ಬೇರೆಯರಿಗೆ ಕೆಟ್ಟದ್ದನ್ನು ಬಯಸುವ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಶಾಂತಿ ನೆಮ್ಮದಿ ಇರುವುದಿಲ್ಲ

Garuda purana teachings: ದುರಾಸೆಯು ಜೀವನದ ಸಾರವನ್ನು ಹಾಳುಮಾಡುತ್ತದೆ - ದುರಾಸೆಯ ಜನರಿಗೆ ಲಕ್ಷ್ಮಿ ದೇವಿಯ ಎಂದಿಗೂ ಆಶೀರ್ವಾದವು ನೀಡುವುದಿಲ್ಲ. ಅಂತಹ ಜನರು ಜೀವನ ಮತ್ತು ಸಂತೋಷದ ನಿಜವಾದ ಸಾರವನ್ನು ಎಂದಿಗೂ ಅನುಭವಿಸಲು ಸಾಧ್ಯವಿಲ್ಲ.

ಬೇರೆಯರಿಗೆ ಕೆಟ್ಟದ್ದನ್ನು ಬಯಸುವ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಶಾಂತಿ ನೆಮ್ಮದಿ ಇರುವುದಿಲ್ಲ
ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಈ 5 ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ
Follow us
|

Updated on: Feb 21, 2024 | 7:33 AM

ಸನಾತನ ಧರ್ಮವನ್ನು ರೂಪಿಸುವ 18 ಪುರಾಣಗಳಲ್ಲಿ ಗರುಡ ಪುರಾಣವು (garuda purana) ಅತ್ಯಂತ ಪ್ರಮುಖ ಪುರಾಣವಾಗಿದೆ. ಗರುಡ ಪುರಾಣದ ಎಲ್ಲಾ ಪಾಠಗಳು ವ್ಯಕ್ತಿಯ ದೈನಂದಿನ ಜೀವನಶೈಲಿಯನ್ನು ಸುಧಾರಿಸಲು ಬಳಸಬಹುದಾದ ಹೊಸ ವಿಚಾರಗಳನ್ನು ಒದಗಿಸುತ್ತವೆ. ಇದು ಹಿಂದೂ ಧರ್ಮದ ಕೇಂದ್ರ ಕಲ್ಪನೆ ಮತ್ತು ತತ್ವಶಾಸ್ತ್ರದ ಮೇಲೆ ವಿಸ್ತರಿಸುತ್ತದೆ. ಗರುಡ ಪುರಾಣವು ಗರುಡ ಮತ್ತು ವಿಷ್ಣುವಿನ ನಡುವಿನ (Hinduism, Lord Vishnu) ಸಂಭಾಷಣೆಯನ್ನು ವ್ಯವಹರಿಸುತ್ತದೆ. ಇದು ಜೀವನ ಮತ್ತು ಮರಣ, ಪುನರ್ಜನ್ಮದ ಎಲ್ಲಾ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ ಮತ್ತು ಮಾನವ ಆತ್ಮಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಒದಗಿಸುತ್ತದೆ (spiritual). ಇದರೊಂದಿಗೆ ಸನ್ಮಾರ್ಗದಲ್ಲಿ ನಡೆಯುತ್ತಾ ಬದುಕನ್ನು ಪೂರ್ಣವಾಗಿ ಬದುಕುವ ಮಾರ್ಗವನ್ನೂ ವಿವರಿಸಲಾಗಿದೆ. ಗರುಡ ಪುರಾಣದ ಪ್ರಕಾರ ಐದು ಕೆಟ್ಟ ಅಭ್ಯಾಸಗಳನ್ನು ತಪ್ಪಿಸಬೇಕು.

ಭಗವಾನ್ ವಿಷ್ಣುವು ಗರುಡ ಪುರಾಣದಲ್ಲಿ ಮಾನವನ ಐದು ಅಭ್ಯಾಸಗಳ ಬಗ್ಗೆ ವಿವರಿಸಿದ್ದಾನೆ. ಅದನ್ನು ಎಂದಿಗೂ ಅಳವಡಿಸಿಕೊಳ್ಳಬಾರದು. ಅದು ಕೆಟ್ಟ ಶಕುನವನ್ನು ತರುತ್ತದೆ. ಈ ಕೆಟ್ಟ ಅಭ್ಯಾಸಗಳ ಪರಿಣಾಮವಾಗಿ ಯಾವುದೇ ವ್ಯಕ್ತಿಯು ಬಡತನ, ಆರೋಗ್ಯ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ತಪ್ಪಿಸಬೇಕಾದ ಆ ಐದು ಕೆಟ್ಟ ಅಭ್ಯಾಸಗಳು ಯಾವುವು ಎಂದು ತಿಳಿಯೋಣ.

