ಹೊಸ ಬಟ್ಟೆಗೆ ಅರಿಶಿನ ಹಚ್ಚೋದೇಕೆ?

ಹಿಂದೂ ಸಂಪ್ರದಾಯದ ಪ್ರಕಾರ, ಸಾಮಾನ್ಯವಾಗಿ ಶುಭ ಕಾರ್ಯಗಳು, ಹಬ್ಬ-ಹರಿದಿನಗಳಲ್ಲಿ ಹೊಸ ಬಟ್ಟೆ ಧರಿಸೋ ಪದ್ಧತಿ ಇದೆ. ಯಾಕಂದ್ರೆ ಹೊಸ ಬಟ್ಟೆಗಳು ಸದಾ ಶುಭವನ್ನುಂಟು ಮಾಡುತ್ತವೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೊಸ ಬಟ್ಟೆ ಧರಿಸೋಕೂ ಮುನ್ನ ಕೆಲ ಮನೆಗಳಲ್ಲಿ ಅದಕ್ಕೆ ಅರಿಶಿನ ಹಚ್ಚುವ ಸಂಪ್ರದಾಯವಿದೆ. ಹಾಗೆ ಹೊಸ ಬಟ್ಟೆಯ ಅಂಚುಗಳಿಗೆ ಅರಿಶಿನ ಹಚ್ಚಿದ್ರೆ ಅದನ್ನು ತೊಡುವವರಿಗೆ ಯಾವುದೇ ದೋಷ ಉಂಟಾಗುವುದಿಲ್ಲ ಹಾಗೂ ದೃಷ್ಟಿಯಾಗುವುದಿಲ್ಲ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದಿಷ್ಟೇ ಅಲ್ಲದೇ, ನಾವು ಖರೀದಿಸಿದ ಹೊಸ ಬಟ್ಟೆ ಹಾಗೂ […]

ಹೊಸ ಬಟ್ಟೆಗೆ ಅರಿಶಿನ ಹಚ್ಚೋದೇಕೆ?
Follow us
ಸಾಧು ಶ್ರೀನಾಥ್​
|

Updated on:Mar 10, 2020 | 10:30 AM

ಹಿಂದೂ ಸಂಪ್ರದಾಯದ ಪ್ರಕಾರ, ಸಾಮಾನ್ಯವಾಗಿ ಶುಭ ಕಾರ್ಯಗಳು, ಹಬ್ಬ-ಹರಿದಿನಗಳಲ್ಲಿ ಹೊಸ ಬಟ್ಟೆ ಧರಿಸೋ ಪದ್ಧತಿ ಇದೆ. ಯಾಕಂದ್ರೆ ಹೊಸ ಬಟ್ಟೆಗಳು ಸದಾ ಶುಭವನ್ನುಂಟು ಮಾಡುತ್ತವೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೊಸ ಬಟ್ಟೆ ಧರಿಸೋಕೂ ಮುನ್ನ ಕೆಲ ಮನೆಗಳಲ್ಲಿ ಅದಕ್ಕೆ ಅರಿಶಿನ ಹಚ್ಚುವ ಸಂಪ್ರದಾಯವಿದೆ.

ಹಾಗೆ ಹೊಸ ಬಟ್ಟೆಯ ಅಂಚುಗಳಿಗೆ ಅರಿಶಿನ ಹಚ್ಚಿದ್ರೆ ಅದನ್ನು ತೊಡುವವರಿಗೆ ಯಾವುದೇ ದೋಷ ಉಂಟಾಗುವುದಿಲ್ಲ ಹಾಗೂ ದೃಷ್ಟಿಯಾಗುವುದಿಲ್ಲ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದಿಷ್ಟೇ ಅಲ್ಲದೇ, ನಾವು ಖರೀದಿಸಿದ ಹೊಸ ಬಟ್ಟೆ ಹಾಗೂ ಅದರ ಬಣ್ಣದ ಆಧಾರದ ಮೇಲೆ ಅದನ್ನು ಶುಭ ಮುಹೂರ್ತದಲ್ಲಿ ಧರಿಸಿದ್ರೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಅಂತಾ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಹೊಸ ಬಟ್ಟೆ ಧರಿಸೋಕೂ ಮುನ್ನ ಕೆಲವು ನಿಮಯಗಳನ್ನು ಪಾಲಿಸಬೇಕು ಅಂತಾ ಕೆಲ ಪುರಾಣಗಳು ಹೇಳುತ್ತವೆ. ಅಷ್ಟಕ್ಕೂ, ಆ ನಿಮಯಗಳು ಯಾವುವು? ಬನ್ನಿ ತಿಳಿಯೋಣ.

