ನಿಮ್ಮ ಕನಸು ನನಸು ಮಾಡಿಕೊಳ್ಳೋಕೆ ಏನು ಮಾಡಬೇಕು? ಹಿತೋಕ್ತಿಯ ಈ ಒಂದು ಸಾಲಿನಲ್ಲಿದೆ ಉತ್ತರ!

ನಿಮ್ಮ ಕನಸು ನನಸು ಮಾಡಿಕೊಳ್ಳೋಕೆ ಏನು ಮಾಡಬೇಕು? ಹಿತೋಕ್ತಿಯ ಈ ಒಂದು ಸಾಲಿನಲ್ಲಿದೆ ಉತ್ತರ!
ಬಿಲ್ ಗೇಟ್ಸ್ (ಸಂಗ್ರಹ ಚಿತ್ರ)

ಜೀವನದಲ್ಲಿ ಉತ್ಸಾಹ ಅನ್ನೋದು ನಮ್ಮ ಕನಸುಗಳೆಂಬ ಗಿಡಗಳಿಗೆ ನೀರಿದ್ದಂತೆ. ಕನಸೆಂಬ ಗಿಡಗಳಿಗೆ ನೀರೆಂಬ ಉತ್ಸಾಹವನ್ನು ಹಾಕಿದ್ರೆ, ಭವಿಷ್ಯದಲ್ಲಿ ನನಸೆಂಬ ಫಲ ದೊರೆಯುತ್ತೆ. ಇಂತಹ ಮಾತುಗಳಿಗೆ ಹಿತೋಕ್ತಿಯ ಆ ಸಾಲೇ ಸಾಕ್ಷಿಯಾಗಿದೆ. ಅಷ್ಟಕ್ಕೂ, ಕನಸನ್ನು ನನಸಾಗಿಸುವ ಆಧ್ಯಾತ್ಮದಲ್ಲಿನ ಆ ಹಿತೋಕ್ತಿಯಾದ್ರು ಯಾವುದು ಅಂದ್ರೆ..

ಜೀವನದಲ್ಲಿ ಉತ್ಸಾಹವಿದ್ರೆ ಕನಸನ್ನು..
ಜೀವನದಲ್ಲಿ ಉತ್ಸಾಹವಿದ್ರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೇ ತೆರೆಯುತ್ತೆ. ಈ ಮಾತಿಗೆ ಸಾಕ್ಷಿಯಾಗಿರೋದು ಮೈಕ್ರೋಸಾಫ್ಟ್​ನ ಕೋ ಫೌಂಡರ್, ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಬಿಲ್​ ಗೇಟ್ಸ್.

ಬಿಲ್ ಗೇಟ್ಸ್​ ಪ್ರತಿನಿತ್ಯ 100 ಕೋಟಿಗಿಂತಲೂ ಹೆಚ್ಚು ಹಣವನ್ನು ಗಳಿಸ್ತಾರೆ. ವಿಲಿಯಂ ಹೆನ್ರಿ ಗೇಟ್ಸ್ ವಾಷಿಂಗ್ಟನ್​ನ ಸಿಯಾಟಲ್​ನಲ್ಲಿ 28 ಅಕ್ಟೋಬರ್ 1955​ ರಲ್ಲಿ ಜನಿಸಿದ್ರು. ಇವರ ತಂದೆ ವಿಲಿಯಂ ಹೆಚ್ ಗೇಟ್ಸ್ ವಕೀಲರಾಗಿದ್ರು. ಬಿಲ್ ​ಗೇಟ್ಸ್​ ತಂದೆ-ತಾಯಿಗೆ ಮಗನನ್ನ ಲಾ ಓದಿಸಬೇಕೆಂಬ ಆಸೆ ಇತ್ತು. ಆದ್ರೆ ಬಿಲ್​ ಗೇಟ್ಸ್​ಗೆ ಕಂಪ್ಯೂಟರ್​ ಹಾಗೂ ಅದರ ಪ್ರೋಗ್ರಾಮಿಂಗ್​ನಲ್ಲಿ ಬಹಳ ಆಸಕ್ತಿ ಇತ್ತು.

