ಮನೆಗಳಲ್ಲಿ ಆಕಸ್ಮಿಕವಾಗಿ ಕನ್ನಡಿ ಒಡೆದು ಹೋದರೆ ಅನಿಷ್ಟವೇ? ಇದಕ್ಕೆ ಏಳು ವರ್ಷ ದೋಷ ಇದಿಯಾ?
ಮನೆಗಳಲ್ಲಿ ಆಕಸ್ಮಿಕವಾಗಿ ಕನ್ನಡಿ ಒಡೆದು ಹೋದರೆ ಅದು ಏಳು ವರ್ಷಗಳ ಕಾಲ ಅಮಂಗಳವನ್ನು ತರುತ್ತದೆ. ಅದರಲ್ಲಿ ವ್ಯಕ್ತಿಯ ಆತ್ಮ ಸಿಲುಕಿಕೊಳ್ಳುತ್ತದೆ ಎನ್ನಲಾಗುತ್ತೆ. ಇನ್ನು ಒಡೆದ ಕನ್ನಡಿಯ ಚೂರುಗಳು ದೇಹಕ್ಕೆ ಅಥವಾ ಕಾಲಿಗೆ ಚುಚ್ಚಿದರೆ ಇದ್ರಿಂದ ಗಂಭೀರ ಗಾಯಗಳಾಗುತ್ತವೆ.
ಹೆಣ್ಣುಮಕ್ಕಳ ಆಪ್ತ ಸಂಗಾತಿ ಅಂದ್ರೆ ಅದು ಕನ್ನಡಿ. ಈ ಕನ್ನಡಿಯನ್ನು ಕೇವಲ ಸೌಂದರ್ಯ ಸಾಧನವಾಗಷ್ಟೇ ಬಳಕೆ ಮಾಡುವುದಿಲ್ಲ. ಕನ್ನಡಿಯಲ್ಲಿ ಕಾಣಿಸುವ ಪ್ರತಿಬಿಂಬ ವ್ಯಕ್ತಿಯ ನಿಜವಾದ ಆತ್ಮ ಅಂತಾ ಧರ್ಮಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ, ಕನ್ನಡಿಯನ್ನು ವಾಸ್ತುದೋಷ ನಿವಾರಣೆಯ ಉತ್ತಮ ಸಾಧನ ಅಂತಲೂ ಕರೆಯಲಾಗುತ್ತೆ. ಇಂತಹ ಕನ್ನಡಿ ಏನಾದ್ರೂ ಮನೆಯಲ್ಲಿ ತಿಳಿದೋ, ತಿಳಿಯದೆಯೋ ಒಡೆದರೆ ಅದು ಮುಂದಾಗುವ ಅನಾಹುತದ ಸಂಕೇತ ಅನ್ನೋದು ಹಲವರ ಅಭಿಪ್ರಾಯ. ಅಂದ್ರೆ ಮನೆಯಲ್ಲಿ ಕನ್ನಡಿ ಒಡೆದರೆ ಅದು ಯಾವುದೋ ಅನಾಹುತವನ್ನು ಸೂಚಿಸುತ್ತಿದೆ ಅಂತಾ ಅನೇಕರು ಭಯಪಡ್ತಾರೆ.
ಆಧ್ಯಾತ್ಮದ ಪ್ರಕಾರ, ಒಡೆದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬಾರದು, ಹಾಗೂ ಅದನ್ನು ಮನೆಯಲ್ಲಿ ಇಡಲೇಬಾರದು ಅಂತಾ ಹೇಳಲಾಗುತ್ತೆ. ಇದಿಷ್ಟೇ ಅಲ್ಲದೇ, ಕಲೆಯಾಗಿರುವ ಅಥವಾ ಮಾಸಿರುವ ಕನ್ನಡಿಯನ್ನು ಮನೆಯಲ್ಲಿ ಇಡಬಾರದು ಅಂತಲೂ ಹೇಳಲಾಗುತ್ತೆ. ಕೆಲ ಪುರಾಣಗಳ ಪ್ರಕಾರ, ಕನ್ನಡಿಗೂ, ಮಹಾಲಕ್ಷ್ಮೀಗೂ ಅವಿನಾಭಾವ ಸಂಬಂಧವಿದೆ ಅಂತಾ ಹೇಳಲಾಗುತ್ತೆ. ಕನ್ನಡಿ ಲಕ್ಷ್ಮೀದೇವಿಯ ವಾಸಸ್ಥಾನ ಅಂತಲೂ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಪುರಾಣಗಳ ಪ್ರಕಾರ, ಮಹಾವಿಷ್ಣುವಿನ ಮನದರಸಿ ಮಹಾಲಕ್ಷ್ಮೀ ಅತ್ಯಂತ ಚಂಚಲೆ. ಹೀಗಾಗಿ ಲಕ್ಷ್ಮೀದೇವಿಯ ಆವಾಸ ಸ್ಥಾನವಾಗಿರುವ ಕನ್ನಡಿಯಲ್ಲೂ ಸಹ ಯಾವುದೇ ಬಿಂಬ ಸ್ಥಿರವಾಗಿರುವುದಿಲ್ಲ. ಇಂತಹ ಕನ್ನಡಿ ಏನಾದ್ರೂ ಮನೆಯಲ್ಲಿ ಒಡೆದರೆ ಅದು ಮುಂದಿನ ದಿನಗಳಲ್ಲಾಗುವ ನಷ್ಟದ ಸಂಕೇತ ಅಂತಾ ಪುರಾಣಗಳು ಹೇಳುತ್ತವೆ.
