ಬೆಟ್ಟದ ನೆಲ್ಲಿಕಾಯಿಯಲ್ಲಿ ದೀಪ ಹಚ್ಚೋದೇಕೆ..?

ಬೆಟ್ಟದ ನೆಲ್ಲಿಕಾಯಿಯಲ್ಲಿ ದೀಪ ಹಚ್ಚೋದೇಕೆ..?

ನೆಲ್ಲಿಕಾಯಿಯ ಹೆಸರು ಕೇಳ್ತಿದ್ದಂತೆ ಅನೇಕರ ಬಾಯಲ್ಲಿ ನೀರೂರುತ್ತೆ. ಯಾಕಂದ್ರೆ ನೆಲ್ಲಿಕಾಯಿ ನಾಲಿಗೆಯಲ್ಲಿನ ಸ್ವಾದ ಗ್ರಂಥಿಗಳನ್ನು ಚುರುಕುಗೊಳಿಸುವ ವಿಶೇಷ ಶಕ್ತಿಯನ್ನು ಹೊಂದಿದೆ. ಇಂತಹ ನೆಲ್ಲಿಕಾಯಿಗೆ ಆಯುರ್ವೇದ ಶಾಸ್ತ್ರದಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದ್ರಲ್ಲೂ ಬೆಟ್ಟದ ನೆಲ್ಲಿಕಾಯಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಕೆಲ ಪುರಾಣಗಳ ಪ್ರಕಾರ, ನೆಲ್ಲಿಕಾಯಿಯನ್ನು ವಿಷ್ಣು ಸ್ವರೂಪ ಎನ್ನಲಾಗುತ್ತೆ. ಇದೇ ಕಾರಣಕ್ಕೆ ದೀಪಾವಳಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ನೆಲ್ಲಿಕಾಯಿ ಗಿಡಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತೆ. ಯಾಕಂದ್ರೆ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಆಚರಿಸಲಾಗುವ ಪವಿತ್ರ ತುಳಸಿ ಹಬ್ಬದಲ್ಲಿ ಬೆಟ್ಟದ […]

sadhu srinath

|

Mar 01, 2020 | 1:47 PM

ನೆಲ್ಲಿಕಾಯಿಯ ಹೆಸರು ಕೇಳ್ತಿದ್ದಂತೆ ಅನೇಕರ ಬಾಯಲ್ಲಿ ನೀರೂರುತ್ತೆ. ಯಾಕಂದ್ರೆ ನೆಲ್ಲಿಕಾಯಿ ನಾಲಿಗೆಯಲ್ಲಿನ ಸ್ವಾದ ಗ್ರಂಥಿಗಳನ್ನು ಚುರುಕುಗೊಳಿಸುವ ವಿಶೇಷ ಶಕ್ತಿಯನ್ನು ಹೊಂದಿದೆ. ಇಂತಹ ನೆಲ್ಲಿಕಾಯಿಗೆ ಆಯುರ್ವೇದ ಶಾಸ್ತ್ರದಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದ್ರಲ್ಲೂ ಬೆಟ್ಟದ ನೆಲ್ಲಿಕಾಯಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಕೆಲ ಪುರಾಣಗಳ ಪ್ರಕಾರ, ನೆಲ್ಲಿಕಾಯಿಯನ್ನು ವಿಷ್ಣು ಸ್ವರೂಪ ಎನ್ನಲಾಗುತ್ತೆ. ಇದೇ ಕಾರಣಕ್ಕೆ ದೀಪಾವಳಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ನೆಲ್ಲಿಕಾಯಿ ಗಿಡಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತೆ.

ಯಾಕಂದ್ರೆ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಆಚರಿಸಲಾಗುವ ಪವಿತ್ರ ತುಳಸಿ ಹಬ್ಬದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನಿಟ್ಟು ಪೂಜಿಸಲಾಗುತ್ತೆ. ತುಳಸಿ ಹಬ್ಬದ ದಿನದಂದೇ ತುಳಸಿಯನ್ನು, ಶ್ರೀಕೃಷ್ಣ ಮದುವೆಯಾದ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ತುಳಸಿ ಹಬ್ಬದ ದಿನದಂದು ಬೆಟ್ಟದ ನೆಲ್ಲಿಕಾಯಿಯ ತುದಿ ಕತ್ತರಿಸಿ ತುಳಸಿಗೆ ಆರತಿಯನ್ನು ಬೆಳಗಲಾಗುತ್ತೆ. ಬೆಟ್ಟದ ನೆಲ್ಲಿಕಾಯಿಯ ಮೇಲ್ಭಾಗವನ್ನು ಕತ್ತರಿಸಿ ಅದಕ್ಕೆ ತುಪ್ಪದಿಂದ ಅದ್ದಿದ ಬತ್ತಿಯನ್ನಿಟ್ಟು ಆರತಿ ಬೆಳಗಲಾಗುತ್ತೆ.