ಲೇಕ್ ಸೈಡ್ ಶಾಲೆಯಲ್ಲಿ ಓದುತ್ತಿದ್ದ ಬಿಲ್​ ಗೇಟ್ಸ್​ಗೆ ಕಂಪ್ಯೂಟರ್ ಬಗ್ಗೆ ಹೆಚ್ಚು ತಿಳಿಯಲು ಶಾಲೆಯ ವತಿಯಿಂದ ಕಂಪ್ಯೂಟರ್ ನೀಡಲಾಗಿತ್ತು. ಇದ್ರಿಂದ ಬಿಲ್​ ಗೇಟ್ಸ್​ಗೆ ಕಂಪ್ಯೂಟರ್​ ಮೇಲಿನ ಆಸಕ್ತಿ ಇನ್ನೂ ಹೆಚ್ಚಿತು. ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತೆ ಅಂತಾ ತಿಳಿಯೋ ಆಸಕ್ತಿ ಮೂಡಿತು. ತಮ್ಮ 13 ನೇ ವಯಸ್ಸಲ್ಲಿ ಬೇಸಿಕ್ ಕಂಪ್ಯೂಟರ್ ಲ್ಯಾಂಗ್ವೇಜ್​ನಲ್ಲಿ ಟಿಕ್ ಟಾಕ್ ಟೋ ಎಂಬ ಗೇಮಿಂಗ್ ಪ್ರೋಗ್ರಾಂ ಸೃಷ್ಟಿಸಿದ್ರು. ಇದರ ವಿಶೇಷ ಏನು ಅಂದ್ರೆ ಇದು ಕೇವಲ ಒಬ್ಬರೇ ಆಡುವ ಆಟವಾಗಿತ್ತು.

ಒಮ್ಮೆ ಬಿಲ್ ​ಗೇಟ್ಸ್​ ಶಾಲೆಯಲ್ಲಿದ್ದಾಗ ಇವರ ಸೀನಿಯರ್ ಆಗಿದ್ದ ಪಾಲ್ ಅಲೇನ್​ರನ್ನು ಭೇಟಿಯಾದ್ರು. ಇಬ್ಬರಿಗೂ ಕಂಪ್ಯೂಟರ್​ನಲ್ಲಿ ಆಸಕ್ತಿ ಇತ್ತು. 1970ರಲ್ಲಿ 15 ನೇ ವಯಸ್ಸಲ್ಲಿ ಸ್ನೇಹಿತನ ಜೊತೆ ಸೇರಿ ನಗರದ ಟ್ರಾಫಿಕ್ ಪ್ಯಾಟ್ರನ್ ನೋಡಿಕೊಳ್ಳಲು ಪ್ರೋಗ್ರಾಮಿಂಗ್ ಮಾಡಿದ್ರು. ಶಾಲೆಯ ಓದು ಮುಗಿಸಿದ ಬಿಲ್ ​ಗೇಟ್ಸ್ 1973ರಲ್ಲಿ ಉತ್ತೀರ್ಣಗೊಂಡು ಹಾರ್ವರ್ಡ್ ಯೂನಿವರ್ಸಿಟಿಗೆ ಅಡ್ಮಿಷನ್ ಆದ್ರು.

ಆದ್ರೆ ಇವರಿಗೆ ಇಲ್ಲಿ ಸುಮ್ಮನೆ ಕಾಲಹರಣವಾಗ್ತಿದೆ ಅನ್ನಿಸ್ತು. ಅತೀವ ಉತ್ಸಾಹದಿಂದ ಮಹತ್ತರವಾದದ್ದನ್ನು ಸಾಧಿಸುವ ಕನಸು ಹೊಂದಿದ್ರು. ಆ ಕನಸಿನ ಬೆನ್ನತ್ತಿ ಹೊರಟ ಇವರು 2 ವರ್ಷದ ನಂತರ ಗ್ರಾಜುಯೇಷನ್ ಮಾಡದೆಯೇ ಕಾಲೇಜ್ ಬಿಟ್ಟು ಹೊರಬಂದ್ರು.

ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ ಕಾಲೇಜಿನಿಂದ ಹೊರ ಬಂದ ಬಿಲ್​ ಗೇಟ್ಸ್​ ತಮ್ಮದೇ ಸ್ವಂತ ಕಂಪನಿ ನಡೆಸಲು ನಿರ್ಧರಿಸಿದ್ರು. ಏಪ್ರಿಲ್ 4, 1975 ರಂದು ಸ್ನೇಹಿತ ಪಾಲ್ ಅಲೆನ್ ಜೊತೆಗೂಡಿ ಮೈಕ್ರೋಸಾಫ್ಟ್ ಕಂಪನಿ ಸ್ಥಾಪಿಸಿದ್ರು. ಕೆಲವೇ ವರ್ಷಗಳಲ್ಲಿ ಸಾಫ್ಟ್​ವೇರ್ ಜಗತ್ತಿನ ಉನ್ನತ ಸ್ಥಾನಕ್ಕೇರಿದ್ರು.

ಶ್ರದ್ಧೆ, ಪರಿಶ್ರಮ, ಛಲ, ಉತ್ಸಾಹ ಇದ್ರೆ ಜಗತ್ತಲ್ಲಿ ಏನು ಬೇಕಾದ್ರೂ ಸಾಧಿಸಬಹುದು. ಕನಸನ್ನು ನನಸಾಗಿಸಿಕೊಳ್ಳಬಹುದು ಅಂತಾ ಬಿಲ್ ​ಗೇಟ್ಸ್ ತೋರಿಸಿಕೊಟ್ಟಿದ್ದಾರೆ.

Click on your DTH Provider to Add TV9 Kannada