AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marriage on Akshaya Tritiya 2021: ಅಕ್ಷಯ ತೃತೀಯ ಮದುವೆ ಸಮಾರಂಭಗಳಿಗೆ ಶುಭ ದಿನ

Akshaya Tritiya for Marriage: ಅಕ್ಷಯ ತೃತೀಯದ ಈ ದಿನವು ಮದುವೆ ಸಮಾರಂಭಗಳಿಗೆ ಶುಭ ದಿನವೆಂದು ಹಿರಿಯರು ಹೇಳುತ್ತಾರೆ. ಏಕಿರಬಹುದು?

Marriage on Akshaya Tritiya 2021: ಅಕ್ಷಯ ತೃತೀಯ ಮದುವೆ ಸಮಾರಂಭಗಳಿಗೆ ಶುಭ ದಿನ
ಪ್ರಾತಿನಿಧಿಕ ಚಿತ್ರ
shruti hegde
|

Updated on: May 14, 2021 | 11:05 AM

Share

ಇಂದು ಅಕ್ಷಯ ತೃತೀಯ. ಶುಭ ಕಾರ್ಯಗಳನ್ನು ನೆರವೇರಿಸಲು ಮಹತ್ತರ ದಿನ. ಜನರು ದಾನ-ಧರ್ಮ, ಪೂಜೆ-ಪುನಸ್ಕಾರಗಳ ಜೊತೆಗೆ ದಿನ ಪೂರ್ತಿ ಕಳೆಯುತ್ತಾರೆ. ಹಾಗೆಯೇ ಶುಭ ದಿನದ ಈ ದಿನದಂದು ಮದುವೆ ಸಮಾರಂಭಗಳಿಗೆ ಒಳ್ಳೆಯ ದಿನವೆಂದು ಹಿರಿಯರು ಹೇಳುತ್ತಾರೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಅಕ್ಷಯ ತೃತೀಯ. ಚಿನ್ನ, ಬೆಳ್ಳಿ ಕೊಳ್ಳುವುದರ ಜೊತೆಗೆ ಹೊಸ ವ್ಯವಹಾರಕ್ಕೆ, ಉದ್ಯೋಗಕ್ಕೆ, ಗೃಹಪ್ರವೇಶ ಸೇರಿದಂತೆ ಮದುವೆ ಕಾರ್ಯಗಳಿಗೆ ಒಳ್ಳೆಯ ದಿನವಿದು.

ಹಿಂದೂ ಪುರಾಣದ ಪ್ರಕಾರ ಅಕ್ಷಯ ತೃತೀಯ ದಿನವನ್ನು ಶುಭ ದಿನವೆಂದು ಪರಿಗಣಿಸಲಾಗಿದೆ. ಈ ವಿಶೇಷ ದಿನದಂದು ಮದುವೆ- ಸಮಾರಂಭಗಳಿಗೆ ಅಥವಾ ಶುಭ ಕಾರ್ಯಕ್ರಮಗಳಿಗೆ ಪವಿತ್ರ ದಿನ. ಹಾಗಾಗಿ ಮನೆಯಲ್ಲಿ ತಮ್ಮ ಮಕ್ಕಳ ಅಥವಾ ಮೊಮ್ಮಕ್ಕಳ ವಿವಾಹ ಸಮಾರಂಭ ನೆರವೇರಿಸಲು ಅಕ್ಷಯ ತೃತೀಯ ದಿನದ ಬರುವಿಕೆಗೆ ಕಾಯುವುದುಂಟು. ಮದುವೆ ಕೂಡಾ ಶುಭ ಕಾರ್ಯಗಳಲ್ಲಿ ಒಂದಾಗಿರುವುದರಿಂದ ಈ ದಿನ ಮದುವೆ ಮಾಡಿ ಬೇರೊಂದು ಮನೆಗೆ ಕಳುಹಿಸಿಕೊಡುವ ಹೆಣ್ಣು ಮಗಳು ಜೀವನ ಪೂರ್ತಿ ಖುಷಿಯಿಂದ ಜೀವನ ನಡೆಸುತ್ತಾಳೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇರುವಂಥದ್ದು.

ಶ್ರಿಕೃಷ್ಣನ ಪ್ರಾರ್ಥನೆ ಪೌರಾಣಿಕ ಕಥೆಗಳ ಪ್ರಕಾರ, ಮಹಾಭಾರತದ ಯುದ್ಧವು ಅಕ್ಷಯ ತೃತೀಯ ದಿನದಂದು ಮುಗಿಯಿತು. ಪುರಾಣದಲ್ಲಿ ಶ್ರೀ ಕೃಷ್ಣ ಪರಮಾತ್ಮನೇ ಅಕ್ಷಯ ತೃತೀಯದ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ.