ಈ ರೀತಿ ಬೆಟ್ಟದ ನೆಲ್ಲಿಕಾಯಿಯಲ್ಲಿ ದೀಪ ಹಚ್ಚಿ, ಆರತಿ ಬೆಳಗಿದ್ರೆ, ಮನೋಕಾಮನೆಗಳು ಈಡೇರುತ್ತವೆ ಎನ್ನಲಾಗುತ್ತೆ. ಇನ್ನು ದೇವಿಗೆ ಮಂಗಳವಾರ ಹಾಗೂ ಶುಕ್ರವಾರಗಳಂದು ನೆಲ್ಲಿಕಾಯಿ ದೀಪ ಹಚ್ಚಿ, ಆರತಿ ಮಾಡಲಾಗುತ್ತೆ. ಹೀಗೆ ಸತತವಾಗಿ ಐದು ಅಥವಾ ಒಂಬತ್ತು ವಾರಗಳ ಕಾಲ ನೆಲ್ಲಿಕಾಯಿ ದೀಪ ಬೆಳಗಿದ್ರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಅನ್ನೋ ನಂಬಿಕೆ ಇದೆ. ಇದಿಷ್ಟು ನೆಲ್ಲಿಕಾಯಿಯ ಆಧ್ಯಾತ್ಮಿಕ ವಿಚಾರಗಳಾದ್ರೆ, ಬೆಟ್ಟದ ನೆಲ್ಲಿಕಾಯಿ ಔಷಧೀಯ ಗುಣಗಳ ಆಗರ. ಆ ಬಗ್ಗೆ ಈಗ ತಿಳಿಯೋಣ.

ಬೆಟ್ಟದ ನೆಲ್ಲಿಕಾಯಿಯ ಔಷಧೀಯ ಗುಣಗಳು: 1)ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ, ತಲೆಕೂದಲಿನ ಆರೈಕೆಗೆ ಇದು ರಾಮಬಾಣ. 2)ಇದರಲ್ಲಿ ವಿಟಮಿನ್-ಎ ಹಾಗೂ ಕ್ಯಾರೋಟಿನ್‌ ಇರುವುದರಿಂದ ಕಣ್ಣಿನ ಆರೈಕೆಗೆ ಸಹಕಾರಿ. 3)ದೇಹವು ಕ್ಯಾಲ್ಸಿಯಂ ಅಂಶವನ್ನು ಸಹಕಾರಿ ರೀತಿಯಲ್ಲಿ ಹೀರಿಕೊಳ್ಳಲು ಬೆಟ್ಟದ ನೆಲ್ಲಿಕಾಯಿ ಸಹಾಯ ಮಾಡುತ್ತದೆ. ಇದ್ರಿಂದ ಎಲುಬುಗಳು, ಹಲ್ಲುಗಳು ಹಾಗೂ ಉಗುರುಗಳ ಆರೋಗ್ಯ ಉತ್ತಮವಾಗಿರುತ್ತೆ. 4)ಬೆಟ್ಟದ ನಲ್ಲಿಕಾಯಿಯಲ್ಲಿರೋ ಪ್ರೋಟೀನ್ ಅಂಶ ನಮ್ಮ ದೇಹದ ಚಯಾಪಚಯ ಚಟುವಟಿಕೆಯನ್ನು ಸುಧಾರಿಸುತ್ತೆ. 5)ಇದರಲ್ಲಿರುವ ಖನಿಜಗಳು ಹಾಗೂ ಜೀವಸತ್ವಗಳು ಮುಟ್ಟಿನ ಸೆಳೆತವನ್ನು ತಡೆಯುತ್ತೆ. 6)ಮಧುಮೇಹವನ್ನು ನಿಯಂತ್ರಣಗೊಳಿಸಲು ಬೆಟ್ಟದ ನೆಲ್ಲಿಕಾಯಿ ಸಹಕಾರಿ. 7)ದೇಹದಲ್ಲಿನ ಎಲ್‌ಡಿಎಲ್ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತೆ. 8)ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಹಾಗೂ ಗರ್ಭಾಶಯದ ಸೋಂಕುಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತೆ. 9)ಆಹಾರ ಪರಿಣಾಮಕಾರಿಯಾಗಿ ಜೀರ್ಣವಾಗಲು ಸಹಕಾರಿಯಾಗುತ್ತೆ. ಜೊತೆಗೆ ಗ್ಯಾಸ್ಟ್ರಿಕ್ ಮತ್ತು ಜೀರ್ಣಕಾರಿ ರಸ ಸ್ರವಿಸುವಂತೆ ಉತ್ತೇಜಿಸುತ್ತೆ. 10)ಸ್ಟ್ರೋಕ್ ಮತ್ತು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತೆ. 11)ಇದರಲ್ಲಿನ ಕಬ್ಬಿಣದ ಅಂಶ ಹೊಸ ಕೆಂಪು ರಕ್ತಕಣಗಳು ಹಾಗೂ ಬಿಳಿರಕ್ತಕಣಗಳ ಸೃಷ್ಟಿಗೆ ಉತ್ತೇಜನ ನೀಡುತ್ತೆ. 12)ಅತಿಸಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಇದು ಉಪಯುಕ್ತವಾಗಿದೆ. 13)ಅಪೆಟೈಟ್ ಸಮಸ್ಯೆಯನ್ನು ಸುಧಾರಿಸುತ್ತೆ. 14) ಚರ್ಮದಲ್ಲಿನ ಸುಕ್ಕುಗಳನ್ನು ತಡೆಯುವಲ್ಲಿ ಸಹಕಾರಿ.

ಹೀಗೆ ಬೆಟ್ಟದ ನೆಲ್ಲಿಕಾಯಿ ಆಧ್ಯಾತ್ಮಿಕ ಹಾಗೂ ಆಯುರ್ವೇದದ ಮಹತ್ವವನ್ನು ಹೊಂದಿದೆ. ಇಂತಹ ಬಹುಪಯೋಗಿ ನೆಲ್ಲಿಕಾಯಿಯನ್ನು ದಿನಕ್ಕೊಂದರಂತೆ ಸೇವಿಸಿದರೆ ಆರೋಗ್ಯ ಸುಧಾರಿಸುತ್ತೆ ಅಂತಾ ಸಂಶೋಧನೆಗಳಿಂದ ದೃಢಪಟ್ಟಿದೆ.

Follow us on

Related Stories

Most Read Stories

Click on your DTH Provider to Add TV9 Kannada