ಫಾಲ್ಗುಣ ಮಾಸದ ಶುಕ್ಲ ಪಕ್ಷದ ತ್ರಯೋದಶಿ ದಿನವಾದ ಮಾರ್ಚ್ 15ರ ಮಂಗಳವಾರ ಭೌಮ ಪ್ರದೋಷ ವ್ರತವನ್ನು(Bhaum Pradosh Vrat) ಆಚರಿಸಲಾಗುತ್ತೆ. ಪ್ರದೋಷದ ವ್ರತ ಮಂಗಳವಾರ ಬಂದರೆ ಅದನ್ನು ಭೌಮ ಪ್ರದೋಷ ಅಥವಾ ಮಂಗಳ ಪ್ರದೋಷ ವ್ರತ ಎನ್ನಲಾಗುತ್ತೆ. ಈ ದಿನ ಭಕ್ತರು ದಿನವಿಡೀ ಉಪವಾಸವನ್ನು ಮಾಡುತ್ತಾರೆ. ಏಕಾದಶಿ ವ್ರತದಂತೆ ಪ್ರದೋಷ ವ್ರತವನ್ನು ತಿಂಗಳಿಗೆ ಎರಡು ಬಾರಿ ಆಚರಿಸಲಾಗುತ್ತದೆ. ಮತ್ತು ಇದು ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ಈ ದಿನ ಉಪವಾಸ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗಿ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ. ಹಾಗೂ ಈ ವ್ರತವನ್ನು ವರ್ಷಪೂರ್ತಿ ಕ್ರಮಬದ್ಧವಾಗಿ ಆಚರಿಸಿದರೆ ಸಾಲದಿಂದ ಮುಕ್ತಿ ಸಿಗುತ್ತದೆ.
ಪ್ರದೋಷ ವ್ರತದ ತಿಥಿ, ಸಮಯ
ತ್ರಯೋದಶಿ ತಿಥಿಯು ಮಾರ್ಚ್ 15 ರಂದು ಮಧ್ಯಾಹ್ನ 1:12 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 16 ರಂದು ಮಧ್ಯಾಹ್ನ 1:39 ಕ್ಕೆ ಕೊನೆಗೊಳ್ಳುತ್ತದೆ. ಪ್ರದೋಷ ಕಾಲದ ಉಪವಾಸ ಪೂಜೆಗೆ ಮಾರ್ಚ್ 15 ಸಂಜೆ 6:29 ರಿಂದ ರಾತ್ರಿ 8:53ರ ವರೆಗೆ ಶುಭ ಸಮಯ.
ಭೌಮ ಪ್ರದೋಷ ವ್ರತದ ಪೂಜೆ ವಿಧಾನ
ಈ ದಿನ ಭಗವಾನ್ ಶಿವನನ್ನು ಪೂಜಿಸಲಾಗುತ್ತದೆ. ಈ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆಯನ್ನು ಧರಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಅಲ್ಲಿ ಗಂಗಾಜಲವನ್ನು ಸಿಂಪಡಿಸಬೇಕು. ಬಳಿಕ ಪೂಜಾ ಪೀಠವನ್ನು ಬಿಳಿ ಬಟ್ಟೆ ಬಳಸಿ ಸಿದ್ಧ ಮಾಡಿಕೊಳ್ಳಬೇಕು. ನಂತರ ಶಿವನ ವಿಗ್ರಹ ಅಥವಾ ಶಿವಲಿಂಗವನ್ನು ಸ್ಥಾಪಿಸಿ ಹಸಿ ಹಾಲು ಬೆರೆಸಿದ ನೀರಿನಿಂದ ಅಭಿಷೇಕ ಮಾಡಿಬೇಕು. ಗಂಗಾಜಲವನ್ನು ಅರ್ಪಿಸುವ ಮೂಲಕ ಬಿಲ್ವ ಪತ್ರೆ, ಹೂವುಗಳು, ಹಣ್ಣುಗಳು, ದಾತುರಾವನ್ನು ಅರ್ಪಿಸಬೇಕು. ಧೂಪ, ದೀಪ ಬೆಳಗಿಸಿ ಶಿವನಿಗೆ ಆರತಿ ಮಾಡಿಬೇಕು. ಹಾಗೆಯೇ ಪ್ರದೋಷ ಕಾಲದಲ್ಲಿ ಅಂದರೆ ಸಂಜೆಯ ವೇಳೆ ಶಿವನನ್ನು ಆರಾಧಿಸಿ. ಇಂದು ಮಂಗಳ ದೇವನ 21 ಅಥವಾ 108 ಹೆಸರುಗಳನ್ನು ಪಠಿಸುವುದು ಶುಭ. ಈ ದಿನ ಪೂಜೆ, ವ್ರತ ಮಾಡುವುದರಿಂದ ಮಂಗಳನ ಅನುಗ್ರಹ ದೊರೆಯುವುದು. ಈ ದಿನ, ಹನುಮಂತನ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾವನ್ನು ಪಠಿಸಿದ ನಂತರ, ಹನುಮನಿಗೆ ಬೂಂದಿ ಲಡ್ಡುಗಳನ್ನು ಅರ್ಪಿಸಬೇಕು.
