ಜೀವನದಲ್ಲಿ ಶ್ರೀಮಂತರಾಗಲು ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿಯನ್ನು ಹೀಗೆ ಒಲಿಸಿಕೊಳ್ಳೀ
Chanakya Niti: ಸಂಪಾದನೆಯ ಬಗ್ಗೆ ಆರ್ಥಿಕತೆಯ ಮಹಾಜ್ಞಾನಿ ಚಾಣಕ್ಯ ಹೇಳಿದ ಈ ವಿಷಯಗಳನ್ನು ಕಾರ್ಯರೂಪಕ್ಕೆ ತಂದರೆ.. ಹಣಕ್ಕೆ ಎಂದೂ ಕೊರತೆ ಬರುವುದಿಲ್ಲ
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹಣಕ್ಕೆ ವಿಶೇಷ ಮಹತ್ವವಿದೆ. ಏಕೆಂದರೆ ಹಣದಿಂದ ಆಸೆಗಳು ಮತ್ತು ಅಗತ್ಯಗಳು ಈಡೇರುತ್ತವೆ. ಮಹಾವಿದ್ವಾಂಸ ಮತ್ತು ರಾಜನೀತಿಜ್ಞ ಆಚಾರ್ಯ ಚಾಣಕ್ಯರು (Chanakya Niti) ತಮ್ಮ ನೀತಿಶಾಸ್ತ್ರದಲ್ಲಿ ಹಣದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಣವು ಮನುಷ್ಯನ ನಿಜವಾದ ಸ್ನೇಹಿತ.. ಆದ್ದರಿಂದ ಅವನು ಯಾವಾಗಲೂ ಹಣವನ್ನು ಉಳಿಸಲು ಸಲಹೆ ನೀಡುತ್ತಾನೆ. ಉಳಿಸಿದ ಹಣದ ಅವಶ್ಯಕತೆ ನಿದ್ದಾಗ ನಿನ್ನ ಕೈಹಿಡಿಯುವೆ ಎಂದು ಲಕ್ಷ್ಮಿ (Goddess Lakshmi) ಅಂತಹವರನ್ನು ಬೆಂಬಲಿಸುತ್ತಾಳೆ. ಮೇಲಾಗಿ ಜೀವನದಲ್ಲಿ ಹೆಚ್ಚಾಗಿ ಹಣದ ಚಿಂತೆ ಮಾಡಬೇಡ ಎಂದೂ ಅವರು ಹೇಳಿದರು. ಆದ್ದರಿಂದಲೇ ಶ್ರೀಮಂತರಾಗಬೇಕಾದರೆ ಆಚಾರ್ಯ ಚಾಣಕ್ಯರ ಮಾತುಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಪುರಾಣ ಗ್ರಂಥಗಳು ಸೇರಿದಂತೆ ಚಾಣಕ್ಯನ ನೀತಿಶಾಸ್ತ್ರದಲ್ಲಿ ಹಣದ ವಿಶೇಷ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ. ಆಚಾರ್ಯ ಚಾಣಕ್ಯರು ಹಣವನ್ನು ಸಂಪಾದಿಸುವ ಮತ್ತು ನೀತಿಶಾಸ್ತ್ರದಲ್ಲಿ ಶ್ರೀಮಂತರಾಗಲು ಅಮೂಲ್ಯವಾದ ಸೂಚನೆಗಳನ್ನು ವಿವರಿಸುತ್ತಾರೆ. ಇವುಗಳನ್ನು ಅನುಸರಿಸುವ ಜನರು ಎಂದಿಗೂ ಬಡವರಾಗುವುದಿಲ್ಲ (Spiritual).
