AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Life Style: ಸೂರ್ಯಾಸ್ತದ ಸಮಯದಲ್ಲಿ ಅಪ್ಪಿತಪ್ಪಿಯೂ ಇದನ್ನು ಮಾಡಬೇಡಿ

ಸೂರ್ಯಾಸ್ತದ ಸಮಯದಲ್ಲಿ ಮನೆಗೆ ಹಿಂದಿರುಗಿದಾಗ ಕುಟುಂಬ ಸದಸ್ಯರಿಗೆ, ಮಕ್ಕಳಿಗೆ ಏನನ್ನಾದರೂ ತೆಗೆದುಕೊಂಡುಹೋಗಿ. ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ ಬರಿಗೈಯಲ್ಲಿ ಮನೆಗೆ ಬರುವುದು ಪ್ರಮುಖ ದೋಷ.

Life Style: ಸೂರ್ಯಾಸ್ತದ ಸಮಯದಲ್ಲಿ ಅಪ್ಪಿತಪ್ಪಿಯೂ ಇದನ್ನು ಮಾಡಬೇಡಿ
ಸೂರ್ಯಾಸ್ತದ ಸಮಯದಲ್ಲಿ ಅಪ್ಪಿತಪ್ಪಿಯೂ ಇದನ್ನು ಮಾಡಬೇಡಿ
ಸಾಧು ಶ್ರೀನಾಥ್​
|

Updated on: Jul 07, 2023 | 12:25 PM

Share

ಹಿಂದೂ ಧರ್ಮದಲ್ಲಿ ಅದೃಷ್ಟವನ್ನು ಪಡೆಯಲು ಮತ್ತು ದುರದೃಷ್ಟವನ್ನು ತಪ್ಪಿಸಲು ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಲಹೆ ನೀಡಲಾಗುತ್ತದೆ. ನಂಬಿಕೆಯ ಪ್ರಕಾರ ಸೂರ್ಯೋದಯ, ದೈನಂದಿನ ಜೀವನದ ನಿಯಮಗಳಂತಹ ಕೆಲವು ಪೂಜಾ ಕಾರ್ಯಗಳು ಸೂರ್ಯಾಸ್ತಕ್ಕೆ (Sunset) ವಿಶೇಷ ನಿಯಮಗಳನ್ನು ಸೂಚಿಸುತ್ತವೆ. ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ ವ್ಯಕ್ತಿಯು ಜೀವನದಲ್ಲಿ (Life Style) ಎಲ್ಲಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯ ಕೊರತೆಯಿಂದ ಕಷ್ಟಗಳು ಎದುರಾಗುತ್ತವೆ ಎನ್ನುತ್ತವೆ ಜ್ಯೋತಿಷ್ಯ (Astrology) ಮತ್ತು ಧಾರ್ಮಿಕ ನಂಬಿಕೆಗಳು.. ಸೂರ್ಯಾಸ್ತದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ತಿಳಿಯೋಣ.

ಬಟ್ಟೆ ಒಗೆಯುವುದು… ಸೂರ್ಯಾಸ್ತದ ನಂತರ ಬಟ್ಟೆ ಒಗೆದು ಒಣಗಿಸುವುದು ಕೂಡ ಒಳ್ಳೆಯದಲ್ಲ.. ಮನೆಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತದ ನಂತರ ಬಟ್ಟೆಗಳನ್ನು ಹೊರಾಂಗಣದಲ್ಲಿ ಒಣಗಿಸುವುದರಿಂದ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಂಬುದು ನಂಬಿಕೆ. ಇದರಿಂದಾಗಿ ದುಃಖ ಮತ್ತು ದುರದೃಷ್ಟವನ್ನು ಎದುರಿಸಬೇಕಾಗುತ್ತದೆ.

ಮಲಗಬಾರದು… ಹಿಂದೂ ನಂಬಿಕೆಗಳ ಪ್ರಕಾರ ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು. ಅನಾರೋಗ್ಯದ ಜನರು ಮತ್ತು ಮಕ್ಕಳನ್ನು ಹೊರತುಪಡಿಸಿ ಇತರ ಜನರು ಈ ನಿಯಮವನ್ನು ಅನುಸರಿಸಬೇಕು. ರೋಗ, ದುಃಖ ಮತ್ತು ಬಡತನ ಅವರನ್ನು ಆವರಿಸುತ್ತದೆ. ಇದರಿಂದ -ಮನುಷ್ಯ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಖಾಲಿ ಕೈಯಲ್ಲಿ ಮನೆಗೆ ಹೋಗಬೇಡಿ… ಹಿಂದೂ ನಂಬಿಕೆಯ ಪ್ರಕಾರ ನೀವು ಸೂರ್ಯಾಸ್ತದ ಸಮಯದಲ್ಲಿ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಕುಟುಂಬ ಸದಸ್ಯರಿಗೆ, ಮಕ್ಕಳಿಗೆ ಏನನ್ನಾದರೂ ತರಬೇಕು. ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ ಬರಿಗೈಯಲ್ಲಿ ಮನೆಗೆ ಬರುವುದು ಪ್ರಮುಖ ದೋಷವೆಂದು ಪರಿಗಣಿಸಲಾಗುತ್ತದೆ.

