ಕರ್ನಾಟಕದ ಸಾವಿರ ವರ್ಷ ಹಳೆಯ ದೇವಾಲಯಗಳು ಎಲ್ಲಿವೆ?

ಕರ್ನಾಟಕವು ಅಸಂಖ್ಯಾತ ದೇವಾಲಯಗಳ ಸಂಗಮವಾಗಿದೆ. ಹಂಪಿ, ಹಳೇಬೀಡು ಹೀಗೆ ಅನೇಕಾನೇಕ ಪ್ರಾಚೀನ ದೇವಾಲಯಗಳ ಶಕ್ತಿ ಕೇಂದ್ರವಾಗಿದೆ. ಸುಮಾರು 1000 ವರ್ಷಗಳಷ್ಟು ಹಳೆಯದಾದ ದೇವಾಲಯಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಇಂತಹ ಮಂದಿರಗಳೇ ನಮ್ಮ ಪರಂಪರೆ, ಇತಿಹಾಸದ ವೈಭವವನ್ನು ಜಗತ್ತಿಗೆ ಸಾರುತ್ತಿವೆ. ಹಾಗಾಗಿ ಕರ್ನಾಟಕದ 5 ಹಳೆಯ ದೇವಾಲಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು ಇದರ ಹೊರತಾಗಿಯೂ ಅನೇಕ ದೇವಾಲಯಗಳನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ. ಇಲ್ಲಿ ನೀಡಿರುವ ಸ್ಥಳಗಳಿಗೆ ಭೇಟಿ ನೀಡುವ ಮೊದಲು ದೇವಾಲಯದ ಇತಿಹಾಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಮಾಹಿತಿ ಇಲ್ಲಿದೆ.

ಕರ್ನಾಟಕದ ಸಾವಿರ ವರ್ಷ ಹಳೆಯ ದೇವಾಲಯಗಳು ಎಲ್ಲಿವೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 01, 2024 | 4:38 PM

ಕರ್ನಾಟಕವು ಅಸಂಖ್ಯಾತ ದೇವಾಲಯಗಳ ಸಂಗಮವಾಗಿದೆ. ಹಂಪಿ, ಹಳೇಬೀಡು ಹೀಗೆ ಅನೇಕಾನೇಕ ಪ್ರಾಚೀನ ದೇವಾಲಯಗಳ ಶಕ್ತಿ ಕೇಂದ್ರವಾಗಿದೆ. ಸುಮಾರು 1000 ವರ್ಷಗಳಷ್ಟು ಹಳೆಯದಾದ ದೇವಾಲಯಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಇಂತಹ ಮಂದಿರಗಳೇ ನಮ್ಮ ಪರಂಪರೆ, ಇತಿಹಾಸದ ವೈಭವವನ್ನು ಜಗತ್ತಿಗೆ ಸಾರುತ್ತಿವೆ. ಹಾಗಾಗಿ ಕರ್ನಾಟಕದ 5 ಹಳೆಯ ದೇವಾಲಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು ಇದರ ಹೊರತಾಗಿಯೂ ಅನೇಕ ದೇವಾಲಯಗಳನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ. ಇಲ್ಲಿ ನೀಡಿರುವ ಸ್ಥಳಗಳಿಗೆ ಭೇಟಿ ನೀಡುವ ಮೊದಲು ದೇವಾಲಯದ ಇತಿಹಾಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಮಾಹಿತಿ ಇಲ್ಲಿದೆ.

