AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ರೀತಿಯಲ್ಲಿ ಹಣ ಗಳಿಸುವ ಇರಾದೆ ಇದ್ದರೆ ತಕ್ಷಣ ಅದನ್ನು ತ್ಯಜಿಸಿಬಿಡಿ

ಯಾರು ಹಣಕ್ಕಾಗಿ, ಸುಲಭ ಗಳಿಕೆಗಾಗಿ ತಮ್ಮ ತತ್ವಗಳ ಜತೆ ರಾಜಿ ಮಾಡಿಕೊಳ್ಳುತ್ತಾರೋ, ತಪ್ಪು ಮಾರ್ಗವನ್ನು ಅಳವಡಿಸಿಕೊಳ್ಳುತ್ತಾರೋ ಮತ್ತು ಪುಣ್ಯವನ್ನು ತ್ಯಾಗ ಮಾಡುತ್ತಾರೋ, ಅವರು ಹಣದ ರೂಪದಲ್ಲಿ ಪಾಪವನ್ನು ಗಳಿಸುತ್ತಾರೆ: ಚಾಣಕ್ಯ ನೀತಿ

Chanakya Niti: ಈ ರೀತಿಯಲ್ಲಿ ಹಣ ಗಳಿಸುವ ಇರಾದೆ ಇದ್ದರೆ ತಕ್ಷಣ ಅದನ್ನು ತ್ಯಜಿಸಿಬಿಡಿ
ಚಾಣಕ್ಯ
Follow us
TV9 Web
| Updated By: Skanda

Updated on: Sep 09, 2021 | 7:02 AM

ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯರಿಗೆ ವಿಶೇಷ ಗೌರವವಿದೆ. ಅಂದು ಚಂದ್ರಗೌಪ್ತ ಮೌರ್ಯನನ್ನು ತನ್ನ ಬುದ್ಧಿಶಕ್ತಿ, ತಂತ್ರಗಾರಿಕೆ, ರಾಜಕಾರಣದಿಂದ ಸಾಮ್ರಾಟನನ್ನಾಗಿಸಿದ ಚಾಣಕ್ಯ ಇಂದಿನ ಕಾಲಕ್ಕೂ ಅಳವಡಿಸಿಕೊಳ್ಳಬಲ್ಲ ಅದೆಷ್ಟೋ ವಿಚಾರಗಳನ್ನು ಬಿತ್ತಿ ಹೋಗಿದ್ದಾರೆ. ನೈತಿಕ ವಿಚಾರಗಳಿಂದ ಹಿಡಿದು ಬದುಕಿನ ಹಲವು ತತ್ವಗಳಿಗೆ ಪೂರಕವಾಗುವ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಬದುಕಿನಲ್ಲಿ ಹೇಗೆ ಯಶಸ್ವಿಯಾಗಬೇಕೆಂಬ ಒಳಗುಟ್ಟುಗಳನ್ನು ತಿಳಿಸುವ ಚಾಣಕ್ಯ ನೀತಿ ಇದೇ ಕಾರಣಕ್ಕಾಗಿ ಜನಪ್ರಿಯವಾಗಿದೆ. ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾದ ಚಾಣಕ್ಯ ಹೇಳಿರುವ ಸೂಕ್ಷ್ಮ ವಿಚಾರಗಳು ನಮ್ಮ ಬದುಕಿಗೆ ಸೂಕ್ತ ದಿಕ್ಕನ್ನೂ ಗೊತ್ತು ಮಾಡಿಕೊಡಬಲ್ಲವು. ಬದುಕಿಗೆ ಅತ್ಯಗತ್ಯ ಎಂದೇ ಭಾವಿಸಲಾದ ಹಣ ಸಂಪಾದನೆ ಬಗ್ಗೆ ಚಾಣಕ್ಯ ನೀತಿ ಏನು ಹೇಳುತ್ತದೆ ಎಂಬುದನ್ನು ಇಂದು ತಿಳಿಯೋಣ.

1. ಸ್ವಾಭಿಮಾನ ಕಳೆದುಕೊಳ್ಳುವ ಮೂಲಕ ಗಳಿಸಿದ ಹಣ ವ್ಯರ್ಥವಾಗುತ್ತದೆ ಆಚಾರ್ಯ ಚಾಣಕ್ಯರು ಆತ್ಮ ಗೌರವದ ಬಗ್ಗೆ ಹೆಚ್ಚು ಒತ್ತು ನೀಡಿ ಮಾತನಾಡಿದ್ದಾರೆ. ಯಾವುದೇ ವ್ಯಕ್ತಿ ಎಂದಿಗೂ ಆತ್ಮಗೌರವ ಕಳೆದುಕೊಳ್ಳಬಾರದು ಎಂದು ಹೇಳಿರುವ ಅವರು, ಸ್ವಾಭಿಮಾನವನ್ನು ಕಳೆದುಕೊಳ್ಳುವ ಮೂಲಕ ಗಳಿಸಿದ ಸಂಪತ್ತು ವ್ಯರ್ಥ ಎಂದು ಹೇಳಿದ್ದಾರೆ. ಇನ್ನೊಬ್ಬರಿಗೆ ಹಿಂಸೆ ನೀಡಿ, ಶೋಷಣೆ ಮಾಡಿ, ಅಪಮಾನಿಸಿ ಗಳಿಸುವ ಹಣ ಎಷ್ಟು ಅಪಾಯವೋ ಹಣಕ್ಕಾಗಿ ನಮ್ಮನ್ನು ನಾವು ಅಂತಹ ಸ್ಥಿತಿಗೆ ಕೊಂಡೊಯ್ಯುವುದೂ ಸರಿಯಲ್ಲ ಎಂದು ತಿಳಿಸಿದ್ದಾರೆ. ಅಂತಹ ಹಣವನ್ನು ಗಳಿಸುವ ಒಬ್ಬ ವ್ಯಕ್ತಿಯು ತನ್ನ ಗೌರವವನ್ನು ಕಳೆದುಕೊಳ್ಳುತ್ತಾನೆ. ಹಣವಿಲ್ಲದ ಜೀವನಕ್ಕಿಂತ ಗೌರವವಿಲ್ಲದ ಜೀವನ ಕಷ್ಟ. ಆದ್ದರಿಂದ, ಅಂತಹ ಹಣವನ್ನು ತ್ಯಜಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

2. ಹಣಕ್ಕಾಗಿ ತತ್ವಗಳ ಮೇಲೆ ರಾಜಿ ಮಾಡಿಕೊಳ್ಳುವುದು ಸರಿಯಲ್ಲ ಆಚಾರ್ಯ ಚಾಣಕ್ಯ ಹೇಳುವುದೇನೆಂದರೆ, ಒಬ್ಬ ವ್ಯಕ್ತಿ ಕೇವಲ ಎರಡು ಪೈಸೆ ಸಂಪಾದಿಸಿದರೂ ಅದನ್ನು ಕಷ್ಟಪಟ್ಟು ಸಂಪಾದಿಸಿದರೆ ಅದಕ್ಕೊಂದು ಬೆಲೆ ಇರುತ್ತದೆ. ತಮ್ಮ ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು, ಕಷ್ಟಪಟ್ಟು ಕೆಲಸ ಮಾಡಿ ಗಳಿಸಿದ ಹಣ ಜೀವನಕ್ಕೆ ಘನತೆ ತಂದುಕೊಡುತ್ತದೆ. ಅದರ ಹೊರತಾಗಿ ಯಾರು ಹಣಕ್ಕಾಗಿ, ಸುಲಭ ಗಳಿಕೆಗಾಗಿ ತಮ್ಮ ತತ್ವಗಳ ಜತೆ ರಾಜಿ ಮಾಡಿಕೊಳ್ಳುತ್ತಾರೋ, ತಪ್ಪು ಮಾರ್ಗವನ್ನು ಅಳವಡಿಸಿಕೊಳ್ಳುತ್ತಾರೋ ಮತ್ತು ಪುಣ್ಯವನ್ನು ತ್ಯಾಗ ಮಾಡುತ್ತಾರೋ, ಅವರು ಹಣದ ರೂಪದಲ್ಲಿ ಪಾಪವನ್ನು ಗಳಿಸುತ್ತಾರೆ ಎಂದಿದ್ದಾರೆ. ಅಂತಹ ಹಣವನ್ನು ಗಳಿಸುವುದು ಒಬ್ಬ ವ್ಯಕ್ತಿಗೆ ಒಂದಲ್ಲಾ ಒಂದು ದಿನ ದೊಡ್ಡ ಕಂಟಕವನ್ನು ಉಂಟುಮಾಡುತ್ತದೆ. ಆ ಮಾರ್ಗದ ಮೂಲಕ ಎಷ್ಟೇ ಎತ್ತರಕ್ಕೆ ಸಾಗಿದರೂ ಬಲುಬೇಗನೆ ಅವನತಿಯ ಹಾದಿ ಎದುರಾಗುತ್ತದೆ ಎಂದು ಎಚ್ಚರಿಸಿದ್ದಾರೆ.

3. ಇನ್ನೊಬ್ಬರನ್ನು ಹೊಗಳಿ ಅಟ್ಟಕ್ಕೇರಿಸಿ ಹಣ ಗಳಿಸುವುದು ತಪ್ಪು ಹಣ ಗಳಿಸುವುದಕ್ಕಾಗಿ ಅಧಿಕಾರದಲ್ಲಿರುವವರನ್ನು, ಸಿರಿವಂತರನ್ನು ಹೊಗಳಿ ಅಟ್ಟಕ್ಕೇರಿಸಿ, ಅವರ ತಪ್ಪುಗಳನ್ನೂ ಸಮರ್ಥಿಸಿಕೊಂಡರೆ ಅದು ದೊಡ್ಡ ಅಪಚಾರವೇ ಸರಿ. ಯಾವುದೇ ಸಂದರ್ಭದಲ್ಲಿ ಮೌಲ್ಯಗಳಿಗೆ ರಾಜಿ ಮಾಡಿಕೊಂಡು ಸಂಪಾದನೆಯ ಮಾರ್ಗದಲ್ಲಿ ಸಾಗಿದರೆ ಅದು ಕ್ಷಣಿಕ ಸುಖವನ್ನಷ್ಟೇ ನೀಡಬಲ್ಲದು. ಹೀಗಾಗಿ ಗೌರವಯುತವಾಗಿ ಸಂಪಾದಿಸಿದ ಹಣ, ಸತ್ಯದ ಮಾರ್ಗದಲ್ಲಿ ಕೈ ಸೇರಿದ ಹಣ ಮಾತ್ರ ಒಬ್ಬ ವ್ಯಕ್ತಿಗೆ ಬೆಲೆ ತಂದುಕೊಂಡುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಇದನ್ನೂ ಓದಿ: Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ 

Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸಿ

(Chanakya Niti Things need to be followed while earning money)

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್