ಜ್ಯೇಷ್ಠ ಮಾಸದಲ್ಲಿ ಪಿತೃ ದೋಷ, ರಾಹು ದೋಷ ನಿವಾರಣೆಗಾಗಿ ಈ ಪರಿಹಾರ ಅನುಸರಿಸಿ… ಸಮಸ್ಯೆಗಳು ದೂರವಾಗುತ್ತವೆ

Rahu Dosham: ಜ್ಯೇಷ್ಠ ಮಾಸದಲ್ಲಿ ಬಿಸಿಲು ಮತ್ತು ಮಳೆಯ ಸಂಯೋಜನೆ ಹದವಾಗಿರುತ್ತದೆ. ಈ ಋತುವಿನಲ್ಲಿ ಪಕ್ಷಿಗಳಿಗೆ ಬೀಜಗಳು ಮತ್ತು ನೀರನ್ನು ಒದಗಿಸಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ರಾಹು ಮತ್ತು ಶನಿ ಗ್ರಹಗಳಿಂದ ಉಂಟಾದ ದೋಷಗಳು ನಿವಾರಣೆಯಾಗುವುದಲ್ಲದೆ ಆತ್ಮತೃಪ್ತಿ ದೊರೆಯುತ್ತದೆ. ಪಕ್ಷಿಗಳು ಆಹಾರವನ್ನು ಸೇವಿಸತೊಡಗುತ್ತಿದ್ದಂತೆ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ.

ಜ್ಯೇಷ್ಠ ಮಾಸದಲ್ಲಿ ಪಿತೃ ದೋಷ, ರಾಹು ದೋಷ ನಿವಾರಣೆಗಾಗಿ ಈ ಪರಿಹಾರ ಅನುಸರಿಸಿ... ಸಮಸ್ಯೆಗಳು ದೂರವಾಗುತ್ತವೆ
ಜ್ಯೇಷ್ಠ ಮಾಸದಲ್ಲಿ ಪಿತೃ ದೋಷ ಮತ್ತು ರಾಹು ದೋಷ ನಿವಾರಣೆ ಹೇಗೆ?
Follow us
|

Updated on: Jun 15, 2024 | 9:45 AM

ಜ್ಯೋತಿಷ್ಯದಲ್ಲಿ ನವಗ್ರಹಗಳಿಗೆ ವಿಶೇಷ ಸ್ಥಾನವಿದೆ. ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ಗ್ರಹಗಳ ಸ್ಥಾನವು ವ್ಯಕ್ತಿಯ ಜಾತಕ ಮತ್ತು ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಗ್ರಹಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವಾಗ ಜನರು ದಾನ ಇತ್ಯಾದಿ ಚಟುವಟಿಕೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದಾನ ಮಾಡುವುದರಿಂದ ಜೀವನದಲ್ಲಿ ಯಾವುದೇ ತೊಂದರೆಗಳು ಅಥವಾ ದೋಷಗಳು ದೂರವಾಗುತ್ತವೆ. ಜಾತಕದಲ್ಲಿ (Astrology) ಗ್ರಹಗಳ ಸ್ಥಾನವನ್ನು ಸರಿಪಡಿಸಲು, ಅಗತ್ಯವಿರುವವರಿಗೆ ಆಹಾರ, ಬಟ್ಟೆ ಮತ್ತು ವಾಸಿಸುವ ವ್ಯವಸ್ಥೆಯನ್ನು ಒದಗಿಸುವುದು ಉತ್ತಮ ಪರಿಹಾರವಾಗಿದೆ. ಇದರೊಂದಿಗೆ ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸುವುದು ಸಹ ಬಹಳ ಪುಣ್ಯವೆಂದು ಪರಿಗಣಿಸಲಾಗಿದೆ. ಆದರೆ ಜ್ಯೇಷ್ಠ ಮಾಸದಲ್ಲಿ (Jyeshta Masa) ಯಾರದಾದರೂ ಜಾತಕದಲ್ಲಿ ರಾಹು ದೋಷ ಅಥವಾ ಪಿತೃ ದೋಷವಿದ್ದರೆ (Pitru Dosha, Rahu Dosha) ಕೆಲವು ಪರಿಹಾರಗಳನ್ನು ಮಾಡುವುದರಿಂದ ಲಾಭವಾಗುತ್ತದೆ (Astrology tips).

ರಾಹು ದೋಷ ನಿವಾರಣೆಗೆ ಸುಲಭ ಉಪಾಯ: ಜ್ಯೇಷ್ಠ ಮಾಸದಲ್ಲಿ ಬಿಸಿಲು ಮತ್ತು ಮಳೆಯ ಸಂಯೋಜನೆ ಹದವಾಗಿರುತ್ತದೆ. ಈ ಋತುವಿನಲ್ಲಿ ಪಕ್ಷಿಗಳಿಗೆ ಬೀಜಗಳು ಮತ್ತು ನೀರನ್ನು ಒದಗಿಸಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ರಾಹು ಮತ್ತು ಶನಿ ಗ್ರಹಗಳಿಂದ ಉಂಟಾದ ದೋಷಗಳು ನಿವಾರಣೆಯಾಗುವುದಲ್ಲದೆ ಆತ್ಮತೃಪ್ತಿ ದೊರೆಯುತ್ತದೆ. ಪಕ್ಷಿಗಳು ಆಹಾರವನ್ನು ಸೇವಿಸತೊಡಗುತ್ತಿದ್ದಂತೆ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ. ಜಾತಕದಲ್ಲಿನ ದೋಷಗಳೂ ನಿವಾರಣೆಯಾಗಿ ಮತ್ತೊಂದೆಡೆ ಪುಣ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