ಭೋಗ ನಂದೀಶ್ವರ ದೇವಾಲಯ

ಟಿಪ್ಪು ಸುಲ್ತಾನ್ ಕೋಟೆಗೆ ಹತ್ತಿರದಲ್ಲಿರುವ ಭೋಗ ನಂದೀಶ್ವರ ದೇವಾಲಯವು ನಂದಿ ಬೆಟ್ಟದ ತಪ್ಪಲಿನಲ್ಲಿರುವ ಮೂರು ದೇವಾಲಯಗಳ ಸಂಕೀರ್ಣವಾಗಿದೆ. ಈ ಬೆಟ್ಟ ಪ್ರದೇಶದಿಂದ ಐದು ನದಿಗಳು ಹರಿಯುತ್ತವೆ, ಅವುಗಳೆಂದರೆ ಪಾಲಾರ್, ಅಮರಾವತಿ, ಪಿನಾಕಿನಿ, ಸ್ವರ್ಣಮುಖಿ ಮತ್ತು ಪಾಪಾಗ್ನಿ. ಮೂಲತಃ ಬಾಣ ರಾಣಿ ರತ್ನಾವತಿ ಈ ದೇವಾಲಯವನ್ನು 9 ನೇ ಶತಮಾನದಲ್ಲಿ ನಿರ್ಮಿಸಿದಳು. ಇಲ್ಲಿನ ಛಾವಣಿಗಳನ್ನು ಚೋಳರು, ಕಲ್ಯಾಣ ಮಂಟಪಗಳನ್ನು ಹೊಯ್ಸಳರು ಮತ್ತು ಹೊರಗಿನ ಗೋಡೆಗಳನ್ನು ವಿಜಯನಗರ ಸಾಮ್ರಾಜ್ಯದವರು ನಿರ್ಮಿಸಿದರು ಎಂಬ ಪ್ರತೀತಿ ಇದೆ. ಅಕ್ಟೋಬರ್ 1791 ರಲ್ಲಿ ಟಿಪ್ಪುವಿನ ಸೋಲಿನ ನಂತರ, ಬ್ರಿಟಿಷರು ಈ ಸ್ಥಳವನ್ನು ವಶಪಡಿಸಿಕೊಂಡರು. ಇಲ್ಲಿನ ಮೂರು ದೇವಾಲಯಗಳಲ್ಲಿ ಅರುಣಾಚಲೇಶ್ವರವು ಶಿವನ ಬಾಲ್ಯವನ್ನು ಪ್ರತಿನಿಧಿಸುತ್ತದೆ, ಉಮಾ ಮಹೇಶ್ವರ ದೇವಾಲಯವು ಶಿವ ಮತ್ತು ಪಾರ್ವತಿಯ ವಿವಾಹ ಹಂತವನ್ನು ಪ್ರತಿನಿಧಿಸುತ್ತದೆ ಮತ್ತು ಭೋಗ ನಂದೀಶ್ವರ ದೇವಸ್ಥಾನವು ಶಿವನ ತ್ಯಾಗವನ್ನು ಚಿತ್ರಿಸುತ್ತದೆ. ಇಲ್ಲಿನ ಪ್ರಧಾನ ದೇವತೆಯಾದ ಭೋಗ ನಂದೀಶ್ವರನ ದೇವಾಲಯವನ್ನು ಚೋಳರು ನಿರ್ಮಿಸಿದರು ಎಂದು ನಂಬಲಾಗಿದೆ. ಜೊತೆಗೆ ಈ ಸುಂದರವಾದ ಪ್ರಾಚೀನ ದೇವಾಲಯದಲ್ಲಿ ರಾಜೇಂದ್ರ ಚೋಳನ ಪ್ರತಿಮೆಯು ಶಾಶ್ವತವಾಗಿ ಸಾಕ್ಷಿ ಹೇಳುವಂತೆ ನಿಂತಿದೆ.

ಚಾಮುಂಡೇಶ್ವರಿ ದೇವಾಲಯ ಮೈಸೂರು

ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ ಚಾಮುಂಡೇಶ್ವರಿ ದೇವಾಲಯವು ಮೈಸೂರಿನ ಪ್ರಸಿದ್ಧ ದೇವಾಲಯವಾಗಿದೆ. ದೇವಿ ಮಹಿಷಾಸುರ ಮರ್ದಿನಿಯ ಪ್ರತಿಮೆಯು ಈ ಸುಂದರವಾದ ದೇವಾಲಯದಲ್ಲಿದೆ. ಮೂಲ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದ್ದು, ದೇವಾಲಯದ ಗೋಪುರಗಳನ್ನು 17 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. 18 ನೇ ಶತಮಾನದಿಂದ ಇಲ್ಲಿ ಪ್ರಾಣಿ ಬಲಿಯನ್ನು ನಿಲ್ಲಿಸಲಾಗಿದೆ ಮತ್ತು ಇದು ದೇಶದ 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದ್ರಾವಿಡ ದೇವಾಲಯವು ಹನುಮಾನ್ ಮತ್ತು ಗಣೇಶನ ವಿಗ್ರಹಗಳನ್ನು ಸಹ ಹೊಂದಿದೆ.