ಪ್ರದೋಷ ವ್ರತವನ್ನು ಆಚರಿಸುವುದರ ಮಹತ್ವ
ಪ್ರದೋಷ ವ್ರತವನ್ನು ಪ್ರದೋಷ ಎಂದು ಕರೆಯುವುದರ ಹಿಂದೆ ಒಂದು ಕಥೆಯಿದೆ. ಚಂದ್ರ ದೇವನು ಪ್ರಜಾಪತಿ ದಕ್ಷನ ಶಾಪಕ್ಕೆ ತುತ್ತಾಗಿ ಅವನ ಸಾವಿವು ಸಮೀಪಕ್ಕೆ ಬರುತ್ತಿರುತ್ತದೆ. ಸಾವು-ನೋವುಗಳನ್ನು ಅನುಭವಿಸುತ್ತಿರುತ್ತಾನೆ. ಆಗ ಮೃಂತುಂಜಯ ಮಂತ್ರ ಪಠನೆಯ ಮೂಲಕ ಶಿವನನ್ನು ಒಲಿಸಿಕೊಂಡು ಚಂದ್ರನಿಗೆ ಜೀವ ಭಿಕ್ಷೆ ಕೊಡುವಂತೆ ಬೇಡಲಾಗುತ್ತೆ. ಆಗ ಶಿವನು ಆ ದೋಷವನ್ನು ನಿವಾರಿಸಿದನು ಮತ್ತು ತ್ರಯೋದಶಿಯ ದಿನದಂದು ಅವನಿಗೆ ಮತ್ತೆ ಜೀವ ನೀಡಿದನು, ಆದ್ದರಿಂದ ಈ ದಿನವನ್ನು ಪ್ರದೋಷ ಎಂದು ಕರೆಯಲಾಯಿತು. ಭೌಮ ಪ್ರದೋಷದ ಕಥೆ ಹನುಮಂತನಿಗೆ ಸಂಬಂಧಿಸಿದೆ. ಪ್ರದೋಷ ಉಪವಾಸದ ಸಮಯದಲ್ಲಿ ಹೆಸರು ಬೇಳೆಯನ್ನು ಮಾತ್ರ ಸೇವಿಸಬೇಕು, ಏಕೆಂದರೆ ಹಸಿರು ಚಂದ್ರನ ಮತ್ತು ಭೂಮಿಯ ಅಂಶವಾಗಿದೆ.
ಇದನ್ನೂ ಓದಿ: Pradosh Vrat November 2021: ಮಂಗಳ ಪ್ರದೋಷ ವ್ರತ – ಶಿವ ಪಾರ್ವತಿ ಕೃಪೆ ಬೀರುವ ವ್ರತದ ಮಹತ್ವ ಏನು?
Maha Shivratri 2022: ಮಹಾಶಿವರಾತ್ರಿಯ ಪಾರಣ ಪೂಜಾ ಸಮಯ ಮತ್ತು ಪೂಜಾ ವಿಧಾನ