡಿಯಬಹುದಾ?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಾವಿನ ರಕ್ತ, ಹಾವಿನ ಸೂಪ್ ಕುಡಿಯುತ್ತಾರೆ ಈ ಜನ: ಇದರಿಂದಾಗುವ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ!
Snake

Updated on: Apr 22, 2024 | 10:15 AM

ನಮ್ಮ ದೇಶದಲ್ಲಿ ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಅದನ್ನು ಕೊಲ್ಲುವುದು ಮಹಾ ಪಾಪ ಎಂಬ ನಂಬಿಕೆಯಿದೆ ಮತ್ತು ಕಾನೂನುಬಾಹಿರವಾಗಿದೆ. ಕೆಲ ಹಾವುಗಳನ್ನು ಕಂಡರೆ ಅದರ ಹತ್ತಿರ ಹೋಗಬೇಡಿ ಮತ್ತು ಅದಕ್ಕೆ ಹಾನಿ ಮಾಡಬೇಡಿ ಎಂದು ಹೇಳುತ್ತಾರೆ. ಅದರಲ್ಲೂ ವಿಷಪೂರಿತ ಹಾವನ್ನು ಕಂಡರೆ ನಾವೆಲ್ಲ ಓಡಿ ಹೋಗುತ್ತೇವೆ. ಆದರೆ, ಇಲ್ಲೊಂದು ದೇಶದಲ್ಲಿ ಚಹಾ, ಕಾಫಿಯಂತೆ ಹಾವಿನ ರಕ್ತವನ್ನು ಕುಡಿಯುತ್ತಾರೆ ಎಂದರೆ ನಂಬಲೇಬೇಕು. ಹಾವಿನ ರಕ್ತವನ್ನು ಕುಡಿಯುವ ದೇಶ ಇಂಡೋನೇಷ್ಯಾ. ಇಲ್ಲಿನ ಜನರು ಇದನ್ನು ನೀರಿನಂತೆ ಕುಡಿಯುತ್ತಾರೆ. ಹಾಗಾದರೆ, ಈ ಜನರು ಹಾವಿನ ರಕ್ತವನ್ನು ಏಕೆ ಕುಡಿಯುತ್ತಾರೆ?, ಇದನ್ನು ಕುಡಿಯುವುದರಿಂದ ಏನು ಪ್ರಯೋಜನ?, ಭಾರತೀಯರೂ ಇದನ್ನು ಕುಡಿಯಬಹುದಾ?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಇಂಡೋನೇಷಿಯಾದಲ್ಲಿರುವ ಹೆಚ್ಚಿನ ಹುಡುಗಿಯರು ಹಾವಿನ ರಕ್ತವನ್ನು ಕುಡಿಯುತ್ತಾರೆ. ಹಾವಿನ ರಕ್ತವನ್ನು ಕುಡಿಯುವುದರಿಂದ ದೇಹವು ಫಿಟ್ ಆಗಿರುತ್ತದೆ ಮತ್ತು ಸುಂದರವಾಗಿ ಕಾಣುತ್ತಾರೆ ಎಂದು ಅವರು ಆಳವಾಗಿ ನಂಬಿದ್ದಾರೆ. ಇಲ್ಲಿ ಹಾವಿನ ರಕ್ತಕ್ಕಾಗಿ ಅಂಗಡಿಗಳಲ್ಲಿ ಸರದಿ ಸಾಲಿನಲ್ಲಿ ಜನ ನಿಂತಿರುತ್ತಾರೆ. ನಮಗೆ ಇದು ಅಚ್ಚರಿ ಮೂಡಬಹುದು. ಆದರೆ, ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಹಾವಿನ ರಕ್ತವನ್ನು ಕುಡಿಯುವುದು ಸಾಮಾನ್ಯ ವಿಷಯವಾಗಿದೆ. ಅಲ್ಲಿನ ಬೀದಿ ಬೀದಿಗಳಲ್ಲಿ ಹಾವಿನ ರಕ್ತ ಮಾರುವ ಕಾಫಿ, ಟೀ ಅಂಗಡಿಗಳು ಕಾಣಿಸುತ್ತವೆ. ಇಂಡೋನೇಷ್ಯಾದಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವಾಗ ಹಾವಿನ ರಕ್ತವನ್ನು ಹೆಚ್ಚಾಗಿ ಕುಡಿಯುತ್ತಾರೆ. ಇದಲ್ಲದೆ, ಜಕಾರ್ತದಲ್ಲಿ ಈ ಹಾವಿನ ರಕ್ತಕ್ಕೆ ಉತ್ತಮ ಬೇಡಿಕೆ ಮತ್ತು ಪ್ರವೃತ್ತಿ ಇದೆ. ಇಲ್ಲಿನ ಜನರು ಪ್ರತಿದಿನ ಸಾವಿರಾರು ಹಾವುಗಳನ್ನು ಕೊಲ್ಲುತ್ತಾರೆ. ಹಾವಿನ ರಕ್ತವನ್ನು ಕುಡಿದ ನಂತರ ಅವರು...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