Woman: ಅಂತಹ ಮಹಿಳೆಯರು ನಿಮ್ಮ ಮನೆ- ಕುಟುಂಬಕ್ಕೆ ತುಂಬಾ ಶ್ರೇಯಸ್ಕರವಾಗುತ್ತಾರೆ!
Chanakya Niti: ಆಚಾರ್ಯ ಚಾಣಕ್ಯನ ಪ್ರಕಾರ ಮಹಿಳೆಯರ ಕೆಲವು ಅಭ್ಯಾಸಗಳು ವೈಯಕ್ತಿಕವಾಗಿ ಅವರ ಜೀವನಕ್ಕೇ ಮಾತ್ರವಲ್ಲದೆ ಮನೆ ಮತ್ತು ಕುಟುಂಬಕ್ಕೂ ಮಂಗಳಕರವಾದುದನ್ನೇ ಎಂದು ಸಾಬೀತುಪಡಿಸುತ್ತದೆ. ಅಂತಹ ಒಂದು ಅಭ್ಯಾಸವೆಂದರೆ ಮಾತು ಮಾತಿಗೆ ಅಳುವುದು.
ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯ ನೀತಿಯಲ್ಲಿ ಹೇಳಲಾದ ಈ ವಿಷಯಗಳನ್ನು ಯಾವುದೇ ವ್ಯಕ್ತಿ ಅಳವಡಿಸಿಕೊಂಡರೆ, ಅವರ ಮನೆ ಸ್ವರ್ಗವಾಗಬಹುದು. ಅವರು ತಮ್ಮ ನೀತಿಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಯಾವ ರೀತಿಯ ಮಹಿಳೆಯರು ಕುಟುಂಬಕ್ಕೆ ತುಂಬಾ ಮಂಗಳಕರವೆಂದು ಸಾಬೀತುಪಡಿಸುತ್ತಾರೆ ಎಂಬುದನ್ನೂ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಆಚಾರ್ಯರ ಪ್ರಕಾರ ಮಾತು ಮಾತಿಗೆ ಅಳುವ ಮಹಿಳೆಯರು ತುಂಬಾ ಭಾವನಾತ್ಮಕ ಸ್ವಭಾವದವರು. ಅಂತಹ ಮಹಿಳೆಯರು ತಮ್ಮ ಪತಿ ಮತ್ತು ಕುಟುಂಬದಿಂದ ದೂರವಿರಲು ಬಯಸುವುದಿಲ್ಲ. ಅವರ ಈ ಭಾವನೆ ಕುಟುಂಬವನ್ನು ಒಟ್ಟಿಗೆ ಇಡಲು ತುಂಬಾ ಒಳ್ಳೆಯದು. ಈ ಮಹಿಳೆಯರು ತಮ್ಮ ಕುಟುಂಬವನ್ನು ತಮ್ಮೊಂದಿಗೆ ಸರಿ ದಾರಿಯಲ್ಲಿ ಕರೆದುಕೊಂಡು ಹೋಗುತ್ತಾರೆ.
ಚಾಣಕ್ಯನ ಪ್ರಕಾರ, ಮಾತು, ಉದ್ವೇಗ ಮತ್ತು ಕೋಪದಿಂದ ಅಳುವ ಮಹಿಳೆಯರು ಭಾವನಗೆಳನ್ನು ತಮ್ಮಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ, ಅದುಮಿಟ್ಟುಕೊಳ್ಳುವುದಿಲ್ಲ. ಇದರಿಂದ ಅವರು ನಿರಾಳರಾಗಿರುತ್ತಾರೆ. ಅದು ಅವರನ್ನು ರೋಗಗಳಿಂದ ರಕ್ಷಿಸುತ್ತದೆ. ಅದೇ ವೇಳೆ, ಅಂತಹ ಮಹಿಳೆಯರು ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ. ಬೇಗನೆ ಜನರನ್ನು ಕ್ಷಮಿಸುತ್ತಾಳೆ.
ಆಚಾರ್ಯ ಚಾಣಕ್ಯ ಹೇಳುತ್ತಾರೆ.. ಅಳುವ ಮಹಿಳೆಯರು ಅನೇಕರು ಇದ್ದಾರೆ. ಅಂತಹ ಮಹಿಳೆಯರು ತುಂಬಾ ಮೃದು ಹೃದಯಿಗಳು. ಅವರಲ್ಲಿ ಮಮತೆಯ ಕೋಡ ತುಂಬಿರುತ್ತದೆ.
ಅಳುವ ಮಹಿಳೆಯರು ಯಾರ ಹೃದಯವನ್ನೂ ಮುರಿಯುವುದಿಲ್ಲ ಎಂದು ಚಾಣಕ್ಯ ಖಚಿತವಾಗಿ ಹೇಳುತ್ತಾನೆ. ಮಹಿಳೆ ಯಾವಾಗಲೂ ಇತರರ ಭಾವನೆಗಳ ಬಗ್ಗೆ ಕಾಳಜಿ ವಹಿಸುತ್ತಾಳೆ. ಯಾರಾದರೂ ಅವರಿಗೆ ಕೆಟ್ಟದ್ದನ್ನು ಮಾಡಿದರೂ, ಅವರು ಅವಳನ್ನು ಪ್ರೀತಿಸುತ್ತಲೇ ಇರುತ್ತಾರೆ.