ಕ್ಷತ್ರಿಯ ಕುಲದ ನಾಶಕ್ಕಾಗಿ ಪರಶು ಹಿಡಿದ ಭಗವಾನ್​ ವಿಷ್ಣುವಿನ ಆರನೇ ಅವತಾರ

ದುಷ್ಟರನ್ನು ಶಮನಗೊಳಿಸಿ, ಶಿಷ್ಟರನ್ನು ಉದ್ಧಾರ ಮಾಡಿ ಧರ್ಮಸಂಸ್ಥಾಪನೆ ಮಾಡಲೆಂದೇ ಮಹಾವಿಷ್ಣು ದಶಾವತಾರ ತಳೆದಿದ್ದಾನೆ. ಮಹಾವಿಷ್ಣು ಲೋಕಕಲ್ಯಾಣಕ್ಕಾಗಿ ಎತ್ತಿದ ಒಂದೊಂದು ಅವತಾರವೂ ಅತ್ಯಂತ ರೋಚಕ. ಆ ಪೈಕಿ ಶ್ರೀಮನ್ನಾರಾಯಣನ ಆರನೇ ಅವತಾರವೇ ಪರಶುರಾಮ. ಅತ್ಯಂತ ಬಲಿಷ್ಠನೂ, ವಿನಯಶಾಲಿಯೂ ಆಗಿದ್ದ ಪರಶುರಾಮ ಭ್ರಷ್ಟ ಕ್ಷತ್ರಿಯರನ್ನೆಲ್ಲಾ ಸದೆಬಡಿವ ಉದ್ದೇಶದಿಂದ ತ್ರೇತಾಯುಗದಲ್ಲಿ ಜನಿಸಿದ ಅಂತಾ ಪುರಾಣಗಳು ಹೇಳುತ್ತವೆ. ಏಳು ಜನ ಚಿರಂಜೀವಿಗಳ ಪೈಕಿ ಪರಶುರಾಮರೂ ಸಹ ಒಬ್ಬರು ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಭಗವಾನ್ ಪರಶುರಾಮ ಬ್ರಾಹ್ಮಣ ಸಪ್ತರ್ಷಿಯಾದ ಜಮದಗ್ನಿ ಹಾಗೂ ರೇಣುಕಾದೇವಿಯ ಪುತ್ರನಾಗಿ […]

ಕ್ಷತ್ರಿಯ ಕುಲದ ನಾಶಕ್ಕಾಗಿ ಪರಶು ಹಿಡಿದ ಭಗವಾನ್​ ವಿಷ್ಣುವಿನ ಆರನೇ ಅವತಾರ
Follow us
ಆಯೇಷಾ ಬಾನು
| Updated By: KUSHAL V

Updated on: Aug 30, 2020 | 3:36 PM

ದುಷ್ಟರನ್ನು ಶಮನಗೊಳಿಸಿ, ಶಿಷ್ಟರನ್ನು ಉದ್ಧಾರ ಮಾಡಿ ಧರ್ಮಸಂಸ್ಥಾಪನೆ ಮಾಡಲೆಂದೇ ಮಹಾವಿಷ್ಣು ದಶಾವತಾರ ತಳೆದಿದ್ದಾನೆ. ಮಹಾವಿಷ್ಣು ಲೋಕಕಲ್ಯಾಣಕ್ಕಾಗಿ ಎತ್ತಿದ ಒಂದೊಂದು ಅವತಾರವೂ ಅತ್ಯಂತ ರೋಚಕ. ಆ ಪೈಕಿ ಶ್ರೀಮನ್ನಾರಾಯಣನ ಆರನೇ ಅವತಾರವೇ ಪರಶುರಾಮ.

ಅತ್ಯಂತ ಬಲಿಷ್ಠನೂ, ವಿನಯಶಾಲಿಯೂ ಆಗಿದ್ದ ಪರಶುರಾಮ ಭ್ರಷ್ಟ ಕ್ಷತ್ರಿಯರನ್ನೆಲ್ಲಾ ಸದೆಬಡಿವ ಉದ್ದೇಶದಿಂದ ತ್ರೇತಾಯುಗದಲ್ಲಿ ಜನಿಸಿದ ಅಂತಾ ಪುರಾಣಗಳು ಹೇಳುತ್ತವೆ. ಏಳು ಜನ ಚಿರಂಜೀವಿಗಳ ಪೈಕಿ ಪರಶುರಾಮರೂ ಸಹ ಒಬ್ಬರು ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಭಗವಾನ್ ಪರಶುರಾಮ ಬ್ರಾಹ್ಮಣ ಸಪ್ತರ್ಷಿಯಾದ ಜಮದಗ್ನಿ ಹಾಗೂ ರೇಣುಕಾದೇವಿಯ ಪುತ್ರನಾಗಿ ವೈವಸ್ವತ ಮನ್ವಂತರದ 19ನೇ ತ್ರೇತಾಯುಗದಲ್ಲಿ ಜನಿಸುತ್ತಾನೆ. ತಪಸ್ಸನ್ನು ಮಾಡಿ ಪರಶಿವನಿಂದ ಪರಶು ಪಡೆದಿದ್ದರಿಂದಲೇ ಈತನಿಗೆ ಪರಶುರಾಮ ಅನ್ನೋ ಹೆಸರು ಬಂದಿದೆ.

ಒಮ್ಮೆ ಪರಶುರಾಮನ ತಾಯಿ ರೇಣುಕಾ ಚಂಚಲತೆಗೆ ಒಳಗಾಗುತ್ತಾಳೆ. ಇದರಿಂದ ತನ್ನ ಪತಿ ಜಮದಗ್ನಿಯ ಕೋಪಕ್ಕೆ ಗುರಿಯಾಗುತ್ತಾಳೆ. ಜಮದಗ್ನಿ ತನ್ನ ಮಕ್ಕಳಾದ ವಸು, ವಿಶ್ರಾವಸು, ಬ್ರಹ್ಮತರ್ಪಣ, ಬ್ರಹತ್ಭಾನುವನ್ನು ಕರೆದು ತಾಯಿ ರೇಣುಕಾಳನ್ನು ಹತ್ಯೆ ಮಾಡುವಂತೆ ಹೇಳ್ತಾನೆ.

ಆದರೆ ರೇಣುಕಾಳ ಪುತ್ರರು ತಾಯಿಯ ಹತ್ಯೆ ಮಾಡಲು ಹಿಂದೇಟು ಹಾಕುತ್ತಾರೆ. ಇದರಿಂದ ಸಿಟ್ಟಾದ ಜಮದಗ್ನಿಯ ಶಾಪಕ್ಕೆ ಗುರಿಯಾಗಿ ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗುತ್ತಾರೆ. ಜಮದಗ್ನಿ ತನ್ನ ಮತ್ತೊಬ್ಬ ಪುತ್ರನಾದ ಪರಶುರಾಮನನ್ನು ಕರೆದು ತಾಯಿ ರೇಣುಕಾಳ ಹತ್ಯೆ ಮಾಡುವಂತೆ ಆದೇಶಿಸುತ್ತಾನೆ. ಪರಶುರಾಮ ತಂದೆಯ ಆಜ್ಞೆಯನ್ನು ಪಾಲಿಸಿ ತಾಯಿ ರೇಣುಕಾಳನ್ನು ಹತ್ಯೆ ಮಾಡುತ್ತಾನೆ.

ತನ್ನ ತಂದೆಯ ಆಜ್ಞೆಯನ್ನು ಪಾಲಿಸಿದ್ದರಿಂದ ಜಮದಗ್ನಿ ಶಾಂತನಾಗುತ್ತಾನೆ. ನಂತರ ಜಮದಗ್ನಿ ಪರಶುರಾಮನಿಗೆ ವರ ಕೇಳುವಂತೆ ಆಗ್ರಹಿಸುತ್ತಾನೆ. ಪರಶುರಾಮ 3 ವರಗಳನ್ನು ಕೇಳ್ತಾನೆ. ಮೊದಲನೆಯದಾಗಿ ತನ್ನ ತಾಯಿ ರೇಣುಕಾ ಮತ್ತೆ ಬದುಕುಳಿದು ತನ್ನನ್ನು ಮಾತೃಹತ್ಯೆಯಿಂದ ಮುಕ್ತಿಗೊಳಿಸುವಂತೆ ಕೇಳಿಕೊಳ್ಳುತ್ತಾನೆ. ಎರಡನೆಯದಾಗಿ, ತನ್ನ ಸಹೋದರರು ಬದುಕುಳಿಯುವ ವರವನ್ನು ಕೇಳುತ್ತಾನೆ. ಮೂರನೆಯದಾಗಿ, ತಂದೆ ಜಮದಗ್ನಿಯ ಮನದಲ್ಲಿರೋ ಕ್ರೋಧಾದೇವಿಯನ್ನು ತ್ಯಜಿಸುವಂತೆ ಕೇಳುತ್ತಾನೆ. ಪರಶುರಾಮನ ಕೇಳಿದ ಎಲ್ಲಾ ವರಗಳಿಗೆ ತಂದೆ ಜಮದಗ್ನಿ ಅಸ್ತು ಎನ್ನುತ್ತಾನೆ.

ಜಮದಗ್ನಿ ದೇವೇಂದ್ರನಿಂದ ವರವಾಗಿ ಪಡೆದಿದ್ದ ಕಾಮಧೇನುವಿಗಾಗಿ ರಾಜ ಕಾರ್ತವೀರ್ಯಾರ್ಜುನ ಆಸೆ ಪಡುತ್ತಾನೆ. ಕಾಮಧೇನುವನ್ನು ಜಮದಗ್ನಿಯ ಆಶ್ರಮದಿಂದ ಎಳೆದುಕೊಂಡು ಹೋಗಲೆಂದು ನಿರ್ಧರಿಸ್ತಾನೆ. ಅಷ್ಟರಲ್ಲೇ ಜಮದಗ್ನಿಯ ಆದೇಶದಂತೆ ಕಾಮಧೇನು ಮಾಯವಾಗಿಬಿಡುತ್ತೆ. ಕಾಮಧೇನು ಮಾಯವಾಗಿದ್ದರಿಂದ ರಾಜ ಕಾರ್ತವೀರ್ಯಾರ್ಜುನ ಕೋಪಗೊಳ್ತಾನೆ. ನಂತರ ಜಮದಗ್ನಿ ಮಹರ್ಷಿಯನ್ನು 21 ಬಾರಿ ಇರಿದು ಕೊಲ್ಲುತ್ತಾನೆ.

ತಂದೆಯ ಹತ್ಯೆಯನ್ನು ಕಂಡು ಪರಶುರಾಮ ಅತ್ಯಂತ ಕೋಪಗೊಂಡು ಇಡೀ ಕ್ಷತ್ರಿಯ ಕುಲವನ್ನೇ 21 ಬಾರಿ ಪರ್ಯಟಣೆ ಮಾಡಿ ನಾಶಪಡಿಸುವುದಾಗಿ ನಿರ್ಧರಿಸ್ತಾನೆ. ನಂತರ ಕ್ಷತ್ರಿಯ ಕುಲವನ್ನೇ ನಾಶಪಡಿಸ್ತಾನೆ. ನಂತರ ಕಾರ್ತವೀರ್ಯಾರ್ಜುನನ ಬಳಿ ಇದ್ದ ಸಂಜೀವಿನಿಯನ್ನು ತಂದು ತಂದೆ ಜಮದಗ್ನಿಯನ್ನು ಬದುಕಿಸ್ತಾನೆ. ಪರಶುರಾಮ ಪಿತೃವಾಕ್ಯ ಪರಿಪಾಲಕನಾಗಿದ್ದು, ಅಸಮಾನ್ಯ ಯೋಧನಾಗಿರ್ತಾನೆ. ಕ್ಷತ್ರಿಯರನ್ನು ನಾಶಪಡಿಸಲೆಂದೇ ಮಹಾವಿಷ್ಣು ಪರಶುರಾಮನ ಅವತಾರವೆತ್ತಿದ್ದ ಅಂತಾ ಪುರಾಣಗಳು ಹೇಳುತ್ತವೆ.

ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!