ರುಚಿಯಲ್ಲಿ ಕಹಿ ನೀಡೋ ಬೇವು ನಿಮ್ಮ ಮೊಡವೆ, ಬ್ಲ್ಯಾಕ್‌ಹೆಡ್, ಒಣ ತ್ವಚೆಗೂ ಪರಿಹಾರ ನೀಡುತ್ತೆ
ಮೊಡವೆ, ಬ್ಲ್ಯಾಕ್‌ಹೆಡ್, ಒಣ ತ್ವಚೆ ಇವು ಹರೆಯದ ಹುಡುಗಿಯರನ್ನು ಆಗಾಗ ಕಾಡುತ್ತಲೇ ಇರುವ ಸಮಸ್ಯೆಗಳು. ಇದಕ್ಕಾಗಿ ಎಲ್ಲ ಕ್ರೀಮ್, ಲೋಷನ್‌ಗಳ ಮೊರೆ ಹೋದರೂ ಈ ಸಮಸ್ಯೆಗಳು ನಮ್ಮನ್ನು ಅಷ್ಟು ಸುಲಭಕ್ಕೆ ಬಿಟ್ಟು ಹೋಗುವುದಿಲ್ಲ. ಇದು ಎಂಥವರಿಗೂ ಕಿರಿಕಿರಿ ಉಂಟು ಮಾಡುತ್ತವೆ. ಅದಕ್ಕ ಒಂದು ಒಳ್ಳೆಯ ಪರಿಹಾರವೆಂದರೆ ಬೇವು! ಹೌದು ಈ ಬೇವು ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ಸಿಹಿ ಸಿಹಿ. ಇದು ದೇಹಕ್ಕೆ ತಂಪು ನೀಡುವುದಷ್ಟೇ ಅಲ್ಲ, ಚರ್ಮದ ಆರೋಗ್ಯ ರಕ್ಷಕ ಕೂಡ! ದೀರ್ಘಕಾಲ ಕಾಡೋ ತ್ವಚೆಯ ಸಮಸ್ಯೆಗಳಿಗೆ […]
ಮೊಡವೆ, ಬ್ಲ್ಯಾಕ್‌ಹೆಡ್, ಒಣ ತ್ವಚೆ ಇವು ಹರೆಯದ ಹುಡುಗಿಯರನ್ನು ಆಗಾಗ ಕಾಡುತ್ತಲೇ ಇರುವ ಸಮಸ್ಯೆಗಳು. ಇದಕ್ಕಾಗಿ ಎಲ್ಲ ಕ್ರೀಮ್, ಲೋಷನ್‌ಗಳ ಮೊರೆ ಹೋದರೂ ಈ ಸಮಸ್ಯೆಗಳು ನಮ್ಮನ್ನು ಅಷ್ಟು ಸುಲಭಕ್ಕೆ ಬಿಟ್ಟು ಹೋಗುವುದಿಲ್ಲ. ಇದು ಎಂಥವರಿಗೂ ಕಿರಿಕಿರಿ ಉಂಟು ಮಾಡುತ್ತವೆ. ಅದಕ್ಕ ಒಂದು ಒಳ್ಳೆಯ ಪರಿಹಾರವೆಂದರೆ ಬೇವು!
ಹೌದು ಈ ಬೇವು ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ಸಿಹಿ ಸಿಹಿ. ಇದು ದೇಹಕ್ಕೆ ತಂಪು ನೀಡುವುದಷ್ಟೇ ಅಲ್ಲ, ಚರ್ಮದ ಆರೋಗ್ಯ ರಕ್ಷಕ ಕೂಡ! ದೀರ್ಘಕಾಲ ಕಾಡೋ ತ್ವಚೆಯ ಸಮಸ್ಯೆಗಳಿಗೆ ಬೇವು ಒಂದು ಸಿದ್ಧೌಷಧ.
ನೀರಿಗೆ ಕೆಲವು ಬೇವಿನ ಎಲೆಗಳನ್ನು ಹಾಕಿ ಕೆಲ ಕಾಲ ಕುದಿಸಿ. ಆಗ ಬೇವಿನ ಎಲೆಗಳ ಬಣ್ಣ ನೀರಿಗೆ ಸೇರಿ ತಿಳಿಹಸಿರು ಬಣ್ಣ ಪಡೆಯುತ್ತದೆ. ಅದನ್ನು ಸೋಸಿ, ಆ ನೀರನ್ನು ನಿಮ್ಮ ಸ್ನಾನದ ನೀರಿನ ಬಕೆಟ್‌ಗೆ ಸೇರಿಸಿಕೊಂಡು ಸ್ನಾನ ಮಾಡಿ. ಇದರಲ್ಲಿರುವ ಆ್ಯಂಟಿಬ್ಯಾಕ್ಟರೀಯಲ್, ಅ್ಯಂಟಿಫಂಗಲ್ ಅಂಶಗಳು ಚರ್ಮದ ಅಲರ್ಜಿಗಳನ್ನು ತಡೆಯುತ್ತದೆ.