ಕೋಲಾರದ ಸೋಮೇಶ್ವರ ದೇವಾಲಯ

ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ಸೋಮೇಶ್ವರ ದೇವಾಲಯವನ್ನು ಚೋಳ ಸಾಮ್ರಾಜ್ಯದವರು ನಿರ್ಮಾಣ ಮಾಡಿದ್ದು ಎಂದು ನಂಬಲಾಗಿದೆ. ನಂತರ, ವಿಜಯನಗರ ಸಾಮ್ರಾಜ್ಯವು ಈ ದ್ರಾವಿಡ ದೇವಾಲಯದ ಅಭಿವೃದ್ಧಿಗೆ ವ್ಯಾಪಕವಾಗಿ ಶ್ರಮಿಸಿತು. ಆಶ್ಚರ್ಯಕರ ಸಂಗತಿಯೆಂದರೆ ದೇವಾಲಯದ ಆಂತರಿಕ ಸ್ತಂಭಗಳು ಅಂತರಾಷ್ಟ್ರೀಯ ವ್ಯಾಪಾರ ಸಂಪರ್ಕದ ಬಗ್ಗೆ ತಿಳಿಸುತ್ತದೆ. ಇಲ್ಲಿನ ಭವ್ಯ ಗೋಪುರದ ರಚನೆ, ಮಹಾದ್ವಾರ ಅಥವಾ ಮುಖ್ಯ ಪ್ರವೇಶದ್ವಾರವು ಗಮನಾರ್ಹ ಆಕರ್ಷಣೆಯಾಗಿದೆ. ಅಲಂಕೃತ ಹೊರ ಗೋಡೆಯ ಅಚ್ಚುಗಳು, ಬಾಗಿಲುಗಳ ಮೇಲೆ ವಿಜಯನಗರದ ಕೆತ್ತನೆಗಳು, ನಾಸ್ತಿಕರನ್ನು ಸಹ ಇಲ್ಲಿಗೆ ಸೆಳೆಯುತ್ತದೆ. ಸೋಮೇಶ್ವರದ ಕಲ್ಯಾಣ ಮಂಟಪದ ವಾಸ್ತುಶಿಲ್ಪವು ಯುರೋಪಿಯನ್, ಥಾಯ್ ಮತ್ತು ಚೀನೀ ಶೈಲಿಯ ನಿರ್ಮಾಣಗಳ ಸಂಗಮದಿಂದಾಗಿ ಜನಪ್ರಿಯವಾಗಿದೆ. ಇಲ್ಲಿನ ಸ್ತಂಭ, ಛಾವಣಿ, ಸುತ್ತಲಿನ ಕಲ್ಲಿನ ಆಕೃತಿಗಳು ಮತ್ತು ಪೌರಾಣಿಕ ಕಥೆಗಳು ಪ್ರಭಾವಶಾಲಿ ದ್ರಾವಿಡ ವಾಸ್ತುಶಿಲ್ಪಕ್ಕೆ ಉದಾಹರಣೆಗಳಾಗಿವೆ.

ಐಹೊಳೆಯ ಲಾಡ್ ಖಾನ್ ದೇವಾಲಯ

125 ಕ್ಕೂ ಹೆಚ್ಚು ದೇವಾಲಯಗಳನ್ನು ಹೊಂದಿರುವ ಐಹೊಳೆಯಲ್ಲಿ ಲಾಡ್ ಖಾನ್ ದೇವಾಲಯವನ್ನು ನೀವು ಕಾಣಬಹುದಾಗಿದೆ. ಒಂದು ಕಾಲದಲ್ಲಿ ವೈಷ್ಣವ ದೇವಾಲಯವಾಗಿದ್ದು ಈಗ ಪ್ರಮುಖ ಶೈವ ಮಂದಿರವಾಗಿದೆ, ಶಿವ ಇಲ್ಲಿನ ಪ್ರಧಾನ ದೇವರು. ರಾಜಕುಮಾರ ಲಾಡ್ ಖಾನ್ ತನ್ನ ಆಳ್ವಿಕೆಯಲ್ಲಿ ಈ ದೇವಾಲಯವನ್ನು ನಿವಾಸವನ್ನಾಗಿ ಮಾಡಿಕೊಂಡಿದ್ದ ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ಯಾವುದೇ ಎತ್ತರದ ಗೋಪುರಗಳಿಲ್ಲ ಹಾಗಾಗಿ ಇದು ಇತಿಹಾಸಕಾರರು ಮತ್ತು ಪ್ರಾಚೀನ ಮಂದಿರ ಪ್ರಿಯರಿಗೆ ಅಧ್ಯಯನ ಮಾಡಲು ಪರಿಪೂರ್ಣ ಗುಹಾ ದೇವಾಲಯವಾಗಿದೆ. ಪಂಚಾಯತ್ ಶೈಲಿಯ ವಾಸ್ತುಶಿಲ್ಪವನ್ನು ಅನುಕರಣೆ ಮಾಡಿದ ಈ ದೇವಾಲಯದಲ್ಲಿ ಆಂತರಿಕ ಗರ್ಭಗುಡಿ, ಸಭಾ ಮಂಟಪ ಮತ್ತು ಮಹಾ ಮಂಟಪವನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಭೈರವಾಷ್ಟಮಿ ಆಚರಣೆ ಯಾವಾಗ? ಪೂಜಾ ವಿಧಾನ ಹೇಗಿರಬೇಕು?

