World Wildlife Day 2021: ವಿಶ್ವ ವನ್ಯಜೀವಿ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆ ಏನು?

| Updated By: ganapathi bhat

Updated on: Apr 06, 2022 | 7:30 PM

World Wildlife Day 2021: ಈ ಬಾರಿಯ ವಿಶ್ವ ವನ್ಯಜೀವಿ ದಿನಾಚರಣೆಯ ಉದ್ದೇಶ ‘ಅರಣ್ಯ ಮತ್ತು ಜೀವಸಂಕುಲ: ಜನರ ಮತ್ತು ಭೂಮಿಯ ಉಳಿಕೆ ಅಥವಾ ರಕ್ಷಣೆ’ (Forests and Livelihoods: Sustaining People and Planet)

World Wildlife Day 2021: ವಿಶ್ವ ವನ್ಯಜೀವಿ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆ ಏನು?
WORLD WILDLIFE DAY 2021 ವಿಶೇಷವಾಗಿ ಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಕ್ ಬಿಡಿಸಿರುವ ಮರಳು ಶಿಲ್ಪ
Follow us on

ವಿಶ್ವ ವನ್ಯಜೀವಿ ದಿನಾಚರಣೆಯನ್ನು ಪ್ರತಿ ವರ್ಷ ಮಾರ್ಚ್ 3ರಂದು ಆಚರಿಸಲಾಗುತ್ತದೆ. ವನ್ಯಜೀವಿ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲದ ಕುರಿತಾಗಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವನ್ಯಜೀವಿಗಳ ಬಗ್ಗೆ ಅರಿವು ಹಾಗೂ ಶಿಕ್ಷಣ ನೀಡಲು, ವನ್ಯಜೀವಿ ವೈವಿದ್ಯತೆಯ ಮತ್ತು ಪ್ರಾಮುಖ್ಯತೆಯ ತಿಳುವಳಿಕೆ ಹೆಚ್ಚಿಸಲು ಈ ದಿನವನ್ನು ಮೀಸಲಿಡಲಾಗಿದೆ. ನಮ್ಮ ಗ್ರಹದಲ್ಲಿನ ಜೀವಸಂಕುಲದ ವಿಶೇಷತೆ, ಸೌಂದರ್ಯವನ್ನು ಅರ್ಥಮಾಡಿಕೊಳ್ಳುವುದೇ ಈ ದಿನದ ವಿಶೇಷ ಎಂದೂ ಹೇಳಬಹುದಾಗಿದೆ.

ವನ್ಯಜೀವಿ ದಿನಾಚರಣೆಯ ಇತಿಹಾಸವೇನು?

  • ಡಿಸೆಂಬರ್ 20, 2013ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಮಾರ್ಚ್ 3ನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸುವ ಬಗ್ಗೆ ಘೋಷಣೆ ಮಾಡಿತು.
  • ಪ್ರಾಣಿ ಸಂಕುಲ ಮತ್ತು ಸಸ್ಯ ಸಂಕುಲದ ಅರಿವು ಮೂಡಿಸಲು ಈ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು.
  • ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಸ್ಯ ಹಾಗೂ ಪ್ರಾಣಿಗಳ ಪ್ರಾಮುಖ್ಯತೆಯನ್ನು ತಿಳಿಹೇಳಿತು. ವನ್ಯಜೀವಿ ಸಂಕುಲದ ವಿವಿಧ ಕೊಡುಗೆಗಳನ್ನು ಗೌರವಿಸಲು ಈ ದಿನವನ್ನು ಮೀಸಲಿರಿಸಿತು.
  • ಬದಲಾಗುತ್ತಿರುವ ಪ್ರಕೃತಿಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಚಟುವಟಿಕೆಗಳಿಂದ ವೃಕ್ಷ ಮತ್ತು ಪ್ರಾಣಿ ಜೀವಿಗಳು ಸಮಸ್ಯೆ ಎದುರಿಸುತ್ತಿರುವ ವಿಚಾರ ತಿಳಿಹೇಳಲು ಕೂಡ ಈ ದಿನವನ್ನು ಗಮನಿಸಲಾಗುತ್ತದೆ.
  • 2013ರ ಬಳಿಕ ಇಂದಿನವರೆಗೆ ಈ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಜೀವ ಸಂಕುಲಕ್ಕೆ ಈ ದಿನ ವಿಶೇಷವಾಗಿದೆ.

