ಮುಖಕ್ಕೆ ದೀರ್ಘ ಕಾಲ ಮಾಸ್ಕ್ ಹಾಕುವುದರಿಂದ ದೈಹಿಕವಾಗಿ ಏನೆಲ್ಲಾ ಪರಿಣಾಮಗಳು ಬೀರುತ್ತವೆ? ಮೊದಲನೆಯದಾಗಿ ಹೇಳುವುದಾದರೆ ಮಾಸ್ಕ್ ಹಾಕುವುದರಿಂದ ಶ್ವಾಸಕೋಶದೊಳಕ್ಕೆ ಕೊರೊನಾ ಸೋಂಕು ಒಳನುಸುಳುವುದಿಲ್ಲ. ಹಾಗಂತ ಇದು ದೃಢಪಟ್ಟಿಲ್ಲವಾದರೂ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾರ್ಗಸೂಚಿಗಳಲ್ಲಿ ಕೊರೊನಾ ಸೋಂಕು ಮನುಷ್ಯನೊಳಕ್ಕೆ ಒಳನುಸುಳದಂತೆ ತಡೆಗಟ್ಟಲು ಮುಖಕ್ಕೆ ಮಾಸ್ಕ್ ಹಾಕುವುದು ಮುನ್ನೆಚ್ಚರಿಕೆಯ ಕ್ರಮ ಎಂದು ಘೋಷಿಸಿದೆ. ಈ ಮಧ್ಯೆ ಈ ಮಾಸ್ಕ್ ಧರಿಸಬೇಕಾ? ಬೇಡವಾ? ಎಂಬುದರ ಬಗ್ಗೆ ವೈದ್ಯರು, ಆರೋಗ್ಯ ಪರಿಣತರು ಏನು ಹೇಳುತ್ತಾರೆಂದ್ರೆ..
ಹಾಗಂತ ಮಾಸ್ಕ್ ಅನ್ನು ದೀರ್ಘ ಕಾಲ ಧರಿಸುವುದರಿಂದ ಅನೇಕ ಅಡ್ಡಪರಿಣಾಮಗಳು ಬೀರುತ್ತವೆ. ಏನವು?
1) ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಮಾಡುತ್ತದೆ.
2) ಮೆದುಳಿಗೆ ಸರಬರಾಜು ಆಗುವ ಆಕ್ಸಿಜನ್ ಪ್ರಮಾಣ ಕುಗ್ಗುತ್ತದೆ.
3) ಮೈ-ಕೈ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ.
4) ಕೊನೆಗೆ ಸಾವಿನಲ್ಲಿ ಪರ್ಯವಸಾನವೂ ಆಗಬಹುದು.
ಈ ಅಪಾಯ/ ಅಡ್ಡಪರಿಣಾಮಗಳನ್ನು ತಡೆಗಟ್ಟುವುದು ಹೇಗೆ?
1) ಮನೆಯಲ್ಲಿದ್ದಾಗಲೂ ಮಾಸ್ಕ್ ಧರಿಸುವುದು ಬೇಡ.
2) ಎಸಿ ಕಾರಿನಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸಿದರೆ ಏನನ್ನೋಣ?
3) ಒಬ್ಬರೇ ಇದ್ದಾಗ ಮಾಸ್ಕ್ ಹಾಕಿಕೊಳ್ಳುವ ಅಗತ್ಯ ಏನಿದೆ?
4) ಅಕ್ಕಪಕ್ಕದಲ್ಲಿ ಯಾರಾದರೂ ಇದ್ದಾರೆಂದ್ರೆ ಸಾಮಾಜಿಕ ಅಂತರ ಪಾಲನೆ ಮಾಡುತ್ತಾ, ಮಾಸ್ಕ್ ಧರಿಸುವುದು ಒಳ್ಳೆಯದೇ ಸರಿ.
Published On - 5:12 pm, Thu, 21 May 20