ವಿಶ್ವದ ವಿಶಿಷ್ಟ ಹಾಗೂ ತಲೆಕೆಳಗಾಗಿರುವ ಏಕೈಕ ದೇವಾಲಯ, ಇರೋದೆಲ್ಲಿ ಗೊತ್ತಾ?
ಜಗತ್ತಿನಾದ್ಯಂತ ಪರಮೇಶ್ವರನ ಅನೇಕ ಶಕ್ತಿ ತಾಣಗಳಿವೆ. ಶಿವನ ಶಕ್ತಿ ಕೇಂದ್ರಗಳಲ್ಲಿ ಆತನನ್ನು ಲಿಂಗದ ರೂಪದಲ್ಲಿ ಅಥವಾ ನಟರಾಜನ ಸ್ವರೂಪದಲ್ಲಿ ಪೂಜಿಸಲಾಗುತ್ತೆ. ಅಸುರನೊಬ್ಬ ತನ್ನಲ್ಲಿದ್ದ ರಕ್ಕಸ ಶಕ್ತಿಯಿಂದ ಅಟ್ಟಹಾಸವನ್ನು ಮೆರೆಯಲು ಆರಂಭಿಸ್ತಾನೆ. ಅವನಿಂದ ಜನಸಾಮಾನ್ಯರು, ಋಷಿಮುನಿಗಳು, ದೇವಾನುದೇವತೆಗಳು ಆತಂಕದಲ್ಲಿ ಜೀವನ ಸಾಗಿಸುವಂತಾಯಿತು. ಆ ರಕ್ಕಸನ ಸಂಹಾರ ಯಮನಿಂದ ಮಾತ್ರ ಸಾಧ್ಯ ಅನ್ನೋದನ್ನು ಅರಿತ ದೇವಾನುದೇವತೆಗಳು ಯಮನ ಬಳಿಗೆ ಹೋಗ್ತಾರೆ. ರಕ್ಕಸನ ಅಟ್ಟಹಾಸದ ಬಗ್ಗೆ ಹೇಳ್ತಾರೆ. ರಕ್ಕಸನ ಅಟ್ಟಹಾಸದ ಬಗ್ಗೆ ಅರಿತ ಯಮಧರ್ಮರಾಯ ಆತನನ್ನು ಸಂಹಾರ ಮಾಡಲು ಮುಂದಾಗ್ತಾರೆ. ಆದ್ರೆ […]
ಜಗತ್ತಿನಾದ್ಯಂತ ಪರಮೇಶ್ವರನ ಅನೇಕ ಶಕ್ತಿ ತಾಣಗಳಿವೆ. ಶಿವನ ಶಕ್ತಿ ಕೇಂದ್ರಗಳಲ್ಲಿ ಆತನನ್ನು ಲಿಂಗದ ರೂಪದಲ್ಲಿ ಅಥವಾ ನಟರಾಜನ ಸ್ವರೂಪದಲ್ಲಿ ಪೂಜಿಸಲಾಗುತ್ತೆ.
ಅಸುರನೊಬ್ಬ ತನ್ನಲ್ಲಿದ್ದ ರಕ್ಕಸ ಶಕ್ತಿಯಿಂದ ಅಟ್ಟಹಾಸವನ್ನು ಮೆರೆಯಲು ಆರಂಭಿಸ್ತಾನೆ. ಅವನಿಂದ ಜನಸಾಮಾನ್ಯರು, ಋಷಿಮುನಿಗಳು, ದೇವಾನುದೇವತೆಗಳು ಆತಂಕದಲ್ಲಿ ಜೀವನ ಸಾಗಿಸುವಂತಾಯಿತು. ಆ ರಕ್ಕಸನ ಸಂಹಾರ ಯಮನಿಂದ ಮಾತ್ರ ಸಾಧ್ಯ ಅನ್ನೋದನ್ನು ಅರಿತ ದೇವಾನುದೇವತೆಗಳು ಯಮನ ಬಳಿಗೆ ಹೋಗ್ತಾರೆ. ರಕ್ಕಸನ ಅಟ್ಟಹಾಸದ ಬಗ್ಗೆ ಹೇಳ್ತಾರೆ.
ರಕ್ಕಸನ ಅಟ್ಟಹಾಸದ ಬಗ್ಗೆ ಅರಿತ ಯಮಧರ್ಮರಾಯ ಆತನನ್ನು ಸಂಹಾರ ಮಾಡಲು ಮುಂದಾಗ್ತಾರೆ. ಆದ್ರೆ ಯಮಧರ್ಮರಾಯ ತಮ್ಮೆಲ್ಲಾ ಶಕ್ತಿಯನ್ನು ಪ್ರಯೋಗಿಸಿದ್ರೂ ಸಹಾ ಅದು ಸಾಧ್ಯವಾಗದಂತಹ ಸ್ಥಿತಿ ಎದುರಾಗುತ್ತೆ. ಅಂತಹ ಸ್ಥಿತಿಯಲ್ಲಿ ಯಮ ಆ ದಂಪತಿಯ ಬಳಿಗೆ ಹೋಗ್ತಾನೆ.
