Pradosh Vrat November 2021: ಮಂಗಳ ಪ್ರದೋಷ ವ್ರತ – ಶಿವ ಪಾರ್ವತಿ ಕೃಪೆ ಬೀರುವ ವ್ರತದ ಮಹತ್ವ ಏನು?
ಭೌಮ ಪ್ರದೋಷ ವ್ರತಾಚರಣೆಯ ಲಾಭಗಳ ಪಡೆಯಲು ನವೆಂಬರ್ 16 ರಂದು ವ್ರತ ಆಚರಿಸುತ್ತಾ ಹಸುವಿಗೆ ಹುಲ್ಲು ದಾನ ಮಾಡಿದರೆ ಪುಣ್ಯ ಬರುತ್ತದೆ. ಭೌಮ ಪ್ರದೋಷ ವ್ರತಾಚರಣೆಯಿಂದ ರೋಗ-ಶೋಕಗಳಿಂದ ಮುಕ್ತಿ ಸಿಗುತ್ತದೆ.
ಕಾರ್ತಿಕ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಅಂದರೆ 2021ನೇ ಸಾಲಿನಲ್ಲಿ ನವೆಂಬರ್ 16 ರಂದು ಮಹತ್ವದ ದಿನ. ಅಂದು ಭೌಮ ಪ್ರದೋಷ ವ್ರತ (bhaum pradosh vrat) ದಿನಾಚರಣೆ. ಶಿವ ಪಾರ್ವತಿ ಕೃಪೆ ಬೀರುವ, ಎಲ್ಲ ಮನೋಕಾಮನೆಗಳು ಫಲಿಸುವ ವ್ರತ ದಿನ. ಆರ್ಥಿಕ, ಶಾರೀರಿಕ ಮತ್ತು ಮಾನಸಿಕ ತುಮುಲಗಳಿಂದ ಮುಕ್ತಿ ಹೊಂದುವ ಅವಕಾಶ ಈ ಪ್ರದೋಷ ವ್ರತ ಆಚರಣೆಯಿಂದ ಲಭಿಸುತ್ತದೆ. ಇದರ ಧಾರ್ಮಿಕ ಮಹತ್ವವನ್ನೂ ತಿಳಿಸುವ ಲೇಖನ ಇಲ್ಲಿದೆ, ಓದಿ. ಸನಾತನ ಪರಂಪರೆಯಲ್ಲಿ ಭಗವಂತ ಶಿವ ಮತ್ತು ಪಾರ್ವತಿ ಮಾತೆಯನ್ನು ಪೂಜಿಸುವ ಭೌಮ ಪ್ರದೋಷ ವ್ರತಕ್ಕೆ ತುಂಬಾ ಮಹತ್ವ ಇದೆ. ಸೂರ್ಯಾಸ್ತ ಮತ್ತು ರಾತ್ರಿ ನಡುವಣ ಸಂಧಿಕಾಲದಲ್ಲಿ ಪ್ರದೋಷ ಕಾಲ ಬರುತ್ತದೆ. ಪ್ರದೋಷ ಕಾಲವು ಸೂರ್ಯಾಸ್ತ ಸಮಯದಿಂದ 45 ನಿಮಿಷ ಮೊದಲು ಆರಂಭಗೊಡು ಸೂರ್ಯಾಸ್ತದ ಬಳಿಕ 45 ನಿಮಿಷದವರೆಗೂ ಇರುತ್ತದೆ. ಪ್ರತ್ಯೇಕ ಮಾಸದಲ್ಲಿ ಕೃಷ್ಣ ಅಥವಾ ಶುಕ್ಲ ಪಕ್ಷದಲ್ಲಿ ತ್ರಯೋದಶಿ ದಿನ ಆಚರಿಸುವ ಈ ಪ್ರದೋಷ ವ್ರತ ಪರಿಣಾಮಕಾರಿಯಾಗಿದ್ದು, ಫಲಗಳು ಹೇರಳವಾಗಿರುತ್ತದೆ. ಸುಖ-ಸಂಪತ್ತು, ಸೌಭಾಗ್ಯದ ಕೃಪೆ ಬೀರುತ್ತದೆ. ಪ್ರದೋಷ ವ್ರತ ಕಾಲದಲ್ಲಿ ಶಿವ ಅಧಿದೇವನಾಗಿದ್ದು, ಈ ಕಾಲದಲ್ಲಿ ವ್ರತ ಆಚರಣೆ ತುಂಬಾ ಮಂಗಲಕರವಾಗಿರುತ್ತದೆ.
