Akshaya Tritiya Festival 2021: ಅಕ್ಷಯ ತೃತೀಯ ಆಚರಣೆಯಂದು ವಾಟ್ಸಾಪ್​, ಫೇಸ್​ಬುಕ್​ ಸಂದೇಶದೊಂದಿಗೆ ಶುಭಾಶಯ ಹೀಗಿರಲಿ!

Akshaya Tritiya 2021 Wishes: ನಿಮ್ಮ ಸ್ನೇಹಿತರಿಗೆ, ದೂರದಲ್ಲೆಲ್ಲೋ ಇರುವ ಕುಟುಂಬದ ಸದಸ್ಯರಿಗೆ ಅಕ್ಷಯ ತೃತೀಯದ ಶುಭಾಶಯ ಹೇಳುವುದು ಹೇಗೆ? ವಾಟ್ಸಾಪ್​​ ಪೇಸ್​ಬುಕ್​ನಲ್ಲಿ ಯಾವ ರೀತಿಯ ಸಂದೇಶ ಕಳುಹಿಸಲಿ? ಎಂದೆಲ್ಲಾ ಯೋಚಿಸುತ್ತಿದ್ದರೆ, ನಾವು ಒಂದಿಷ್ಟು ಸಲಹೆಗಳನ್ನು ನೀಡುತ್ತೇವೆ. ನಿಮ್ಮ ವಿಶೇಷ ಶುಭಾಶಯ ಅರ್ಥಪೂರ್ಣವಾಗಿರಲಿ. ಜೊತೆಗೆ ಕೇಳುಗರ ಮನಮುಟ್ಟುವಂತಿರಲಿ.

Akshaya Tritiya Festival 2021: ಅಕ್ಷಯ ತೃತೀಯ ಆಚರಣೆಯಂದು ವಾಟ್ಸಾಪ್​, ಫೇಸ್​ಬುಕ್​ ಸಂದೇಶದೊಂದಿಗೆ ಶುಭಾಶಯ ಹೀಗಿರಲಿ!
Akshaya Tritiya
Follow us
shruti hegde
|

Updated on: May 13, 2021 | 3:50 PM

ಭಗವಾನ್​ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಲಾಗುವ ಅಕ್ಷಯ ತೃತೀಯವನ್ನು ಬಹಳ ಶುಭವೆಂದು ನಂಬಲಾಗಿದೆ. ಈ ದಿನ ಮಾಡಿದ ಕಾರ್ಯಗಳು ಜೀವನದುದ್ದಕ್ಕೂ ಶುಭ ತರುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಬಂದಂಥದ್ದು. ಹಾಗಾಗಿ ಅದೃಷ್ಟ ತರುವ ಈ ದಿನವನ್ನು ಅಕ್ಷಯ ತೃತೀಯವೆಂದು ಆಚರಿಸಲಾಗುತ್ತದೆ. ಭಾರತೀಯರು ಹಬ್ಬಗಳ ಆಚರಣೆಯನ್ನು ಮಾಡುವುದು ಹೆಚ್ಚು. ಈ ಬಾರಿಯ ಅಕ್ಷಯ ತೃತೀಯದ ಆಚರಣೆಯಲ್ಲಿ ಮನೆಯವರೆಲ್ಲ ಸಂಭ್ರಮದಿಂದ ಆಚರಣೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಜನರಿಗೆ ಬೇಸರ ತಂದ ವಿಚಾರ. ಹಾಗಿದ್ದಾಗ ನಿಮ್ಮ ಸ್ನೇಹಿತರಿಗೆ ಒಳ್ಳೆಯ ಸಂದೇಶ ಕಳುಹಿಸುವುದರ ಮೂಲಕ ಹಬ್ಬದ ಮೆರುಗನ್ನು ಹೆಚ್ಚಿಸಿ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್​ ಘೋಷಿಸಿದೆ. ಹೀಗಿರುವಾಗ ಅಕ್ಷಯ ತೃತೀಯ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿಲ್ಲ. ಮನೆಯಲ್ಲಿಯೇ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿ, ಇಡೀ ದಿನ ಜಪ-ತಪದ ಜೊತೆಗೆ ವಿಷ್ಣು ಮತ್ತು ಲಕ್ಷ್ಮಿಯ ಕುರಿತಾದ ಭಜನೆಯನ್ನು ಹೇಳಲಾಗುತ್ತಿದೆ. ಪ್ರತೀ ವರ್ಷ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಬೇಡಿಕೊಳ್ಳುತ್ತಿದ್ದ ಜನರು ಈ ಬಾರಿ ಮನೆಯಲ್ಲಿಯೇ ದೇವಿಯ ಆರಾಧನೆಯಲ್ಲಿ ತೊಡಗಿಕೊಳ್ಳಲು ಯೋಚಿಸಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ನಿಮ್ಮ ಸ್ನೇಹಿತರಿಗೆ, ದೂರದಲ್ಲೆಲ್ಲೋ ಇರುವ ಕುಟುಂಬದ ಸದಸ್ಯರಿಗೆ ಅಕ್ಷಯ ತೃತೀಯದ ಶುಭಾಶಯ ಹೇಳುವುದು ಹೇಗೆ? ವಾಟ್ಸಾಪ್​​ ಪೇಸ್​ಬುಕ್​ನಲ್ಲಿ ಯಾವ ರೀತಿಯ ಸಂದೇಶ ಕಳುಹಿಸಲಿ? ಎಂದೆಲ್ಲಾ ಯೋಚಿಸುತ್ತಿದ್ದರೆ, ನಾವು ಒಂದಿಷ್ಟು ಸಲಹೆಗಳನ್ನು ನೀಡುತ್ತೇವೆ. ನಿಮ್ಮ ವಿಶೇಷ ಶುಭಾಶಯ ಅರ್ಥಪೂರ್ಣವಾಗಿರಲಿ. ಜೊತೆಗೆ ಕೇಳುಗರ ಮನಮುಟ್ಟುವಂತಿರಲಿ.

‘ಈ ವರ್ಷದ ಅಕ್ಷಯ ತೃತೀಯವು ನಿಮ್ಮ ಕುಟುಂಬಕ್ಕೆ ಸಂತೋಷದ ಜೊತೆಗೆ ಹೊಸ ಭರವಸೆಯನ್ನು ತರಲಿ.. ಅಕ್ಷಯ ತೃತೀಯದ ಶುಭಾಶಯಗಳು’

‘ಅಕ್ಷಯ ಎಂದರೆ ಶಾಶ್ವತ ಎಂದರ್ಥ.. ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಸಂಪತ್ತು ಎಂದೂ ಶಾಶ್ವತವಾಗಿರಲಿ.. ಹಬ್ಬವನ್ನು ನಗುತ್ತಾ ಆಚರಿಸಿ.. ಹಬ್ಬದ ಶುಭಾಶಯಗಳು’

‘ವಿಷ್ಣುವು, ಅಕ್ಷಯ ತೃತೀಯದ ಈ ದಿನದಂದು ಸಮೃದ್ಧಿ ಮತ್ತು ಸಂಪತ್ತನ್ನು ಕಲ್ಪಿಸಲಿ, ಆ ಭಗವಾನ್​ ವಿಷ್ಣುವಿನ ಆಶೀರ್ವಾದ ನಿಮ್ಮ ಮೇಲಿರಲಿ’

‘ಈ ದಿನ ವಿಷ್ಣು, ಲಕ್ಷ್ಮಿಯ ಆರಾಧನೆಯಲ್ಲಿ ತೊಡಗಿಕೊಳ್ಳಿ, ದೇವನಲ್ಲಿ ಬೇಡಿದ ಎಲ್ಲವೂ ನಿಮ್ಮದಾಗಲಿ.. ಈ ನಿನ್ನ ಪ್ರೀತಿಯ ಸ್ನೇಹಿತ-ಸ್ನೇಹಿತೆಯಿಂದ ಶುಭ ಹಾರೈಕೆಗಳು’

‘ಉಜ್ವಲ ಭವಿಷ್ಯದ ಕನಸು ನನಸಾಗಲಿ.. ಆರೋಗ್ಯವಾದ ಜೀವನ ನಿಮ್ಮದಾಗಲಿ.. ಸದಾ ನಿಮ್ಮ ಹಿತವನ್ನೇ ಬಯಸುವ ಈ ನಿಮ್ಮ ಸ್ನೇಹಿತನಿಂದ ಅಕ್ಷಯ ತೃತೀಯದ ಶುಭಾಶಯಗಳು’

ನೀವು ಅದೃಷ್ಟವಂತರಾಗಿರಿ.. ಅಕ್ಷಯ ತೃತೀಯದಿಂದ ನಿಮ್ಮ ಜೀವನ ಸುಖಕರವಾಗಿರಲಿ ಜೊತೆಗೆ ನೆಮ್ಮದಿಯ ಜೀವನ ನಿಮ್ಮದಾಗಿರಲಿ. ಭರವಸೆಯ ಬೆಳಕಿನೊಂದಿಗೆ ಸಂಪತ್ತು ಸಿಗಲಿ ಎಂದು ಹಾರೈಸುವ ಈ ನಿಮ್ಮ ಹಿತೈಶಿ’

ಇದನ್ನೂ ಓದಿ: Akshaya Tritiya 2021: ಅಕ್ಷಯ ತೃತೀಯ ಆಚರಣೆಯ ಪೌರಾಣಿಕ ಹಿನ್ನೆಲೆ, ಮಹತ್ವ ಮತ್ತು ಚಿನ್ನ ಖರೀದಿಗೆ ಶುಭ ಮುಹೂರ್ತ ತಿಳಿಯಿರಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು