Maharana Pratap Jayanti: ಮೇವಾರದ ಮಹಾರಾಣಾ ಪ್ರತಾಪ್ ಸಿಂಗ್ ಕುರಿತಾಗಿ ತಿಳಿಯಬೇಕಾದ ಕೆಲವು ಸಂಗತಿಗಳು ಹೀಗಿವೆ
ಭಾರತ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ದೈರ್ಯಶಾಲಿಗೆ ಹೆಸರಾಗಿದ್ದವರು. 7 ಅಡಿ ಎತ್ತರ ಹಾಗೂ 81 ಕೆಜಿ ದೇಹವುಳ್ಳ ಸದೃಢ ರಾಜನೆಂದು ಹೆಸರುವಾಸಿಯಾಗಿದ್ದರು.
ಮೇವಾರದ 13ನೇ ರಾಜ ಮಹಾರಾಣಾ ಪ್ರತಾಪ್ ಸಿಂಗ್. ಇವರ ಜನ್ಮ ದಿನಾಚರಣೆಯನ್ನು ಇಂದು ಭಾನುವಾರ ಆಚರಿಸಲಾಗುತ್ತಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಪ್ರತೀ ವರ್ಷ ಮೇ 9ನೇ ತಾರೀಕಿನಂದು ಇವರ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಆದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಜ್ಯೇಷ್ಠ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಇಂದು ಜೂನ್ 13ರಂದು ಆಚರಿಸಲಾಗುತ್ತದೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಕಡೆಗಳಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ಜನ್ಮ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗೂ ಈ ದಿನವನ್ನು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸುತ್ತಾರೆ.
ಮಹಾರಾಣಾ ಪ್ರತಾಪ್ ಸಿಂಗ್ ಕುರಿತಾಗಿ ತಿಳಿಯ ಬೇಕಾದ ಒಂದಿಷ್ಟು ಸಂಗತಿಗಳು * 1950, ಮೇ 9ನೇ ತಾರೀಕಿನಂದು ರಜಪೂತರ ಕುಟುಂಬದಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ಜನಿಸಿದರು. ಇವರ ತಂದೆ ಉದಯ್ ಸಿಂಗ್ ಹಾಗೂ ಇವರು ಉದಯಪುರದ ಸ್ಥಾಪಕ. ಉದಯ್ ಸಿಂಗ್ ಅವರಿಗೆ ಹಿರಿಯ ಮಗನಾಗಿ ಪ್ರತಾಪ್ ಸಿಂಗ್ ಜನಸಿದರು. ಹಾಗೂ ಇವರಿಗೆ ಮೂರು ಜನ ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದರು.
* ಭಾರತ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ದೈರ್ಯಶಾಲಿಗೆ ಹೆಸರಾಗಿದ್ದವರು. 7 ಅಡಿ ಎತ್ತರ ಹಾಗೂ 81 ಕೆಜಿ ದೇಹವುಳ್ಳ ಸದೃಢ ರಾಜನೆಂದು ಹೆಸರುವಾಸಿಯಾಗಿದ್ದರು.
* ಮಹಾರಾಣಾ ಪ್ರತಾಪ್ ಸಿಂಗ್ 11 ಹೆಂಡತಿಯರು ಮತ್ತು 17 ಮಕ್ಕಳನ್ನು ಪಡೆದಿದ್ದರು. ಇವರ ಹಿರಿಯ ಮಗ ಮಹಾರಾಣ ಅಮರ್ ಸಿಂಗ್ ಮೇವಾರದ 14ನೇ ರಾಜನಾಗಿ ಆಡಳಿತ ನಡೆಸಿದ್ದರು.
* ಭೀಕರ ಅಪಘಾತದಲ್ಲಿ ಗಾಯಗೊಂಡ ಮಹಾರಾಣಾ ಪ್ರತಾಪ್ ಸಿಂಗ್ ತಮ್ಮ 56ನೇ ವಯಸ್ಸಿನಲ್ಲಿ, 1597 ಜನವರಿ 19ರಂದು ಕೊನೆಯುಸಿರೆಳೆದರು.
ಕಳೆದ ವರ್ಷ ಮೇ 9ನೇ ತಾರೀಕಿನಂದು ಪ್ರಧಾನಿ ನರೇಂದ್ರೆ ಮೋದಿ ಅವರು ಮಹಾರಾಣಾ ಪ್ರತಾಪ್ ಸಿಂಗ್ ಜನ್ಮ ದಿನದಂದು ಗೌರವ ಸಲ್ಲಿಸಿದ್ದರು. ಅವರ ಶೌರ್ಯ ಮತ್ತು ಧೈರ್ಯದ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಮಾತೃಭೂಮಿಯ ಮೇಲಿನ ತ್ಯಾಗ ಮತ್ತು ಭಕ್ತಿ ಯಾವಾಗಲೂ ಸ್ಮರಣೀಯವಾಗಿರುತ್ತದೆ ಎಂದು ಪ್ರಧಾನಿ ಗೌರವ ಸಲ್ಲಿಸಿದ್ದರು.
ಇದನ್ನೂ ಓದಿ:
Narasimha Jayanti 2021: ನರಸಿಂಹ ಜಯಂತಿಯ ಮಹತ್ವ, ಶುಭ ಮುಹೂರ್ತ ಮತ್ತು ಪೂಜೆಯ ಸಮಯ
Published On - 10:59 am, Sun, 13 June 21