Go Pooja: ಗೋಪೂಜೆ ಮಾಡುವುದರಿಂದ ನೀವು ಇವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು
ಗೋವುಗಳನ್ನು ನಿತ್ಯ ನೋಡುವುದರಿಂದ ದುಃಖಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಗೋವುಗಳನ್ನು ಸಾಕುವುದರಿಂದ ಮತ್ತು ಅವುಗಳನ್ನು ನಿತ್ಯ ಪೂಜಿಸುವುದರಿಂದ ನಿಮ್ಮ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸನಾತನ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಗೋಮಾತೆಯನ್ನು ಮನೆಯಲ್ಲಿ ಸಾಕುವುದರ ಪ್ರಯೋಜನವು ಅಪಾರವಾಗಿದೆ. ಗೋವುಗಳಿಗೆ ತಾಯಿಯ ಸ್ಥಾನಮಾನವನ್ನು ನೀಡಲು ಕೂಡ ಇದೇ ಕಾರಣವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, 33 ಕೋಟಿ ದೇವಾನುದೇವತೆಗಳು ಕೂಡ ಗೋವಿನಲ್ಲಿ ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ.