Gupt Navratri 2024: ಗುಪ್ತ ನವರಾತ್ರಿ ಸಾಧು – ಸಂತರು ಮಾತ್ರ ಆಚರಿಸಬೇಕು, ಇದರ ಹಿಂದಿದೆ ಮಹತ್ವದ ಉದ್ದೇಶ

ಸಾಮಾನ್ಯವಾಗಿ ಅಕ್ಟೋಬರ್‌ -ನವೆಂಬರ್‌ ತಿಂಗಳುಗಳಲ್ಲಿ ಆಚರಿಸುವ ಶರದ್‌ ನವರಾತ್ರಿಯ ಬಗ್ಗೆ ಹಾಗೂ ಮಾರ್ಚ್‌ -ಎಪ್ರಿಲ್‌ ತಿಂಗಳುಗಳಲ್ಲಿ ಆಚರಿಸಲಾಗುವ ವಸಂತ ನವರಾತ್ರಿ ಬಗ್ಗೆ ನಮಗೆಲ್ಲಾ ತಿಳಿದಿರುತ್ತದೆ. ಆದರೆ ಜನವರಿ -ಫೆಬ್ರವರಿಯಲ್ಲಿ ಆಚರಿಸಲಾಗುವ ಮಾಘ ಅಥವಾ ಮಘಾ ನವರಾತ್ರಿ ಹಾಗೂ ಜೂನ್‌- ಜುಲೈನಲ್ಲಿ ಆಚರಿಸಲಾಗುವ ಆಷಾಢ ನವರಾತ್ರಿಯಾ ಬಗ್ಗೆ ತಿಳಿದಿರುವುದಿಲ್ಲ.ಈ ಗುಪ್ತ ನವರಾತ್ರಿಯ ಉಪವಾಸವನ್ನು ಮಾಘ ಮತ್ತು ಆಷಾಢ ಮಾಸಗಳಲ್ಲಿ ಆಚರಿಸಲಾಗುತ್ತದೆ. ಗುಪ್ತ ನವರಾತ್ರಿಯ ಸಮಯದಲ್ಲಿ ದುರ್ಗಾ ಮಾತೆಯನ್ನು ರಹಸ್ಯವಾಗಿ ಪೂಜಿಸಲಾಗುತ್ತದೆ. ಯಾಕಾಗಿ ಆಚರಣೆ ಮಾಡಲಾಗುತ್ತದೆ? ಯಾವ ಮಂತ್ರ ಪರಿಸಬೇಕು? ಇಲ್ಲಿದೆ ಮಾಹಿತಿ.

Gupt Navratri 2024: ಗುಪ್ತ ನವರಾತ್ರಿ ಸಾಧು - ಸಂತರು ಮಾತ್ರ ಆಚರಿಸಬೇಕು, ಇದರ ಹಿಂದಿದೆ ಮಹತ್ವದ ಉದ್ದೇಶ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 01, 2024 | 6:22 PM

ಹಿಂದೂ ಧರ್ಮದಲ್ಲಿ ದುರ್ಗಾ ಮಾತೆಯ ಆರಾಧನೆಗೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ. ದುರ್ಗಾ ದೇವಿಯ ವಿಶೇಷ ಪೂಜೆಗಾಗಿ ನವರಾತ್ರಿ ಹಬ್ಬವನ್ನು ದೇಶಾದ್ಯಂತ ಬಹಳ ಸಂತೋಷದಿಂದ ಆಚರಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ, ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು 9 ದಿನಗಳ ಕಾಲ ವ್ರತಾಚರಣೆ ಮಾಡಲಾಗುತ್ತದೆ. ನಿಮಗೆ ಗೊತ್ತಾ, ಒಂದು ವರ್ಷದಲ್ಲಿ ಒಟ್ಟು 4 ನವರಾತ್ರಿಗಳಿರುತ್ತವೆ. ಅವುಗಳಲ್ಲಿ 2 ಗುಪ್ತ ನವರಾತ್ರಿ ಮತ್ತು 2 ಪ್ರಕತ್ಯ ನವರಾತ್ರಿ. ಸಾಮಾನ್ಯವಾಗಿ ಅಕ್ಟೋಬರ್‌ -ನವೆಂಬರ್‌ ತಿಂಗಳುಗಳಲ್ಲಿ ಆಚರಿಸುವ ಶರದ್‌ ನವರಾತ್ರಿಯ ಬಗ್ಗೆ ಹಾಗೂ ಮಾರ್ಚ್‌ -ಎಪ್ರಿಲ್‌ ತಿಂಗಳುಗಳಲ್ಲಿ ಆಚರಿಸಲಾಗುವ ವಸಂತ ನವರಾತ್ರಿ ಬಗ್ಗೆ ನಮಗೆಲ್ಲಾ ತಿಳಿದಿರುತ್ತದೆ. ಆದರೆ ಜನವರಿ -ಫೆಬ್ರವರಿಯಲ್ಲಿ ಆಚರಿಸಲಾಗುವ ಮಾಘ ಅಥವಾ ಮಘಾ ನವರಾತ್ರಿ ಹಾಗೂ ಜೂನ್‌- ಜುಲೈನಲ್ಲಿ ಆಚರಿಸಲಾಗುವ ಆಷಾಢ ನವರಾತ್ರಿಯಾ ಬಗ್ಗೆ ತಿಳಿದಿರುವುದಿಲ್ಲ.ಈ ಗುಪ್ತ ನವರಾತ್ರಿಯ ಉಪವಾಸವನ್ನು ಮಾಘ ಮತ್ತು ಆಷಾಢ ಮಾಸಗಳಲ್ಲಿ ಆಚರಿಸಲಾಗುತ್ತದೆ. ಗುಪ್ತ ನವರಾತ್ರಿಯ ಸಮಯದಲ್ಲಿ ದುರ್ಗಾ ಮಾತೆಯನ್ನು ರಹಸ್ಯವಾಗಿ ಪೂಜಿಸಲಾಗುತ್ತದೆ. ಯಾಕಾಗಿ ಆಚರಣೆ ಮಾಡಲಾಗುತ್ತದೆ? ಯಾವ ಮಂತ್ರ ಪರಿಸಬೇಕು? ಇಲ್ಲಿದೆ ಮಾಹಿತಿ.

ಆಚರಣೆ ಮಾಡುವ ಉದ್ದೇಶ ಮತ್ತು ಈ ದಿನದ ಮಹತ್ವ;

ಗುಪ್ತ ನವರಾತ್ರಿಯ ಸಮಯದಲ್ಲಿ, ದುರ್ಗಾ ದೇವಿಯನ್ನು ಗುಪ್ತ ರೀತಿಯಲ್ಲಿ ಪೂಜಿಸಲಾಗುತ್ತದೆ ಎಲ್ಲಾ ಸಾಧಕರು ಮತ್ತು ತಂತ್ರಿಗಳು ಈ ದಿನಗಳಲ್ಲಿ ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಈ ಮೂಲಕ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಈ ದಿನಗಳಲ್ಲಿ ಹೋಮ- ಹವನ ಮಾಡುವುದು, ತಾಂತ್ರಿಕ ಮಂತ್ರವನ್ನು ಪಠಿಸುವುದು, ಧ್ಯಾನ, ಹಠ ಯೋಗ ಮತ್ತು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುವುದು ಮುಂತಾದ ವಿವಿಧ ಪೂಜಾ ಆಚರಣೆಗಳನ್ನು ಮಾಡುವ ಮೂಲಕ ಪ್ರಬಲ ಶಕ್ತಿಯನ್ನು ಸಿದ್ಧಿಸಿಕೊಳ್ಳುತ್ತಾರೆ.

ಗುಪ್ತ ನವರಾತ್ರಿ ಅಘೋರಿಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸಂದರ್ಭವು ಅವರಿಗೆಲ್ಲಾ ಒಂದು ಸುವರ್ಣಾವಕಾಶವಾಗಿದೆ, ಇದೇ ಸಮಯದಲ್ಲಿ ಅವರು ಮಂತ್ರ ಮತ್ತು ತಂತ್ರದ ಸಾಧನೆಗಾಗಿ ರಹಸ್ಯವಾಗಿ ಸಾಧನೆ ಮಾಡುತ್ತಾರೆ. ಇದನ್ನು ಸಾಮಾನ್ಯ ಭಕ್ತರು ಸಹ ಆಚರಣೆ ಮಾಡಬಹುದು. ತಮ್ಮ ಬಯಕೆಗಳ ಈಡೇರಿಕೆಗಾಗಿ ಮತ್ತು ದುಃಖದಿಂದ ಪರಿಹಾರ ಕಂಡುಕೊಳ್ಳಲು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ನಂಬಿಕೆಗಳ ಪ್ರಕಾರ, ಈ ಪೂಜೆಯನ್ನು ಹೆಚ್ಚು ರಹಸ್ಯವಾಗಿಡಲಾಗುತ್ತದೆ, ಏಕೆಂದರೆ ಪೂಜೆಯ ಫಲಿತಾಂಶಗಳು ಬೇಗನೆ ಈಡೇರುತ್ತವೆ.

ಇದನ್ನೂ ಓದಿ: ಕರ್ನಾಟಕದ ಸಾವಿರ ವರ್ಷ ಹಳೆಯ ದೇವಾಲಯಗಳು ಎಲ್ಲಿವೆ?

ಮಾಘ ಗುಪ್ತ ನವರಾತ್ರಿ ಯಾವಾಗ?

ಈ ವರ್ಷ, ಮಾಘ ತಿಂಗಳಲ್ಲಿ ಅಂದರೆ ಫೆ.10 (ಶನಿವಾರ) ರಿಂದ ಗುಪ್ತ ನವರಾತ್ರಿ ಪ್ರಾರಂಭವಾಗಲಿದೆ. ಇದು ಫೆ.18 ರಂದು (ಭಾನುವಾರ) ಕೊನೆಗೊಳ್ಳುತ್ತದೆ. ಈ ನವರಾತ್ರಿಯು 9 ದಿನಗಳ ಕಾಲ ನಡೆಯುತ್ತದೆ.

ಗುಪ್ತ ನವರಾತ್ರಿ ಯ ಪೂಜಾ ಆಚರಣೆಗಳು ;

1. ಯಾವುದೇ ಪೂಜಾ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು.

2. ಮನೆ ಮತ್ತು ಪೂಜಾ ಕೋಣೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ.

3. ಸ್ವಚ್ಛವಾಗಿರುವ, ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ.

4. ದುರ್ಗಾ ದೇವಿಯ ವಿಗ್ರಹ ಅಥವಾ ಫೋಟೋವನ್ನು ಮಣೆಯ ಮೇಲೆ ಇಟ್ಟು, ಶುದ್ಧ ತುಪ್ಪದಿಂದ ದೀಪವನ್ನು ಬೆಳಗಿಸಿ.

5. ವಿಗ್ರಹವನ್ನು ಹೂಮಾಲೆ, ತಿಲಕ, ಸಿಂಧೂರದಿಂದ ಅಲಂಕರಿಸಿ.

6. ವಿಗ್ರಹದ ಮುಂದೆ ಕುಳಿತು ಮಂತ್ರಗಳನ್ನು ಪಠಿಸಿ. ಬಳಿಕ ಪೂಜೆ ಮಾಡುವ ಮೂಲಕ ದೇವಿಯ ಆಶೀರ್ವಾದ ಪಡೆಯಿರಿ.

7. ಇಡೀ ದಿನ ಉಪವಾಸವನ್ನು ಆಚರಿಸಿ ಸಂಜೆ ಸಾತ್ವಿಕ ಆಹಾರದೊಂದಿಗೆ ನಿಮ್ಮ ಉಪವಾಸವನ್ನು ಮುರಿಯಿರಿ.

8. ಸಂಜೆಯೂ ದೇವಿಗೆ ಪೂಜೆ ಮಾಡಿ ಆರತಿ ಮಾಡಬೇಕು.

ದುರ್ಗಾ ದೇವಿಯ ಆಶೀರ್ವಾದ ಪಡೆಯಲು ಗುಪ್ತ ನವರಾತ್ರಿಯ ಸಮಯದಲ್ಲಿ ನೀವು ಪಠಿಸಬಹುದಾದ ಮಂತ್ರಗಳು;

1. ಜಯಂತಿ ಮಂಗಳ ಕಾಳಿ ಭದ್ರಾ ಕಾಳಿ ಕಪಾಲಿನಿ ದುರ್ಗಾ ಕ್ಷಮಾ ಶಿವಧಾತ್ರಿ ಸ್ವಾಹ ಸ್ವಾಧಾ ನಮಸ್ತುತೆ

2. ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ ‖

ಗುಪ್ತ ನವರಾತ್ರಿಯ ಸಮಯದಲ್ಲಿ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ;

ನಂಬಿಕೆಗಳ ಪ್ರಕಾರ, ಗುಪ್ತ ನವರಾತ್ರಿಯ ಸಮಯದಲ್ಲಿ ಕೂದಲು ಮತ್ತು ಉಗುರನ್ನು ಕತ್ತರಿಸಬಾರದು. ಜೊತೆಗೆ ಈ ಸಮಯದಲ್ಲಿ ಮಕ್ಕಳ ಮುಂಡನ ಸಂಸ್ಕಾರವನ್ನು ಸಹ ಮಾಡಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