Old Age Homes : ‘ಒಂದೆರಡು ಸಾವಿರ ನಿಮ್ಮ ಅಕೌಂಟಿಗೆ ಹಾಕ್ತೀವಿ, ಕಾರ್ಯ ಮಾಡಿ ಮುಗಿಸಿಬಿಡಿ‘

Houseful : ‘ಸಿನೆಮಾ ಥಿಯೇಟರ್​ಗಳು, ನಾಟಕಮಂದಿರಗಳು ಹೌಸ್ ಫುಲ್ ಆಗುವುದನ್ನು ನೋಡಿದ್ದೇವೆ. ಆದರೆ ಕೊವಿಡ್​ ಕಾಲದಲ್ಲಿ ಬೆಂಗಳೂರಿನ ವೃದ್ಧಾಶ್ರಮಗಳ ಮುಂದೆಯೂ ಹೌಸ್ ಫುಲ್, ಸ್ಥಳ ಭರ್ತಿಯಾಗಿದೆ ಎಂಬ ಬೋರ್ಡ್​ಗಳು ಕಾಣಿಸುತ್ತಿವೆ.’ ಜ್ಯೋತಿ ಎಸ್.

Old Age Homes : ‘ಒಂದೆರಡು ಸಾವಿರ ನಿಮ್ಮ ಅಕೌಂಟಿಗೆ ಹಾಕ್ತೀವಿ, ಕಾರ್ಯ ಮಾಡಿ ಮುಗಿಸಿಬಿಡಿ‘
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Oct 21, 2021 | 6:05 PM

Old Age Homes in Bengaluru : ಗೂಗಲ್ ಮ್ಯಾಪ್​, ಲೊಕೇಶನ್ ಎಂಡ್ ಅಂತ ತೋರಿಸಿತು. ಆದರೆ ನಾನು ಹುಡುಕಿಕೊಂಡು ಹೊರಟಿದ್ದ ವೃದ್ಧಾಶ್ರಮ ಅದಾಗಿರಲಿಲ್ಲ. ಈಗೇನು ಮಾಡುವುದು? ಹೋಗಬೇಕಾದ ಜಾಗವನ್ನು ಹೇಗೆ ಪತ್ತೆ ಹಚ್ಚುವುದು ಎಂದು ಯೋಚಿಸುತ್ತ ದಾರಿಹೋಕರನ್ನು ಕೇಳಿದೆ. ಎಡಕ್ಕೆ, ಬಲಕ್ಕೆ, ದೇವಸ್ಥಾನದ ಬಳಿ, ಆ ತಿರುವು, ಈ ತಿರುವು, ಅಂಗಡಿಯ ಎದುರು ಹೀಗೆಲ್ಲ ಮಾರ್ಗದರ್ಶನ ಸಿಕ್ಕಿತು. ಹುಡುಕಿ ಹೊರಟಿದ್ದು ಒಂದೇ ಆಶ್ರಮ. ಆದರೆ ಆ ದಾರಿಯಲ್ಲೇ ನಾನು ದಾಟಿದ್ದು ಮೂರು ಆಶ್ರಮಗಳನ್ನು. ನಿಖರವಾಗಿ ದಾರಿ ತೋರದ ಗೂಗಲ್ ಮ್ಯಾಪ್ ನನ್ನನ್ನು ಜಾಗೃತಳನ್ನಾಗಿಸಿತು. ಆಗ ನನಗನ್ನಿಸಿದ್ದು, ದಾರಿ ತಪ್ಪಿಸಿದ್ದು ಮ್ಯಾಪ್​ ಅಲ್ಲ, ನಮ್ಮ ವಿವೇಚನಾರಹಿತ ಜೀವನಶೈಲಿ ಮತ್ತು ಎರಡು ವರ್ಷಗಳಿಂದ ಬೆಂಬತ್ತಿರುವ ಕೊರೊನಾ.  ಜ್ಯೋತಿ ಎಸ್. 

