Chanakya Niti: ಜೀವನದಲ್ಲಿ ಸಮಸ್ಯೆಗಳಿಂದ ದೂರ ಉಳಿಯಬೇಕಾದರೆ ಈ 4 ಅಂಶಗಳ ಬಗ್ಗೆ ಗಮನವಿಡಿ- ಚಾಣಕ್ಯ ನೀತಿ ಇಲ್ಲಿದೆ
Chanakya: ಒಬ್ಬಾತ ಪರಿಸ್ಥಿತಿಯನ್ನು ಮೊದಲೇ ಅವಲೋಕಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಆ ಸಮಸ್ಯೆಯನ್ನು ಸರಿದೂಗಿಸಲು ಆತ ಮೊದಲೇ ಸಿದ್ಧನಾಗಿ ಇರಬಹುದು. ಚಾಣಕ್ಯ ಕೂಡ ಇದನ್ನು ತಿಳಿಸಿದ್ದಾನೆ.
ಸಣ್ಣ ತಪ್ಪುಗಳು ದೊಡ್ಡ ಸಮಸ್ತೆಗಳಿಗೆ ಕಾರಣ ಆಗಬಹುದು. ಹಾಗಾಗಿ ನಾವು ಯಾವುದೇ ಕೆಲಸವನ್ನು ತಪ್ಪುಗಳು ಆದಷ್ಟು ಕಡಿಮೆ ಇರುವಂತೆ ನೋಡಿಕೊಂಡು ಮಾಡಬೇಕು. ಒಂದುವೇಳೆ ಒಮ್ಮೆ ತಪ್ಪು ಸಂಭವಿಸಿದರೂ ಅದು ಪುನಾರವರ್ತಿಸದಂತೆ ನೋಡಿಕೊಳ್ಳಬೇಕು. ಒಂದು ತಪ್ಪು ಮತ್ತೆ ಮತ್ತೆ ಸಂಭವಿಸಿದರೆ ಅದು ದೊಡ್ಡ ಸಮಸ್ಯೆ ಆಗಿ ಕಾಡುವ ಸಾಧ್ಯತೆ ಇರುತ್ತದೆ. ಎಲ್ಲಕ್ಕೂ ಮಿಗಿಲಾಗಿ ಒಬ್ಬಾತ ದೂರದೃಷ್ಟಿ ಉಳ್ಳವನಾಗಿ ಇರಬೇಕು.
ಒಬ್ಬಾತ ಪರಿಸ್ಥಿತಿಯನ್ನು ಮೊದಲೇ ಅವಲೋಕಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಆ ಸಮಸ್ಯೆಯನ್ನು ಸರಿದೂಗಿಸಲು ಆತ ಮೊದಲೇ ಸಿದ್ಧನಾಗಿ ಇರಬಹುದು. ಚಾಣಕ್ಯ ಕೂಡ ಇದನ್ನು ತಿಳಿಸಿದ್ದಾನೆ. ಮುಂದೆ ಎದುರಾಗಬಹುದಾದ ಸಮಸ್ಯೆಯನ್ನು ಊಹಿಸಿ ನಿಭಾಯಿಸುವ ಚಾಣಕ್ಷತನ ಇದ್ದರೆ ಅಥವಾ ಅದಕ್ಕೆ ಸಿದ್ಧರಾಗುವ ಮನಸ್ಥಿತಿ ಇದ್ದರೆ ಕಷ್ಟಕರ ಪರಿಸ್ಥಿತಿಯನ್ನು ಕೂಡ ಗೆಲ್ಲಬಹುದು. ಚಾಣಕ್ಯ ನೀತಿಯಲ್ಲಿ ಆತ ಅದಕ್ಕಾಗಿ ಕೆಲ ಸಲಹೆಗಳನ್ನು ತಿಳಿಸಿದ್ದಾನೆ.
