Akshaya Tritiya 2022 Date: ಅಕ್ಷಯ ತೃತೀಯದ ದಿನಾಂಕ, ಸಮಯ, ಮಹತ್ವ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ

| Updated By: shivaprasad.hs

Updated on: May 01, 2022 | 2:50 PM

Akshaya Tritiya 2022: ಹಿಂದೂ ಮಾಸಿಕದ ಪ್ರಕಾರ ಅಕ್ಷಯ ತದಿಗೆಯು ವೈಶಾಖದ ಶುಕ್ಲ ಪಕ್ಷದ ಮೂರನೇ ದಿನದಂದು ಬರುತ್ತದೆ. ಮೇ 3ರಂದು ಹಬ್ಬವನ್ನು ಆಚರಿಸಲಾಗುತ್ತಿದ್ದು, ತಿಥಿಯ ಸಮಯ, ಹಬ್ಬದ ಮಹತ್ವ ಸೇರಿದಂತೆ ಪೂರ್ಣ ವಿವರ ಇಲ್ಲಿದೆ.

Akshaya Tritiya 2022 Date: ಅಕ್ಷಯ ತೃತೀಯದ ದಿನಾಂಕ, ಸಮಯ, ಮಹತ್ವ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ವಿವಿಧ ಧರ್ಮಗಳ ನೆಲೆಯಾಗಿರುವ ಭಾರತವು ವೈವಿಧ್ಯತೆಯ ನಾಡು. ಅನೇಕ ಹಬ್ಬ- ಹರಿದಿನಗಳನ್ನು ಜನರು ವರ್ಷವಿಡೀ ಆಚರಿಸಿ ಸಂಭ್ರಮಿಸುತ್ತಾರೆ. ಇದರಲ್ಲಿ ಅಕ್ಷಯ ತೃತೀಯವೂ ಒಂದು. ಭಾರತೀಯ ಮಾಸವಾದ ವೈಶಾಖದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತದಿಗೆಯನ್ನು (Akshaya Tritiya 2022) ಆಚರಿಸಲಾಗುತ್ತದೆ. ಇದನ್ನು ‘ಅಕ್ತಿ’ ಅಥವಾ ‘ಅಖಾ ತೀಜ್’ ಎಂದೂ ಕರೆಯಲಾಗುತ್ತದೆ. ಅಕ್ಷಯ ತೃತೀಯ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದ್ದು, ‘ಅಕ್ಷಯ’ ಎಂದರೆ ಎಂದಿಗೂ ಕಡಿಮೆಯಾಗದ ಯಶಸ್ಸು ಅಥವಾ ಸಂತೋಷ ಎಂದರ್ಥ. ‘ತೃತೀಯಾ’ ಎಂದರೆ ಮಾಸದ ಮೂರನೇ ದಿನವನ್ನು ಸೂಚಿಸುತ್ತದೆ. ಈ ಬಾರಿ ಅಕ್ಷಯ ತೃತೀಯವನ್ನು ಎಂದು ಆಚರಿಸಲಾಗುತ್ತದೆ? ಹಬ್ಬದ ವೈಶಿಷ್ಟ್ಯವೇನು? ಈ ಕುರಿತ ಮಾಹಿತಿ ಇಲ್ಲಿದೆ.

ಈ ಬಾರಿ ಅಕ್ಷಯ ತೃತೀಯವನ್ನು ಯಾವತ್ತು ಆಚರಿಸಲಾಗುತ್ತದೆ?

ಹಿಂದೂ ಮಾಸಿಕದ ಪ್ರಕಾರ ಅಕ್ಷಯ ತೃತೀಯವು ವೈಶಾಖದ ಶುಕ್ಲ ಪಕ್ಷದ ಮೂರನೇ ದಿನದಂದು ಬರುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಏಪ್ರಿಲ್ ಅಥವಾ ಮೇ ಆಸುಪಾಸಿನಲ್ಲಿ ಬರುತ್ತದೆ. ಈ ಹಬ್ಬವು ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದ್ದು, ಈ ವರ್ಷ, ಹಬ್ಬವನ್ನು 2022ರ ಮೇ 3ರಂದು ಆಚರಿಸಲಾಗುತ್ತದೆ.