ಥಿಯೇಟರ್​ಗಳು ಹೌಸ್ ಫುಲ್ ಆಗುವುದನ್ನು ನೋಡಿದ್ದೇವೆ. ನಾಟಕಮಂದಿರಗಳು ಹೌಸ್​ ಫುಲ್ ಆಗುವುದನ್ನು ನೋಡಿದ್ದೇವೆ. ಆದರೆ ಈಗ ವೃದ್ಧಾಶ್ರಮಗಳ ಮುಂದೆ ಹೌಸ್ ಫುಲ್, ಸ್ಥಳ ಭರ್ತಿಯಾಗಿದೆ ಎಂಬ ಬೋರ್ಡ್​ಗಳು ಕಾಣಿಸುತ್ತಿವೆ ಎಂದರೆ ಅವಶ್ಯವಾಗಿ ಕನ್ನಡಿಯಲ್ಲಿ ನಾವೊಮ್ಮೆ ಮುಖ ನೋಡಿಕೊಳ್ಳಬೇಕಾದ ಕಾಲ.

ತಮ್ಮ ಆಶ್ರಮದಲ್ಲಿ ಜಾಗವಿಲ್ಲದೆ, ಬೇರೆ ಬೇರೆ ಆಶ್ರಮಗಳಿಗೆ ವೃದ್ಧರಿಗಾಗಿ ವ್ಯವಸ್ಥೆ ಕಲ್ಪಿಸುವ ಕೆಲಸದಲ್ಲಿ ಆಶ್ರಮದ ಮೇಲ್ವಿಚಾರಕರು ತೊಡಗಿಕೊಂಡಿದ್ದಾರೆ. ಉರುಳುವ ಕಾಲಚಕ್ರದಲ್ಲಿ ಈ ‘ಬದಲಾವಣೆ’ ನಾಳೆ ನಮಗೂ ಉರುಳಾಗುವ ಕಾಲ ದೂರವೇನಿಲ್ಲ. ಮಾನವೀಯತೆ ಕುಸಿದು ಮನುಷ್ಯತ್ವ ಅಳಿದು ಮೃಗಸ್ವರೂಪಿಗಳಾಗುತ್ತಿದ್ದೇವಾ? ನಮಗಾಗಿ ಜೀವ, ಜೀವನ ತೇಯ್ದ ಜೀವಗಳಿಗೆ ಅವರ ಕೊನೆಗಾಲದಲ್ಲಿ ಹಿಡಿ ಪ್ರೀತಿ, ಅನ್ನ ನೀಡುವುದು ಹೋಗಲಿ, ಅಂತಿಮಯಾತ್ರೆಯನ್ನು ಗೌರವಯುತವಾಗಿ ನೆರವೇರಿಸಲು ನಮಗೆ ಸಮಯವಿಲ್ಲ!  ಮಕ್ಕಳಿಗಾಗಿ ಅವಮಾನ, ನೋವನ್ನು ಸಹಿಸಿಕೊಂಡು ಗೌರವದಿಂದ ತುಂಬು ಜೀವನದ ಕನಸುಹೊತ್ತ ಪೋಷಕರು ಕೊನೆಗಾಲದಲ್ಲಿ ಆತ್ಮಗೌರವದಿಂದ ಬದುಕುವ ಹಕ್ಕನ್ನು ನಾವು ನಿರ್ದಾಕ್ಷಿಣ್ಯವಾಗಿ ಕಸಿದುಕೊಳ್ಳುತ್ತಿದ್ದೇವೆ. ಭವಿಷ್ಯದ ಅರಿವು ನಮಗಿಲ್ಲದಾಯಿತೇ?

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಅಕ್ಷಯ ವೃದ್ಧಾಶ್ರಮವನ್ನು ಬಾಬುರಾಜ್ ಟಿ. ವಿ. (ನಿವೃತ್ತ ಸೇನಾ ಸಿಬ್ಬಂದಿ) ಇವರ ನೇತೃತ್ವದಲ್ಲಿ ಹೇಮಲತಾ ಬಿ. ಎಸ್ ಸಹನಿರ್ದೇಶಕಿಯಾಗಿ ಕಳೆದ 7 ವರ್ಷಗಳಿಂದ ನಡೆಸುತ್ತ ಬಂದಿದ್ದಾರೆ. 50 ವರ್ಷದಿಂದ 90 ವರ್ಷದವರೆಗಿನ ಹಿರಿಯ ಜೀವಗಳನ್ನು ಇಲ್ಲಿ ಸಲಹುತ್ತಿದ್ದಾರೆ. ಕ್ಯಾನ್ಸರ್, ಪಾರ್ಶ್ವವಾಯು, ಕಿಡ್ನಿ ವೈಫಲ್ಯ, ಮೂತ್ರಸಂಬಂಧಿ ತೊಂದರೆಗಳು, ಮರೆವಿನ ಕಾಯಿಲೆ, ಮನೋರೋಗದ ಸಮಸ್ಯೆ, ಗ್ಯಾಂಗ್ರಿನ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ 20ಕ್ಕೂ ಹೆಚ್ಚು ವೃದ್ಧರನ್ನು ನೋಡಿಕೊಳ್ಳುವ ವ್ಯವಸ್ಥೆ ಇಲ್ಲಿದೆ. 24 ಗಂಟೆಯೂ ವೈದ್ಯಕೀಯ ಸೌಲಭ್ಯವನ್ನೂ ಒದಗಿಸುತ್ತಿದ್ದಾರೆ. ಅವರವರ ಆರ್ಥಿಕ ಪರಿಸ್ಥಿತಿಗಳನ್ನು ನೋಡಿಕೊಂಡು ವೆಚ್ಚ ನಿಭಾಯಿಸುತ್ತಿದ್ದಾರೆ. ದಾನಿಗಳ ಸಹಾಯದಿಂದ ಉಳಿದವರಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ.

