Akshaya Tritiya 2021: ಅಕ್ಷಯ ತೃತೀಯ ಹಬ್ಬದ, ಮಹತ್ವ, ವಿಶೇಷತೆ ಮತ್ತು ಪೂಜಾ ವಿಧಾನ ಇಲ್ಲಿದೆ
Akshaya Tritiya Festival 2021:ಅಕ್ಷಯ ತೃತೀಯವನ್ನು ಹೊಸ ಉದ್ಯಮಗಳು, ಮದುವೆಗಳು ಮತ್ತು ಚಿನ್ನವನ್ನು ಖರೀದಿಸಲು ಶುಭ ದಿನವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಪ್ರತಿವರ್ಷ ದೇಶಾದ್ಯಂತ ಲಕ್ಷಾಂತರ ಭಾರತೀಯರು ಆಭರಣವನ್ನು ಖರೀದಿಸಲು ಮುಂದಾಗುತ್ತಾರೆ.
ಭಾರತ ಮತ್ತು ನೇಪಾಳದಲ್ಲಿ ವಾರ್ಷಿಕ ವಸಂತಕಾಲದ ಹಬ್ಬಗಳಲ್ಲಿ ಒಂದಾಗಿ ಇದನ್ನು ಆಚರಿಸುತ್ತಾರೆ. ಅದರಲ್ಲೂ ಹಿಂದೂಗಳು ಮತ್ತು ಜೈನರು ಅಕ್ಷಯ ತೃತೀಯವನ್ನು ವಿಶೇಷವಾಗಿ ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ವೈಶಾಖ ತಿಂಗಳ ಮೂರನೇ ಚಂದ್ರ ದಿನವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ, ಅಕ್ಷಯ ತೃತೀಯ ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರಲಿದ್ದು, ಈ ತಿಂಗಳು ಪ್ರಾರಂಭದಿಂದ ಅಂತ್ಯದ ವರೆಗೆ ಶುಭವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಅಖಾ ತೀಜ್ ಅಥವಾ ಅಕ್ತಿ ಎಂದೂ ಕರೆಯಲ್ಪಡುವ ಈ ಹಬ್ಬವನ್ನು ಭಾರತ ಮತ್ತು ನೇಪಾಳದಲ್ಲಿ ಅತ್ಯಂತ ಶುಭ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಹಾಗಾದರೆ ಈ ದಿನದ ಐತಿಹಾಸಿಕ ಮಹತ್ವ ಏನು? ಪೂಜಾ ವಿಧಾನ ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ.
ಪೂಜೆಯ ಸಮಯ ಅಕ್ಷಯ ತೃತೀಯ ಹಬ್ಬದ ಈ ದಿನವು ಪ್ರಾರಂಭದಿಂದ ಅಂತ್ಯದ ವರೆಗೆ ಶುಭವಾಗಿದ್ದರೂ, ಅದರಲ್ಲೂ ವಿಶೇಷವಾಗಿ ಚಿನ್ನವನ್ನು ಖರೀದಿಸಲು ಇದು ಶುಭ ದಿನವಾದರೂ, ಪೂಜಾ ಮುಹೂರ್ತ ಬೆಳಿಗ್ಗೆ 05:38 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:18 ಕ್ಕೆ ಕೊನೆಗೊಳ್ಳುತ್ತದೆ. ಆದರೆ ತೃತೀಯ ತಿಥಿ ಮೇ 14 ರಂದು ಬೆಳಿಗ್ಗೆ 5:38 ಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ ಮೇ 15 ರಂದು 7:59 ಕ್ಕೆ ಕೊನೆಗೊಳ್ಳುತ್ತದೆ.
ಇತಿಹಾಸ ಮತ್ತು ಮಹತ್ವ ಹಿಂದೂ ಪುರಾಣದ ಪ್ರಕಾರ, ಅಕ್ಷಯ ತೃತೀಯದ ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ. ಅಲ್ಲದೇ ಪರಶುರಾಮನ ಜನ್ಮ ದಿನವು ಅಂದೇ ಆಗಿರುವುದರಿಂದ ಈ ದಿನವನ್ನು ಪರಶುರಾಮ ಜಯಂತಿ ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ಪರಶುರಾಮನನ್ನು ವಿಷ್ಣುವಿನ ಆರನೇ ಅವತಾರ ಎಂದು ಕರೆಯಲಾಗುತ್ತದೆ.
ಪುರಾಣದ ದಂತಕಥೆಯ ಪ್ರಕಾರ ಪೂರ್ವಜರು ಮೋಕ್ಷವನ್ನು ಸಾಧಿಸುವ ಸಲುವಾಗಿ ಸಹಾಯ ಮಾಡುವಂತೆ ಭಗೀರಥ ರಾಜನ ಆಜ್ಞೆಯ ಮೇರೆಗೆ ಗಂಗಾ ನದಿಯುವ ಭೂಮಿಗೆ ಇಳಿದ ಈ ದಿನವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಈ ದಿನದಂದು ವೇದ ವ್ಯಾಸ ಮಹಾಭಾರತವನ್ನು ಗಣೇಶನಿಗೆ ನಿರೂಪಿಸಿದ್ದಾರೆ. ಅಲ್ಲದೇ ಕೃಷ್ಣ ಮತ್ತು ಸುದಾಮನ ಕಥೆಯನ್ನು ಕೂಡ ಈ ದಿನ ಸಾರುತ್ತದೆ ಎಂಬ ನಂಬಿಕೆಯು ಇದೆ.
ಇನ್ನೊಂದು ಕಥೆಯ ಪ್ರಕಾರ ಕೃಷ್ಣನು ಅಕ್ಷಯ ಪಾತ್ರೆಯನ್ನು ದ್ರೌಪತಿಗೆ ಅರ್ಪಿಸಿದನು. ಆ ಮೂಲಕ ಈ ಪಾತ್ರೆ ಸದಾ ಆಹಾರವನ್ನು ತುಂಬಿರುವ ಮಡಿಕೆಯಾಯಿತು ಮತ್ತು ಇದು ಪಾಂಡವರ ಹಸಿವು ನೀಗಿಸಲು ಸಹಾಯವಾಯಿತು. ಮತ್ತೊಂದು ದಂತಕಥೆಯ ಪ್ರಕಾರ, ಈ ದಿನದಂದು ಸುದಾಮಾ ತನ್ನ ಬಾಲ್ಯದ ಗೆಳೆಯ ಕೃಷ್ಣನನ್ನು ದ್ವಾರಕಾದಲ್ಲಿ ಭೇಟಿ ಮಾಡಿ ಅಪರಿಮಿತ ಸಂಪತ್ತನ್ನು ಪಡೆದಳು ಎಂದು ಹೇಳಲಾಗುತ್ತದೆ.
ಆಚರಣೆಗಳು ತಮ್ಮ ಪೂರ್ವಜರು ಮತ್ತು ಹೆತ್ತವರಿಗಾಗಿ ಪ್ರಾರ್ಥನೆ ಮಾಡುವ ಮೂಲಕ ದಿನವನ್ನು ಪ್ರಾರಂಭಿಸಲಾಗುತ್ತದೆ ಮತ್ತು ಆಧ್ಯಾತ್ಮಿಕ ಜ್ಞಾನೋದಯವನ್ನು ಬಯಸುತ್ತಾರೆ. ಅಲ್ಲದೆ ಕೆಲವು ಜನರು ಹಸಿದವರಿಗೆ ಆಹಾರ ಅಥವಾ ಅಗತ್ಯ ವಸ್ತುಗಳ ದಾನವನ್ನು ಮಾಡಿ ಸರ್ವಶಕ್ತನ ಆಶೀರ್ವಾದ ಪಡೆಯುತ್ತಾರೆ.
ಅಕ್ಷಯ ತೃತೀಯವನ್ನು ಹೊಸ ಉದ್ಯಮಗಳು, ಮದುವೆಗಳು ಮತ್ತು ಚಿನ್ನವನ್ನು ಖರೀದಿಸಲು ಶುಭ ದಿನವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಪ್ರತಿವರ್ಷ ದೇಶಾದ್ಯಂತ ಲಕ್ಷಾಂತರ ಭಾರತೀಯರು ಆಭರಣವನ್ನು ಖರೀದಿಸಲು ಮುಂದಾಗುತ್ತಾರೆ.
ಇದನ್ನೂ ಓದಿ:
Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