ಮೇಷ
ಈ ರಾಶಿಯವರು ಕೇಸರಿ ಬಣ್ಣದ ತೊಗರಿ ಬೇಳೆಯನ್ನು ಮನೆಗೆ ಖರೀದಿಸಿ ತರಬೇಕು. ಇದು ಶಾಂತಿ ತರುತ್ತದೆ ಮತ್ತು ಗೃಹದಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.
ವೃಷಭ
ಈ ರಾಶಿಯವರು ಅಕ್ಕಿ ಅಥವಾ ಕಿರುಧಾನ್ಯವನ್ನು ಖರೀದಿಬೇಕು. ಇದರಿಂದಾಗಿ ಹಣಕಾಸು ಸ್ಥಿತಿ ಉತ್ತಮಗೊಳ್ಳುತ್ತದೆ.
ಮಿಥುನ
ಈ ರಾಶಿಯ ಜನರು ಹೆಸರುಬೇಳೆ, ಕೊತ್ತಂಬರಿ ಮತ್ತು ಬಟ್ಟೆಗಳನ್ನು ಖರೀದಿ ಮಾಡಬೇಕು. ಇದರಿಂದ ಒಳ್ಳೆ ಫಲಿತವನ್ನು ಪಡೆಯಬಹುದು.
ಕರ್ಕಾಟಕ
ಈ ರಾಶಿಯವರು ಅಕ್ಕಿ ಮತ್ತು ಹಾಲನ್ನು ಕೊಂಡುಕೊಳ್ಳಬೇಕು. ಇದರಿಂದ ಒಳ್ಳೆ ಫಲಿತಾಂಶವನ್ನು ಕಾಣಬಹುದು.
ಸಿಂಹ
ಈ ರಾಶಿಯವರು ಕೆಂಪು ಹಣ್ಣು ಅಥವಾ ತಾಮ್ರದ ಪಾತ್ರೆಗಳನ್ನು ಖರೀದಿಸಬೇಕು. ಇದರಿಂದ ಕುಟುಂಬದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ.
ಕನ್ಯಾ
ಈ ರಾಶಿಯವರು ಹೆಸರು ಬೇಳೆ ಖರೀದಿಸಬೇಕು. ಇದರಿಂದ ಇವರಿಗೆ ದೈವಾಶೀರ್ವಾದ ದೊರೆಯುತ್ತದೆ.
ತುಲಾ
ಇವರು ಸಕ್ಕರೆ ಮತ್ತು ಅಕ್ಕಿಯನ್ನು ಖರೀದಿಸಬೇಕು. ಹೀಗೆ ಮಾಡುವುದರಿಂದ ವೈವಾಹಿಕ ಮತ್ತು ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.
ವೃಶ್ಚಿಕ
ಈ ರಾಶಿಯವರು ಮನೆಗೆ ನೀರು ಮತ್ತು ಬೆಲ್ಲವನ್ನು ಕೊಂಡು ತರಬೇಕು. ಇದರಿಂದ ನಿಮ್ಮ ಶತ್ರುಗಳು ದುರ್ಬಲರಾಗುತ್ತಾರೆ. ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ.
ಧನುಸ್ಸು
ಈ ರಾಶಿಯವರು ಮನೆಗೆ ಬಾಳೆಹಣ್ಣು ಮತ್ತು ಹಳದಿ ಅಕ್ಕಿಯನ್ನು ತರಬೇಕು. ಇದರಿಂದ ಹಲವು ಬಗೆಯಲ್ಲಿ ಉತ್ತಮ ಫಲಿತವನ್ನು ತಂದುಕೊಡುತ್ತದೆ.
ಮಕರ
ಉದ್ದಿನ ಬೇಳೆ ಅಥವಾ ಮೊಸರು ಖರೀದಿಸಿ ಮನೆಗೆ ತನ್ನಿ. ಇದರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ.
ಕುಂಭ
ಈ ರಾಶಿಯವರು ಕಪ್ಪು ಬಣ್ಣದ ಬಟ್ಟೆ ಮತ್ತು ಕಪ್ಪು ಎಳ್ಳು ಖರೀದಿಸಬೇಕು. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ.
ಮೀನ
ಈ ರಾಶಿಯವರು ಅರಿಶಿಣ ಮತ್ತು ಕಡಲೇಕಾಳು ಖರೀದಿ ಮಾಡಬೇಕು. ಇದರಿಂದ ಆರೋಗ್ಯವು ಉತ್ತಮವಾಗುತ್ತದೆ.
ಮಾಹಿತಿ ಮೂಲ: ಅಸ್ಟ್ರೋಸೇಜ್
ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ
ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ಆಚರಣೆಯ ಮಹತ್ವ, ಶುಭ ಮುಹೂರ್ತ ಮತ್ತು ಇತಿಹಾಸವನ್ನು ತಿಳಿಯಿರಿ
(Akshaya Tritiya auspicious purchasing by zodiac signs on the basis of astrology)