1) ರಾತ್ರಿ ವೇಳೆ ಕೆಲಸ ಕಾರ್ಯದಲ್ಲಿ ನಿರತರಾಗಬೇಡಿ – ಇಂದಿನ ಸಮಾಜದಲ್ಲಿ ಜನರು ರಾತ್ರಿ ತಡವಾಗಿ ಮಲಗುವ ಮತ್ತು ಬೆಳಿಗ್ಗೆ ತಡವಾಗಿ ಏಳುವ ದಿನಚರಿಯನ್ನು ಅನುಸರಿಸುತ್ತಾರೆ. ಬೆಳಿಗ್ಗೆ ತಡವಾಗಿ ಏಳುವುದು ಧರ್ಮಗ್ರಂಥಗಳ ಪ್ರಕಾರ ನಕಾರಾತ್ಮಕ ಅಭ್ಯಾಸ. ಮುಂಜಾನೆ ತಡವಾಗಿ ಏಳುವವರು ಜಡ ಸ್ವಭಾವದವರಾಗಿದ್ದು ಜೀವನದಲ್ಲಿ ಮುಂದೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಇಂತಹ ಜನರ ಪ್ರಗತಿಯ ಹಾದಿಯಲ್ಲಿ ಹಲವಾರು ಅಡೆತಡೆಗಳು ಬರುತ್ತವೆ. ಯಾವುದೇ ಸುಧಾರಣೆಯಾಗದಿದ್ದರೆ ಅಂತಹ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

2) ಶುಚಿತ್ವ ಅತ್ಯಗತ್ಯ – ಗರುಡ ಪುರಾಣದ ಪ್ರಕಾರ ಕೊಳಕು ಮತ್ತು ಬಳಸಿದ ಪಾತ್ರೆಗಳನ್ನು ರಾತ್ರಿ ವೇಳೆ ಅಡುಗೆ ಮನೆಯಲ್ಲಿಯೇ ಬಿಡಬಾರದು. ಯಾವುದೇ ವ್ಯಕ್ತಿ ಈ ಕೆಟ್ಟ ಅಭ್ಯಾಸವನ್ನು ಮುಂದುವರೆಸಿದರೆ ಶನಿಯ ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಆದ್ದರಿಂದ, ರಾತ್ರಿ ಮಲಗುವ ಮೊದಲು, ಬಳಸಿದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಅವಶ್ಯಕ.

ಇದನ್ನೂ ಓದಿ: ಗರುಡ ಪುರಾಣ -ಸಾವಿನ ನಂತರದ ಜೀವನ ಸಂಗತಿಗಳು ತಿಳಿದರೆ ನಿಮಗೆ ಆಶ್ಚರ್ಯ-ಆತಂಕವಾಗುತ್ತದೆ!

3) ಶುದ್ಧತೆ ಮತ್ತು ಸಮೃದ್ಧಿ ಜೊತೆಜೊತೆಯಾಗಿ ಸಾಗುತ್ತವೆ – ಗರುಡ ಪುರಾಣದ ಪ್ರಕಾರ, ಕೊಳಕು ಬಟ್ಟೆಗಳನ್ನು ಧರಿಸುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ, ಏಕೆಂದರೆ ಲಕ್ಷ್ಮಿ ದೇವಿಯು ಸ್ವಚ್ಛತೆಗೆ ಆದ್ಯತೆ ನೀಡುತ್ತಾಳೆ ಮತ್ತು ಶುದ್ಧತೆ ಇರುವ ಸ್ಥಳಗಳಲ್ಲಿ ವಾಸಿಸುತ್ತಾಳೆ. ಈ ಅಭ್ಯಾಸವನ್ನು ಅಳವಡಿಸಿಕೊಂಡರೆ, ವ್ಯಕ್ತಿಯು ಯಾವಾಗಲೂ ಸಂಪತ್ತಿನ ದೇವತೆಯಾದ ಲಕ್ಷ್ಮಿಯಿಂದ ಆಶೀರ್ವದಿಸಲ್ಪಡುತ್ತಾನೆ.

4) ದುರಾಸೆಯು ಜೀವನದ ಸಾರವನ್ನು ಹಾಳುಮಾಡುತ್ತದೆ – ದುರಾಸೆಯ ಜನರಿಗೆ ಲಕ್ಷ್ಮಿ ದೇವಿಯ ಎಂದಿಗೂ ಆಶೀರ್ವಾದವು ನೀಡುವುದಿಲ್ಲ. ಅಂತಹ ಜನರು ಜೀವನ ಮತ್ತು ಸಂತೋಷದ ನಿಜವಾದ ಸಾರವನ್ನು ಎಂದಿಗೂ ಅನುಭವಿಸಲು ಸಾಧ್ಯವಿಲ್ಲ. ಯಾರಾದರೂ ಕಷ್ಟಪಟ್ಟು ದುಡಿದು ಹಣ ಗಳಿಸಿದರೆ, ಆಕೆ/ಅವನು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುತ್ತಾಳೆ.

5) ನಿಮ್ಮ ಹೃದಯವನ್ನು ಸ್ವಚ್ಛವಾಗಿಟ್ಟುಕೊಳ್ಳಿ – ಉದ್ದೇಶಪೂರ್ವಕವಾಗಿ ಇತರರಿಗೆ ಹಾನಿ ಮಾಡುವವರನ್ನು ಲಕ್ಷ್ಮಿ ದೇವಿಯು ಇಷ್ಟಪಡುವುದಿಲ್ಲ ಎಂದು ಗರುಡ ಪುರಾಣ ಹೇಳುತ್ತದೆ. ಅಂತಹ ವ್ಯಕ್ತಿಗಳು ಯಾವಾಗಲೂ ಹಣದ ಕೊರತೆಯನ್ನು ಎದುರಿಸುತ್ತಾರೆ ಮತ್ತು ಶಾಂತಿಗಾಗಿ ಪರಿತಪಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