ತಾಜ್​ ಮಹಲ್ ಜಗತ್ತಿಗೇ ಅದ್ಭುತ! ಆದರೆ ಅದರ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ, ಯಾಕೆ?

Vastu and Taj Mahal: ವಾಸ್ತು ಶಾಸ್ತ್ರದ ಪ್ರಕಾರ ಕೆಲಸ ಸ್ಥಳದಲ್ಲಿ ಅಥವಾ ಕಚೇರಿಯಲ್ಲಿ ಚದರ ಮೇಜು ಅಥವಾ ಚೌಕಾಕಾರದ ಮೇಜನ್ನು ಉಪಯೋಗಿಸಬೇಕಾಗುತ್ತದೆ. ಒಂದು ವೇಳೆ ಚದರ ಮೇಜು ಅಥವಾ ಚೌಕಾಕಾರದ ಮೇಜನ್ನು ಖರೀದಿಸಲು ಆಗದಿದ್ದರೆ ಟೇಬಲ್​ ಕೆಳಗಡೆ ಚೌಕಾಕಾರದ ಮ್ಯಾಟ್​ ಅನ್ನು ಹಾಸಿರಬೇಕು.

ತಾಜ್​ ಮಹಲ್ ಜಗತ್ತಿಗೇ ಅದ್ಭುತ! ಆದರೆ ಅದರ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ, ಯಾಕೆ?
ಪ್ರೇಮಸೌಧ ತಾಜ್​ಮಹಲ್​ ಫೋಟೋ, ಪ್ರತಿಮೆಯನ್ನು ಇಟ್ಟುಕೊಳ್ಳಬಾರದು! ಯಾಕೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 14, 2021 | 6:22 AM

ವಾಸ್ತು ಶಾಸ್ತ್ರದ ಅನುಸಾರ ಯಾವುದೇ ವಸ್ತುವನ್ನು ಒಂದು ನಿರ್ದಿಷ್ಟ ಜಾಗದಲ್ಲಿ ಮತ್ತು ಸಮಂಜಸ ದಿಕ್ಕಿನಲ್ಲಿ ಇಡಬೇಕಾಗುತ್ತದೆ ಎಂಬುದು ನಿಶ್ಚಿತವಾಗಿರುತ್ತದೆ. ಚೆಲ್ಲಾಪಿಲ್ಲಿಯಾಗಿ ಎಲ್ಲೆಂದರಲ್ಲಿ ಇಷ್ಟಾನುಸಾರ ವಸ್ತುಗಳನ್ನು ಇಡಲು ಬರುವುದಿಲ್ಲ. ಈ ನಿಟ್ಟಿನಲ್ಲಿ ವಾಸ್ತು ಶಾಸ್ತ್ರದಲ್ಲಿ ಎಲ್ಲೆಲ್ಲಿ ಯಾವ ದಿಕ್ಕಿನಲ್ಲಿ ವಸ್ತುಗಳನ್ನು ಇಡಬೇಕು ಎಂಬುದರ ಬಗ್ಗೆ ಸರಳೋಪಾಯಗಳನ್ನು ತಿಳಿಯಹೇಳಲಾಗಿದೆ. ಇದರಿಂದ ತಿಳಿಯದೇ ನಾವು ವಾಸ್ತು ಶಾಸ್ತ್ರಕ್ಕೆ ಭಂಗ ತಂದಾಗ ಅದರಿಂದ ಕಷ್ಟ ನಷ್ಟಗಳು ಉಂಟಾಗುವುದನ್ನು ತಪ್ಪಿಸಬಹುದು.

ವಾಸ್ತು ಶಾಸ್ತ್ರದ ಅರಿವಿಲ್ಲದೆಯೋ, ಅಥವಾ ಅದರ ಬಗ್ಗೆ ನಿರ್ಲಕ್ಷ್ಯ ತೋರಿ ವಸ್ತುಗಳನ್ನು ನಿಶ್ಚಿತ ಜಾಗದಲ್ಲಿ ಇಡದೆ ತಪ್ಪು ದಿಕ್ಕಿನಲ್ಲಿ, ಜಾಗದಲ್ಲಿಟ್ಟಾಗ ಅದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ. ಪ್ರತಿ ವಸ್ತುವೂ ತನ್ನ ಜೊತೆ ಸಕಾರಾತ್ಮಕತೆ ಮತ್ತು ನಕಾರಾತ್ಮಕತೆಯ ಪ್ರಭಾವಳಿ ಹೊಂದಿರುತ್ತದೆ. ಯಾವುದೇ ವಸ್ತುವಿನಿಂದ ನಕಾರಾತ್ಮಕತೆ ಪ್ರಭಾವಳಿ ಬೀರತೊಡಗಿದರೆ ಜೀವನದಲ್ಲಿ ಕಷ್ಟಕಾರ್ಪಣ್ಯಗಳು ತಾನಾಗಿಯೇ ಹೆಚ್ಚಾಗುತ್ತದೆ. ಅದೇ ವಾಸ್ತು ಶಾಸ್ತ್ರವನ್ನು ನಾವು ಚಾಚೂ ತಪ್ಪದೆ ಪಾಲಿಸಿದ್ದೇ ಆದರೆ ಮನೆಯಲ್ಲಿ ಸುಖ ಶಾಂತಿ, ಸಂಪತ್ತು ನೆಲಸುತ್ತದೆ.

