Tv9 Facebook Live | ಭಾರತದಲ್ಲಿ ಸದ್ದಿಲ್ಲದೇ ರೂಪಾಂತರ ಹೊಂದಿದೆ ಕೊರೊನ ವೈರಾಣು

ಕೊರೊನಾ ವೈರಾಣು ಭಾರತದಲ್ಲೂ ಸ್ವರೂಪ ಬದಲಿಸಿದೆ ಎಂಬ ಬಗ್ಗೆ ನಿಮಗೆ ಗೊತ್ತೇ? ಈ ಬಗ್ಗೆ ಇಂದಿನ ಟಿವಿ9 ಕನ್ನಡ ಡಿಜಿಟಲ್ ಫೇಸ್​ಬುಕ್ ಲೈವ್ ಕಾರ್ಯಕ್ರಮದಲ್ಲಿ ಡಾ. ಪವನ್ ಮಾಹಿತಿ ನೀಡಿದ್ದಾರೆ.

Tv9 Facebook Live | ಭಾರತದಲ್ಲಿ ಸದ್ದಿಲ್ಲದೇ ರೂಪಾಂತರ ಹೊಂದಿದೆ ಕೊರೊನ ವೈರಾಣು
ಫೇಸ್​ಬುಕ್ ಸಂವಾದದಲ್ಲಿ ಭಾಗವಹಿಸಿದ್ದ ಶಿಕ್ಷಣತಜ್ಞ ಸುಪ್ರೀತ್, ಕವಿತಾ ಹಾಗೂ ವೈದ್ಯರಾದ ಡಾ. ಪವನ್
TV9kannada Web Team

| Edited By: ganapathi bhat

Apr 06, 2022 | 11:20 PM


ಬೆಂಗಳೂರು: ಇಂಗ್ಲೆಂಡ್​ನಲ್ಲಿ ಕೊರೊನಾ ವೈರಸ್ ಸ್ವರೂಪ ಬದಲಿಸಿದೆ ಎಂಬ ಬಗ್ಗೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆ ವೈರಸ್ ನಮ್ಮ ದೇಶಕ್ಕೆ ಕಾಲಿಟ್ಟರೆ ಎಂಬ ಭಯದಲ್ಲಿ ಜನರಿದ್ದಾರೆ. ಆದರೆ, ಭಾರತದಲ್ಲೂ 23 ವಿಧದಲ್ಲಿ ಕೊರೊನಾ ವೈರಸ್ ರೂಪಾಂತರ ಹೊಂದಿದೆ ಎಂಬ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಕೊರೊನಾ ವೈರಾಣು ಭಾರತದಲ್ಲೂ ಸ್ವರೂಪ ಬದಲಿಸಿದೆ ಎಂಬ ಬಗ್ಗೆ ನಿಮಗೆ ಗೊತ್ತೇ? ಈ ಬಗ್ಗೆ ಇಂದಿನ ಟಿವಿ9 ಕನ್ನಡ ಡಿಜಿಟಲ್ ಫೇಸ್​ಬುಕ್ ಲೈವ್ ಕಾರ್ಯಕ್ರಮದಲ್ಲಿ ಡಾ. ಪವನ್ ಮಾಹಿತಿ ನೀಡಿದ್ದಾರೆ.

ಕೊವಿಡ್-19 ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಸಮಯದಲ್ಲಿ ಶಾಲಾ ಕಾಲೇಜು ಆರಂಭಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಜನವರಿ 1ರಿಂದ ಹತ್ತು ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಗೊಳಿಸುವ ಬಗ್ಗೆ ಸರ್ಕಾರ ಆದೇಶ ನೀಡಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಶಿಕ್ಷಣ ಸಂಸ್ಥೆಗಳು ಏನು ಹೇಳುತ್ತವೆ? ಪಾಲಕ ಪೋಷಕರು ಏನು ಅಭಿಪ್ರಾಯಪಡುತ್ತಾರೆ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಆರಂಭ ಸರಿಯಾ? ತಪ್ಪಾ? ಕೊವಿಡ್-19 ಮುಂಜಾಗ್ರತಾ ಕ್ರಮಗಳು ಏನು ಎಂಬ ಬಗ್ಗೆ ಬುಧವಾರ, ‘ಟಿವಿ9 ಕನ್ನಡ ಡಿಜಿಟಲ್’ ಫೇಸ್​ಬುಕ್ ಲೈವ್ ಸಂವಾದ ನಡೆಸಿತು.

ಶಿಕ್ಷಣತಜ್ಞ ಡಾ. ಸುಪ್ರೀತ್, ವೈದ್ಯರಾದ ಡಾ. ಪವನ್, ಪೋಷಕರ ಪರವಾಗಿ ಶ್ವೇತಾ ಹಾಗೂ ಕವಿತಾ ಸಂವಾದದಲ್ಲಿ ಭಾಗವಹಿಸಿದರು. ಆ್ಯಂಕರ್ ಮಾಲ್ತೇಶ್ ಜಾನಗಲ್ ಕಾರ್ಯಕ್ರಮ ನಡೆಸಿಕೊಟ್ಟರು.

ಕೊವಿಡ್-19 ಎರಡನೇ ಅಲೆ ಮತ್ತು ಶಾಲೆ ಆರಂಭದ ನಿರ್ಧಾರದ ಬಗ್ಗೆ ಡಾ. ಪವನ್ ಮಾತನಾಡಿದರು. ಕೊರೊನಾ ವೈರಾಣು ಎಲ್ಲಾ ಕಡೆಯೂ ರೂಪಾಂತರ ಆಗಿರಬಹುದು. ನಮ್ಮ ದೇಶದಲ್ಲೂ ಈವರೆಗೆ 23 ವಿಧದ ಕೊರೊನಾ ವೈರಾಣುಗಳನ್ನು ಪತ್ತೆಹಚ್ಚಲಾಗಿದೆ. ಆದರೆ, ಅವುಗಳೆಲ್ಲವೂ ಪರಿಣಾಮಕಾರಿ ಅಲ್ಲ. ರೂಪಾಂತರ ಹೊಂದಿದ ಹತ್ತು ವೈರಾಣುವಿನಲ್ಲಿ ಒಂದು ವೈರಾಣು ಮಾತ್ರ ಪರಿಣಾಮಕಾರಿಯಾಗಿರಬಹುದು. ಬ್ರಿಟನ್​ನಲ್ಲಿ ಅಂತಹ ಒಂದು ವೈರಾಣುವನ್ನು ಪತ್ತೆಹಚ್ಚಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಆದರೆ ಮುಂಜಾಗ್ರತೆ ಕ್ರಮಗಳನ್ನು ಎಲ್ಲರೂ ಕೈಗೊಳ್ಳಬೇಕು ಎಂದು ಕೇಳಿಕೊಂಡರು. ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣ ನಿಷೇಧಿಸಬೇಕು. ಹರಡುವಿಕೆ ಹೆಚ್ಚಾಗದಂತೆ ತಡೆಯಬೇಕು. ಈ ಮೊದಲು ಮಾಡಿದ ತಪ್ಪುಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ವೈರಸ್ ರೂಪಾಂತರ ಆದಂತೆ ಅದರ ಶಕ್ತಿ ಕಡಿಮೆಯಾಗುತ್ತದೆ. ಹರಡುವಿಕೆ ಶೇ. 70ರಷ್ಟು ಹೆಚ್ಚಾಗಲಿದೆ ಎಂಬ ಬಗ್ಗೆಯೂ ಪ್ರಾಯೋಗಿಕ ಮಾಹಿತಿ ಇಲ್ಲ. ಕೊವಿಡ್-19 ಪ್ರಕರಣಗಳ ಪ್ರಮಾಣ ಹೆಚ್ಚಾದರೆ ಶಾಲೆ ಮುಚ್ಚಬೇಕಾಗಿಯೂ ಬರಬಹುದು. ಅದಕ್ಕೂ ನಾವು ಸಿದ್ಧರಿರಬೇಕು. ವಯಸ್ಕರ ಮೇಲೆ ಕೊರೊನಾ ವೈರಾಣು ಹೆಚ್ಚು ಪರಿಣಾಮ ಬೀರಿತ್ತು. ಸಣ್ಣ ವಯಸ್ಸಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹಾಗಾಗಿ, ಮಕ್ಕಳಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ ಎಂದು ಡಾ. ಪವನ್ ವಿವರಣೆ ನೀಡಿದರು.

ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರ ಜೊತೆ ಸರ್ಕಾರ ಮಾತುಕತೆ ನಡೆಸಿದೆ. ಪಾಳಿ ಪದ್ಧತಿಯಲ್ಲಿ ಒಂದಾದ ಬಳಿಕ ಮತ್ತೊಂದು ತರಗತಿ ನಡೆಸಲು ಸೂಚಿಸಿದೆ. ಒಂದೇ ಬಾರಿಗೆ ಎಲ್ಲಾ ತರಗತಿಗಳು ನಡೆಯುವುದಿಲ್ಲ. ಪ್ರತಿ ತರಗತಿ ಒಂದೂವರೆ ಗಂಟೆ ಅವಧಿಯಲ್ಲಿ ನಡೆಯುತ್ತದೆ. ಶಾಲೆ ನಡೆಯುವಾಗ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮಕ್ಕಳು ಬಿಟ್ಟು ಯಾರೂ ಇರಬಾರದು. ಈ ಬಗ್ಗೆ ಸರ್ಕಾರ ಇಪ್ಪತ್ತೈದು ಪುಟಗಳ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಆ ನಿಯಮಾವಳಿಗಳನ್ನು ಅನುಸರಿಸಿ ಶಾಲಾ ಕಾಲೇಜು ಆರಂಭಿಸಿದರೆ ಯಾವ ಸಮಸ್ಯೆಯೂ ಇರುವುದಿಲ್ಲ ಎಂದು ಶಿಕ್ಷಣತಜ್ಞ ಸುಪ್ರೀತ್ ಅಭಿಪ್ರಾಯ ಹಂಚಿಕೊಂಡರು.

ಎಲ್ಲರೂ ಕಾಳಜಿ ವಹಿಸಿ ವಿದ್ಯಾರ್ಥಿಗಳ ಸಂರಕ್ಷಣೆಯತ್ತ ಗಮನಹರಿಸಬೇಕು. ವಿದ್ಯಾರ್ಥಿಗಳಿಗೆ ಕೆಮ್ಮು ನೆಗಡಿ ಇದ್ದಾಗ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಅವರೂ ಸಾಮಾಜಿಕ ಕಳಕಳಿ ವಹಿಸಬೇಕು ಎಂದು ಕೇಳಿಕೊಂಡರು.

ಮಕ್ಕಳನ್ನು ಇಷ್ಟು ದಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದೇವೆ. ಆರೋಗ್ಯ, ಬದುಕು ಇದ್ದರೆ ಮುಂದೆಯೂ ಕಲಿಯಬಹುದು. ಹೇಗೂ ಒಂದು ಏಳೆಂಟು ತಿಂಗಳು ಶಾಲೆ-ಕಾಲೇಜು ಇಲ್ಲದೆ ಕಳೆದಿದ್ದೇವೆ. ಈಗ ಕೊರೊನಾ ಎರಡನೇ ಅಲೆ ಎಂಬ ಸಂದರ್ಭದಲ್ಲಿ ಅದರ ಪರಿಣಾಮ, ಪ್ರಭಾವ ತಿಳಿಯದೇ ಆತುರದ ನಿರ್ಧಾರ ಕೈಗೊಳ್ಳುವುದು ಒಳ್ಳೆಯದಲ್ಲ ಎಂದು ಸಂವಾದದಲ್ಲಿ, ವಿದ್ಯಾರ್ಥಿಗಳ ಪೋಷಕರ ಪರವಾಗಿ ಭಾಗವಹಿಸಿದ್ದ ಕವಿತಾ ಹಾಗೂ ಶ್ವೇತಾ ಅಭಿಪ್ರಾಯಪಟ್ಟರು. ಒಂದೆಡೆ ರಾತ್ರಿ ಕರ್ಫ್ಯೂ ಜಾತಿಗೊಳಿಸಿದ ಸರ್ಕಾರ, ಮತ್ತೊಂದೆಡೆ ಶಾಲೆ-ಕಾಲೇಜು ತೆರೆಯಲು ಸೂಚನೆ ನೀಡಬಾರದಿತ್ತು ಎಂದು ಹೇಳಿದರು.

https://tv9kannada.com/no-need-to-panic-about-new-mutant-coronavirus-strain-says-dr-manjunath

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada