ಹೊಸ ಭರವಸೆ ಮೂಡಿಸಿದೆ ಮಾಡೆರ್ನಾ ಇನ್ಕ್​ ಕಂಪನಿಯ ಕೊರೊನಾ ಲಸಿಕೆ!

ಇಡೀ ಜಗತ್ತು ಈಗ ಕೊರೊನಾ ವಿರುದ್ಧದ ಲಸಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಜಗತ್ತಿನಲ್ಲಿ ಸುಮಾರು 160 ಕಂಪನಿಗಳ ನಡುವೆ ಕೊರೊನಾ ಲಸಿಕೆ ಕಂಡು ಹಿಡಿಯಲು ರೇಸ್ ಕೂಡ ನಡೆಯುತ್ತಿದೆ. ಈ ನಡುವೆ ಜಗತ್ತಿಗೆ ಒಂದು ಗುಡ್‌ ನ್ಯೂಸ್ ಸಿಕ್ಕಿದ್ದು,  ಕೊರೊನಾ ವಿರುದ್ಧದ ಹೋರಾಟದಲ್ಲಿ ಭರವಸೆ ಮೂಡಿಸಿದೆ. 160 ಕಂಪನಿಗಳು ಲಸಿಕೆಯ ಸಂಶೋಧನೆಯಲ್ಲಿ ತೊಡಗಿವೆ.. ಜಗತ್ತಿನಲ್ಲಿ ಈಗ ಕೊರೊನಾ ವಿರುದ್ಧದ ಲಸಿಕೆಯ ಸಂಶೋಧನೆ ಮತ್ತು ಪ್ರಯೋಗ ಭರದಿಂದ ನಡೆಯುತ್ತಿದೆ. ಜಗತ್ತಿನಲ್ಲಿ 160 ಕಂಪನಿಗಳು ಲಸಿಕೆಯ ಸಂಶೋಧನೆಯಲ್ಲಿ ತೊಡಗಿವೆ. ಈಗ […]

ಹೊಸ ಭರವಸೆ ಮೂಡಿಸಿದೆ ಮಾಡೆರ್ನಾ ಇನ್ಕ್​ ಕಂಪನಿಯ ಕೊರೊನಾ ಲಸಿಕೆ!
Follow us
ಪೃಥ್ವಿಶಂಕರ
|

Updated on:Nov 17, 2020 | 1:18 PM

ಇಡೀ ಜಗತ್ತು ಈಗ ಕೊರೊನಾ ವಿರುದ್ಧದ ಲಸಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಜಗತ್ತಿನಲ್ಲಿ ಸುಮಾರು 160 ಕಂಪನಿಗಳ ನಡುವೆ ಕೊರೊನಾ ಲಸಿಕೆ ಕಂಡು ಹಿಡಿಯಲು ರೇಸ್ ಕೂಡ ನಡೆಯುತ್ತಿದೆ. ಈ ನಡುವೆ ಜಗತ್ತಿಗೆ ಒಂದು ಗುಡ್‌ ನ್ಯೂಸ್ ಸಿಕ್ಕಿದ್ದು,  ಕೊರೊನಾ ವಿರುದ್ಧದ ಹೋರಾಟದಲ್ಲಿ ಭರವಸೆ ಮೂಡಿಸಿದೆ.

160 ಕಂಪನಿಗಳು ಲಸಿಕೆಯ ಸಂಶೋಧನೆಯಲ್ಲಿ ತೊಡಗಿವೆ.. ಜಗತ್ತಿನಲ್ಲಿ ಈಗ ಕೊರೊನಾ ವಿರುದ್ಧದ ಲಸಿಕೆಯ ಸಂಶೋಧನೆ ಮತ್ತು ಪ್ರಯೋಗ ಭರದಿಂದ ನಡೆಯುತ್ತಿದೆ. ಜಗತ್ತಿನಲ್ಲಿ 160 ಕಂಪನಿಗಳು ಲಸಿಕೆಯ ಸಂಶೋಧನೆಯಲ್ಲಿ ತೊಡಗಿವೆ. ಈಗ ಕೆಲವೊಂದು ಕಂಪನಿಯ ಲಸಿಕೆಯ ಪ್ರಯೋಗದ ಫಲಿತಾಂಶಗಳು ಭರವಸೆ ಮೂಡಿಸಿವೆ. ಅಮೆರಿಕದ ಮಾಡೆರ್ನಾ ಇನ್ಕ್ ಕಂಪನಿಯ ಕೊರೊನಾ ವಿರುದ್ಧದ ಲಸಿಕೆಯು ಶೇಕಡಾ 94.5 ರಷ್ಟು ಪರಿಣಾಮಕಾರಿ ಎಂದು ಕಂಪನಿ ಹೇಳಿದೆ. 3ನೇ ಹಂತದ ಪ್ರಾರಂಭಿಕ ಪ್ರಯೋಗದಲ್ಲಿ ಕೊರೊನಾ ವಿರುದ್ಧ ಲಸಿಕೆಯು ಶೇಕಡಾ 94.5 ರಷ್ಟು ಪರಿಣಾಮಕಾರಿ ಎಂದು ಅಂಕಿಅಂಶಗಳು ಹೇಳಿವೆ ಎಂದು ಕಂಪನಿಯ ಸಿಇಓ ಸ್ಟಿಫನಿ ಬನ್ಸೆಲ್ ಹೇಳಿದ್ದಾರೆ. 

