Rahu Dosha: ನಿಮ್ಮಲ್ಲಿ ಈ ಲಕ್ಷಣ ಕಂಡುಬಂದರೆ ನಿರ್ಲಕ್ಷಿಸಬೇಡಿ; ರಾಹು ದೋಷವಿರಬಹುದು ಎಚ್ಚರ!
ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ರಾಹು ದೋಷ ಇದ್ದರೆ ಅದು ಆರೋಗ್ಯ, ಮನಸ್ಸು, ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ನಿದ್ರಾಹೀನತೆ, ಆತಂಕ, ಕುಟುಂಬ ಕಲಹ, ಆರ್ಥಿಕ ನಷ್ಟ ಮತ್ತು ಅಪಘಾತಗಳಂತಹ ಸಮಸ್ಯೆಗಳು ಎದುರಾಗಬಹುದು. ಈ ಲೇಖನ ರಾಹು ದೋಷದ ಲಕ್ಷಣಗಳು, ಪರಿಣಾಮಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ನೀಡುತ್ತದೆ.

ಯಾರ ಜಾತಕದಲ್ಲಿ ರಾಹು ದೋಷವಿದ್ದರೆ ಎಚ್ಚರದಿಂದಿರಬೇಕು ಎಂದು ಜ್ಯೋತಿಷ್ಯರು ಎಚ್ಚರಿಸುತ್ತಾರೆ. ಏಕೆಂದರೆ ರಾಹುವಿನ ಮಹಾದಶಾ 18 ವರ್ಷಗಳ ಕಾಲ ಇರುತ್ತದೆ. ಈ 18 ವರ್ಷಗಳಲ್ಲಿ, ರಾಹು ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ರಾಹು ಶುಭವಾಗಿದ್ದರೆ, ಅದು ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ನಡೆಯುವಂತೆ ಮಾಡುತ್ತದೆ. ಅದು ಅಶುಭವಾಗಿದ್ದರೆ, ಅದು ಅವನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ನಮ್ಮ ಜೀವನದಲ್ಲಿ ಬರುವ ಕೆಲವು ಚಿಹ್ನೆಗಳ ಮೂಲಕ ರಾಹು ನಮ್ಮ ಜಾತಕದಲ್ಲಿ ಅಶುಭ ಸ್ಥಾನದಲ್ಲಿ ಇದ್ದಾನೆಯೇ ಎಂಬುದನ್ನು ತಿಳಿದುಕೊಳ್ಳಬಹುದು.
ರಾಹು ದೋಷವಿದ್ದರೆ ಈ ಲಕ್ಷಣಗಳನ್ನು ಕಂಡುಬರಬಹುದು:
ರಾಹುವಿನ ಅಶುಭ ಪರಿಣಾಮಗಳಿಂದಾಗಿ, ವ್ಯಕ್ತಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಈ ಸಮಸ್ಯೆಗಳು ಅವನನ್ನು ಮೂರು ಕೋನಗಳಿಂದ ಅಂದರೆ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳಿಂ ಸುತ್ತುವರಿಯುತ್ತದೆ.
ಆರೋಗ್ಯ ಸಮಸ್ಯೆಗಳು:
ರಾಹು ಅಶುಭವಾಗಿದ್ದಾಗ, ಹೊಟ್ಟೆಯ ಸಮಸ್ಯೆಗಳು ಮತ್ತು ತಲೆನೋವು ಸೇರಿದಂತೆ ಅನೇಕ ಇತರ ಕಾಯಿಲೆಗಳು ಉಂಟಾಗುತ್ತವೆ. ಇದಲ್ಲದೇ ಯಾವಾಗಲೂ ಕಿರಿಕಿರಿ, ಖಿನ್ನತೆ, ಆತಂಕ, ಒತ್ತಡ ಮತ್ತು ದುಃಖದಿಂದ ಬದುಕುತ್ತಾನೆ. ಕೂದಲು ಉದುರುವಿಕೆ ಮತ್ತು ಉಗುರುಗಳಿಗೆ ಹಾನಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ನಿದ್ರೆಯ ಕೊರತೆ:
ರಾಹುವಿನ ಪ್ರಭಾವದಿಂದ ಬಳಲುತ್ತಿರುವ ವ್ಯಕ್ತಿಯು ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸುತ್ತಾನೆ ಮತ್ತು ವ್ಯಕ್ತಿಗೆ ದುಃಸ್ವಪ್ನಗಳು ಬೀಳಲು ಪ್ರಾರಂಭಿಸುತ್ತವೆ. ಅಂತಹ ವ್ಯಕ್ತಿಯು ಕನಸಿನಲ್ಲಿ ಭಯಪಡುತ್ತಾನೆ.
ಸಂಬಂಧಗಳಲ್ಲಿ ಬಿರುಕು:
ರಾಹು ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ಸೃಷ್ಟಿಸುತ್ತಾನೆ, ಇದು ಪತಿ ಮತ್ತು ಪತ್ನಿಯ ನಡುವೆ ಘರ್ಷಣೆಗಳಿಗೆ ಕಾರಣವಾಗುತ್ತದೆ ಮತ್ತು ಆತ್ಮೀಯ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ದೇವಾಲಯ ನಿರ್ಮಾಣವಾಗುತ್ತಿದ್ದಾಗಲೇ ಕೊಳಕ್ಕೆ ಹಾರಿದ ಶಿಲ್ಪಿ,ಇಂದಿಗೂ ಅಪೂರ್ಣವಾಗಿರುವ ಶಿವ ದೇವಾಲಯ!
ಆರ್ಥಿಕ ನಷ್ಟ:
ರಾಹುವಿನ ಅಶುಭ ಪರಿಣಾಮದಿಂದಾಗಿ, ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಇತರ ಆರ್ಥಿಕ ನಷ್ಟಗಳನ್ನು ಸಹ ಭರಿಸಬೇಕಾಗಬಹುದು. ಜೊತೆಗೆ ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ವೈಫಲ್ಯವನ್ನು ಎದುರಿಸಬೇಕಾಗುತ್ತದೆ.
ವಾಹನ ಅಪಘಾತ:
ರಾಹು ಅಶುಭವಾಗಿರುವುದರಿಂದ ವಾಹನ ಅಪಘಾತಗಳು ಸಹ ಸಂಭವಿಸಬಹುದು. ಇದಲ್ಲದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ರಾಹುವಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಅಥವಾ ಸ್ಫೋಟಗೊಂಡರೆ, ಅದನ್ನು ರಾಹುವಿನ ಅಶುಭ ಚಿಹ್ನೆ ಎಂದು ಪರಿಗಣಿಸಬೇಕು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