ಶ್ರೀ ರಂಗನಾಥಸ್ವಾಮಿ ದೇವಾಲಯ ಶ್ರೀರಂಗಪಟ್ಟಣ

ಮಂಡ್ಯ ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ವಿಷ್ಣುವಿನ ಸುಂದರ ಮೂರ್ತಿಯನ್ನು ಹೊಂದಿದೆ. ಈ ದೇವಾಲಯದಲ್ಲಿ ವಿಷ್ಣುವಿನ ವಿಶ್ರಾಂತಿ ಭಂಗಿಯನ್ನು ನಾವು ಕಾಣಬಹುದಾಗಿದೆ. ಭಕ್ತರು ತಮ್ಮ ರಂಗನಾಥಸ್ವಾಮಿ ಅಥವಾ ವಿಷ್ಣುವನ್ನು ಪೂಜಿಸಲು ಈ ಸ್ಥಳಕ್ಕೆ ಬರುತ್ತಾರೆ. ಈ ದೇವಾಲಯವನ್ನು ಕ್ರಿ.ಶ 894 ರಲ್ಲಿ ನಿರ್ಮಿಸಲಾಗಿದ್ದರೂ, ದೇವಾಲಯದ ವಾಸ್ತುಶಿಲ್ಪಕ್ಕೆ ಹೊಯ್ಸಳರು, ವಿಜಯನಗರ, ಹೈದರ್ ಅಲಿ ಮತ್ತು ಒಡೆಯರ್ ರಾಜವಂಶದವರು ತಮ್ಮ ಕೊಡುಗೆ ನೀಡಿದ್ದಾರೆ. ದೇವಾಲಯದ ವಾಸ್ತುಶಿಲ್ಪ ವಿಜಯನಗರ ಸಾಮ್ರಾಜ್ಯಕ್ಕೆ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಇದು ಪರೋಕ್ಷವಾಗಿ ವಿವರಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೇಗಿತ್ತು ನೋಡಿ ಸಂಜು ಸ್ಯಾಮ್ಸನ್ ಹುಟ್ದಬ್ಬದ ಸಂಭ್ರಮ
ಹೇಗಿತ್ತು ನೋಡಿ ಸಂಜು ಸ್ಯಾಮ್ಸನ್ ಹುಟ್ದಬ್ಬದ ಸಂಭ್ರಮ
ಲೋಕಾಯುಕ್ತ ದಾಳಿ ವೇಳೆ ಕಿಟಿಕಿಯಿಂದ ಲಕ್ಷ ಲಕ್ಷ ಹಣ ಎಸೆದರು! ವಿಡಿಯೋ ನೋಡಿ
ಲೋಕಾಯುಕ್ತ ದಾಳಿ ವೇಳೆ ಕಿಟಿಕಿಯಿಂದ ಲಕ್ಷ ಲಕ್ಷ ಹಣ ಎಸೆದರು! ವಿಡಿಯೋ ನೋಡಿ
ದೇವಸ್ಥಾನಗಳನ್ನೂ ಬಿಡದ ಕಳ್ಳರು, ಸಿಸಿಟಿವಿ ಇಲ್ಲದ್ದು ಕಳ್ಳರಿಗೆ ನೆರವಾಯಿತೇ?
ದೇವಸ್ಥಾನಗಳನ್ನೂ ಬಿಡದ ಕಳ್ಳರು, ಸಿಸಿಟಿವಿ ಇಲ್ಲದ್ದು ಕಳ್ಳರಿಗೆ ನೆರವಾಯಿತೇ?
ಸಮರ್ಥ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯ ಸಮರ್ಥ ಸಿಎಂ: ಪರಮೇಶ್ವರ್
ಸಮರ್ಥ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯ ಸಮರ್ಥ ಸಿಎಂ: ಪರಮೇಶ್ವರ್
ಒಡವೆಗಳನ್ನು ವಾಪಸ್ಸು ಪಡೆದು ಪೊಲೀಸರಿಗೆ ಧನ್ಯವಾದ ಸಲ್ಲಿಸಿದ ಗೃಹಿಣಿಯರು
ಒಡವೆಗಳನ್ನು ವಾಪಸ್ಸು ಪಡೆದು ಪೊಲೀಸರಿಗೆ ಧನ್ಯವಾದ ಸಲ್ಲಿಸಿದ ಗೃಹಿಣಿಯರು
ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜಿಸಿದ ಪೊಲೀಸ್
ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜಿಸಿದ ಪೊಲೀಸ್
ಪೊಲೀಸರು ಲಾಠಿ ಹಿಡಿದು ಬಂದ್ರೂ ಕ್ಯಾರೇ ಅನ್ನದ ಮಂಗಳ ಮಖಿಯರು, ವಿಡಿಯೋ ವೈರಲ್
ಪೊಲೀಸರು ಲಾಠಿ ಹಿಡಿದು ಬಂದ್ರೂ ಕ್ಯಾರೇ ಅನ್ನದ ಮಂಗಳ ಮಖಿಯರು, ವಿಡಿಯೋ ವೈರಲ್
ಅನುಷಾ-ಧರ್ಮ ಸಂಬಂಧಕ್ಕೆ ಹುಳಿ ಹಿಂಡಿದ ಬಿಗ್ ಬಾಸ್ ಟಾಸ್ಕ್
ಅನುಷಾ-ಧರ್ಮ ಸಂಬಂಧಕ್ಕೆ ಹುಳಿ ಹಿಂಡಿದ ಬಿಗ್ ಬಾಸ್ ಟಾಸ್ಕ್
Nithya Bhavishya: ಈ ರಾಶಿಯವರಿಗೆ ಇಂದು ಸೈಟ್​ ಖರೀದಿಸುವ ಯೋಗ ಇದೆ
Nithya Bhavishya: ಈ ರಾಶಿಯವರಿಗೆ ಇಂದು ಸೈಟ್​ ಖರೀದಿಸುವ ಯೋಗ ಇದೆ
ನದಿಗೆ ತ್ಯಾಜ್ಯ ಸುರಿದವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ವಿನೋದ್ ರಾಜ್
ನದಿಗೆ ತ್ಯಾಜ್ಯ ಸುರಿದವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ವಿನೋದ್ ರಾಜ್