ಮಾಡೆರ್ನಾ ಕಂಪನಿಯ ಲಸಿಕೆ ಶೇಕಡಾ 94.5 ರಷ್ಟು ಪರಿಣಾಮಕಾರಿಯಾಗಿದೆ.. ಕೊರೊನಾ ವಿರುದ್ಧ ಲಸಿಕೆಯು ಶೇಕಡಾ 80 ರಷ್ಟು ಪರಿಣಾಮಕಾರಿಯಾಗಿದ್ದರೂ, ಕೊರೊನಾವನ್ನು ಮಣಿಸಲು ಸಾಧ್ಯ. ಈಗ ಮಾಡೆರ್ನಾ ಕಂಪನಿಯ ಲಸಿಕೆಯ ಅದಕ್ಕಿಂತ ಶೇಕಡಾ 94.5 ರಷ್ಟು ಪರಿಣಾಮಕಾರಿಯಾಗಿರುವುದು ಹೊಸ ಬೆಳವಣಿಗೆ ಹಾಗೂ ಖುಷಿಯ ಬೆಳವಣಿಗೆ. ಹಾಗೇ  ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಡೆರ್ನಾ ಕಂಪನಿಯ ಲಸಿಕೆಯು ಗೇಮ್ ಚೇಂಜರ್ ಆಗಲಿದೆ ಎಂದು ಕಂಪನಿಯ ಸಿಇಓ ಸ್ಟೀಫನ್ ಬನ್ಸಿಲ್ ಹೇಳಿದ್ದಾರೆ.

ಅಮೆರಿಕಾದಲ್ಲಿ 30 ಸಾವಿರ ಕೊರೊನಾ ರೋಗಿಗಳ ಮೇಲೆ ಈ ಪ್ರಯೋಗಾತ್ಮಕ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಇದನ್ನು ಕೋವಿ ಸ್ಟಡಿ ಎಂದು ಕರೆಯಲಾಗಿದೆ.  ಮಾಡೆರ್ನಾ ಕಂಪನಿಯು 95 ಕೊರೊನಾ ರೋಗಿಗಳಿಗೆ ತನ್ನ ಪ್ರಯೋಗಾತ್ಮಕ ಲಸಿಕೆಯನ್ನು ನೀಡಿತ್ತು. ಇದನ್ನು ವಿಶ್ಲೇಷಣೆ ಮಾಡಿದಾಗ ಶೇಕಡಾ 94.5 ರಷ್ಟು ಪರಿಣಾಮಕಾರಿಯಾಗಿರುವುದು ಕಂಡು ಬಂದಿದೆ. 

ರೆಫ್ರಿಜರೇಟರ್​ನಲ್ಲಿ ಸ್ಟೋರ್ ಮಾಡಬಹುದು.. ಮಾಡೆರ್ನಾ ಕಂಪನಿಯ ಲಸಿಕೆಯು ನಿರೀಕ್ಷೆಗಿಂತ ಹೆಚ್ಚಿನ ಪರಿಣಾಮಕಾರಿತನ ಹೊಂದಿದೆ. ಮಾಡೆರ್ನಾ ಲಸಿಕೆಯನ್ನು ಸಾಮಾನ್ಯ ಉಷ್ಣತೆಯ ರೆಫ್ರಿಜರೇಟರ್ ನಲ್ಲಿ ಸ್ಟೋರ್ ಮಾಡಬಹುದು. ಇದರಿಂದ ಕೊರೊನಾ ವಿರುದ್ಧದ ಲಸಿಕೆಯನ್ನು ಸುಲಭವಾಗಿ ಜನರಿಗೆ ನೀಡಬಹುದು.  ಮಾಡೆರ್ನಾ ಕಂಪನಿಯು ಅಮೆರಿಕದಲ್ಲಿ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅಮೆರಿಕದ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ಮಾಡೆರ್ನಾ ಕಂಪನಿಯ ಲಸಿಕೆ 3ನೇ ಹಂತದ ಪ್ರಯೋಗದಲ್ಲಿ ಶೇ.94ರಷ್ಟು ಪರಿಣಾಮಕಾರಿ ಎಂದು ತಿಳಿದು ಬಂದಿದೆ.   ಬಹುತೇಕ ಡಿಸೆಂಬರ್ ತಿಂಗಳಲ್ಲಿ ಆಮೆರಿಕಾದಲ್ಲಿ ಕೊರೊನಾ ವಿರುದ್ಧ ಈ ಲಸಿಕೆ ತುರ್ತು ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದ್ದು, ಕೊರೊನಾ ರೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 

Published On - 1:15 pm, Tue, 17 November 20