Post Covid Old age home conditions in bengaluru by Jyothi S

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಅಕ್ಷಯ ವೃದ್ಧಾಶ್ರಮದ ಒಳನೋಟ

ಈ ವೃದ್ಧಾಶ್ರಮದೊಳಗೆ ಕಾಲಿಡುತ್ತಿದ್ದಂತೆ ನಿರ್ವಾಹಕಿ ಹೇಮಲತಾ ಆಶ್ರಮವನ್ನು ತೋರಿಸಿದರು. “ಮಾತೃದೇವೋ ಭವ ಪಿತೃದೇವೋ ಭವ” ಇದು ಕೇವಲ ಉಚ್ಛರಿಸಲು ಮಾತ್ರವಾ ಎನ್ನಿಸಿತು ಅಲ್ಲಿಯ ದೃಶ್ಯಗಳನ್ನು ನೋಡಿದಾಗ. ಬದುಕುವುದನ್ನು ಕಲಿಸಿ ಬದುಕನ್ನು ಕಟ್ಟಿಕೊಳ್ಳುವುದನ್ನು ಕಲಿಸಿ, ತಲೆ ಎತ್ತಿ ನಡೆಯುವಂತೆ ಮಾಡಿದ ತಂದೆ-ತಾಯಿಗಳಿಗೆ ಕೊನೆಗಾಲದಲ್ಲಿ ನಾವು ಏನು ಕೊಡುತ್ತಿದ್ದೇವೆ? ಮಕ್ಕಳು ಚೆನ್ನಾಗಿರಲಿ ಎಂದು ಕೆಲ ವೃದ್ಧರು ನೋವು, ನಿರ್ಲಕ್ಷ್ಯ, ಖಿನ್ನತೆ ಎಲ್ಲವನ್ನು ಎದುರಿಸುತ್ತ ಸಮಾಜದಿಂದ, ಕುಟುಂಬದಿಂದ ದೂರ ಇರುವ ನಿರ್ಧಾರ ಮಾಡಿ  ಆಶ್ರಮಗಳತ್ತ ಮುಖ ಮಾಡಿದ್ದಾರೇನೋ ಎನ್ನಿಸಿತು.

ಎರಡು ತಿಂಗಳ ಹಿಂದೆ 85 ವರ್ಷದ ಅಜ್ಜಿಯೊಬ್ಬರು ತೀರಿಕೊಂಡಾಗ ಅವರ ಮನೆಯವರಿಗೆ ಫೋನ್ ಮಾಡಿ ವಿಚಾರ ತಿಳಿಸಿದಾಗ ಆ ಕಡೆಯಿಂದ ಬಂದ ಉತ್ತರ, ‘ಬೇಕಾದರೆ ನಿಮ್ಮ ಅಕೌಂಟ್​ಗೆ 2,000 ರೂಪಾಯಿ ಟ್ರಾನ್ಸ್​ಫರ್ ಮಾಡುತ್ತೇವೆ. ಅದೇನು ಕಾರ್ಯ ಮಾಡಬೇಕೋ ನೀವೇ ಮಾಡಿ ಮುಗಿಸಿಬಿಡಿ ಎಂದರು. ಎಲ್ಲರೂ ಇದ್ದರೂ ಯಾರೂ ಬರುವುದಿಲ್ಲ’ ಎಂಬ ಸಂಕಟದ ಸನ್ನಿವೇಶವನ್ನು ಹಂಚಿಕೊಂಡರು ಹೇಮಲತಾ.