vastu tips -ಜೀವನದಲ್ಲಿ ಐಶ್ವರ್ಯ, ಸಮೃದ್ಧಿ ಕಾಣಲು ಈ ಸರಳ ಉಪಾಯಗಳನ್ನು ಪಾಲಿಸಿ: ಅನೇಕ ಬಾರಿ ನಾವು ಮಾಡುವ ಸಣ್ಣಪುಟ್ಟ ಎಡವಟ್ಟುಗಳಿಂದಾಗಿ ವಾಸ್ತು ದೋಷ ಕಾಣಿಸಿಕೊಳ್ಳುತ್ತದೆ. ಇದರಿಂದ ವ್ಯಾಪಾರದಲ್ಲಿ ನಷ್ಟ ಅನುಭವಿಸುವುದು, ವೃತ್ತಿ ಜೀವನದಲ್ಲಿ ಕಚೇರಿಯಲ್ಲಿ ನಾವು ಅಂದುಕೊಂಡಂತೆ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಹಾಗಾದರೆ ಬನ್ನೀ ವಾಸ್ತು ಶಾಸ್ತ್ರದ ಪ್ರಕಾರ ಯಾವೆಲ್ಲ ಅಂಶಗಳಿಗೆ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಯಾವ ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ ತಿಳಿದುಕೊಳ್ಳೋಣ.

ವಾಸ್ತು ಶಾಸ್ತ್ರದ ಪ್ರಕಾರ ಕೆಲಸ ಸ್ಥಳದಲ್ಲಿ ಅಥವಾ ಕಚೇರಿಯಲ್ಲಿ ಚದರ ಮೇಜು ಅಥವಾ ಚೌಕಾಕಾರದ ಮೇಜನ್ನು ಉಪಯೋಗಿಸಬೇಕಾಗುತ್ತದೆ. ಒಂದು ವೇಳೆ ಚದರ ಮೇಜು ಅಥವಾ ಚೌಕಾಕಾರದ ಮೇಜನ್ನು (square table) ಖರೀದಿಸಲು ಆಗದಿದ್ದರೆ ಟೇಬಲ್​ ಕೆಳಗಡೆ ಚೌಕಾಕಾರದ ಮ್ಯಾಟ್​ ಅನ್ನು ಹಾಸಿರಬೇಕು.

ಮನೆ ಅಥವಾ ಕಚೇರಿಯಲ್ಲಿ ನಕಲಿ ಅಥವಾ ಪ್ಲಾಸ್ಟಿಕ್​ ಅಥವಾ ಕೃತಕವಾಗಿ ತಯಾರಿಸಿದ ಹೂವು ಅಥವಾ ಹೂವಿನ ಹಾರ ಅಥವಾ ಹೂವಿನ ಬೊಕೆಯನ್ನು ಇಡಬಾರದು. ನಿಸರ್ಗ ಸಹಜವಾಗಿ ಅರಳಿದ ಬೆಳೆದ ಹೂವನ್ನು ಬಳಸುವುದು ಅತ್ಯಂತ ಸೂಕ್ತ. ವಾಸ್ತು ಶಾಸ್ತ್ರದ ಪ್ರಕಾರ ಕೃತಕವಾಗಿ ತಯಾರಿಸಿದ ಹೂವು ಬಳಸುವುದರಿಂದ ನಕಾರಾತ್ಮಕತೆಯ ಪ್ರಭಾವಳಿ ಹೆಚ್ಚಾಗಿರುತ್ತದೆ. ಮನದಲ್ಲಿ ಇದರಿಂದ ನಕಾರಾತ್ಮಕ ಭಾವ ಬೆಳೆದುಬರುತ್ತದೆ.

ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಮುರಿದ ಫರ್ನಿಚರ್, ಗಡಿಯಾರ, ಒಡೆದ ಕನ್ನಡಿ ಮತ್ತು ಅನುಪಯುಕ್ತ ಯಂತ್ರವನ್ನು ಇಟ್ಟುಕೊಳ್ಳಬಾರದು. ಇಂತಹುದ್ದನ್ನೆಲ್ಲ ಮನೆಯಲ್ಲಿ ಇಟದಟುಕೊಳ್ಳುವುದು ಶುಭದ ಸಂಕೇತವಾಗುವುದಿಲ್ಲ. ಇವುಗಳ ಪೈಕಿ ಯಾವುದಾದರೂ ವಸ್ತುವನ್ನು ಸರಿಪಡಿಸಿ ಇಟ್ಟುಕೊಳ್ಳುವುಂತಿದ್ದರೆ ಅದನ್ನು ಮರುಬಳಕೆ ಮಾಡಬಹುದು. ಆದರೂ ಅಂತಹವುಗಳನ್ನು ಆದಷ್ಟು ಬೇಗ ಹೊರಗೆ ಬಿಸಾಡಬೇಕು.

