Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸಿ

| Updated By: shruti hegde

Updated on: Aug 16, 2021 | 2:22 PM

ಚಾಣಕ್ಯ ನೀತಿ: ಸಾಧಿಸುವ ಗುರಿಯಿದ್ದಾಗ ಕೆಲವೊಂದಿಷ್ಟು ವಿಷಯಗಳನ್ನು ನೆನಪಿನಲ್ಲಿಡಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಗುರಿಯ ಕುರಿತಾಗಿ ಹೆಚ್ಚಿನ ಗಮನವಿರಬೇಕು ಎಂದು ಹೇಳಿದ್ದಾರೆ.

Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸಿ
ಚಾಣಕ್ಯ ನೀತಿ
Follow us on

ಆಚಾರ್ಯ ಚಾಣಕ್ಯ ತಮ್ಮ ಅನುಭವಗಳ ಮೂಲಕ ಅನೇಕ ನೀತಿ ಸಾರವನ್ನು ಹೇಳಿದ್ದಾರೆ. ಅದೇ ರೀತಿ ಜೀವನದಲ್ಲಿ ಯಶಸ್ಸಿಗಾಗಿ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಶ್ರಮಪಟ್ಟು ಕೆಲಸ ಮಾಡಿದರೂ ಸಹ ಪದೇ ಪದೇ ಸೋಲೇ ಕಾಣುತ್ತಿದ್ದೀರಿ ಎಂದಾದರೆ ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಬಹುದು.

ಸಾಧಿಸುವ ಗುರಿಯಿದ್ದಾಗ ಕೆಲವೊಂದಿಷ್ಟು ವಿಷಯಗಳನ್ನು ನೆನಪಿನಲ್ಲಿಡಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಗುರಿಯ ಕುರಿತಾಗಿ ಹೆಚ್ಚಿನ ಗಮನವಿರಬೇಕು ಎಂದು ಹೇಳಿದ್ದಾರೆ. ಯಾವುದೇ ವ್ಯಕ್ತಿಯು ಕೆಲಸವನ್ನು ಮಾಡುವ ಮೊದಲು ಒಳ್ಳೆಯ ಯೋಜನೆ ಇರಬೇಕು. ಯೋಜನೆ ಇಲ್ಲದೇ ಕೆಲಸ ಮಾಡುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಯಶಸ್ವಿಯಾಗುವ ಸಾಧ್ಯತೆಗಳು ಕಡಿಮೆಯಾಗಿರುತ್ತದೆ. ಉತ್ತಮ ಯೋಜನೆಯ ಬಳಿಕ ಕೆಲಸವನ್ನು ನಿರ್ವಹಿಸಿದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಕಠಿಣ ಪರಿಶ್ರಮ
ಚಾಣಕ್ಯರ ಪ್ರಕಾರ ಕಠಿಣ ಪರಿಶ್ರಮ ಮುಖ್ಯ. ಯಾವುದೇ ಕೆಲಸ ಯಶಸ್ಸು ಕಾಣಲು ಶ್ರಮಿಸಬೇಕು. ಯಾವುದೇ ಕೆಲಸಕ್ಕಾಗಿ ತೊಡಗಿಸಿದ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ಆದ್ದರಿಂದ ಕೆಲಸದಲ್ಲಿ ಕಷ್ಟಪಟ್ಟು ಕೆಲಸ ಮಾಡಲು ಎಂದಿಗೂ ಹಿಂದೆ ಸರಿಯಬೇಡಿ.

ಯೋಜನೆ
ಆಚಾರ್ಯ ಚಾಣಕ್ಯರು ಹೇಳುವಂತೆ ಕೆಲಸ ಮುಗಿದ ಬಳಿಕ ನಂತರ ಯೋಜನೆಯನ್ನು ಇತರರಿಗೆ ಹೇಳಿ. ಆದರೆ ಯಶಸ್ಸಿನ ಮೊದಲೇ ಯೋಜನೆಯನ್ನು ಬಹಿರಂಗಪಡಿಸಬೇಡಿ. ಕೆಲಸದ ಮೊದಲೇ ಯೋಜನೆಯನ್ನು ಬಹಿರಂಗಪಡಿಸಿದರೆ ಅಸೂಯೆ ಪಡುವ ಜನರು ಅಡೆತಡೆಗಳನ್ನು ತಂದೊಡ್ಡುತ್ತಾರೆ. ಆದ್ದರಿಂದ ಕೆಲಸ ಮುಗಿಯುವವರೆಗೂ ಯಶಸ್ಸಿನ ಹಿಂದಿನ ಯೋಜನೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಇದನ್ನೂ ಓದಿ:

Chanakya Niti: ಜೀವನದಲ್ಲಿ ಪದೇ ಪದೇ ಸೋಲನ್ನು ಕಾಣುತ್ತಿದ್ದೀರಾ? ಚಾಣಕ್ಯ ತಿಳಿಸಿದ ಯಶಸ್ಸಿನ ಗುಟ್ಟುಗಳನ್ನು ಅನುಸರಿಸಿ

Chanakya Niti: ಈ 4 ವಿಚಾರಗಳನ್ನು ಮರೆತಷ್ಟೂ ಒಳ್ಳೆಯದು; ನಿಮ್ಮಲ್ಲೂ ಅಂತಹ ಗುಣಗಳಿದ್ದರೆ ದಯವಿಟ್ಟು ಬಿಟ್ಟುಬಿಡಿ

Published On - 2:21 pm, Mon, 16 August 21