ಮತ್ತೊಂದು ಸನ್ನಿವೇಶ, ಒಮ್ಮೆ ಒಬ್ಬ ವೃದ್ಧೆ ಆ್ಯಂಬುಲೆನ್ಸ್​ನಲ್ಲೇ ತೀರಿಕೊಂಡರು. ಅನಾಥ ಶವ ಎನ್ನಬಹುದು. ಯಾಕೆಂದರೆ ಒಳಗೆ ಯಾರೂ ಇರಲಿಲ್ಲ. ಗೌರವಾರ್ಥವಾಗಿ ಒಂದು ಮೊಳ ಹೂ ಕೂಡ ಅದರ ಮೇಲಿರಲಿಲ್ಲ. ಹಿಂದೆ ಮಗ ಕಾರ್​ನಲ್ಲಿ ಡ್ರೈವ್ ಮಾಡಿಕೊಂಡು ಬರುತ್ತಿದ್ದ. ಇದೆಲ್ಲವನ್ನೂ ನನ್ನೊಂದಿಗಿದ್ದ ಹನ್ನೊಂದು ವರ್ಷದ ನನ್ನ ಮಗನೂ ಕೇಳಿಸಿಕೊಳ್ಳುತ್ತಿದ್ದ. ಎಂತಹ ಕಾಲಘಟ್ಟದಲ್ಲಿ ನಾನೂ ನೀನೂ ಇದ್ದೇವಲ್ಲ ಎಂಬಂಥ ನೋಟ ಪರಸ್ಪರರ ಮುಖದಲ್ಲಿತ್ತು.

Post Covid Old age home conditions in bengaluru by Jyothi S

ಆಶ್ರಯ ಬಯಸಿ ಬಂದ ಹಿರಿಯ ಜೀವ

ಮಕ್ಕಳದ್ದೇ ತಪ್ಪು, ತಂದೆತಾಯಿಗಳದ್ದೇ ತಪ್ಪು ಎಂದು ಎಲ್ಲಾ ಸಂದರ್ಭಗಳಲ್ಲೂ ನಿರ್ಧರಿಸಲಾಗದು. ಆದರೆ, ವಯೋಸಹಜ ಕಾಯಿಲೆಗಳಿಗೆ ಇಂದಿನ ದುಬಾರಿ ವೈದ್ಯಕೀಯ ವ್ಯವಸ್ಥೆಯಲ್ಲಿ ಚಿಕಿತ್ಸೆ ಕೊಡಿಸಲಾಗದ ಅಸಹಾಯಕತೆ, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅವರ ಭವಿಷ್ಯಕ್ಕಾಗಿ ಸಾಂಸಾರಿಕ ವೆಚ್ಚ ತೂಗಿಸುವುದು, ಜೀವನ ನಿರ್ವಹಣೆಗಾಗಿ ದಂಪತಿಗಳಿಬ್ಬರೂ ದುಡಿಯಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ತಾಯಿತಂದೆಯರ ಕಾಳಜಿ ಮಾಡಲು ಆಗದಿರುವುದು. ಮಕ್ಕಳ ಅಕಾಲಿಕ ಮರಣ, ಹೀಗೆ ಕೆಲವು ಅನಿವಾರ್ಯ ಪರಿಸ್ಥಿತಿಗಳು ವೃದ್ಧರನ್ನು ಅನಾಥರನ್ನಾಗಿಸುತ್ತಿದೆ. ಇಂತಹ ಕೆಲವು ಅಸಹಾಯಕ ಸನ್ನಿವೇಶಗಳ ಹೊರತಾಗಿ ಬಹುತೇಕ ಮಕ್ಕಳಿಗೆ ತಮ್ಮ ತಾಯಿತಂದೆಯರು ಹೊರೆಯಾಗಿರುವುದು ಕಹಿಸತ್ಯ. ಆದರೆ ಮಾನವೀಯ ಕರ್ತವ್ಯಗಳನ್ನು ಮರೆಯಬಾರದಲ್ಲವೆ?