1. ನಡೆಯುತ್ತಿರುವಾಗ ನಿಮ್ಮ ಕಣ್ಣುಗಳು ಮುಂದಿನ ಹಾದಿಯ ಮೇಲೆ ನೆಟ್ಟಿರಲಿ. ಅದರಲ್ಲಿ ಸಮಸ್ಯೆ ಇದ್ದರೆ ಇತರ ವ್ಯಕ್ತಿಗಳಿಗೆ ಹಾನಿ ಆಗಬಹುದು. ಅಥವಾ ನೀವು ಕೂಡ ಸಮಸ್ಯೆಯನ್ನು ತಂದುಹಾಕಿದಂತೆ ಆಗಬಹುದು. ಇದು ಕೇವಲ ದಾರಿಯ ನಡಿಗೆಗೆ ಮಾತ್ರವಲ್ಲ. ಬದುಕಿನ ನಡಿಗೆಗೆ ಕೂಡ ಅನ್ವಯವಾಗುತ್ತದೆ. ಹಾಗೆಯೂ ನಾವು ನೋಡಬಹುದು.
2. ಎರಡನೆಯದಾಗಿ ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ಹೊಂದಿರಬೇಕು. ಶುಚಿತ್ವದಿಂದ ನಾವು ಆರೋಗ್ಯ ಕಾಪಾಡಿಕೊಳ್ಳಬಹುದು. ಶುಚಿತ್ವ ಎಂದರೆ ಕೇವಲ ದೇಹದ ಸ್ವಚ್ಛತೆ ಅಲ್ಲ. ನಮ್ಮ ಮನಸು ಅಥವಾ ಹೊರಗಿನ ವಸ್ತುಗಳಾದ ಆಹಾರ, ನೀರು, ವಸ್ತ್ರ ಎಲ್ಲದರ ಸ್ವಚ್ಛತೆಯೂ ಮುಖ್ಯ.
3. ಯಾವುದೇ ಕೆಲಸವನ್ನು ಮಾಡುವಾಗ ಮನಸಾರೆ ಮಾಡಬೇಕು. ಕೆಲಸ ಮಾಡುವಾಗ ಎಲ್ಲಾ ಸಾಧ್ಯತೆಯುಳ್ಳ ಮಾರ್ಗಗಳಲ್ಲಿ ಕೂಡ ಯೋಚಿಸಿ, ಆ ಕೆಲಸವನ್ನು ಅರ್ಥ ಮಾಡಿಕೊಂಡು, ಸ್ಪಷ್ಟತೆಯನ್ನು ಪಡೆದುಕೊಳ್ಳಬೇಕು. ನಮ್ಮ ಬುದ್ಧಿವಂತಿಕೆ ಉಪಯೋಗಿಸಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
4. ನಾವು ಸಮಸ್ಯೆಗೆ ಸಿಲುಕಬಹುದಾದ ಮತ್ತೊಂದು ಮುಖ್ಯ ಕಾರಣ ಎಂದರೆ ಅದು ಸುಳ್ಳು ಹೇಳುವುದು. ಒಂದು ಸುಳ್ಳನ್ನು ಮರೆಮಾಚಲು ಮತ್ತೆ ಮತ್ತೆ ಸುಳ್ಳು ಹೇಳುತ್ತಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಾವು ಪಾರಾಗುವುದು ಸುಲಭ ಇಲ್ಲ, ಅಥವಾ ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ದಿನ ಸುಳ್ಳು ಹೇಳಿ ಸಿಕ್ಕಿಬೀಳುತ್ತೇವೆ. ಅದರಿಂದ ನಂಬಿಕೆ, ಗೌರವ ಕಳೆದುಕೊಳ್ಳುವುದು ಇರುತ್ತದೆ. ಇತರ ಸಮಸ್ಯೆಯೂ ಉಂಟಾಗಬಹುದು. ಹಾಗಾಗಿ ಈ ತಪ್ಪುಗಳನ್ನು ಮಾಡಬಾರದು.
ಇದನ್ನೂ ಓದಿ: Chanakya Niti: ಚಾಣಕ್ಯ ನೀತಿ ಪ್ರಕಾರ ಈ ಮೂರು ಸ್ವಭಾವಗಳನ್ನು ತಕ್ಷಣ ಬದಲಿಸಿಕೊಳ್ಳದಿದ್ದರೆ ಬಡತನ ಅಟ್ಟಿಸಿಕೊಂಡು ಬರುತ್ತದೆ!
ಇದನ್ನೂ ಓದಿ: Chanakya Niti: ಈ ರೀತಿಯಲ್ಲಿ ಹಣ ಗಳಿಸುವ ಇರಾದೆ ಇದ್ದರೆ ತಕ್ಷಣ ಅದನ್ನು ತ್ಯಜಿಸಿಬಿಡಿ