ಅಕ್ಷಯ ತೃತೀಯದ ಸಮಯ:

ಅಕ್ಷಯ ತೃತೀಯ ಪೂಜೆಯ ಶುಭ ಸಮಯವು ಬೆಳಿಗ್ಗೆ 5.39 ರಿಂದ ಮಧ್ಯಾಹ್ನ 12.18 ರವರೆಗೆ (ಅವಧಿ: 6 ಗಂಟೆ 39 ನಿಮಿಷಗಳು).

ತೃತೀಯ ತಿಥಿಯು 2022ರ ಮೇ 3ರಂದು ಬೆಳಿಗ್ಗೆ 5.18 ಕ್ಕೆ ಪ್ರಾರಂಭವಾಗುತ್ತದೆ

ತೃತೀಯ ತಿಥಿಯು 2022ರ ಮೇ 4ರಂದು ಬೆಳಿಗ್ಗೆ 7.32 ಕ್ಕೆ ಕೊನೆಗೊಳ್ಳುತ್ತದೆ

ಅಕ್ಷಯ ತೃತೀಯದ ಮಹತ್ವವೇನು?

ಹಿಂದೂ ಪುರಾಣಗಳ ಪ್ರಕಾರ, ತ್ರೇತಾಯುಗವು ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಭವಿಷ್ಯದಲ್ಲಿ ಅದು ಅಕ್ಷಯವಾಗುತ್ತದೆ ಅರ್ಥಾತ್ ಸಮೃದ್ಧವಾಗುತ್ತದೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಜನರು ಈ ದಿನದಂದು ಚಿನ್ನದ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಅಕ್ಷಯ ತೃತೀಯ ದಿನದಂದು ದಾನ, ಯಜ್ಞದಂತಹ ಶುಭ ಕಾರ್ಯಗಳನ್ನು ಮಾಡುವ ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತಾನೆ ಮತ್ತು ಅಂತಹವರು ಲಕ್ಷ್ಮಿ ದೇವಿಯು ಕೃಪೆಗೆ ಪಾತ್ರರಾಗುತ್ತಾರೆ ಎಂದೂ ನಂಬಲಾಗಿದೆ.

ಹಬ್ಬವನ್ನು ಆಚರಿಸುವುದು ಹೇಗೆ?

ಅಕ್ಷಯ ತೃತೀಯದ ಮಂಗಳಕರ ದಿನದಂದು ಜನರು ಉಪವಾಸ ಮಾಡುತ್ತಾರೆ. ಭಗವಾನ್ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸಿ, ಮಂತ್ರಗಳನ್ನು ಪಠಿಸುತ್ತಾರೆ. ಇದಲ್ಲದೆ, ಭಕ್ತರು ವಿಷ್ಣು, ಗಣೇಶ ಸೇರಿದಂತೆ ಮನೆದೇವತೆಗಳಿಗೆ ನೈವೇದ್ಯವನ್ನು ತಯಾರಿಸಿ ಪೂಜಿಸುತ್ತಾರೆ. ಈ ದಿನ ಹಲವು ವಿಶೇಷ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ.

ಇನ್ನಷ್ಟು ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Akshaya Tritiya 2022: ಅಕ್ಷಯ ತೃತೀಯದಂದು ಯಾವ ರಾಶಿಯವರು ಯಾವ ಲೋಹ ಖರೀದಿಸಬೇಕು?

Akshaya Tritiya 2022: ಅಕ್ಷಯ ತೃತೀಯದಂದು ಯಾವ ರೀತಿಯ ದಿರಿಸು, ಆಭರಣಗಳನ್ನು ಧರಿಸಬಹುದು? ಇಲ್ಲಿದೆ ಟಿಪ್ಸ್

Published On - 2:42 pm, Sun, 1 May 22