Navratri 2024: ನವರಾತ್ರಿಯಲ್ಲಿ ಕಲಶ ಸ್ಥಾಪನೆ ಮಾಡುವ ವಿಧಾನವನ್ನು ತಿಳಿಯಿರಿ

ನವರಾತ್ರಿಯ 9 ದಿನಗಳನ್ನು ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲು ಮೀಸಲಿಡಲಾಗಿದೆ. ನವರಾತ್ರಿಯ ಮೊದಲ ದಿನದಂದು ಕಲಶ ಕೂರಿಸುವ ಅಥವಾ ಸ್ಥಾಪನೆ ಮಾಡುವ ಸರಿಯಾದ ವಿಧಾನ ಯಾವುದು ಮತ್ತು ಶುಭ ಸಮಯ ಯಾವುದು ಎಂದು ತಿಳಿದುಕೊಳ್ಳಿ.

Navratri 2024: ನವರಾತ್ರಿಯಲ್ಲಿ ಕಲಶ ಸ್ಥಾಪನೆ ಮಾಡುವ ವಿಧಾನವನ್ನು ತಿಳಿಯಿರಿ
Chaitra navratri 2024
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Apr 06, 2024 | 6:28 PM

ಹಿಂದೂ ಧರ್ಮದಲ್ಲಿ, ನವರಾತ್ರಿಯ 9 ದಿನಗಳನ್ನು ಬಹಳ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಹಿಂದೂ ನಂಬಿಕೆಯ ಪ್ರಕಾರ, ವರ್ಷದಲ್ಲಿ 4 ನವರಾತ್ರಿಗಳಿವೆ ಆದರೆ ಮುಖ್ಯವಾಗಿ 2 ನವರಾತ್ರಿಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಮೊದಲನೇಯದು ಚೈತ್ರ ನವರಾತ್ರಿ, ಎರಡನೇಯದು ಶಾರದೀಯ ನವರಾತ್ರಿ. ಈ ಚೈತ್ರ ನವರಾತ್ರಿಯ ಸಮಯದಲ್ಲಿ, ತಾಯಿ ದುರ್ಗಾ ದೇವಿಯನ್ನು ಒಂಬತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಅಲ್ಲದೆ, ಭಕ್ತಿಯಿಂದ ಉಪವಾಸವನ್ನು ಆಚರಿಸಲಾಗುತ್ತದೆ. ಕೆಲವು ಭಕ್ತರು ಹಣ್ಣುಗಳ ಸೇವನೆ ಮಾಡಿ ಉಪವಾಸ ಮಾಡುತ್ತಾರೆ, ಆದರೆ ಅನೇಕರು ದಿನವಿಡೀ ಉಪವಾಸ ಮಾಡಿದ ನಂತರ, ಸಂಜೆ ಆರತಿ ಮಾಡಿ ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ.

ಚೈತ್ರ ನವರಾತ್ರಿಯಾಗಿರಲಿ ಅಥವಾ ಶಾರದೀಯ ನವರಾತ್ರಿಯಾಗಿರಲಿ, ಈ ಶುಭ ಸಂದರ್ಭದಲ್ಲಿ ಕಲಶ ಸ್ಥಾಪನೆ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಆ ಮೂಲಕ ದುರ್ಗೆಯನ್ನು 9 ದಿನಗಳ ಪೂಜೆಗೆ ಆಹ್ವಾನಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ದೇವಿಯು ತನ್ನ ಭಕ್ತರನ್ನು ರಕ್ಷಿಸಲು ಭೂಮಿಗೆ ಬರುತ್ತಾಳೆ ಎಂಬ ಧಾರ್ಮಿಕ ನಂಬಿಕೆಯಿದೆ. ಈ ಸಮಯದಲ್ಲಿ, ದುರ್ಗಾ ದೇವಿಯನ್ನು ಸರಿಯಾದ ಆಚರಣೆಗಳ ಮೂಲಕ ಪೂಜಿಸಿದಲ್ಲಿ ಎಲ್ಲಾ ರೀತಿಯ ದುಃಖಗಳಿಂದ ಪರಿಹಾರ ಪಡೆದುಕೊಳ್ಳಬಹುದು. ಜೊತೆಗೆ ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯೂ ಸದಾಕಾಲ ಇರುತ್ತದೆ. ನೀವು ಸಹ ನಿಮ್ಮ ಜೀವನದಲ್ಲಿರುವ ದುಃಖ ಮತ್ತು ಇನ್ನಿತರ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಬಯಸಿದರೆ, ನವರಾತ್ರಿಯ ಆಚರಣೆಗಳ ಪ್ರಕಾರ ದುರ್ಗಾ ಮಾತೆಯನ್ನು ಪೂಜಿಸಿ ನವರಾತ್ರಿಯ ಮೊದಲ ದಿನ ಕಲಶ ಸ್ಥಾಪನೆ ಮಾಡಿ.

ಕಲಶ ಸ್ಥಾಪನೆಗೆ ಶುಭ ಸಮಯ:

ನವರಾತ್ರಿಯು ಎ. 9 ರಿಂದ ಪ್ರಾರಂಭವಾಗಿ ಎ. 17 ರಂದು ಕೊನೆಗೊಳ್ಳುತ್ತದೆ. ಕಲಶ ಸ್ಥಾಪನೆಗೆ ಎ. 9 ಶುಭ ಸಮಯ ಇದು ಬೆಳಿಗ್ಗೆ 6.11 ರಿಂದ 10.23 ರವರೆಗೆ ಇರುತ್ತದೆ. ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಅನೇಕ ಶುಭ ಯೋಗಗಳಿವೆ. ಈ ಸಮಯದಲ್ಲಿ ಕಲಶವನ್ನು ಸ್ಥಾಪನೆ ಮಾಡಿದಲ್ಲಿ ವ್ಯಕ್ತಿಯು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ನವರಾತ್ರಿಯಂದು ಅಮೃತ ಸಿದ್ಧಿ ಯೋಗವಿದ್ದು ಈ ದಿನ ಅಶ್ವಿನಿ ನಕ್ಷತ್ರವು ಎ. 9 ರ ಮಂಗಳವಾರ ಸೂರ್ಯೋದಯದ 2 ಗಂಟೆಗಳ ನಂತರ ಪ್ರಾರಂಭವಾಗುತ್ತದೆ. ಈ ಶುಭ ಸಮಯದಲ್ಲಿ ಕಲಶ ಇಡುವ ಮೂಲಕ, ದೇವಿಯ ವಿಶೇಷ ಆಶೀರ್ವಾದವನ್ನು ಪಡೆಯಬಹುದು.

ನವರಾತ್ರಿ ಕಲಶವನ್ನು ಸ್ಥಾಪಿಸುವುದು ಹೇಗೆ?

ಚೈತ್ರ ನವರಾತ್ರಿಯ ಸಂದರ್ಭದಲ್ಲಿ ಮನೆಯಲ್ಲಿ ಕಲಶವನ್ನು ಸ್ಥಾಪಿಸಲು, ಮೊದಲು ಪೂಜಾ ಕೋಣೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ನಂತರ, ಮಣ್ಣಿನ ಅಥವಾ ತಾಮ್ರ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಚ್ಛವಾದ ಮಣ್ಣನ್ನು ಹಾಕಿ. ಅದರ ಮೇಲೆ ಕೆಲವು ಬಾರ್ಲಿ ಕಾಳುಗಳನ್ನು ಹಾಕಿ ಅವುಗಳ ಮೇಲೆ ನೀರನ್ನು ಸಿಂಪಡಿಸಿ. ಬಳಿಕ ಆ ಪಾತ್ರೆಯನ್ನು ಪೂಜಾ ಮನೆಯಲ್ಲಿ ಇಡಿ.

ಕಲಶ ಇಡುವಾಗ ಮತ್ತು ಪೂಜೆಯ ಸಮಯದಲ್ಲಿ ದುರ್ಗಾ ದೇವಿಯ ಸ್ತೋತ್ರವನ್ನು ಪಠಿಸುವುದನ್ನು ಮರೆಯಬೇಡಿ. ಹೀಗೆ ಮಾಡುವುದರಿಂದ ದುರ್ಗಾ ಮಾತೆಯ ಆಶೀರ್ವಾದ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆ ಇದೆ. ಇದಾದ ಬಳಿಕ ಆ ಕಲಶದಲ್ಲಿ ನೀರು, ಅಕ್ಷತೆ ಮತ್ತು ಕೆಲವು ನಾಣ್ಯಗಳನ್ನು ಹಾಕಿ ಮುಚ್ಚಿಡಿ. ಈ ಕಲಶದ ಮೇಲೆ ಸ್ವಸ್ತಿಕ ಚಿಹ್ನೆ ಮಾಡಿ ಮುಚ್ಚಳದಿಂದ ಮುಚ್ಚಿ. ಕಲಶ ಸ್ಥಾಪನೆಯನ್ನು ಪೂರ್ಣಗೊಳಿಸಿದ ನಂತರ, ದುರ್ಗಾ ದೇವಿಯನ್ನು ಪೂಜೆಗೆ ಆಹ್ವಾನಿಸಿ. ಅದರ ಹತ್ತಿರ ದೀಪ ಹಚ್ಚಿ ಮತ್ತು ಕಲಶವನ್ನು ಭಕ್ತಿಯಿಂದ ಪೂಜಿಸಿ. (ಈ ನಿಯಮ ವಿವಿಧ ಪ್ರದೇಶಗಳಲ್ಲಿ ಬದಲಾವಣೆ ಆಗಬಹುದು).

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