ಹೊಸ ಬಟ್ಟೆ ಧರಿಸೋಕೂ ಮುನ್ನ ಪಾಲಿಸಬೇಕಾದ ನಿಯಮಗಳು: -ಹೊಸ ಬಟ್ಟೆಯನ್ನು ಮನೆಗೆ ತಂದ ಮೇಲೆ ಮೊದಲು ಅದನ್ನು ತೊಳೆಯಬೇಕು. ಇದ್ರಿಂದ ಅದರಲ್ಲಿನ ಧೂಳು, ಸೂಕ್ಷ್ಮ ರೋಗಾಣುಗಳು, ಕೊಳಕು ನಾಶವಾಗುತ್ತೆ. ಇನ್ನು ಬಟ್ಟೆ ಖರೀದಿಸೋಕೂ ಮುನ್ನ ಅಂಗಡಿಯಲ್ಲಿ ಅನೇಕ ಜನರು ಅದನ್ನು ಹಾಕಿ ಟ್ರಯಲ್ ನೋಡಿರ್ತಾರೆ. ಇದ್ರಿಂದ ಅವರ ದೇಹದಲ್ಲಿನ ಕಾಯಿಲೆ, ರೋಗಾಣುಗಳು ಬಟ್ಟೆಯಿಂದ ಹರಡೋ ಸಾಧ್ಯತೆ ಇರುತ್ತೆ. ಹೀಗಾಗೇ ಮೊದಲು ಬಟ್ಟೆಯನ್ನು ಶುದ್ಧಗೊಳಿಸಿ, ನಂತರ ಧರಿಸಬೇಕು. -ಹೊಸ ಬಟ್ಟೆಯನ್ನು ಧರಿಸುವ ಮುನ್ನ ದೇವರ ಸ್ಮರಣೆ, ಜಪ ಹಾಗೂ ಪೂಜೆ ಮಾಡಬೇಕು. ಹೊಸ ಬಟ್ಟೆ ಧರಿಸೋಕು ಮುನ್ನ ಓಂ ಗಂ ಗಣಪತಯೇ ನಮಃ ಅನ್ನೋ ಗಣಪತಿ ಮಂತ್ರವನ್ನು ಪಠಿಸಿದರೆ ಶುಭವಾಗುತ್ತೆ. -ನಾವು ಬಳಸಿದ ಹಳೆಯ ಬಟ್ಟೆಯನ್ನು ಎಸೆಯೋಕೂ ಮೊದಲು ಅದನ್ನು ಸ್ವಲ್ಪ ಹರಿಯಬೇಕು. ಇದ್ರಿಂದ ನಮ್ಮ ಕುಂಡಲಿಯಲ್ಲಿನ ದೋಷಗಳು ನಿವಾರಣೆಯಾಗುತ್ತವೆ. -ಹೊಸ ಬಟ್ಟೆ ಧರಿಸಿದಾಗ ಅದರ ಮೇಲೇನಾದ್ರೂ ಅರಿಶಿನ, ಗಂಧ, ಸಿಂಧೂರ ಹಾಗೂ ಜೇನುತುಪ್ಪ ಬಿದ್ದರೆ ಅದು ಶುಭ ಶಕುನ ಎನ್ನಲಾಗುತ್ತೆ. ಇದು ಭವಿಷ್ಯದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುವ ಸೂಚನೆಯಾಗಿರುತ್ತೆ. -ಬಟ್ಟೆ ಖರೀದಿಗಾಗಿ ಶುಕ್ರವಾರ ಅತ್ಯಂತ ಪ್ರಶಸ್ತವಾದ ಸಮಯ ಎನ್ನಲಾಗುತ್ತೆ. -ಶನಿವಾರ ಹೊಸ ಬಟ್ಟೆಯನ್ನು ಖರೀದಿಸಬಾರದು. -ಭಾನುವಾರ ಹೊಸ ಬಟ್ಟೆಯನ್ನು ಧರಿಸಬಾರದು.

ಹೀಗೆ ಹೊಸ ಬಟ್ಟೆ ಖರೀದಿ ಹಾಗೂ ಧರಿಸೋ ಬಗ್ಗೆ ಕೆಲ ನಿಯಮಗಳನ್ನು ಪಾಲಿಸಬೇಕು ಅಂತಾ ನಮ್ಮ ಧರ್ಮಶಾಸ್ತ್ರ ಹೇಳುತ್ತೆ. ಈ ಎಲ್ಲಾ ನಿಯಮಗಳನ್ನು ಪಾಲಿಸಿದ್ರೆ ಶುಭವಾಗುತ್ತೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ.

Published On - 2:24 pm, Mon, 9 March 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