ವಿಕಲಚೇತನನಾದ್ರೂ ಕೃಷಿ ಕಾಯಕದಲ್ಲಿ ತೊಡಗಿ ಇತರರಿಗೆ ಮಾದರಿ.. ಇಲ್ಲಿದೆ ನೋಡಿ ವಿಶೇಷ ರೈತನ ಕೃಷಿ ಬದುಕು
ಬಯಲುಸೀಮೆಯಲ್ಲಿ ಕೆಲ ಕೃಷಿಕರೇ ಕೃಷಿ ಕಾಯಕವನ್ನ ಬಿಟ್ಟು ಬೇರೆ ಬೇರೆ ಕೆಲಸವನ್ನ ನೋಡಿಕೊಳ್ಳುತ್ತಿದ್ದಾರೆ. ಆದ್ರೆ, ಕಾಲು ಸ್ವಾಧೀನ ಕಳೆದುಕೊಂಡ ಓರ್ವ ವ್ಯಕ್ತಿ ಮಾತ್ರ ಛಲದಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾನೆ. ಯಾರ ಹಂಗಿಲ್ಲದೆ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳುವ ಮೂಲಕ ಮಾದರಿ ಕೃಷಿಕನಾಗಿದ್ದಾನೆ.
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಸೂರಪ್ಪನಹಟ್ಟಿ ಗ್ರಾಮದ ಬಾಲಣ್ಣ ಎಂಬ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುವ ವೇಳೆ ಭತ್ತದ ಮೂಟೆ ಮೈಮೇಲೆ ಬಿದ್ದಿತ್ತು. ಈ ಪರಿಣಾಮ ಬಾಲಣ್ಣ ಅದೆಷ್ಟೇ ಚಿಕಿತ್ಸೆ ಪಡೆದರೂ ಸಹ ಸ್ವಾಧೀನ ಕಳೆದುಕೊಂಡಿದ್ದ ಕಾಲುಗಳು ಸುಧಾರಣೆ ಕಂಡಿಲ್ಲ. ಹೀಗಾಗಿ, ಹತ್ತು ವರ್ಷಗಳ ಹಿಂದೆಯೇ ಗ್ರಾಮಕ್ಕೆ ಮರಳಿದ ಬಾಲಣ್ಣ ಯಾರ ಮುಲಾಜಿಗೂ ಒಳಗಾಗದೆ ಕೃಷಿ ಕಾಯಕದಲ್ಲಿ ತೊಡಗಿದ್ದಾನೆ. ಸೌತೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು, ವರ್ಷಕ್ಕೆ ಲಕ್ಷ, ಲಕ್ಷ ರೂ. ಆದಾಯ ಗಳಿಸುತ್ತಿದ್ದಾನೆ.
ಕೆಲ ವ್ಯಾಪಾರಿಗಳು ಬಾಲಣ್ಣನ ಹೊಲಕ್ಕೆ ಬಂದು ತರಕಾರಿ ಕೊಳ್ಳುತ್ತಾರೆ. ಇನ್ನೂ ಕೆಲ ರೈತರು ಬಾಲಣ್ಣನ ಕೃಷಿ ಕಾಯಲ ವೀಕ್ಷಿಸಲೆಂದೇ ಬರುತ್ತಾರೆ. ಆದ್ರೆ ಈವರೆಗೆ ಸರ್ಕಾರ ಬಾಲಣ್ಣಗೆ ಯಾವುದೇ ನೆರವು ನೀಡದಿದ್ದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡಿನ ಈ ವಿಶೇಷ ರೈತನ ಕೃಷಿ ಬದುಕು ನಿಜಕ್ಕೂ ಅನೇಕರಿಗೆ ಮಾದರಿ ಆಗಿದೆ. ಸರ್ಕಾರ ಕೂಡ ಬಾಲಣ್ಣನ ಕಡೆ ಗಮನ ಹರಿಸಿ ಅಗತ್ಯ ನೆರುವು ನೀಡಲು ಮುಂದಾಗಬೇಕಿದೆ.
ಔಷಧೀಯ ಸಸ್ಯಗಳ ಕೃಷಿ ಮಾಡಿ ಇತರ ರೈತರಿಗೆ ಮಾದರಿಯಾದ ಇಂಗ್ಲಿಷ್ ಉಪನ್ಯಾಸಕ