ಪಿತೃ ದೋಷ ತಡೆಯಲು ಹೀಗೆ ಮಾಡಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃ ಪಕ್ಷದಲ್ಲಿ ಪಕ್ಷಿಗಳಿಗೆ ಧಾನ್ಯವನ್ನು ತಿನ್ನಿಸುವುದರಿಂದ ಪೂರ್ವಜರಿಗೆ ಸಂತೋಷ-ಸಂತೃಪ್ತಿ ಸಿಗುತ್ತದೆ. ಮೇಲಾಗಿ ಜಾತಕದಲ್ಲಿ ರಾಹುವಿನ ದೋಷವೂ ಕಡಿಮೆಯಾಗುತ್ತದೆ. ಪಕ್ಷಿಗಳಿಗೆ ಆಹಾರ ನೀಡುವುದರಿಂದ.. ಜೀವನದ ಪ್ರತಿಯೊಂದು ಬಿಕ್ಕಟ್ಟಿನಿಂದಲೂ ನೀವು ಪರಿಹಾರವನ್ನು ಪಡೆಯುತ್ತೀರಿ. ಪ್ರಗತಿಯನ್ನು ಪಡೆಯಿರಿ. ಧಾನ್ಯವನ್ನು ನೀಡುವುದರಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನಸಿಕ ಶಕ್ತಿಯನ್ನು ನೀಡುತ್ತದೆ. ಇದರೊಂದಿಗೆ ಉದ್ಯೋಗ, ವ್ಯಾಪಾರದಲ್ಲಿ ಲಾಭದಾಯಕ ಮಾರ್ಗಗಳು ತೆರೆದುಕೊಳ್ಳುತ್ತವೆ.. ಸಂಪತ್ತು ವೃದ್ಧಿಯಾಗುತ್ತದೆ. ಸಾಲಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: Shani Vakri 2024 – ಐದು ತಿಂಗಳ ಕಾಲ ಶನಿ ಮಹಾತ್ಮನಿಗೆ ಹಿನ್ನಡೆ, ಈ ಮೂರು ರಾಶಿಯ ಉದ್ಯಮಿಗಳಿಗೆ ಅದೃಷ್ಟವೋ ಅದೃಷ್ಟ!

ಪಕ್ಷಿಗಳಿಗೆ ನೀರಡಿಕೆ ಆಹಾರ ನೀಡಿ: ಪಕ್ಷಿಗಳಿಗೆ ನೀರು ಕೊಡುವುದು ತುಂಬಾ ಸರಳವಾದ ಕೆಲಸ. ಇದಕ್ಕಾಗಿ ಎತ್ತರದ ಸ್ಥಳದಲ್ಲಿ ಮಡಕೆ ಅಥವಾ ಯಾವುದಾದರೂ ಪಾತ್ರೆಯಲ್ಲಿ ನೀರನ್ನು ತುಂಬಿಸಿಡಿ. ಈ ಮಡಕೆಯೊಂದಿಗೆ ಪಕ್ಕದಲ್ಲಿ ಧಾನ್ಯವನ್ನೂ ಆಹಾರವಾಗಿ ಇರಿಸಿ. ಧಾನ್ಯ ಲಭ್ಯವಿಲ್ಲದಿದ್ದರೆ ಸ್ವಲ್ಪ ಹಸಿ ಅಕ್ಕಿಯನ್ನು ಸೇರಿಸಬಹುದು. ಪಕ್ಷಿಗಳು ಮನೆಗೆ ಬರತೊಡಗಿದರೆ ಬೀಜಗಳು ಮತ್ತು ನೀರನ್ನು ನೀಡಲು ಪ್ರಾರಂಭಿಸಿ. ಕೆಲವೇ ದಿನಗಳಲ್ಲಿ ಪಕ್ಷಿಗಳು ಇನ್ನಷ್ಟು ಸ್ನೇಹಪರವಾಗಿ ದಿನಾ ಮನೆಗೆ ಬರಲು ಪ್ರಾರಂಭಿಸುತ್ತವೆ. ಪಕ್ಷಿಗಳಿಗೆ ಹೀಗೆ ಆಹಾರ ಮತ್ತು ನೀರು ನೀಡುವ ಮೂಲಕ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ನಿಮ್ಮ ಮಕ್ಕಳ ಜೀವನದಲ್ಲಿ ಅಡೆತಡೆಗಳು ನಿವಾರಣೆಯಾಗಿ ಸಂತಸ ನೆಲೆಸಲಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ತಾಜಾ ಸುದ್ದಿ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!