ಈ ದಿನದ ಆಚರಣೆಯಲ್ಲಿ ಶುದ್ಧ ಸ್ನಾನ, ಜಪ, ತಪಸ್ಸು, ತರ್ಪಣ, ದಾನ ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ವೈಶಾಖ ಮಾಸದ ಶುಕ್ಲಪಕ್ಷ ತೃತೀಯ ತಿಥಿಯಂದು ಅಕ್ಷ ತೃತೀಯ ಬರುತ್ತದೆ. ಗೃಹ ಪ್ರವೇಶ, ಮದುವೆ, ಹೊಸ ಉದ್ಯೋಗ, ಹೂಡಿಕೆ ಹೀಗೆ ಎಲ್ಲಾ ಹೊಸ ಕಾರ್ಯಗಳಿಗೆ ಹಾಗೂ ಶುಭ ಕೆಲಸಗಳನ್ನು ಮಾಡಲು ಅಕ್ಷಯ ತೃತೀಯ ಮಹತ್ವದ ದಿನವಾಗಿದೆ.

ಮಹಾಭಾರತದಲ್ಲಿ ದ್ರೌಪತಿಗೆ ಶ್ರೀಕೃಷ್ಣನು ಅಕ್ಷಯ ಪಾತ್ರೆಯನ್ನು ಕೊಟ್ಟು ಅದರಿಂದ ಊಟ ಕೇಳಿದಾಗ ಊಟವಿಲ್ಲ ಎಂದು ಹೇಳಲು ಹಿಂಜರಿಯುತ್ತಿದ್ದ ದ್ರೌಪತಿಗೆ, ಪಾತ್ರೆಯಲ್ಲಿದ್ದ ಒಂದೇ ಒಂದು ಅಗುಳನ್ನು ಅಕ್ಷಯವನ್ನಾಗಿ ಮಾಡಿದಂತಹ ಘಟನೆ ಇತಿಹಾಸದಲ್ಲಿದೆ. ಹಾಗಾಗಿ ಅಕ್ಷಯ ತೃತೀಯವನ್ನು ಹಿಂದೂ ಮತ್ತು ಜೈನರು ಪವಿತ್ರ ದಿನವನ್ನಾಗಿ ಆಚರಿಸುತ್ತಾರೆ.

ಮಹತ್ವವೇನು? ವಿಷ್ಣುವಿನ ಅವತಾರವಾದ ಪರಶುರಾಮನ ಜನನ.

ಶ್ರೀಕೃಷ್ಣ ಪರಮಾತ್ಮನ ಸ್ನೇಹಿತನಾದ ಸುದಾಮನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿಯ ಸ್ನೇಹಿತ ಕೃಷ್ಣನಿಗೆ ಸಮರ್ಪಿಸಿದ ದಿನ ಇದಾಗಿದೆ. ಹಾಗೂ ಇದರಿಂದ ಸುದಾಮನ ಜೀವನದಲ್ಲಿ ಮಹತ್ತರ ಬದಲಾವಣೆ ಆಯಿತು. ಆದ್ದರಿಂದ ಈ ದಿನವನ್ನು ಪವಿತ್ರ ದಿನವಾಗಿ ಆಚರಿಸಲಾಗುತ್ತದೆ.

ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣವನ್ನು ವ್ಯಾಸರು ರಚಿಸಿದ ಮುಹೂರ್ತವೇ ಅಕ್ಷಯ ತೃತೀಯವಾಗಿದೆ.

ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದ ಗಂಗೆಯು ಭೂಮಿಗೆ ಅತರಿಸಿದ ದಿನ ಅಕ್ಷಯ ತೃತೀಯ ದಿನವಾಗಿದೆ. ಜೊತೆಗೆ ತ್ರೇತಾ ಯುಗದ ಆರಂಭವನ್ನೂ ಸೂಚಿಸುತ್ತದೆ.

ಇದನ್ನೂ ಓದಿ: Akshaya Tritiya 2021: ಅಕ್ಷಯ ತೃತೀಯ ಹಬ್ಬದ, ಮಹತ್ವ, ವಿಶೇಷತೆ ಮತ್ತು ಪೂಜಾ ವಿಧಾನ ಇಲ್ಲಿದೆ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್