ಹಣದ ಕುರಿತು ಚಾಣಕ್ಯನ ವಿಧಾನ ಏನೆಂದರೆ ನಿಮ್ಮ ಸಂಪತ್ತನ್ನು ಕಾಪಾಡಿಕೊಳ್ಳಬೇಕೆಂದರೆ ನಿಮ್ಮ ಗಳಿಕೆಯನ್ನು ಖರ್ಚು ಮಾಡುವ ವಿಧಾನವೂ ಮುಖ್ಯವಾಗುತ್ತದೆ. ಖರ್ಚು ಅನ್ನುವುದು ದಾನ ಧರ್ಮ ಚಟುವಟಿಕೆಗಳನ್ನು ಸಂಕೇತಿಸುತ್ತದೆ, ಸೂಚಿಸುತ್ತದೆ. ದಾನ ಮಾಡುವುದರಿಂದ ಹಣದ ಕೊರತೆಯಾಗುವುದಿಲ್ಲ. ದ್ವಿಗುಣಗೊಳ್ಳುವ ಸ್ವಭಾವ ಅದಕ್ಕಿದೆ. ಅದಲ್ಲದೆ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಗಳಿಕೆಯ ಕನಿಷ್ಠ ಮೊತ್ತವನ್ನು ಉಳಿಸುವುದು ಸಹ ಬಹಳ ಮುಖ್ಯ. ಇದರಿಂದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾದರೆ ಇತರರ ಸಹಾಯ ಕೇಳುವ ಪ್ರಸಂಗ ಎದುರಾಗುವುದಿಲ್ಲ. ಹಣಕ್ಕಾಗಿ ತೊಂದರೆ ಎದುರಿಸುವ ಅವಶ್ಯಕತೆ ಇರುವುದಿಲ್ಲ.
ದಾನ ಮಾಡುವುದು, ಧಾರ್ಮಿಕ ಚಟುವಟಿಕೆಗಳಿಗೆ ಹಣವನ್ನು ಖರ್ಚು ಮಾಡುವುದು ಅಂತ್ಯವಿಲ್ಲದ ಸಂತೋಷವನ್ನು ತರುತ್ತದೆ, ಅದೇ ರೀತಿ ಸಂಕಷ್ಟದ ಸಮಯದಲ್ಲಿ ಉಳಿಸಿರುವ ಹಣವನ್ನು ಹೂಡಿಕೆಯಾಗಿ ಬಳಸಬಹುದು. ಇದರಿಂದ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ.
ಇದನ್ನೂ ಓದಿ: Jyeshtha Month 2024 – ಜೂನ್ ತಿಂಗಳ ಜ್ಯೇಷ್ಠ ಮಾಸದಲ್ಲಿ ಸೂರ್ಯಾರಾಧನೆ ಮತ್ತು ಜಲ ದಾನದ ಪ್ರಾಮುಖ್ಯತೆ ತಿಳಿಯೋಣ
ಅಂತಹ ಹಣವು ಜೀವನದುದ್ದಕ್ಕೂ ಸಂತೋಷವನ್ನು ತರುತ್ತದೆ, ಅದು ಯಾವಾಗಲೂ ನೈತಿಕವಾಗಿ ಮತ್ತು ಸರಿಯಾದ ರೀತಿಯಲ್ಲಿ ಗಳಿಸಿದರೆ ಹಣವು ದೀರ್ಘಕಾಲದವರೆಗೆ ಅಂತಹ ವ್ಯಕ್ತಿಯೊಂದಿಗೆ ಇರುತ್ತದೆ. ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ ಆದಾಯ ಕಡಿಮೆಯಾದರೂ ಕಷ್ಟಪಟ್ಟು ದುಡಿದರೆ ಅದರ ಫಲ ನಿಮಗಷ್ಟೇ ಅಲ್ಲ ನಿಮ್ಮ ಕುಟುಂಬಕ್ಕೂ ಸಿಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣವು ಜೀವನಕ್ಕೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.
ಸುಳ್ಳು, ಅಕ್ರಮ ಎಷ್ಟು ಕಾಲ ಉಳಿಯಬಹುದು? ಏಕೆಂದರೆ ಅನೈತಿಕ ಮಾರ್ಗದ ಮೂಲಕ ಹಣ ಮಾಡುವ ವ್ಯಕ್ತಿಗಳು ತ್ವರಿತವಾಗಿ ಬಯಲಿಗೆ ಬರುವಂತೆಯೇ ಇದೂ ಶೀಘ್ರದಲ್ಲೇ ಬೆಳಕಿಗೆ ಬರಲಿದೆ. ಹಾಗೆ ಸುಳ್ಳು, ಅಕ್ರಮದಲ್ಲಿ ತೊಡಗುವ ಮನುಷ್ಯ ಕಾಲಾಂತರದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅವನು ತನಗೆ ಮತ್ತು ಅವನ ಕುಟುಂಬಕ್ಕೆ ತೊಂದರೆ ತಂದುಕೊಳ್ಳುತ್ತಾನೆ. ಅದಕ್ಕಾಗಿಯೇ ಯಾವಾಗಲೂ ಕಷ್ಟಪಟ್ಟು ದುಡಿದು ಪ್ರಾಮಾಣಿಕವಾಗಿ ಹಣ ಸಂಪಾದಿಸು ಎಂದು ಚಾಣುಕ್ಯ ಹೇಳಿದರು.
ಇದನ್ನೂ ಓದಿ: June 2024 Festival Calendar – ಜೂನ್ 2024 ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಅಹಂಕಾರವನ್ನು ಸೋಲಿಸಿ, ನೈತಿಕ ಮೌಲ್ಯಗಳೊಂದಿಗೆ ಜಯಿಸಿದಾಗ ತುಂಬಾ ಚಂಚಲ ಸ್ವಭಾವಕ್ಕೆ ಹೆಸರುವಾಸಿಯಾದ ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿ ಒಲಿಯುತ್ತಾಳೆ. ಚಾಣಕ್ಯನ ಪ್ರಕಾರ, ತಮ್ಮ ಸಂಪತ್ತಿನ ಬಗ್ಗೆ ದುರಹಂಕಾರ ಪಡುವವರು ಬೇಗನೆ ಬಡತನಕ್ಕೆ ಬೀಳುತ್ತಾರೆ. ಮೌಲ್ಯಗಳ ಮೂಲಕ ಎಲ್ಲವನ್ನೂ ಗೆಲ್ಲಬಹುದು ಎಂಬುದನ್ನು ಮರೆಯಬಾರದು. ಹಾಗೆಯೇ ಗೆದ್ದದ್ದನ್ನು ಗರ್ವ, ಅಹಂಕಾರದಿಂದ ಕಳೆದುಕೊಳ್ಳಬಾರದು. ಅಂತಹ ಪರಿಸ್ಥಿತಿಯಲ್ಲಿ ನಮ್ರತೆ, ಮೌಲ್ಯಗಳು ಮತ್ತು ಸಂಪತ್ತಿನ ಗೌರವವು ಮಾತ್ರವೇ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತಂದುಕೊಡಬಲ್ಲದು.
ಅಂತಹ ಹಣವು ದೀರ್ಘಕಾಲದವರೆಗೆ ಇರುತ್ತದೆ ಆಚಾರ್ಯ ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ ಒಬ್ಬರು ಯಾವಾಗಲೂ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಹಣವನ್ನು ಗಳಿಸಬೇಕು. ತಪ್ಪು ದಾರಿಯಲ್ಲಿ ಹಣ ಗಳಿಸುವುದು ಹೆಚ್ಚು ಕಾಲ ಉಳಿಯುವುದಿಲ್ಲ. ಇಂಥವರು ಎಂದಾದರೊಂದು ಸಂಕಷ್ಟಕ್ಕೆ ಸಿಲುಕುವುದು ಖಂಡಿತ. ಅಕ್ರಮವಾಗಿ ಸಂಪಾದನೆ ಮಾಡಿದ ಹಣ/ಸಂಪತ್ತು ಖಂಡಿತವಾಗಿಯೂ ಅವರಿಂದ ದೂರವಾಗುತ್ತದೆ. ಪ್ರಾಮಾಣಿಕವಾಗಿ ಕಷ್ಟಪಟ್ಟು ಸಂಪಾದಿಸಿದ ಆಸ್ತಿ, ಸಂಪತ್ತು ಯಾವಾಗಲೂ ವ್ಯಕ್ತಿಗೆ ಊರುಗೋಲಾಗಿ ಸಹಾಯ ಮಾಡುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