ಈ ವರ್ಷದ ವನ್ಯಜೀವಿ ದಿನಾಚರಣೆ ವಿಶೇಷವೇನು?

  • ಈ ಬಾರಿಯ ವಿಶ್ವ ವನ್ಯಜೀವಿ ದಿನಾಚರಣೆಯ ಉದ್ದೇಶ ‘ಅರಣ್ಯ ಮತ್ತು ಜೀವಸಂಕುಲ: ಜನರ ಮತ್ತು ಭೂಮಿಯ ಉಳಿಕೆ ಅಥವಾ ರಕ್ಷಣೆ’ (Forests and Livelihoods: Sustaining People and Planet)
  • ಅರಣ್ಯಗಳ ವಿವಿಧ ಜೀವವರ್ಗ ಮತ್ತು ಪರಿಸರ ವ್ಯವಸ್ಥೆಗಳು ಜೀವಿಗಳ ಅಥವಾ ಮಿಲಿಯಗಟ್ಟಲೆ ಮಾನವರ ಉಳಿಕೆಯ ವಿಚಾರದಲ್ಲಿ ವಹಿಸುವ ಪಾತ್ರ, ಅರಣ್ಯದೊಂದಿಗೆ ಸಂಪರ್ಕ, ಸಂಬಂಧ, ಜೀವನ ಹೊಂದಿರುವ ಸಮುದಾಯಗಳ ಜೀವನವನ್ನು ತಿಳಿಯುವುದು ಈ ಬಾರಿಯ ವನ್ಯಜೀವಿ ದಿನದ ಉದ್ದೇಶ ಮತ್ತು ಅರ್ಥ ಎಂದು wildlifeday.org ತಿಳಿಸಿದೆ.
  • ಕಳೆದ ಬಾರಿಯ (2020) ವನ್ಯಜೀವಿ ದಿನಾಚರಣೆಯ ಉದ್ದೇಶ ‘ಭೂಮಿಯ ಎಲ್ಲಾ ಜೀವರಾಶಿಗಳ ರಕ್ಷಣೆ ಅಥವಾ ಉಳಿಕೆ’ (Sustaining all life on earth) ಎಂಬುದಾಗಿತ್ತು.
  • ‘ಜನರಿಗೆ ಮತ್ತು ಭೂಮಿಗೆ ಜಲದೊಳಗಿನ ಜೀವನ’ (Life below water: for people and planet) ಎಂಬುದು 2019ರ ವನ್ಯಜೀವಿ ದಿನದ ಆಶಯವಾಗಿತ್ತು. Big cats – predators under threat ಎಂಬುದು 2018ರ ಮತ್ತು Listen to the young voices ಎಂಬುದು 2017ರ ವಿಶ್ವ ವನ್ಯಜೀವಿ ದಿನದ ಆಶಯವಾಗಿತ್ತು.

WORLD WILDLIFE DAY 2021 ವಿಶೇಷವಾಗಿ ಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಕ್ ಬಿಡಿಸಿರುವ ಮರಳು ಶಿಲ್ಪ

UN Environment Programme ಹಂಚಿಕೊಂಡ ವಿಡಿಯೊ

ಇದನ್ನೂ ಓದಿ: World Hearing Day 2021: ನಿಮ್ಮ ಕಿವಿ ಜೋಪಾನ; ಸದಾ ಕೇಳಿಸಲಿ ಜಗದ ದನಿ

International Mother Language Day | ವಿಶ್ವ ಮಾತೃಭಾಷೆ ದಿನದ ಇತಿಹಾಸ ಹಾಗೂ ಪ್ರಾಮುಖ್ಯತೆ ಏನು?

Published On - 11:48 am, Wed, 3 March 21