AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ ಏಳನೇ ದಿನ ಕಾಲರಾತ್ರಿ ದೇವಿಯನ್ನ ಹೇಗೆ ಆರಾಧಿಸಬೇಕು?

ನವದುರ್ಗೆಯರಲ್ಲಿ ಕಾಲರಾತ್ರಿಯದ್ದು ಏಳನೇ ರೂಪ. ದುಷ್ಟರ ವಿನಾಶ ಮಾಡುವ ಈ ದೇವಿಯದ್ದು ಅತ್ಯಂತ ಭಯಂಕರ ರೂಪ. ಇವಳ ವಾಹನ ಕತ್ತೆ. ಈ ದೇವಿಯ ಶರೀರ ದಟ್ಟವಾದ ಅಂಧಕಾರದಂತೆ ಕಪ್ಪಾಗಿದೆ. ತಲೆಕೂದಲನ್ನು ಭಯಂಕರವಾಗಿ ಹರಡಿಕೊಂಡಿದ್ದಾಳೆ. ಕತ್ತು, ಕೈ ಕಾಲುಗಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದೆ. ಬ್ರಹ್ಮಾಂಡದಂತಹ 3 ಕಣ್ಣುಗಳಿವೆ. ಇವಳ ಕಣ್ಣುಗಳು ಭಕ್ತರನ್ನು ಭಯಗೊಳಿಸುತ್ತೆ. ಇವಳು ಉಸಿರಾಡಿದ್ರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿವೆ. ಎಡಗೈಗಳಲ್ಲಿ ಖಡ್ಗ ಮತ್ತು […]

ನವರಾತ್ರಿ ಏಳನೇ ದಿನ ಕಾಲರಾತ್ರಿ ದೇವಿಯನ್ನ ಹೇಗೆ ಆರಾಧಿಸಬೇಕು?
ಸಾಧು ಶ್ರೀನಾಥ್​
|

Updated on:Oct 05, 2019 | 8:08 AM

Share

ನವದುರ್ಗೆಯರಲ್ಲಿ ಕಾಲರಾತ್ರಿಯದ್ದು ಏಳನೇ ರೂಪ. ದುಷ್ಟರ ವಿನಾಶ ಮಾಡುವ ಈ ದೇವಿಯದ್ದು ಅತ್ಯಂತ ಭಯಂಕರ ರೂಪ. ಇವಳ ವಾಹನ ಕತ್ತೆ. ಈ ದೇವಿಯ ಶರೀರ ದಟ್ಟವಾದ ಅಂಧಕಾರದಂತೆ ಕಪ್ಪಾಗಿದೆ. ತಲೆಕೂದಲನ್ನು ಭಯಂಕರವಾಗಿ ಹರಡಿಕೊಂಡಿದ್ದಾಳೆ. ಕತ್ತು, ಕೈ ಕಾಲುಗಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದೆ. ಬ್ರಹ್ಮಾಂಡದಂತಹ 3 ಕಣ್ಣುಗಳಿವೆ. ಇವಳ ಕಣ್ಣುಗಳು ಭಕ್ತರನ್ನು ಭಯಗೊಳಿಸುತ್ತೆ. ಇವಳು ಉಸಿರಾಡಿದ್ರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿವೆ. ಎಡಗೈಗಳಲ್ಲಿ ಖಡ್ಗ ಮತ್ತು ಕಬ್ಬಿಣದ ಮುಳ್ಳಿನ ಅಸ್ತ್ರವಿದೆ. ನವರಾತ್ರಿಯಲ್ಲಿ ಈ ದೇವಿ ಆರಾಧನೆ ಮಾಡೋಕೆ ಒಂದು ಮಂತ್ರವಿದೆ. ಆ ಮಂತ್ರದ ಮೂಲಕ ದೇವಿ ಆರಾಧನೆ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ

ಕಾಲರಾತ್ರಿ ಮಂತ್ರ ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ವಾಮಪಾದೋಲ್ಲ ಸಲ್ಲೋಹಲತಾ ಕಂಟಕಭೂಷಣಾ ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ

ಈ ದೇವಿ ನೋಡೋಕೆ ಎಷ್ಟು ಭಯಂಕರವಾಗಿದ್ದಾಳೋ, ಅಷ್ಟೇ ಶುಭಫಲಗಳನ್ನು ಕೊಡುವವಳು. ಹೀಗಾಗೇ ಇವಳಿಗೆ ಶುಭಂಕರೀ ಎಂಬ ಹೆಸರೂ ಇದೆ. ಕಾಲರಾತ್ರಿ ದೇವಿ ದುಷ್ಟರಿಗೆ ಮೃತ್ಯುದೇವತೆಯಾದ್ರೆ, ಶಿಷ್ಟರಿಗೆ ರಕ್ಷಾಕವಚ. ಈಕೆ ಧರ್ಮವನ್ನು ರಕ್ಷಣೆ ಮಾಡಿ ಪಾಪ ನಾಶ ಮಾಡುತ್ತಾಳೆ. ನವರಾತ್ರಿಯಲ್ಲಿ ಇವಳ ಉಪಾಸನೆ ಅತ್ಯಂತ ಫಲದಾಯಕ. ಹಾಗಾದ್ರೆ ಈ ದೇವಿ ಆರಾಧನೆಯಿಂದ ಸಿಗುವ ಫಲಗಳೇನು?

ಕಾಲರಾತ್ರಿ ಪೂಜಾ ಫಲಗಳು

* ಈ ದೇವಿಯನ್ನು ಆರಾಧಿಸಿದ್ರೆ ವಿಘ್ನಗಳು ದೂರಾಗುತ್ತವೆ * ಪುಣ್ಯಪ್ರಾಪ್ತಿಯಾಗುತ್ತೆ * ದುಷ್ಟಶಕ್ತಿಗಳ ಕಾಟ ದೂರಾಗುತ್ತೆ * ಗ್ರಹ ಬಾಧೆಗಳು ದೂರಾಗುತ್ತೆ * ಶತ್ರುಭಯ ನಿವಾರಣೆಯಾಗುತ್ತೆ * ಸಮಸ್ತ ಪಾಪ ನಾಶ ಮಾಡ್ತಾಳೆ

Published On - 8:07 am, Sat, 5 October 19

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