ಅಳಿಯನಿಗಾಗಿ 67 ಐಟಂಗಳ ಭರ್ಜರಿ ಊಟ! ಲಾಕ್​ಡೌನ್​ ಮಧ್ಯೆ ಅತ್ತೆಯ ಸ್ಪೆಷಲ್​ ಮೀಲ್ಸ್!

ಹೈದರಾಬಾದ್​: ರಾಯರು ಬಂದರು ಮಾವನ ಮನೆಗೆ ಎಂಬ ಪ್ರಸಿದ್ಧ ಕವಿ ಡಾ. ಕೆ.ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಕೇಳದವರೇ ಇಲ್ಲ. ಆ ಕವನದ ಸಾಲೊಂದರಲ್ಲಿ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರಿಗೆ ಕಾದಿತ್ತು ಅನ್ನೋ ಮಾತಿದೆ. ಅಂತೆಯೇ, ಮನೆಗೆ ಬಂದ ಅಳಿಯನಿಗೋಸ್ಕರ ಆತನ ಪ್ರೀತಿಯ ಅತ್ತೆ 67 ಭಕ್ಷ್ಯಗಳನ್ನ ಒಳಗೊಂಡ ಭರ್ಜರಿ ಭೋಜನ ತಯಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಅಂದ ಹಾಗೆ, ಇಂಥ ಒಳ್ಳೇ ಅತ್ತೆ ಎಲ್ಲಿದ್ದಾರೆ ಗೊತ್ತಾ? ನೆರೆಯ ಆಂಧ್ರದಲ್ಲಿ. ಹೌದು, ಮನೆಗೆ […]

ಅಳಿಯನಿಗಾಗಿ 67 ಐಟಂಗಳ ಭರ್ಜರಿ ಊಟ! ಲಾಕ್​ಡೌನ್​ ಮಧ್ಯೆ ಅತ್ತೆಯ ಸ್ಪೆಷಲ್​ ಮೀಲ್ಸ್!
KUSHAL V

| Edited By:

Jul 09, 2020 | 5:44 PM

ಹೈದರಾಬಾದ್​: ರಾಯರು ಬಂದರು ಮಾವನ ಮನೆಗೆ ಎಂಬ ಪ್ರಸಿದ್ಧ ಕವಿ ಡಾ. ಕೆ.ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಕೇಳದವರೇ ಇಲ್ಲ. ಆ ಕವನದ ಸಾಲೊಂದರಲ್ಲಿ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರಿಗೆ ಕಾದಿತ್ತು ಅನ್ನೋ ಮಾತಿದೆ. ಅಂತೆಯೇ, ಮನೆಗೆ ಬಂದ ಅಳಿಯನಿಗೋಸ್ಕರ ಆತನ ಪ್ರೀತಿಯ ಅತ್ತೆ 67 ಭಕ್ಷ್ಯಗಳನ್ನ ಒಳಗೊಂಡ ಭರ್ಜರಿ ಭೋಜನ ತಯಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಅಂದ ಹಾಗೆ, ಇಂಥ ಒಳ್ಳೇ ಅತ್ತೆ ಎಲ್ಲಿದ್ದಾರೆ ಗೊತ್ತಾ? ನೆರೆಯ ಆಂಧ್ರದಲ್ಲಿ. ಹೌದು, ಮನೆಗೆ ಬರುತ್ತಿರುವ ತನ್ನ ಪ್ರೀತಿಯ ಅಳಿಮಯ್ಯನಿಗೋಸ್ಕರ ಇವರು ತಯಾರಿಸಿರುವ ಐಟಂಗಳನ್ನ ಕೇಳಿದ್ರೆ ಬಾಯಲ್ಲಿ ನೀರೂರುವುದು ಗ್ಯಾರಂಟಿ.

ಲಾಕ್​ಡೌನ್​ ಮಧ್ಯೆ ಮಾವನ ಮನೆಗೆ ದಣಿದು ಬಂದ ಅಳಿಯನಿಗೆ ಮೊದಲು ವೆಲ್ಕಮ್​ ಡ್ರಿಂಕ್​. ತದ ನಂತರ ನಂಚುಕೊಳ್ಳಲು ಸ್ಟಾರ್ಟರ್ಸ್​. ಆಮೇಲೆ ಚಾಟ್ಸ್​. ಅಷ್ಟೇ ಅಲ್ಲ ಸ್ವಾಮಿ. ಇದು ಬರೀ ಓಪನಿಂಗ್​. ಇನ್ನೂ ಬ್ಯಾಟಿಂಗ್​ ಮಾಡೋಕೆ ಮೇನ್​ ಊಟ ಇದೆ. ಆಮೇಲೆ ಸ್ವಲ್ಪ ಬಾಯಿ ಸಿಹಿ ಮಾಡೋಕೆ ಡೆಸರ್ಟ್​ ಕೂಡ ಈ ಅತ್ತೆಮ್ಮಾ ತಯಾರಿಸಿದ್ದಾರೆ.

ವೈರಲ್​ ವಿಡಿಯೋಗೆ ಸಿಕ್ತು 1 ಲಕ್ಷ Views, 2.5 ಸಾವಿರ ಲೈಕ್ಸ್​ ಜೊತೆಗೆ, ಮನೆಗೆ ಬರುತ್ತಿರುವ ಅಳಿಯನಿಗೆ ಅತ್ತೆ ಟ್ರೈಲರ್​ ಮಾದರಿಯಲ್ಲಿ ವಿಡಿಯೋ ಸಹ ಮಾಡಿ ಕಳಿಸಿದ್ದಾರೆ. ಬಾಳೆ ಎಲೆ ಮೇಲೆ ಬಡಿಸಿರುವ ಪ್ರತಿಯೊಂದು ಐಟಂ ವಿವರಣೆಯನ್ನ ಸಹ ಸುವಿಸ್ತಾರವಾಗಿ ನೀಡಿರುವ ಈ ವಿಡಿಯೋ ಸದ್ಯಕ್ಕೆ ಸಖತ್​ ವೈರಲ್​ ಆಗಿದ್ದು ಬರೋಬ್ಬರಿ ಒಂದು ಲಕ್ಷ Views ಮತ್ತು 2.5 ಸಾವಿರ ಲೈಕ್ಸ್​ ಸಹ ಪಡೆದಿದೆ.

ಆದರೆ, ಇದು ಒಂದು ಅಡುಗೆ ಸ್ಪರ್ಧೆಗೆ ತಯಾರಿಸಿದ ಭೋಜನ ಎಂದು ಮತ್ತೊಬ್ಬರು ಸ್ಪಷ್ಟನೆ ನೀಡಿದ್ದಾರೆ. ‘ಅಲ್ಲುಡು ವಿಂಧು ಭೋಜನಂ’ ಎಂಬ ಹೆಸರಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ಏನೇ ಆಗಲಿ ನಿಜಕ್ಕೂ ಇಂಥ ಒಳ್ಳೇ ಅತ್ತೆ ಸಿಗೋ ಅಳಿಯ ನಿಜಕ್ಕೂ ಪುಣ್ಯವಂತ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada