ಕೊಲೆಯಾಗುವ ದಿನ ಸುಶಾಂತ್, ಡ್ರಗ್ ಡೀಲರ್​ನನ್ನು ಭೇಟಿಯಾಗಿದ್ದ: ಸುಬ್ರಮಣಿಯನ್ ಸ್ವಾಮಿ

ವಿವಾದಾತ್ಮಕ ವ್ಯಕ್ತಿಯೆಂದೇ ಗುರುತಿಸಿಕೊಂಡಿರುವ ಬಿಜೆಪಿ ಸಂಸದ ಮತ್ತ ಹೆಸರಾಂತ ವಕೀಲ ಸುಬ್ರಮಣಿಯನ್ ಸ್ವಾಮಿ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಕುರಿತು ದಿಗ್ಭ್ರಮೆ ಹುಟ್ಟಿಸುವ ಸಂಗತಿಗಳನ್ನ್ನು ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್​ನಲ್ಲಿ ಹಂಚಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಅವರಿಗೆ ದುಬೈನೊಂದಿಗೆ ಒಡನಾಟವಿಟ್ಟುಕೊಂಡಿರುವ ಒಬ್ಬ ಡ್ರಗ್ ಡೀಲರ್​ನೊಂದಿಗೆ ಸಂಪರ್ಕವಿತ್ತು ಎಂಬ ಆಘಾತಕಾರಿ ವಿಷಯವನ್ನು ಸ್ವಾಮಿ ತಮ್ಮ ಟ್ವಿಟ್ಟರ್ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್​ನಲ್ಲಿ ಗಮನಿಸಬೇಕಾದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಸುಶಾಂತ್ ಸಿಂಗ್ ಸಾವನ್ನು ಉಲ್ಲೇಖಿಸುವಾಗ ಅದನ್ನು ಸಾವು ಎನ್ನದೆ, […]

ಕೊಲೆಯಾಗುವ ದಿನ ಸುಶಾಂತ್, ಡ್ರಗ್ ಡೀಲರ್​ನನ್ನು ಭೇಟಿಯಾಗಿದ್ದ: ಸುಬ್ರಮಣಿಯನ್ ಸ್ವಾಮಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 25, 2020 | 3:30 PM

ವಿವಾದಾತ್ಮಕ ವ್ಯಕ್ತಿಯೆಂದೇ ಗುರುತಿಸಿಕೊಂಡಿರುವ ಬಿಜೆಪಿ ಸಂಸದ ಮತ್ತ ಹೆಸರಾಂತ ವಕೀಲ ಸುಬ್ರಮಣಿಯನ್ ಸ್ವಾಮಿ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಕುರಿತು ದಿಗ್ಭ್ರಮೆ ಹುಟ್ಟಿಸುವ ಸಂಗತಿಗಳನ್ನ್ನು ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್​ನಲ್ಲಿ ಹಂಚಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಅವರಿಗೆ ದುಬೈನೊಂದಿಗೆ ಒಡನಾಟವಿಟ್ಟುಕೊಂಡಿರುವ ಒಬ್ಬ ಡ್ರಗ್ ಡೀಲರ್​ನೊಂದಿಗೆ ಸಂಪರ್ಕವಿತ್ತು ಎಂಬ ಆಘಾತಕಾರಿ ವಿಷಯವನ್ನು ಸ್ವಾಮಿ ತಮ್ಮ ಟ್ವಿಟ್ಟರ್ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ.

ಅವರ ಪೋಸ್ಟ್​ನಲ್ಲಿ ಗಮನಿಸಬೇಕಾದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಸುಶಾಂತ್ ಸಿಂಗ್ ಸಾವನ್ನು ಉಲ್ಲೇಖಿಸುವಾಗ ಅದನ್ನು ಸಾವು ಎನ್ನದೆ, ‘ಕೊಲೆ’ ಎಂದು ಹೇಳುತ್ತಾರೆ.

‘‘ಸುನಂದಾ ಪುಷ್ಕರ್ ಸಾವು ಹೇಗೆ ಸಂಭವಿಸಿತು ಎನ್ನುವುದಕ್ಕೆ ಎ ಐ ಐ ಎಮ್ ಎಸ್​ನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸುಳಿವು ಸಿಕ್ಕಿತ್ತು. ಆದರೆ, ಶ್ರೀದೇವಿ ಹಾಗೂ ಸುಶಾಂತ್ ಅವರ ಪ್ರಕರಣಗಳಲ್ಲಿ ಹಾಗಾಗಲಿಲ್ಲ. ಸುಶಾಂತ್ ಪ್ರಕರಣದಲ್ಲಿ ಹೇಳುವುದಾದರೆ, ಆತ ‘ಕೊಲೆ‘ಯಾಗುವ ದಿನ ದುಬೈನೊಂದಿಗೆ ಒಡನಾಟವಿಟ್ಟುಕೊಂಡಿದ್ದ ಆಯಷ್ ಖಾನ್ ಎಂಬ ಹೆಸರಿನ ಡ್ರಗ್ ಡೀಲರ್​ನನ್ನು ಭೇಟಿಗಾಗಿದ್ದ. ಯಾಕೆ?’’ ಎಂದು ಸ್ವಾಮಿ ಸೋಮವಾರದಂದು ಟ್ವೀಟ್ ಮಾಡಿದ್ದಾರೆ.

ಮಂಗಳವಾರದಂದು ಸುಶಾಂತ್ ಕುರಿತು ಮತ್ತೊಂದು ಟ್ವೀಟ್ ಮಾಡಿರುವಸುಬ್ರಮಣಿಯನ್ ಸ್ವಾಮಿ, ದಿವಂಗತ ನಟನ ಮರಣೋತ್ತರ ಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಿಸಲಾಯಿತೆಂದು ಆಪಾದಿಸಿದ್ದಾರೆ. ಸುಶಾಂತ್​ನ ದೇಹವನ್ನು ಹೊಕ್ಕಿದ್ದ ವಿಷ ಸಂಪೂರ್ಣವಾಗಿ, ಅಂದರೆ ಅದನ್ನು ಪತ್ತೆಹಚ್ಚಲಾಗದ ಮಟ್ಟಿಗೆ ದೇಹದಲ್ಲಿ ಕರಗಿಹೋಗಲಿ ಎಂಬ ಕಾರಣಕ್ಕೆ ಮರಣೋತ್ತರ ಪರೀಕ್ಷೆಯನ್ನು ನಿಧಾನಿಸಲಾಯಿತಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ

‘‘ಕೊಲೆಗಡುಕರ ಪೈಶಾಚಿಕ ಮನಸ್ಥಿತಿ ಹಾಗೂ ಅವರ ಪ್ರಭಾವ ಕ್ರಮೇಣವಾಗಿ ಬಯಲಾಗುತ್ತಿದೆ. ಎಸ್ ಎಸ್ ಆರ್​ನ ಹೊಟ್ಟೆಯಲ್ಲಿದ್ದ ವಿಷವನ್ನು ಪಚನಕ್ರಿಯೆ ನಡೆಸುವ ದ್ರವಗಳು ಅದನ್ನು ಪತ್ತೆ ಹಚ್ಚಲಾಗದ ಮಟ್ಟಿಗೆ ಕರಗಿಸಲಿ ಎಂಬ ಕಾರಣಕ್ಕೆ ಮರಣೋತ್ತರ ಪರೀಕ್ಷೆಯನ್ನು ಬಲವಂತವಾಗಿ ಹಾಗೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಯಿತು. ಹಾಗೆ ಮಾಡಲು ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಲು ಇದು ಸೂಕ್ತ ಸಮಯ,’’ ಎಂದು ಸ್ವಾಮಿ ಹೇಳಿದ್ದಾರೆ.

ಏತನ್ಮಧ್ಯೆ, ಸುಶಾಂತ್ ಸಾವಿನ ತನಿಖೆಯನ್ನು ಮುಂದುವರಿಸಿರುವ ಕೇಂದ್ರ ತನಿಖಾ ದಳ (ಸಿಬಿಐ) ನಟನ ಗೆಳತಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ಇತರ ಸದಸ್ಯರನ್ನು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.