ಪ್ರೇಮಸೌಧ ತಾಜ್​ಮಹಲ್​ ಫೋಟೋ, ಪ್ರತಿಮೆಯನ್ನು ಇಟ್ಟುಕೊಳ್ಳಬಾರದು! ಯಾಕೆ? ಮನೆ ಅಥವಾ ಕಚೇರಿಯಲ್ಲಿ ಪ್ರೇಮಸೌಧದ ಪ್ರತೀಕವಾದ ತಾಜಮಹಲ್​ನ ಫೋಟೋ ಅಥವಾ ಪ್ರತಿಮೆಯನ್ನು (taj mahal statue) ಇಟ್ಟುಕೊಳ್ಳಬಾರದು. ಅದು ಪ್ರೇಮಸೌಧದವೇ ಆದರೂ ಅದೊಂದು ಸಮಾಧಿ ಎಂಬುದನ್ನು ಎಲ್ಲರೂ ಒಪ್ಪುವ ವಿಷಯ. ಅದೆಷ್ಟೇ ಸುಂದರವಾಗಿ, ಜಗತ್ತಿನ ಅದ್ಭುತಗಳಲ್ಲಿ ಒಂದು ಎಂದು ಮಾನ್ಯತೆ ಪಡೆದಿದ್ದರೂ ಅದನ್ನು ಮನೆಯಲ್ಲಿಟ್ಟುಕೊಳ್ಳುವಂತಿಲ್ಲ.

ಏಕೆಂದರೆ ಆ ಸುಂದರ ಮಹಲು ಒಂದು ಸಮಾಧಿಯಾಗಿದೆ. ಮನೆಯಲ್ಲಿ ಸಮಾಧಿಯನ್ನು ಯಾರು ತಂದಿಟ್ಟಿಕೊಳ್ಳುತ್ತಾರೆ. ಅದು ಅಶುಭದ ಸಂಕೇತ, ನಕಾರಾತ್ಮಕತೆಯ ಭಾವ ಹೊಮ್ಮಿಸುತ್ತದೆ. ಹಾಗಾಗಿ ವಾಸ್ತು ಶಾಸ್ತ್ರಕ್ಕೆ ಮನ್ನಣೆ ನೀಡುತ್ತಾ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಸಮಾಧಿ ಅಂದರೆ ಸಾವಿನ ಧ್ಯೋತಕ. ಅದರಿಂದ ನಿಷ್ಕ್ರಿಯತೆ ಮೂಡುತ್ತದೆ (grave and symbolize death and passivity)

ವಾಸ್ತು ಶಾಸ್ತ್ರದ ಪ್ರಕಾರ ಕಾರ್ಯಸ್ಥಳದಲ್ಲಿ, ಆಫೀಸಿನಲ್ಲಿ ಕುಳಿತುಕೊಳ್ಳುವ ಸ್ಥಾನ ನೈಋತ್ಯ ದಿಕ್ಕಿನಲ್ಲಿ ಇರಬೇಕು. ಇನ್ನು, ಇದೇ ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಚಪ್ಪಲಿ, ಷೂ ಇಟ್ಟುಕೊಳ್ಳುವಂತಿಲ್ಲ. ಬೆಡ್​ ರೂಮ್​ಅನ್ನು ಸದಾ ಸ್ವಚ್ಛವಾಗಿಟ್ಟುಕೊಂಡಿರಬೇಕು. ಇಲ್ಲವಾದಲ್ಲಿ ನಕಾರಾತ್ಮಕತೆಯ ಪ್ರಭಾವ ಹೆಚ್ಚಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ನಿಮ್ಮದಿ ಸಿಗುವುದಿಲ್ಲ. ಆರಾಮದಾಯಕವಾಗಿ ನಿದ್ದೆ ಮಾಡುವ ಸೌಭಾಗ್ಯವೂ ಇರುವುದಿಲ್ಲ.

ಇನ್ನು ಮನೆಯಲ್ಲಿ ವಾಸ್ತು ದೋಷವನ್ನು ದೂರ ಮಾಡಲು ವನ್ಯ ಜೀವಿಗಳು ಅಥವಾ ಕ್ರೂರ ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಇದರಿಂದ ಮನಸ್ಸಿನದಲ್ಲಿ ಅಕ್ರೋಶ ಉತ್ಪತ್ತಿಯಾಗುತ್ತದೆ. ಯಾವ ವ್ಯಕ್ತಿಯ ಮನಸ್ಸಿನಲ್ಲಿ ಶಾಂತಿ ನೆಲೆಸಿರುವುದಿಲ್ಲವೋ ಅವರ ಜೀವನದಲ್ಲಿ ಚಿಂತೆ, ಆತಂಕ ಹೆಚ್ಚಾಗುತ್ತದೆ.

(according to vastu taj mahal statue should not be kept in house why)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್