ಬಾಬುರಾಜ್, ‘ಇಲ್ಲಿಗೆ ಬರುವ ಸಾಕಷ್ಟು ಮಂದಿಗೆ ಊಟಕ್ಕಿಂತಲೂ ಪ್ರೀತಿ ಮುಖ್ಯ. ತುಂಬಾ ನೊಂದು, ಅವಮಾನಕ್ಕೆ ಒಳಗಾಗಿ ಖಿನ್ನತೆಯಿಂದ ಬಳಲಿದವರೇ ಹೆಚ್ಚು. ನಾವು ಅವರ ನೋವುಗಳನ್ನು ಮರೆಸಲು ಹೊಸ ಹೊಸ ವಿಚಾರಗಳನ್ನು ಚರ್ಚೆ ಮಾಡುತ್ತೇವೆ. ಆಟ ಆಡಿಸುತ್ತೇವೆ; ಕೇರಂ ಬೋರ್ಡ್, ಅಳಗುಳಿ ಮನೆ, ಚೌಕಾ ಬಾರಾ, ಚೆಂಡು ಎಸೆಯುವ ಆಟ, ಫ್ಯಾನ್ಸಿ ಡ್ರೆಸ್, ವ್ಯಾಯಾಮದೊಂದಿಗೆ ಪ್ರತಿಯೊಂದು ಹಬ್ಬಗಳ ಆಚರಣೆ. ಕಳೆದುಹೋದ ಖುಷಿಯನ್ನು ಮತ್ತೆ ಹುಟ್ಟುಹಾಕುವ ಪ್ರಯತ್ನ ಇಲ್ಲಿ ಸತತವಾಗಿ ನಡೆಯುತ್ತಿರುತ್ತದೆ’ ಎನ್ನುತ್ತಾರೆ.

Post Covid Old age home conditions in bengaluru by Jyothi S

ಸೇವೆಯಲ್ಲಿ ಸಿಬ್ಬಂದಿ

ಬದಲಾದ ಕಾಲಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸಬೇಕು ನಿಜ. ಆದರೆ, ಕೇವಲ ಪ್ರತಿಷ್ಠೆಗಾಗಿ, ಅಂಕ ಗಳಿಕೆಗಾಗಿ ಓದಿಸಿ ದೊಡ್ಡವರನ್ನಾಗಿ ಮಾಡುವ ಬದಲು ಮಾನವೀಯ ಮೌಲ್ಯಗಳ ಅರಿವಿನೊಂದಿಗೆ ಬೆಳೆಸಬೇಕು. ಅದಕ್ಕಾಗಿ ಶುದ್ಧ ಪ್ರೀತಿ, ಅಂತಃಕರಣದ ವಾತಾವರಣ ನಿರ್ಮಿಸಬೇಕು. ಆದಷ್ಟು ಸಮಯ ಕೊಟ್ಟು ಅವರ ಭಾವದನಿಗೆ ಕಿವಿಯಾಗ ಬೇಕು. ಇಂದು ನಾವು ಅವರಿಗಾಗಿ ಸಮಯ ಮೀಸಲಿಟ್ಟರೆ, ಮುಂದೆ ಅವರು ನಮಗೆ ಸಮಯ ಕೊಡುತ್ತಾರೆ ಎನ್ನುವುದು ಕೂಡ ಪ್ರಸ್ತುತ ಸಂದರ್ಭದಲ್ಲಿ ಊಹೆಗೆ ನಿಲುಕದ್ದು. ಕುಟುಂಬವೆಂದರೆ, ಸಮಾಜವೆಂದರೆ ಏಕವ್ಯಕ್ತಿಯಿಂದ ಏಕಮುಖವಾಗಿ ಚಲಿಸುವ ಒಂದು ವ್ಯವಸ್ಥೆಯಲ್ಲವಲ್ಲ ಇಂದು? ಇದೆಲ್ಲದರ ಮಧ್ಯೆಯೇ ಮಾನವೀಯ ಅಂಶಗಳನ್ನು ಮರೆಯದೇ ಬದುಕುವ ಮತ್ತು ಜೊತೆಗಿರುವವರನ್ನು ಬದುಕಿಸುವ ಪ್ರಯತ್ನ ನಮ್ಮ ಹೃದಯದಲ್ಲಿ ಸದಾ ಇರಬೇಕು.

ಇದನ್ನೂ ಓದಿ : Senior Living Community : ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ ಸುಖೀಜೀವನ ನಿಮ್ಮದಾಗಿಸಿಕೊಳ್ಳಿ

Published On - 5:52 pm, Thu, 21 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