Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2019ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಲೋಕಾರ್ಪಣೆ

ಯುವ ಬರಹಗಾರರ ಚೊಚ್ಚಲ ಕೃತಿ ಪುರಸ್ಕಾರಕ್ಕೆ ಆಯ್ಕೆಯಾದ 55 ಕೃತಿಗಳ ಪೈಕಿ ಟಿವಿ9 ಕನ್ನಡ ಡಿಜಿಟಲ್​ ವಿಭಾಗದ ಗುರುಗಣೇಶ ಭಟ್​ ಡಬ್ಗುಳಿ ಅವರ ‘ಇದುವರೆಗಿನ ಪ್ರಾಯ’ ಕವನ ಸಂಕಲನಕ್ಕೂ ಪುರಸ್ಕಾರ ಲಭಿಸಿದೆ.

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2019ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಲೋಕಾರ್ಪಣೆ
ಇದುವರೆಗಿನ ಪ್ರಾಯ ಕವನ ಸಂಕಲನಕ್ಕೆ ಪ್ರಶಸ್ತಿ ಸ್ವೀಕರಿಸಿದ ಗುರುಗಣೇಶ ಭಟ್​
Follow us
Skanda
|

Updated on:Jan 20, 2021 | 5:52 PM

ಬೆಂಗಳೂರು: ಇದು ಅತಿ‌ಮೆಚ್ಚುಗೆಯ ಕಾಲ. ಆದರೆ, ಲೇಖಕನ ಪಾಲಿಗೆ ಅತಿ ಮೆಚ್ಚುಗೆಯೆಂಬುದು ವಿಷ. ಮೆಚ್ಚುಗೆಯನ್ನು ಅನುಮಾನ, ಅಪನಂಬಿಕೆಯಿಂದ ಸ್ವೀಕರಿಸಬೇಕು. ನಿಮಗೆ ನೀವೇ ವಿಮರ್ಶಕರಾಗಬೇಕು. ಸ್ವಯಂ ವಿಮರ್ಶಕನಾದರಷ್ಟೇ ಬರವಣಿಗೆ ಬೆಳೆಯಲು ಸಾಧ್ಯ ಎಂದು ಹಿರಿಯ ವಿಮರ್ಶಕ ಡಾ.ಎಚ್.ಎಸ್ ರಾಘವೇದ್ರ ರಾವ್ ಅಭಿಪ್ರಾಯಪಟ್ಟರು. ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ 2019ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯರ ಬರಹಗಳನ್ನು ಓದುವುದು ಮತ್ತು ಮೆಚ್ಚುವುದು ಒಂದು ರೀತಿ. ಆದರೆ, ಅದಕ್ಕಿಂತ ವಿಭಿನ್ನವಾಗಿ ಹೇಗೆ ಬರೆಯಬೇಕು ಎನ್ನುವುದನ್ನು ಕಂಡುಕೊಳ್ಳುವುದು ಮುಖ್ಯ. ನೀವು ನೀವಾಗಿ ಬರೆಯುವುದು ಹೇಗೆಂದು ಅರಿಯಬೇಕು. ಬೇರೆಯವರನ್ನು ಹೀರಿಕೊಂಡು, ಮೀರಿಕೊಂಡು ಬರೆಯುವುದನ್ನು ತಿಳಿದರೆ ಲೇಖಕರ ಬೆಳವಣಿಗೆಯ ಜತೆ ಭಾಷೆಯ ಬೆಳವಣಿಗೆಯೂ ಆಗುತ್ತದೆ ಎಂದು ಕಿವಿಮಾತು ಹೇಳಿದರು.

ವಸ್ತುನಿಷ್ಠತೆ, ಸತ್ಯವನ್ನು ಹಿಡಿದಿಟ್ಟುಕೊಂಡು ಬದುಕಬಲ್ಲವನು ನಿಜವಾದ ನಾಯಕ. ಕೆಲಸಗಳ‌ ಜತೆ ಸಾಹಿತಿ ಒಂದು ಕಿರೀಟವನ್ನು ಹೊತ್ತಿರುತ್ತಾನೆ. ಅದು ತಲೆಯ ಮೇಲಿನ‌ ಕಿರೀಟವಲ್ಲ, ಎದೆಯ ಮೇಲಿನ ಮುಳ್ಳಿನ ಕಿರೀಟ. ಆ ಕಿರೀಟವನ್ನು ನೀವು ಹೊತ್ತಿರಲೇ ಬೇಕು. ವಕೀಲರು, ರಾಜಕಾರಣಿಗಳು ಒಂದೇ ಸತ್ಯವನ್ನು ಹೊಂದಿರುತ್ತಾರೆ. ಆದರೆ, ಒಬ್ಬ ಕವಿ, ಕಾದಂಬರಿಕಾರ, ನಾಟಕಕಾರನ ಪಾಲಿಗೆ ಒಂದು ಸತ್ಯಕ್ಕೆ ಒಂಬತ್ತು ಮುಖಗಳಿರುತ್ತವೆ. ನಿಜವಾದ ಲೇಖಕ ಸತ್ಯದ ಎಲ್ಲಾ ಮುಖಗಳನ್ನೂ ನೋಡಬೇಕು ಎಂದು ಕಿವಿಮಾತು ಹೇಳಿದರು.