ಮನೆಗಳಲ್ಲಿ ಆಕಸ್ಮಿಕವಾಗಿ ಕನ್ನಡಿ ಒಡೆದು ಹೋದರೆ ಅದು ಏಳು ವರ್ಷಗಳ ಕಾಲ ಅಮಂಗಳವನ್ನು ತರುತ್ತದೆ. ಅದರಲ್ಲಿ ವ್ಯಕ್ತಿಯ ಆತ್ಮ ಸಿಲುಕಿಕೊಳ್ಳುತ್ತದೆ ಎನ್ನಲಾಗುತ್ತೆ. ಇನ್ನು ಒಡೆದ ಕನ್ನಡಿಯ ಚೂರುಗಳು ದೇಹಕ್ಕೆ ಅಥವಾ ಕಾಲಿಗೆ ಚುಚ್ಚಿದರೆ ಇದ್ರಿಂದ ಗಂಭೀರ ಗಾಯಗಳಾಗುತ್ತವೆ. ಇದೇ ಕಾರಣಕ್ಕೆ ಕನ್ನಡಿಯ ಒಡೆದ ಚೂರುಗಳು ಚುಚ್ಚಿದರೆ ತಕ್ಷಣ ಚಿಕಿತ್ಸೆ ತೆಗೆದುಕೊಳ್ಳಬೇಕು ಅಂತಾ ನಮ್ಮ ಹಿರಿಯರು ಹೇಳ್ತಾರೆ. ಇಷ್ಟೆಲ್ಲಾ ತೊಂದೆರಗಳಾಗೋದ್ರಿಂದ ಕನ್ನಡಿಯನ್ನು ಅತ್ಯಂತ ಜಾಗರೂಕರಾಗಿ ನೋಡಿಕೊಳ್ಳಬೇಕು. ಕೈಯಲ್ಲೇನಾದ್ರೂ ಕನ್ನಡಿ ಇದ್ದರೆ ಅತ್ಯಂತ ಎಚ್ಚರದಿಂದ ಇರಬೇಕು.
ಕನ್ನಡಿಯನ್ನು ಮೊಟ್ಟ ಮೊದಲು ಕಂಡು ಹಿಡಿದದ್ದು ರೋಮನ್ನರು ಇತಿಹಾಸದ ಪ್ರಕಾರ, ರೋಮನ್ನರು ಕನ್ನಡಿಯನ್ನು ಮೊಟ್ಟ ಮೊದಲು ಕಂಡು ಹಿಡಿದರು. ಕನ್ನಡಿಯ ಬಗ್ಗೆ ಇರೋ ಇಂತಹ ನಂಬಿಕೆಗಳನ್ನು ಯೂರೋಪ್, ಚೀನಾ, ಆಫ್ರಿಕಾ ಹಾಗೂ ಭಾರತ ದೇಶಗಳಲ್ಲಿ ಅನುಸರಿಸಲಾಗುತ್ತಿದೆ ಎನ್ನಲಾಗುತ್ತೆ. ಕೆಲ ಶಾಸ್ತ್ರಗಳ ಪ್ರಕಾರ, ಕನ್ನಡಿ ಒಡೆದು ಹೋದರೆ ಅದರ ಚೂರುಗಳನ್ನು ಗುಂಡಿ ತೋಡಿ ಮುಚ್ಚಬೇಕು ಎನ್ನಲಾಗುತ್ತೆ. ನಮ್ಮ ಪೂರ್ವಿಕರು ಮಾಡಿರೋ ಈ ಆಚಾರದ ಹಿಂದೆ ಒಂದು ಕಾರಣವೂ ಇದೆ. ಅದೇನಂದ್ರೆ, ಒಡೆದ ಕನ್ನಡಿಯ ಚೂರುಗಳನ್ನು ಗುಂಡಿ ತೋಡಿ ಮುಚ್ಚದಿದ್ದರೆ, ಮುಂದೊಂದು ದಿನ ಅದ್ರಿಂದ ಯಾರಿಗಾದರೂ ತೊಂದರೆಯಾಗೋ ಸಾಧ್ಯತೆ ಇರುತ್ತೆ. ಹೀಗಾಗೇ ಕನ್ನಡಿ ಒಡೆದು ಹೋದಾಗ ಅದರ ಅವಶೇಷಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ, ಅದನ್ನು ಗುಂಡಿಯಲ್ಲಿ ಹಾಕುತ್ತಿದ್ದರು. ನಮ್ಮ ಪೂರ್ವಿಕರು ಏನೇ ಮಾಡಿದ್ರೂ ಅದರ ಹಿಂದೆ ಒಂದೊಳ್ಳೆಯ ಉದ್ದೇಶ ಇದ್ದೇ ಇರುತ್ತೆ. ಇದನ್ನು ಹಾಗೇ ಹೇಳಿದರೆ ಯಾರೂ ಕೇಳಲ್ಲ. ಅಂತಾ ಕನ್ನಡಿ ಒಡೆದರೆ ಏಳು ವರ್ಷ ದುರಾದೃಷ್ಟವಾಗುತ್ತೆ ಅನ್ನೋ ಮೂಢನಂಬಿಕೆಯನ್ನು ಹಬ್ಬಿಸಿರಬಹುದು ಅನ್ನೋ ಮಾತೂ ಇದೆ.
ಇದನ್ನೂ ಓದಿ: ಧರ್ಮಶಾಸ್ತ್ರದಲ್ಲಿ ಸಚೇಲ ಸ್ನಾನಕ್ಕೆ ಇದೆ ಮಹತ್ವದ ಸ್ಥಾನ; ಅದನ್ನು ಯಾವಾಗ ಮಾಡಬೇಕು?