ಸಂಖ್ಯೆ 5ರ ಮಹಾರಹಸ್ಯ ಏನು!?

ಸಂಖ್ಯೆ 5ರ ಮಹಾರಹಸ್ಯ ಏನು!?

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲ ಸಂಖ್ಯೆಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಅಂತಹ ಸಂಖ್ಯೆಗಳಲ್ಲಿ ಐದು ಅನ್ನೋ ಸಂಖ್ಯೆ ಕೂಡ ಬಹಳ ಮಹತ್ವದ್ದಾಗಿದೆ. ಸಂಖ್ಯೆ ಐದರಲ್ಲಿ ಸೃಷ್ಟಿಯ ಮಹಾರಹಸ್ಯವೇ ಅಡಗಿದೆ ಅಂತಾ ಕೆಲ ಪುರಾಣಗಳು ಹೇಳುತ್ತವೆ. ಮನುಷ್ಯನ ಜೀವನಕ್ಕೆ ಅತ್ಯಗತ್ಯವಾದ ನೀರು, ಆಕಾಶ, ಭೂಮಿ, ವಾಯು, ಬೆಂಕಿಯನ್ನು ಪಂಚಮಹಾಭೂತಗಳೆಂದು ಕರೆಯಲಾಗುತ್ತೆ. ಇದಿಷ್ಟೇ ಅಲ್ಲದೇ ಭಕ್ತಿಯಿಂದ ಪ್ರಾರ್ಥಿಸುವ ಭಗವಂತನ ಸುಂದರ ಮೂರ್ತಿ ನಿರ್ಮಾಣಕ್ಕೂ ಸಹ ಪಂಚಲೋಹಗಳನ್ನು ಉಪಯೋಗಿಸಲಾಗುತ್ತೆ. ಹೀಗೆ ಈ ಪಂಚ ಅನ್ನೋ ಹೆಸರಲ್ಲೇ, ಸಂಖ್ಯೆಯಲ್ಲೇ ಅನೇಕ ವಿಶೇಷತೆಗಳಿವೆ. ಸಂಖ್ಯೆ 5 […]

sadhu srinath

|

Feb 26, 2020 | 10:29 AM

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲ ಸಂಖ್ಯೆಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಅಂತಹ ಸಂಖ್ಯೆಗಳಲ್ಲಿ ಐದು ಅನ್ನೋ ಸಂಖ್ಯೆ ಕೂಡ ಬಹಳ ಮಹತ್ವದ್ದಾಗಿದೆ. ಸಂಖ್ಯೆ ಐದರಲ್ಲಿ ಸೃಷ್ಟಿಯ ಮಹಾರಹಸ್ಯವೇ ಅಡಗಿದೆ ಅಂತಾ ಕೆಲ ಪುರಾಣಗಳು ಹೇಳುತ್ತವೆ. ಮನುಷ್ಯನ ಜೀವನಕ್ಕೆ ಅತ್ಯಗತ್ಯವಾದ ನೀರು, ಆಕಾಶ, ಭೂಮಿ, ವಾಯು, ಬೆಂಕಿಯನ್ನು ಪಂಚಮಹಾಭೂತಗಳೆಂದು ಕರೆಯಲಾಗುತ್ತೆ.

ಇದಿಷ್ಟೇ ಅಲ್ಲದೇ ಭಕ್ತಿಯಿಂದ ಪ್ರಾರ್ಥಿಸುವ ಭಗವಂತನ ಸುಂದರ ಮೂರ್ತಿ ನಿರ್ಮಾಣಕ್ಕೂ ಸಹ ಪಂಚಲೋಹಗಳನ್ನು ಉಪಯೋಗಿಸಲಾಗುತ್ತೆ. ಹೀಗೆ ಈ ಪಂಚ ಅನ್ನೋ ಹೆಸರಲ್ಲೇ, ಸಂಖ್ಯೆಯಲ್ಲೇ ಅನೇಕ ವಿಶೇಷತೆಗಳಿವೆ. ಸಂಖ್ಯೆ 5 ರಲ್ಲಿ ಅಡಕವಾಗಿರೋ ಮತ್ತಷ್ಟು ವಿಶೇಷತೆಗಳು, ರಹಸ್ಯಗಳ ಬಗ್ಗೆ ಇಲ್ಲಿ ತಿಳಿಯಿರಿ.