ಸಾಹಿತಿಗೆ ಮರದ ರೀತಿಯಲ್ಲಿ ಆತ್ಮವಿಶ್ವಾಸ ಇರಬೇಕು. ಹಿಂದೆ ಬಿಟ್ಟಂತೆ ನಾಳೆಯೂ ಹೂ ಬಿಡುವ ಆತ್ಮವಿಶ್ವಾಸ ಮರಕ್ಕಿರುತ್ತದೆ. ಅಂತೆಯೇ, ದಿನದಿನವೂ ಹೊಸಹೊಸ ಬರಹ ಬರೆಯುವ ವಿಶ್ವಾಸ ಲೇಖಕನಿಗಿರಬೇಕು ಎಂದು ಸಾಹಿತಿ ಜೋಗಿ ಅಭಿಪ್ರಾಯಪಟ್ಟರು. ಈ ಕಾಲದಲ್ಲಿ ಫೇಸ್​ಬುಕ್ ನಲ್ಲಿ ಬರೆಯುವುದು ತಪ್ಪಲ್ಲ. ಅದೂ ಒಂದು ತಾಳೆಗರಿಯಲ್ಲಿ ಬರೆದಂತೆ. ಆದರೆ, ಅಲ್ಲಿಯ ಹೊಗಳಿಕೆ ತೆಗಳಿಕೆಗಳು ನಿಜವಲ್ಲ ಎಂಬುದರ ಅರಿವಿರಬೇಕು ಎಂದು ಸಲಹೆ ನೀಡಿದರು.

2019ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪುರಸ್ಕಾರಕ್ಕೆ ಬಂದಿದ್ದ 110 ಹಸ್ತಪ್ರತಿಗಳಲ್ಲಿ 55 ಕೃತಿಗಳು ಆಯ್ಕೆಯಾಗಿದ್ದು, ತಾಂತ್ರಿಕ ಕಾರಣದಿಂದ ಇಂದು 50 ಪುಸ್ತಕಗಳು ಲೋಕಾರ್ಪಣೆಗೊಂಡವು. ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಕೆ.ಬಿ.ಕಿರಣ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.

ಟಿವಿ9 ಕನ್ನಡ ಡಿಜಿಟಲ್​ ವಿಭಾಗದ ಗುರುಗಣೇಶರ ಕವನ ಸಂಕಲನ ಬಿಡುಗಡೆ ಯುವ ಬರಹಗಾರರ ಚೊಚ್ಚಲ ಕೃತಿ ಪುರಸ್ಕಾರಕ್ಕೆ ಆಯ್ಕೆಯಾದ 55 ಕೃತಿಗಳ ಪೈಕಿ ಟಿವಿ9 ಕನ್ನಡ ಡಿಜಿಟಲ್​ ವಿಭಾಗದ ಗುರುಗಣೇಶ ಭಟ್​ ಡಬ್ಗುಳಿ ಅವರ ‘ಇದುವರೆಗಿನ ಪ್ರಾಯ’ ಕವನ ಸಂಕಲನಕ್ಕೂ ಪುರಸ್ಕಾರ ಲಭಿಸಿದೆ. ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ತಾಲ್ಲೂಕಿನ ಡಬ್ಗುಳಿ ಎಂಬ ಊರಿನ ಗುರುಗಣೇಶ ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ವಿಶಿಷ್ಟ ಗ್ರಹಿಕೆಗಳಿಂದ ಮೂಡಿಬಂದ ಕವನಗಳು ಗಮನ ಸೆಳೆಯುತ್ತವೆ.

ನಾನೆಂಬ ಪರಿಮಳದ ಹಾದಿಯಲಿ: ಕಂಬಳಿ ಹುಳವೊಂದು ಚಿಟ್ಟೆಯಾಗುವ ಘಳಿಗೆ ಸಹಿಸಿಕೊಂಡಿದ್ದಕ್ಕೇ…

Published On - 5:50 pm, Wed, 20 January 21

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