ಉಗುರು ಮತ್ತು ಕೂದಲನ್ನು ಕತ್ತರಿಸಬೇಡಿ… ಹಿಂದೂ ನಂಬಿಕೆಯ ಪ್ರಕಾರ ಸಂಪತ್ತನ್ನು ಬಯಸುವವರು ಸೂರ್ಯಾಸ್ತದ ನಂತರ ತಮ್ಮ ಉಗುರು ಅಥವಾ ಕೂದಲನ್ನು ಕತ್ತರಿಸಬಾರದು. ಈ ನಿಯಮವನ್ನು ನಿರ್ಲಕ್ಷಿಸಿದವರು ಹಣದ ಕೊರತೆ ಮತ್ತು ಸಾಲದ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ನಂಬಲಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಇದನ್ನು ಮಾಡುವುದರಿಂದ ಹಣ ವ್ಯರ್ಥವಾಗುವುದಿಲ್ಲ. ದುರಾದೃಷ್ಟ ಕೂಡ ಕಾಡುತ್ತದೆ.

ಮರ-ಗಿಡಗಳಿಗೆ ಹಾನಿ ಮಾಡಬೇಡಿ… ಹಿಂದೂ ನಂಬಿಕೆಯ ಪ್ರಕಾರ ಮರಗಳು ಮತ್ತು ಸಸ್ಯಗಳನ್ನು ದೇವರ ರೂಪಗಳಾಗಿ ಪೂಜಿಸಲಾಗುತ್ತದೆ. ಸೂರ್ಯಾಸ್ತದ ನಂತರ ಮರಗಳ ಎಲೆಗಳು, ಕೊಂಬೆಗಳು ಇತ್ಯಾದಿಗಳನ್ನು ಕಿತ್ತು, ಸೀಳುವುದು ಮತ್ತು ಸುಡುವುದು ಮಹಾಪಾಪವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಮರಗಳು ವಿಶ್ರಾಂತಿ ಪಡೆಯುತ್ತವೆ. ಹಾಗಾಗಿ ಅವನ್ನು ನೋಯಿಸುವುದು ಸರಿಯಲ್ಲ.

ಅಂತ್ಯಕ್ರಿಯೆ ಮಾಡಬಾರದು… ಹಿಂದೂ ನಂಬಿಕೆಯ ಪ್ರಕಾರ ಸೂರ್ಯಾಸ್ತದ ನಂತರ ಸತ್ತ ಯಾವುದೇ ವ್ಯಕ್ತಿಗೆ ಶವಸಂಸ್ಕಾರ ಮಾಡಲಾಗುವುದಿಲ್ಲ. ಗರುಡ ಪುರಾಣದ ಪ್ರಕಾರ, ಈ ನಿಯಮವನ್ನು ನಿರ್ಲಕ್ಷಿಸಿದರೆ ಸತ್ತ ವ್ಯಕ್ತಿಯ ಆತ್ಮವು ಶಾಂತಿಯಿಂದ ಇರುವುದಿಲ್ಲ ಮತ್ತು ಮುಂದಿನ ಜನ್ಮದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತದೆ. ಈ ದೋಷವು ಪಿತೃ ದೋಷಕ್ಕೂ ಕಾರಣವಾಗಬಹುದು. ಸೂರ್ಯಾಸ್ತದ ಸಮಯದಲ್ಲಿ ಯಾರಾದರೂ ಸತ್ತರೆ ಮರುದಿನ ಅಂತ್ಯಕ್ರಿಯೆ ಮಾಡುವುದು ಉತ್ತಮ.

ಮನೆ ಗುಡಿಸಬೇಡಿ… ಹಿಂದೂ ನಂಬಿಕೆಯ ಪ್ರಕಾರ ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸಬಾರದು. ಹೀಗೆ ಮಾಡುವುದರಿಂದ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಅಂತಹ ಮನೆಗಳಲ್ಲಿ ಸಂಪತ್ತು ಮತ್ತು ಧಾನ್ಯದ ಕೊರತೆ ಇರುತ್ತದೆ. ಈ ನಿಯಮವನ್ನು ನಿರ್ಲಕ್ಷಿಸುವುದರಿಂದ ಹಣದ ನಷ್ಟ ಮತ್ತು ಬಡತನವನ್ನು ಅನುಭವಿಸಬೇಕಾಗುತ್ತದೆ.

ಜೀವನಶೈಲಿ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?