ಹರೆಯದವರ ಮೊಡವೆ ಸಮಸ್ಯೆಗೆ ಅನಾದಿಕಾಲದಿಂದಲೂ ಬೇವನ್ನು ಔಷಧವಾಗಿ ಬಳಸಲಾಗುತ್ತಿದೆ. ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಕುದಿಸಿ, ಸೋಸಿಕೊಳ್ಳಿ. ಆ ನೀರಿನಲ್ಲಿ ಹತ್ತಿಯನ್ನು ಅದ್ದಿ ಅದನ್ನು ಮುಖದ ಮೇಲೆ ಸವರಬೇಕು. ಬೇವು ಮತ್ತು ಸೌತೆಕಾಯಿಯನ್ನು ಸೇರಿಸಿ ಫೇಸ್‌ಪ್ಯಾಕ್ ಮಾಡುವುದರಿಂದಲೂ ಮೊಡವೆಯನ್ನು ನಿಯಂತ್ರಿಸಬಹುದು. ಹಾಗೆಯೇ ಬೇವು ಮತ್ತು ಮೊಸರಿನ ಫೇಸ್‌ಪ್ಯಾಕ್ ಕೂಡ ಮಾಡಬಹುದು. ಬೇವಿನ ನಿರಂತರ ಬಳಕೆ ನಿಮ್ಮ ತ್ವಚೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಬೇವಿನ ನೀರನ್ನು ಮುಖ ತೊಳೆಯಲು ಬಳಸುವುದರಿಂದ ವಯಸ್ಸನ್ನು ಮರೆಮಾಚಬಹುದು.
ಇದು ಮುಖದಲ್ಲಿ ಮೂಡುವ ಚರ್ಮದ ಕಲೆಗಳನ್ನು ಹಾಗೂ ಮೊಡವೆಯ ಗುರುತುಗಳನ್ನು ತೊಡೆಯುತ್ತದೆ. ಮುಖದಲ್ಲಿನ ಜಿಡ್ಡು ತೊಲಗಿಸಲು ಬೇವು ಹಾಗೂ ಗುಲಾಬಿಯ ಫೇಸ್‌ಪ್ಯಾಕ್ ಮಾಡಿ ಹಚ್ಚಿಕೊಳ್ಳಿ. ಅದು ಒಣಗಿದ ನಂತರ ರೋಸ್‌ವಾಟರ್‌ನಲ್ಲಿ ಮುಖವನ್ನು ತೊಳೆಯಿರಿ. ಇದು ಮುಖದ ತ್ವಚೆಯನ್ನು ಮೃದುವಾಗಿಸುವುದಲ್ಲದೇ ಮುಖದ ಕಾಂತಿಯನ್ನು ಇಮ್ಮಡಿಗೊಳಿಸುತ್ತದೆ. ಬೇವಿನ ಬಳಕೆ ಒಣತ್ವಚೆಯವರಿಗೆ ಹೆಚ್ಚು ಸೂಕ್ತ.
ತಲೆಹೊಟ್ಟಿನ ಸಮಸ್ಯೆಗೆ ಬೇವಿನಪುಡಿಯನ್ನು ನೀರಿನೊಂದಿಗೆ ಕಲಸಿ ತಲೆಯ ಬುಡಕ್ಕೆ ಹಚ್ಚಿ ಕೆಲ ಸಮಯದ ನಂತರ ತಲೆ ತೊಳೆಯುವುದರಿಂದ ತಲೆಹೊಟ್ಟಿನಿಂದ ಮುಕ್ತಿ ಪಡೆಯಬಹುದು. ಇನ್ನು ಬ್ಲ್ಯಾಕ್‌ಹೆಡ್ ಸಮಸ್ಯೆಗೆ ಬೇವಿನ ಎಣ್ಣೆ ಬಳಕೆ ಉಪಯುಕ್ತ.
Published On - 3:54 pm, Mon, 6 January 20