ಆ ದಂಪತಿಯ ಬಳಿಗೆ ಹೋದಾಗ ಒಂದು ಆಶ್ಚರ್ಯ ಎದುರಾಗುತ್ತೆ. ಆ ಆಶ್ಚರ್ಯವೇ ಪತಿಯು ತಲೆಕೆಳಗಾಗಿ ಅಂದರೆ ಶಿರ್ಷಾಸನದಲ್ಲಿ ಇದ್ದಿದ್ದು. ಯಮನ ಯಾವ ಮಾತಿಗೂ ಪ್ರತಿಕ್ರಿಯೆ ನೀಡದೇ ಇದ್ದದ್ದು. ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಎಲ್ಲವನ್ನೂ ನೋಡುತ್ತಿದ್ದ ಸತಿ ತನ್ನಲ್ಲಿದ್ದ ಶಕ್ತಿಯನ್ನು ಯಮನಿಗೆ ಧಾರೆ ಎರೆದದ್ದು. ಆ ಶಕ್ತಿಯನ್ನು ಬಳಸಿಕೊಂಡು ಆ ರಕ್ಕಸನ್ನು ಸಂಹಾರ ಮಾಡೆಂದು ಹೇಳಿದ್ದು. ಆ ದಂಪತಿಯಿಂದ ಅದ್ಭುತವಾದ ಶಕ್ತಿಯನ್ನು ಪಡೆದಂತಹ ಯಮಧರ್ಮರಾಯ ರಕ್ಕಸನನ್ನು ಸಂಹಾರ ಮಾಡ್ತಾನೆ.
ಯಮನಿಗೆ ಅದ್ಭುತ ಶಕ್ತಿಯನ್ನ ಕರುಣಿಸಿದ ಆ ದಂಪತಿಯಾದ್ರೂ ಯಾರು? ಪರಮೇಶ್ವರ ಅಂದು ಶಿರ್ಷಾಸನದಲ್ಲಿದ್ದು ತಮ್ಮ ಜ್ಞಾನ ಸಂದೇಶದ ಮೂಲಕ ಪತ್ನಿ ಪಾರ್ವತಿಯಿಂದ ಯಮನಿಗೆ ಶಕ್ತಿಯನ್ನು ಕರುಣಿಸಿ ರಕ್ಕಸನನ್ನು ಸಂಹರಿಸಿದ ಕಾರಣ ಋಷಿಮುನಿಗಲು ಆ ತಾಣದಲ್ಲಿ ಶಿರ್ಷಾಸನದಲ್ಲಿರುವ ಶಿವನನ್ನು ಪ್ರತಿಷ್ಠಾಪಿಸಿದರು. ಶಿವ ತನ್ನ ಕುಟುಂಬ ಸಮೇತನಾಗಿ ಈ ಕ್ಷೇತ್ರದಲ್ಲಿ ನೆಲೆಸಿರೋದ್ರ ಹಿಂದೆ ಒಂದು ರೋಚಕ ಕಥೆ ಇದೆ.
ಭಾರತದ ಈ ಒಂದು ಆಲಯದಲ್ಲಿ ಶಿವನು ಲಿಂಗರೂಪಿಯಾಗಿಲ್ಲ. ಬದಲಿಗೆ ಆಲಯದಲ್ಲಿ ಶಿವನ ಜಟೆಯು ಶಿವನ ಜಟೆಯು ಧರೆಯನ್ನು ಮುಟ್ಟಿದ್ರೆ, ಆತನ ಪಾದಗಳು ಆಕಾಶದ ಕಡೆಗೆ ಮುಖ ಮಾಡಿವೆ. ಪಾದದ ಮೇಲೆ ಐದು ಹೆಡೆ ಸರ್ಪ ನಿಂತು ನೆರಳನ್ನು ನೀಡುತ್ತಿದೆ. ಇಂತಹ ವಿಶಿಷ್ಟ ರೀತಿಯಲ್ಲಿರೋ ಮಹಾಶಿವನು ತಲೆಕೆಳಗಾಗಿಯೇ, ಅಂದರೆ ಶಿರ್ಷಾಸನ ಭಂಗಿಯಲ್ಲೇ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಬೇಡಿ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿದ್ದಾನೆಂಬ ಮಾತುಗಳಿಗೆ ಲಕ್ಷಾಂತರ ಭಕ್ತರೇ ಸಾಕ್ಷಿಯಾಗಿದ್ದಾರೆ.
ಶಿರ್ಷಾಸನದ ಭಂಗಿಯಲ್ಲಿರೋ ವಿಸ್ಮಯಕಾರಿ ಶಿವನ ಆಲಯ ಇರೋದೆಲ್ಲಿ? ಅಂತಾ ನೋಡೋದಾದ್ರೆ, ಇದು ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಯನಮದುರು ಎಂಬಲ್ಲಿ. ಈ ಶಿವಾಲಯವನ್ನು ಶಕ್ತೇಶ್ವರ ದೇಗುಲ ಅಂತಲೂ ಕರೆಯಲಾಗುತ್ತೆ. ಈ ದೇಗುಲಕ್ಕೆ ಶಕ್ತೇಶ್ವರ ಅಂತಾ ಕರೆಯುವುದಕ್ಕೆ ಒಂದು ಕಾರಣವಿದೆ. ಶಿರ್ಷಾಸನ ಹಾಕಿ ನೆಲೆಸಿರುವ ಶಿವನ ಸನಿಹದಲ್ಲೇ ಮಾತೆ ಮಹಾದೇವಿಯು ತನ್ನ ಮಡಿಲಿನಲ್ಲಿ 3 ತಿಂಗಳ ಹಸುಗೂಸಾದ ಕಾರ್ತಿಕೇಯನನ್ನು ಮಲಗಿಸಿಕೊಂಡಿರುವುದನ್ನು ನಾವು ಗಮನಿಸಬಹುದು. ಶಕ್ತಿ ಹಾಗೂ ಈಶ್ವರ ಜೊತೆಯಾಗಿ ನೆಲೆಸಿರುವುದರಿಂದಲೇ ಈ ದಿವ್ಯ ಮಂದಿರವನ್ನು ಶಕ್ತೇಶ್ವರ ದೇಗುಲ ಅಂತಾ ಕರೆಯಲಾಗುತ್ತೆ.
ಇದಿಷ್ಟೇ ಅಲ್ಲದೇ ಪುರಾಣಗಳ ಪ್ರಕಾರ, ಕವಿ ಕಾಳಿದಾಸ ರಚಿಸಿರೋ ಕುಮಾರ ಸಂಭವಂನಲ್ಲಿ ಯನಮದೂರಿನಲ್ಲಿರೋ ಶಕ್ತೇಶ್ವರನ ಬಗ್ಗೆ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತೆ. ಜೊತೆಗೆ ಭೋಜರಾಜರೂ ಸಹ ಈ ಪ್ರಾಂತ್ಯಕ್ಕೆ ಬಂದು ಪೂಜೆಯನ್ನು ನೆರವೇರಿಸಿದ್ದರು ಅಂತಾ ಸ್ಥಳಪುರಾಣಗಳು ಹೇಳುತ್ತವೆ. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರೋ ಈ ಗ್ರಾಮಕ್ಕೆ ಯನಮದುರು ಅಂತಾ ಹೇಳೋಕೆ ಒಂದು ಇತಿಹಾಸವಿದೆ. ಅದೇನಂದ್ರೆ, ನರಕಾಧಿಪತಿ ಯಮಧರ್ಮರಾಯ ಮಹಾದೇವ ಹಾಗೂ ಶಕ್ತಿದೇವತೆಯನ್ನು ಇಲ್ಲಿ ಭಕ್ತಿಯಿಂದ ಆರಾಧಿಸಿ, ಅವರಿಂದ ಶಕ್ತಿ ಪಡೆದು ರಾಕ್ಷಸನನ್ನು ಸಂಹರಿಸಿದ. ಇದೇ ಕಾರಣಕ್ಕೆ ಈ ಸ್ಥಳಕ್ಕೆ ಹಿಂದೆ ಯಮನಾಪುರಿ ಎಂದು ಕರೆಯಲಾಗಿತ್ತು. ಕಾಲಾಂತರದಲ್ಲಿ ಅದು ಯನಮದುರು ಆಗಿದೆ ಎನ್ನಲಾಗುತ್ತೆ.
ಈ ದೇಗುಲದ ಬಲಿ ಶಕ್ತಿಗುಂಡಂ ಅನ್ನೋ ಕೆರೆ ಇದೆ. ಎರಡು ಸರ್ಪಗಳು ಕಾವಲಿರುವ ಈ ಕೆರೆಗೆ ಗಂಗಾಮಾತೆ ಗುಪ್ತಗಾಮಿನಿಯಾಗಿ ಹರಿದು ಬರುತ್ತಿದ್ದಾಳೆ ಎಂಬ ಐತಿಹ್ಯವಿದೆ. ಅಂತಹ ಐತಿಹ್ಯವನ್ನು ಉಳ್ಳಂತಹ ಈ ನೀರನ್ನು ಮಾತ್ರ ಸ್ವಾಮಿಯ ಅಭಿಷೇಕಕ್ಕೆ ಬಳಸಲಾಗುತ್ತಿದೆ.
Published On - 1:41 pm, Wed, 16 September 20