AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oskar Sala: ಎಲೆಕ್ಟ್ರಾನಿಕ್ ಸಂಗೀತ ಸಂಯೋಜಕ ಆಸ್ಕರ್ ಸಲಾ ಅವರ 112ನೇ ಜನ್ಮದಿನದ ಸ್ಮರಣೆ, ಗೂಗಲ್ ಡೂಡಲ್​ನಲ್ಲಿ ವಿಶೇಷ ಗೌರವ

ಇಂದು ಎಲೆಕ್ಟ್ರಾನಿಕ್ ಸಂಗೀತ ಸಂಯೋಜಕ ಮತ್ತು ಭೌತಶಾಸ್ತ್ರಜ್ಞ, ಮಿಶ್ರಣ-ಟ್ರಾಟೋನಿಯಮ್ ಎಂಬ ಸಂಗೀತ ವಾದ್ಯದಲ್ಲಿ ಧ್ವನಿ ಪರಿಣಾಮಗಳನ್ನು ಉತ್ಪಾದಿಸಿ ಗುರುತಿಸಲ್ಪಟ್ಟ ಆಸ್ಕರ್ ಸಲಾ ಅವರ 112ನೇ ಜನ್ಮದಿನದ ಸ್ಮರಣೆ, ಇವರ ಗೌರವಾರ್ಥವಾಗಿ ಗೂಗಲ್ ಡೂಡಲ್​ನಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ.

Oskar Sala: ಎಲೆಕ್ಟ್ರಾನಿಕ್ ಸಂಗೀತ ಸಂಯೋಜಕ ಆಸ್ಕರ್ ಸಲಾ ಅವರ 112ನೇ ಜನ್ಮದಿನದ ಸ್ಮರಣೆ, ಗೂಗಲ್ ಡೂಡಲ್​ನಲ್ಲಿ ವಿಶೇಷ ಗೌರವ
ಗೂಗಲ್ ಡೂಡಲ್​ನಲ್ಲಿ ಆಸ್ಕರ್ ಸಲಾ ಅವರಿಗೆ ವಿಶೇಷ ಗೌರವ
Follow us
TV9 Web
| Updated By: Rakesh Nayak Manchi

Updated on: Jul 18, 2022 | 12:02 PM

ಎಲೆಕ್ಟ್ರಾನಿಕ್ ಸಂಗೀತ ಸಂಯೋಜಕ ಮತ್ತು ಭೌತಶಾಸ್ತ್ರಜ್ಞ, ಮಿಶ್ರಣ-ಟ್ರಾಟೋನಿಯಮ್ ಎಂಬ ಸಂಗೀತ ವಾದ್ಯದಲ್ಲಿ ಧ್ವನಿ ಪರಿಣಾಮಗಳನ್ನು ಉತ್ಪಾದಿಸಿ ಗುರುತಿಸಲ್ಪಟ್ಟ ಆಸ್ಕರ್ ಸಲಾ (Oskar Sala) ಅವರ 112ನೇ ಜನ್ಮದಿನಚಾರಣೆಯನ್ನು ಆಚರಿಸಲಾಗುತ್ತಿದೆ. ಇವರ ಗೌರವಾರ್ಧವಾಗಿ ಗೂಗಲ್ ಡೂಡಲ್​ (Google Doodle)ನಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ದೂರದರ್ಶನ, ರೇಡಿಯೋ ಮತ್ತು ಚಲನಚಿತ್ರದ ಪ್ರಪಂಚವನ್ನು ವಿದ್ಯುನ್ಮಾನಗೊಳಿಸಿದ ಆಸ್ಕರ್ ಸಲಾ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಜರ್ಮನಿಯ ಗ್ರೀಜ್‌ನಲ್ಲಿ 1910ರ ಜು.18ರಂದು ಜನಿಸಿದ ಆಸ್ಕರ್ ಸಲಾ ಅವರ ಕುಟುಂಬವೇ ಸಂಗೀತದಲ್ಲಿ ಆಸಕ್ತಿ ಹೊಂದಿತ್ತು. ಸಲಾ ಇವರ ತಾಯಿ ಗಾಯಕಿಯಾಗಿದ್ದು, ತಂದೆ ಕೂಡ ಸಂಗೀತ ಪ್ರತಿಭೆ ಹಾಗೂ ನೇತ್ರಶಾಸ್ತ್ರಜ್ಞರೂ ಆಗಿದ್ದರು. ಪೋಷಕರು ಸಂಗೀತದಲ್ಲಿ ತೊಡಗಿಕೊಂಡಿರುವುದರಿಂದ ಸಲಾ ಅವರಿಗೂ ಸಂಗೀತದಲ್ಲಿ ಆಸಕ್ತಿ ಬೆಳೆಯತೊಡಗಿತು. ಅದರಂತೆ ಸಣ್ಣ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದ ಮೇಲೆ ಒಲವು ತೋರಿದ ಆಸ್ಕರ್ ಸಲಾ ಅವರು, 14ನೇ ವಯಸ್ಸಿನಲ್ಲಿ ಪಿಟೀಲು ಮತ್ತು ಪಿಯಾನೋ ಮುಂತಾದ ವಾದ್ಯಗಳಿಗೆ ಸಂಯೋಜನೆಗಳು ಮತ್ತು ಹಾಡುಗಳನ್ನು ರಚಿಸಲು ಪ್ರಾರಂಭಿಸಿದರು.

ಆಸ್ಕರ್ ಸಲಾ ಅವರು ಟ್ರಾಟೋನಿಯಮ್ ಎಂಬ ಸಾಧನದ ನಾದವನ್ನು ಕೇಳಿ ಆಕರ್ಷಿತರಾದರು. ಮುಂದೆ ಅವರು ಟ್ರಾಟೋನಿಯಮ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮುಂದಾದರು. ಇದು ಶಾಲೆಯಲ್ಲಿ ಭೌತಶಾಸ್ತ್ರ ಮತ್ತು ಸಂಯೋಜನೆಯಲ್ಲಿ ಅವರ ಅಧ್ಯಯನವನ್ನು ಪ್ರೇರೇಪಿಸುವಂತೆ ಮಾಡಿ.

ಆಸ್ಕರ್ ಸಲಾ ಅವರ ಹೊಸ ಆಲೋಚನೆಯು ಮಿಶ್ರಣ-ಟ್ರಾಟೋನಿಯಮ್ ಎಂಬ ತನ್ನದೇ ಆದ ಉಪಕರಣವನ್ನು ಅಭಿವೃದ್ಧಿಪಡಿಸುವಂತೆ ಮಾಡಿತು. ಸಂಗೀತ ಸಂಯೋಜಕ ಮತ್ತು ಎಲೆಕ್ಟ್ರೋ-ಎಂಜಿನಿಯರ್ ಶಿಕ್ಷಣದೊಂದಿಗೆ ಸಲಾ ಅವರು ಎಲೆಕ್ಟ್ರಾನಿಕ್ ಸಂಗೀತವನ್ನು ರಚಿಸಿದರು. ಮಿಶ್ರಣ-ಟ್ರಾಟೋನಿಯಮ್ ತುಂಬಾ ವಿಶಿಷ್ಟವಾಗಿದ್ದು, ಅದು ಏಕಕಾಲದಲ್ಲಿ ಹಲವಾರು ಶಬ್ದಗಳು ಅಥವಾ ಧ್ವನಿಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಸಾಲಾ ರೋಸ್ಮರಿ ಮತ್ತು ದಿ ಬರ್ಡ್ಸ್ ನಂತಹ ಅನೇಕ ದೂರದರ್ಶನ, ರೇಡಿಯೋ ಮತ್ತು ಚಲನಚಿತ್ರ ನಿರ್ಮಾಣಗಳಿಗೆ ಸಂಗೀತ ತುಣುಕುಗಳು ಮತ್ತು ಧ್ವನಿ ಪರಿಣಾಮಗಳನ್ನು ಸಂಯೋಜಿಸಿದರು. ವಾದ್ಯವು ಪಕ್ಷಿಗಳ ಕೂಗು, ಸುತ್ತಿಗೆ ಮತ್ತು ಬಾಗಿಲು ಮತ್ತು ಕಿಟಕಿಗಳ ಸ್ಲ್ಯಾಮ್‌ಗಳಂತಹ ಶಬ್ದಗಳನ್ನು ಸೃಷ್ಟಿಸಿತು.

ಸಲಾ ಅವರ ಇಂತಹ ಸಾಧನೆಗಳಿಗಾಗಿ ಹಲವಾರು ಪ್ರಶಸ್ತಿಗಳು ಲಭಿಸಿದವು. ಇವರು ವಿಶ್ವದಲ್ಲಿ ಖ್ಯಾತಿ ಪಡೆಯುತ್ತಾ ಹೋದಂತೆ ಅನೇಕ ಸಂದರ್ಶನಗಳನ್ನು ನೀಡಿದರು. ಇದರ ಜೊತೆಗೆ ಹಲವಾರು ಕಲಾವಿದರನ್ನು ಭೇಟಿಯಾದರು. ರೇಡಿಯೋ ಪ್ರಸಾರಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಗೌರವಿಸಲ್ಪಟ್ಟರು. 1995ರಲ್ಲಿ ಅವರು ತಮ್ಮ ಮೂಲ ಮಿಶ್ರಣ-ಟ್ರಾಟೋನಿಯಮ್ ಅನ್ನು ಸಮಕಾಲೀನ ತಂತ್ರಜ್ಞಾನಕ್ಕಾಗಿ ಜರ್ಮನ್ ಮ್ಯೂಸಿಯಂಗೆ ದಾನ ಮಾಡಿದರು.

ಸಲಾ ಕ್ವಾರ್ಟೆಟ್-ಟ್ರಾಟೋನಿಯಂ ಅನ್ನು ಸಹ ನಿರ್ಮಿಸಿದರು, ಎಲೆಕ್ಟ್ರಾನಿಕ್ ಸಂಗೀತದಲ್ಲಿನ ಅವರ ಪ್ರಯತ್ನಗಳು ಸಬ್‌ಹಾರ್ಮೋನಿಕ್ಸ್ ಕ್ಷೇತ್ರವನ್ನು ತೆರೆಯಿತು. ಸಮರ್ಪಣೆ ಮತ್ತು ಸೃಜನಶೀಲ ಶಕ್ತಿಯಿಂದ ಆಸ್ಕರ್ ಸಲಾ ಅವರು ಏಕವ್ಯಕ್ತಿ ಆರ್ಕೆಸ್ಟ್ರಾ ಆಗಿ ಹೊರಹೊಮ್ಮಿದರು. ಇವರು 2022ರ ಫೆ.26ರಂದು ಕೊನೆಯುಸಿರೆಳೆದರು.

ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ರೇಣುಕಾಸ್ವಾಮಿ ಹತ್ಯೆಗೆ 1ವರ್ಷ;ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರೇಣುಕಾಸ್ವಾಮಿ ಹತ್ಯೆಗೆ 1ವರ್ಷ;ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆಗೆ ಗುಂಡೇಟು
ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆಗೆ ಗುಂಡೇಟು
ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ವಿಡಿಯೋ ವೈರಲ್
ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ವಿಡಿಯೋ ವೈರಲ್