ಸಂಖ್ಯೆ ಐದರ ಪ್ರಾಮುಖ್ಯತೆ: 1. ಪಂಚಕೋಶ- ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ. 2. ಪಂಚಕ್ಲೇಶ- ಆಪದ್ಯಾ, ಅಸ್ಮಿತ, ರಾಗ, ದ್ವೇಷ, ಅಭಿನಿವೇಶ. 3. ಪಂಚಗವ್ಯ- ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ. 4. ಪಂಚತರುಗಳು- ಕಲ್ಪವೃಕ್ಷ, ಪಾರಿಜಾತ, ಮಂದಾರ, ಸಂತಾನ, ಹರಿಚಂದನ. 5. ಪಂಚದ್ರಾವಿಡ ಭಾಷೆಗಳು- ಕನ್ನಡ, ತೆಲುಗು, ತಮಿಳು, ತುಳು, ಮಲೆಯಾಳಂ. 6. ಪಂಚಪ್ರಾಣಗಳು- ಪ್ರಾಣ, ಉದಾನ, ಸಮಾನ, ವ್ಯಾನ, ಆಪಾನ. 7. ಪಂಚಮಹಾಭೂತಗಳು- ಪೃಥ್ವಿ, ನೀರು, ಬೆಂಕಿ, ವಾಯು, ಆಕಾಶ. 8. ಪಂಚಮಹಾಜ್ಞಾನ- ಅಧ್ಯಾಪನ, ಬ್ರಹ್ಮಯಜ್ಞ, ಪಿತೃಯಜ್ಞ, ದೈವಯಜ್ಞ, ಭೂತಯಜ್ಞ. 9. ಶಿವನ ಪಂಚಮುಖ- ಸದೋಜಾತ, ವಾಮದೇವ, ತತ್ಪುರುಷ, ಅಘೋರ, ಈಶಾನ 10. ಪಂಚಲೋಹ- ತಾಮ್ರ, ಹಿತ್ತಾಳೆ, ತವರ, ಸೀಸ, ಕಬ್ಬಿಣ. 11. ಪಂಚವರ್ಣ- ಕೆಂಪು, ನೀಲಿ,ಹಳದಿ, ಬಿಳಿ, ಕಪ್ಪು. 12. ಪಂಚಾಂಗ- ವಾರ, ತಿಥಿ, ಯೋಗ,ನಕ್ಷತ್ರ, ಕರಣ. 13. ಪಂಚಾಚಾರ- ಸದಾಚಾರ, ಶಿವಾಚಾರ, ಲಿಂಗಾಚಾರ, ಗಣಾಚಾರ, ಭೃತ್ಯಾಚಾರ. 14. ಪಂಚವಾದ್ಯ- ಕೊಂಬು, ತಮಟೆ, ಶಂಖ, ಭೇರಿ, ಜಾಗಟೆ. 15. ಪಂಚಶುದ್ಧಿ- ಮನಃಶುದ್ಧಿ, ಕರ್ಮಶುದ್ಧಿ, ಭಾಂಡಶುದ್ಧಿ, ದೇಹಶುದ್ಧಿ, ವಾಕ್‌ಶುದ್ಧಿ. 16. ಪಂಚ ಕೃತ್ಯಗಳು- ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಅನುಪ್ರವೇಶ. 17. ಪಂಚ ದೇವತೆಗಳು- ಅಗ್ನಿ, ಇಂದ್ರ, ರವಿ, ಪ್ರಜಾಪತಿ, ಮೃತ್ಯು. 18. ಪಂಚಾಧಿಕಾರಿಗಳು- ಕರ್ಮಿ, ಮುಮುಕ್ಷು, ಅಭ್ಯಾಸಿ, ಅನುಭವಿ, ಅಮೂಢ. 19. ಪಂಚ ಶಾಸ್ತ್ರಗಳು- ಲೌಕಿಕ, ವೈದಿಕ, ಆದ್ಯಾತ್ಮಿಕ, ಅತಿ ಮಾರ್ಗಿಕ, ಮಂತ್ರ. 20. ಪಂಚ ಮಹಾಪಾತಕ- ಬ್ರಹ್ಮ ಹತ್ಯ, ಸರಾಪಾನ, ಸ್ವರ್ಣಸ್ತೇಯ, ಗುರುತಲ್ಪ ಗಮನ, ತತಸಂಯೋಗಿ. 21. ಪಂಚ ದುರ್ಗಗಳು- ಗಿರಿದುರ್ಗ, ಜಲದುರ್ಗ, ಅಗ್ನಿದುರ್ಗ, ಶಸ್ತ್ರದುರ್ಗ, ವಾಯುದುರ್ಗ. 22. ಪಂಚ ತಂತ್ರಗಳು- ಭೇದತಂತ್ರ, ಪರೀಕ್ಷಾತಂತ್ರ, ವಿಶ್ವಾಸತಂತ್ರ, ವಂಚನಾತಂತ್ರ, ಮಿತ್ರಕಾರ್ಯ ತಂತ್ರ. 23. ಪಂಚ ಯಜ್ಞಗಳು- ಬ್ರಹ್ಮಯಜ್ಞ, ಪಿತೃಯಜ್ಞ, ದೇವಯಜ್ಞ, ಭೂತಯಜ್ಞ, ನೃಪಯಜ್ಞ. 24. ಪಂಚೋಚಾರಗಳು- ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ. 25. ಪಂಚ ಕಾಶಿಗಳು- ವಾರಣಾಶಿ, ಗುಪ್ತಕಾಶಿ, ಉತ್ತರಕಾಶಿ, ದಕ್ಷಿಣಕಾಶಿ, ಶಿವಕಾಶಿ.

ಹೀಗೆ ಆಧ್ಯಾತ್ಮದಲ್ಲಿ ಪಂಚ ಅನ್ನೋ ಪದಕ್ಕೆ ವಿಶೇಷ ಸ್ಥಾನಮಾನವಿದೆ. 5ವಿಚಾರಗಳು, 5 ವಸ್ತುಗಳು ಸೇರಿದಂತೆ ಅದೆಷ್ಟೋ ಆಚಾರ-ವಿಚಾರಗಳು ಪಂಚವಾಗಿ ಆಧ್ಯಾತ್ಮದಲ್ಲಿ ಪೂರ್ಣಗೊಂಡಿವೆ ಎನ್ನಲಾಗುತ್ತೆ.

Follow us on

Most Read Stories

Click on your DTH Provider to Add TV9 Kannada