ಬದಲಾವಣೆ ಎಂಬುದು ಜಗದ ನಿಯಮ: ಆದರೆ ಈ ಮೂರು ರಾಶಿಯ ಜನ ಬದಲಾವಣೆಯನ್ನು ಇಷ್ಟಪಡುವುದಿಲ್ಲ!
ಕರ್ಕಾಟಕ ರಾಶಿಯವರು ತಾವಾಯಿತು, ತಮ್ಮ ಪಾಡಾಯಿತು ಅಂತಾ ಇದ್ದುಬಿಡುತ್ತಾರೆ. ತಾವು, ತಮ್ಮ ಕುಟುಂಬವರ್ಗ, ಸ್ನೇಹಿತರ ವಲಯವನ್ನು ಆಯ್ಕೆ ಮಾಡಿಕೊಂಡು ಆರಾಮವಾಗಿ ಒಂದು ಸುರಕ್ಷಿತ ಪರಿಮಿತಿಯಲ್ಲಿಯೇ ಇದ್ದು ಬಿಡುತ್ತಾರೆ. ಸ್ವತಃ ಅವರು ಆಯ್ಕೆಯ ಜೀವನ ಇಷ್ಟಪಡುವುದಿಲ್ಲ. ಆ ಸುರಕ್ಷಿತ ವಲಯದಿಂದ ಆಚೆ ಬಂದು ಜೀವನ ಸಂಘರ್ಷವನ್ನು ಎದುರಿಸಲು ಬಿಲ್ಕುಲ್ ಒಪ್ಪುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ 12 ರಾಶಿಗಳಲ್ಲಿಯೂ ಒಂದು ಮತ್ತೊಂದಕ್ಕಿಂತ ಭಿನ್ನವಾಗಿರುತ್ತದೆ. ತನ್ನದೇ ಆದ ವೈಶಿಷ್ಯತೆ ಹೊಂದಿರುತ್ತದೆ. ಜಾತಕದ ಪ್ರಕಾರ ಬಂದಿರುವ ರಾಶಿಗೆ ಅನುಗುಣವಾಗಿ ಅವರವರ ಗುಣ ಸ್ವಭಾವಗಳು ರೂಪುಗೊಂಡಿರುತ್ತವೆ. ಅದರಂತೆ ಜನ ತಮ್ಮ ಜೀವನದಲ್ಲಿ, ಈ ಸಮಾಜದಲ್ಲಿ ಇತರರೊಂದಿಗೆ ಅವರು ನಡೆದುಕೊಳ್ಳುತ್ತಾರೆ. ಬದಲಾವಣೆ ಎಂಬುದು ಜಗದ ನಿಯಮ, ಕೆಲವರು ಸದಾ ಹೊಸತನಕ್ಕೆ ತುಡಿಯುತ್ತಿರುತ್ತಾರೆ. ಜೀವನದಲ್ಲಿ ಮುಂದೆ ಬರುವುದಕ್ಕೆ ಹಾತೊರೆಯುತ್ತಿರುತ್ತಾರೆ. ಹೊಸತನದ ಹುಡುಕಾಟದಲ್ಲಿ ತೊಡಗಿರುತ್ತಾರೆ. ಇವರು ಸಾಹಸಿಗಳು, ಧೈರ್ಯವಂತರು. ಇನ್ನು ಕೆಲವು ರಾಶಿಯ ಜನರು ಅಂತಹವರು ಬದಲಾವಣೆ, ಪ್ರಗತಿ, ಅಭಿವೃದ್ಧಿಯನ್ನು ಸುತರಾಂ ಇಷ್ಟಪಡುವುದಿಲ್ಲ. ಬದಲಾವಣೆ ಎಂಬುದು ಜಗದ ನಿಯಮ ಎಂದು ತಿಳಿದಿದ್ದರೂ ಕೆಲವರು ಇಚ್ಛಿಸುವುದೇ ಇಲ್ಲ. ಬದಲಾವಣೆ ಎಂಬುದು ಯಾವುದೇ ರೂಪದಲ್ಲಿ ಬೇಕಾದರೂ ಬರಬಹುದು. ಅದಕ್ಕೆ ನೀವು ಜಸ್ಟ್ ಸಿದ್ಧವಾಗಿದ್ದುಕೊಂಡು, ಅದನ್ನು ಅಪ್ಪಿಕೊಳ್ಳಬೇಕು ಅಷ್ಟೆ!
ಅಜ್ಞಾತ, ಮೊದಲೇ ಆಯ್ಕೆ ಮಾಡಿಕೊಳ್ಳದಿರುವ ದಾರಿಗಳಲ್ಲಿ ಮುನ್ನಗ್ಗಬೇಕು ಎಂಬ ಮನಃಸ್ಥಿತಿ ಹೊಂದಿರುವವರು, ಬದಲಾವಣೆಗೆ ಎದೆಯೊಡ್ಡುವವರು ಅಪಾಯ ಎದುರಿಸಲು ಸನ್ನದ್ಧವಾಗಿಯೇ ಇರುತ್ತಾರೆ. ಆದರೆ ಕೆಲವರು ತಮ್ಮ ಕಂಫರ್ಟ್ ಜೋನ್ನಲ್ಲಿಯೇ ಇದ್ದುಬಿಡುತ್ತಾರೆ. ಬದಲಾವಣೆಯನ್ನು ದ್ವೇಷಿಸುತ್ತಾರೆ. ಮೊದಲು ಹೇಗೆ ಇದ್ದರೋ ಹಾಗೆಯೇ ಜೀವನದುದ್ದಕ್ಕೂ ಇದ್ದುಬಿಡಲು ಮಾನಸಿಕವಾಗಿ ಸಿದ್ಧತೆ ನಡೆಸಿರುತ್ತಾರೆ. ಕೆಳಗಿನ ಮೂರು ರಾಶಿಯ ಜನರನ್ನು ಇದರಲ್ಲಿ ಗುರುತಿಸಬಹುದು.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ತಾವಾಯಿತು, ತಮ್ಮ ಪಾಡಾಯಿತು ಅಂತಾ ಇದ್ದುಬಿಡುತ್ತಾರೆ. ತಾವು, ತಮ್ಮ ಕುಟುಂಬವರ್ಗ, ಸ್ನೇಹಿತರ ವಲಯವನ್ನು ಆಯ್ಕೆ ಮಾಡಿಕೊಂಡು ಆರಾಮವಾಗಿ ಒಂದು ಸುರಕ್ಷಿತ ಪರಿಮಿತಿಯಲ್ಲಿಯೇ ಇದ್ದು ಬಿಡುತ್ತಾರೆ. ಸ್ವತಃ ಅವರು ಆಯ್ಕೆಯ ಜೀವನ ಇಷ್ಟಪಡುವುದಿಲ್ಲ. ಆ ಸುರಕ್ಷಿತ ವಲಯದಿಂದ ಆಚೆ ಬಂದು ಜೀವನ ಸಂಘರ್ಷವನ್ನು ಎದುರಿಸಲು ಬಿಲ್ಕುಲ್ ಒಪ್ಪುವುದಿಲ್ಲ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಪರಿಪೂರ್ಣತೆಯನ್ನು ಬಯಸುವುದಿಲ್ಲ. ತಮ್ಮ ಪರಿಮಿತಿಯನ್ನು ದಾಟಿ ಮುನ್ನುಗ್ಗುವ ಛಾತಿ ತೋರುವುದಿಲ್ಲ. ಏನೇ ಬರಲಿ ಮೊದಲೇ ಸಿದ್ಧವಾಗಿದ್ದಯಕೊಂಡು ಆ ಬದಲಾವಣೆಯನ್ನು ಒಪ್ಪದೆ ನಾನು ಇಷ್ಟೇ … ಇದಂ ಮಿತ್ತಂ ಎಂದು ಇದ್ದುಬಿಡುತ್ತಾರೆ. ಪ್ರಯತ್ನಶೀಲತೆ ಅವರಿಗೆ ಇಷ್ಟವಾಗಿರುವುದಿಲ್ಲ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಮೂಲತಃ ಅಂತರ್ಮುಖಿ ಸ್ವಭಾವದವರಾಗಿರುತ್ತಾರೆ. ಅಪರಿಚಿತರ ಜೊತೆ, ಹೊಸಬರ ಜೊತೆ ಜೀವನದಲ್ಲಿ ಯಾವುದಾದರೂ ಪರಿಸ್ಥಿತಿ ಎದುರಿಸಬೇಕು ಎಂತಾದರೆ ಅರು ಸಹಜವಾಗಿ ಇರುವುದಿಲ್ಲ. ಚಡಪಡಿಸುತ್ತಿರುತ್ತಾರೆ. ಬದಲಾವಣೆಗೆ ಒಗ್ಗಿಕೊಳ್ಳುವುದಿಲ್ಲ. ತಮ್ಮ ಪ್ರಿಯ ಜನರ ಮಧ್ಯೆ ಇದ್ದಾಗಷ್ಟೇ ಇವರು ಮುಕ್ತವಾಗಿ ಬೆರೆಯುತ್ತಾರೆ, ಸಂತೋಷಿಗಳಾಗಿರುತ್ತಾರೆ. ಹೊಸಬರ ಮಧ್ಯೆ ಇರುವುದೆಂದರೆ ಇವರು ನೀರಿನಿಂದ ಹೊರ ತೆಗೆದ ಮೀನಿನಂತೆ ಒದ್ದಾಟದ ಜೀವನ ನಡೆಸತೊಡಗುತ್ತಾರೆ.
(these 3 zodiac signs people hate change or tranformation know about your zodiac sign)