ಪ್ರಸಕ್ತ 2021ನೇ ಸಾಲಿನಲ್ಲಿ ಉಳಿದೆರಡು ತಿಂಗಳುಗಳಲ್ಲಿ ಇನ್ನೂ ಎರಡು ಪ್ರದೋಷ ವ್ರತಗಳ (Pradosh Vrat) ಆಚರಣೆ ಇದೆ: ಮೊದಲನೆಯದು ಮಂಗಳ ಅಥವಾ ಭೌಮ ಪ್ರದೋಷ ವ್ರತ- ನವೆಂಬರ್ 16 ರಂದು ಮಂಗಳವಾರ (November 16, Tuesday). ಇದು ಮಂಗಳವಾರ ಬಂದಿರುವುದರಿಂದ ಅದಕ್ಕೆ ಭೌಮ ಪ್ರದೋಷ ವ್ರತ ಅನ್ನುತ್ತಾರೆ. ಇನ್ನು ಡಿಸೆಂಬರ್ ತಿಂಗಳಲ್ಲಿ ಈ ಬಾರಿ 3 ಪ್ರದೋಷ ವ್ರತ ದಿನಗಳಿವೆ. ಮೊದಲನೆಯದು ಡಿಸೆಂಬರ್ 2 ರಂದು ಗುರುವಾರ (December 02, Thursday) ಬಂದಿದೆ. ಮಾರ್ಗಶಿರ ಶುಕ್ಲ ಪಕ್ಷ ತ್ರಯೋದಶಿ ಎರಡನೆಯದು ಡಿಸೆಂಬರ್ 16 ರಂದು ಗುರುವಾರ (December 16, Thursday). ಮತ್ತು 3ನೆಯದು, ಡಿಸೆಂಬರ್ 31ರಂದು ಶುಕ್ರವಾರ (December 31, Friday) ಬರುತ್ತದೆ.
ಭೌಮ ಪ್ರದೋಷ ವ್ರತಾಚರಣೆ ಮುಹೂರ್ತ, November 16, Tuesday: ಸೂರ್ಯೋದಯ – 16 November, 2021 06:45 AM ಸೂರ್ಯಾಸ್ತ – 16 November, 2021 05:37 PM ತ್ರಯೋದಶ ತಿಥಿ ಆರಂಭ – 16 November 08:02 AM ತ್ರಯೋದಶ ತಿಥಿ ಮುಕ್ತಾಯ – 17 November 09:50 AM ಪ್ರದೋಷ ಪೂಜಾ ವೇಳೆ – 16 November 05:37 PM to 08:15 PM
ಭೌಮ ಪ್ರದೋಷ ವ್ರತಾಚರಣೆಯ ಲಾಭಗಳ ಪಡೆಯಲು ಹೀಗೆ ಮಾಡಿ: ಭೌಮ ಪ್ರದೋಷ ವ್ರತಾಚರಣೆಯ ಲಾಭಗಳ ಪಡೆಯಲು ನವೆಂಬರ್ 16 ರಂದು ವ್ರತ ಆಚರಿಸುತ್ತಾ ಹಸುವಿಗೆ ಹುಲ್ಲು ದಾನ ಮಾಡಿದರೆ ಪುಣ್ಯ ಬರುತ್ತದೆ. ಭೌಮ ಪ್ರದೋಷ ವ್ರತಾಚರಣೆಯಿಂದ ರೋಗ-ಶೋಕಗಳಿಂದ ಮುಕ್ತಿ ಸಿಗುತ್ತದೆ. ದಿನ ವಿಶೇಷದಲ್ಲಿ ಆಚರಿಸುವ ಪ್ರದೋಷ ವ್ರತಗಳಲ್ಲಿ ಭಾನುವಾರ ಬರುವ ಪ್ರದೋಷ ವ್ರತಾಚರಣೆ ಸುಖ ಸಮೃದ್ಧಿ, ಜೀವನದುದ್ದಕ್ಕೂ ಉತ್ತಮ ಆರೋಗ್ಯ ಲಭಿಸುತ್ತದೆ. ದೀರ್ಘಾಯು ಸಿಗುತ್ತದೆ. ಬುಧ ಪ್ರದೋಷ ವ್ರತಾಚರಣೆಯಿಂದ ನೀವು ಕೈಗೊಳ್ಳುವ ಯಾವುದೇ ಕಾರ್ಯಾಚರಣೆಗೆ ಪ್ರತಿಫಲ ಸಿಗುತ್ತದೆ. ಇನ್ನು ಗುರು ಪ್ರದೋಷ ವ್ರತಾಚರಣೆಯಿಂದ ಶತ್ರುಗಳ ನಾಶವಾಗುತ್ತದೆ. ಜೀವನದಲ್ಲಿ ಎದುರಾಗುತ್ತಿರುವ ಎಲ್ಲ ಅಡಚಣೆಗಳಿಂದ ಮುಕ್ತಿ ಸಿಗುತ್ತದೆ. ಶುಕ್ರ ಪ್ರದೋಷ ವ್ರತಾಚರಣೆಯಿಂದ ಸೌಭಾಗ್ಯ ಸಿಗುತ್ತದೆ. ಕುಟುಂಬದಲ್ಲಿ ಸುಖ ಸಮೃದ್ಧಿ ಸದಾ ಪ್ರಾಪ್ತಿಯಾಗುತ್ತದೆ. ಶನಿ ಪ್ರದೋಷ ವ್ರತಾಚರಣೆಯಿಂದ ಸಂತಾನ ಪ್ರಾಪ್ತಿ ಸಿಗುತ್ತದೆ ಮತ್ತು ಉನ್ನತಿ ಪ್ರಾಪ್ತಿ ಆಗುತ್ತದೆ.
(significance and benefits of bhaum pradosh vrat November 16 Tuesday 2021 in kannada)