ಜೀವನಪೂರ್ತಿ ಲಕ್ಷ್ಮಿ ಮಾತೆಯ ಕೃಪಾಶೀರ್ವಾದ ಇರಬೇಕು ಅಂದ್ರೆ ಆಚಾರ್ಯ ಚಾಣಕ್ಯನ ಈ ಮಾತುಗಳನ್ನು ತಪ್ಪದೆ ಅಲಿಸಿ, ಪಾಲಿಸಿ

ಹಣವನ್ನು ಯಾವಾಗಲೂ ಕಷ್ಟಪಟ್ಟು ಸಂಪಾದಿಸಬೇಕು. ಹಣ ಗಳಿಸಲು ತಪ್ಪು ದಾರಿಯಲ್ಲಿ ಸಾಗಬಾರದು. ತಪ್ಪು ಮಾರ್ಗದಲ್ಲಿ ಹೊಡೆದ ಹಣ ಹೆಚ್ಚು ಕಾಲ ನಿಮ್ಮ ಬಳಿಯಿರುವುದಿಲ್ಲ. ಹಣವೂ ನಾಶವಾಗುತ್ತದೆ; ನಿಮ್ಮನ್ನು ನಾಶ ಮಾಡಿಬಿಡುತ್ತೆ. ಅದೇ ಕಷ್ಟಪಟ್ಟು ಸರಿಯಾದ ಮಾರ್ಗದಲ್ಲಿ ಹಣ ಗಳಿಸಿದ್ದರೆ ಅದು ನಿಮ್ಮ ಬಳಿಯೇ ಇರುತ್ತದೆ, ದೀರ್ಘ ಕಾಲ ನಿಮ್ಮ ಕೈಹಿಡಿಯುತ್ತದೆ.

ಜೀವನಪೂರ್ತಿ ಲಕ್ಷ್ಮಿ ಮಾತೆಯ ಕೃಪಾಶೀರ್ವಾದ ಇರಬೇಕು ಅಂದ್ರೆ ಆಚಾರ್ಯ ಚಾಣಕ್ಯನ ಈ ಮಾತುಗಳನ್ನು ತಪ್ಪದೆ ಅಲಿಸಿ, ಪಾಲಿಸಿ
ಆಚಾರ್ಯ ಚಾಣಕ್ಯ ಪ್ರಕಾಂಡ ಪಂಡಿತ ಮತ್ತು ಅತ್ಯುತ್ತಮ ಗುರು. ಮ್ಯಾನೇಜ್ಮೆಂಟ್ ಗುರು ಅಥವಾ ಒಬ್ಬ ಒಳ್ಳೆಯ ಕೋಚ್ ಎಂಬ ಮಾನ್ಯತೆ ಆಚಾರ್ಯ ಚಾಣಕ್ಯನಿಗೆ ಇಂದಿಗೂ ಎಂದೆಂದಿಗೂ ಸಲ್ಲುತ್ತದೆ. ಚಾಣಕ್ಯ ನೀತಿಗಳು ಅಂದರೆ ಕೂಟನೀತಿ, ರಾಜನೀತಿ, ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳಾಗಿ ಜನಪ್ರಿಯವಾಗಿವೆ. ಆಚಾರ್ಯ ಚಾಣಕ್ಯನ ನೀತಿ ಮಾತುಗಳನ್ನು ಆಲಿಸಿ, ಪಾಲಿಸುವುದರಲ್ಲೇ ನಮ್ಮ ಜಾಣತನವೂ ಆಡಗಿದೆ. ಇನ್ನು ಸಿರಿ ಬಂದಾಗ ಅಂದರೆ ಹಣ ಕೈಗೂಡಿದಾಗ ಈ ಚಟಗಳಿಂದ ದೂರವಿರಿ, ಇಲ್ಲವಾದಲ್ಲಿ ಧನಿಕನೂ ಕಂಗಾಲಾಗುತ್ತಾನೆ ಅನ್ನುತ್ತಾನೆ ಚಾಣಿಕ್ಯ.
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 04, 2021 | 6:43 AM

ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಧನ ಸಂಪತ್ತಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾನೆ. ಪ್ರತಿಯೊಬ್ಬರೂ ಚಾಣಕ್ಯನ ಈ ಮಾತುಗಳನ್ನು ಆಲಿಸಿ, ಪಾಲಿಸುವುದು ತುಂಬಾ ಮುಖ್ಯವಾಗಿದೆ. ಇದರಿಂದಾಗಿ ಲಕ್ಷ್ಮಿ ದೇವಿಯ ಕೃಪಾಶೀರ್ವಾದ ಜೀವನದುದ್ದಕ್ಕೂ ಪ್ರಾಪ್ತಿಯಾಗುತ್ತದೆ. ಹಾಗಾದರೆ ಆಚಾರ್ಯ ಚಾಣಕ್ಯ ಈ ಬಗ್ಗೆಏನು ಹೇಳಿದ್ದಾನೆ, ತಿಳಿದುಕೊಳ್ಳೋಣ ಬನ್ನೀ.

ಯಾರೇ ಆಗಲಿ ಹಣಕ್ಕಾಗಿ ಜೀವನದಲ್ಲಿ ತುಂಬಾ ಸಂಘರ್ಷ ಮಾಡಬೇಕಾಗುತ್ತದೆ. ಆದರೆ ದುಡ್ಡು ಬರೋಕ್ಕೆ ಶುರು ಮಾಡಿದರೆ ಜನ ಅದನ್ನು ನೀರಿನಂತೆ ಖರ್ಚು ಮಾಡಲು ಶುರು ಮಾಡಿಬಿಡುತ್ತಾರೆ. ಆದರೆ ಆಚಾರ್ಯ ಚಾಣಕ್ಯ ಇದನ್ನು ಅರ್ಥೈಸುವುದೇ ಬೇರೆಯ ರೀತಿ. ನೀವು ಹಣವನ್ನು ಸಮೃದ್ಧಿಯಾಗಿ ಗಳಿಸಬೇಕು ಅಂತಾದರೆ ಮೊದಲು ಅದನ್ನು ಮಿತವಾಗಿ ಬಳಸುವುದನ್ನು ಕಲಿಯಬೇಕು. ಹಣದ ದೇಖರೇಖಿ ಅರ್ಥೈಸಿಕೊಂಡರೆ, ಅಂದರೆ ಹಣವನ್ನು ಪಾಲಿಸುವುದು ಹೇಗೆ ಎಂಬುದನ್ನು ಅರಿತರೆ ಮಾತ್ರವೇ ಲಕ್ಷ್ಮಿ ದೇವಿಗೆ ನಿಮ್ಮ ಬಳಿಯೇ ಇರಲು ಸಾಧ್ಯವಾಗುತ್ತದೆ.

ವಾಸ್ತವವಾಗಿ, ವಸ್ತುನಿಷ್ಠವಾಗಿ ಹೇಳಬೇಕು ಅಂದರೆ ದುಡ್ಡು ಎಂಬುದೇ ನಿಮ್ಮ ದೊಡ್ಡ ಸ್ನೇಹಿತ. ಜೀವನದಲ್ಲಿ ಎಲ್ಲರೂ ನಿಮ್ಮ ಕೈಬಿಟ್ಟಾಗ, ಹಣ ನಿಮ್ಮ ಕೈಹಿಡಿಯುತ್ತದೆ. ಅದು ನಿಮಗೆ ಆಧಾರವಾಗಿ ನಿಲ್ಲಬಲ್ಲದು. ಹಾಗಾಗಿ ಯಾರೇ ಆಗಲೀ ಹಣವನ್ನುಜೋಪಾನ ಮಾಡಿ, ಉಳಿಸಿ, ಬೆಳಸಬೇಕು. ಹಣ ನಿಮ್ಮ ಬಳಿ ಜಾಸ್ತಿ ಆದಾಗ ಅದನ್ನು ಸದುಪಯೋಗಪಡಿಸಿಕೊಂಡು ಬೇರೆಯವರಿಗೆ ನೆರವಾಗಬೇಕು.

1. ಹಣವನ್ನು ಇಷ್ಟಾನುಸಾರ ಖರ್ಚು ಮಾಡಬೇಡಿ. ಯಾರು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತಾರೋ ಅವರ ಬಳಿ ದೀರ್ಘ ಸಮಯದವರೆಗೆ ಹಣ ಉಳಿಯುವುದಿಲ್ಲ. ಅದಕ್ಕೆ ಹಣವನ್ನು ಜೋಪಾನ ಮಾಡಿ, ಉಳಿಸುವುದನ್ನು ಕಲಿಯಿರಿ ನಿಮಗೆ ಕಷ್ಟ ಕಾಲದಲ್ಲಿ ಅದು ನೆರವಿಗೆ ಬರುತ್ತದೆ.

2. ನಿಮ್ಮ ಬಳಿಯಿರುವ ಹಣವನ್ನು ಜಾಸ್ತಿ ಮಾಡಬೇಕು ಅಂತಾ ನೀವು ಬಯಸಿದ್ದೇ ಆದರೆ ಅದನ್ನು ಎಲ್ಲಿಯಾದರೂ ಹೂಡಿಕೆ ಮಾಡಿ. ಹಾಗೆ ಹೂಡಿಕೆ ಮಾಡಿದರೆ ಹಣ ಹೆಚ್ಚಾಗುತ್ತಾ ಹೋಗುತ್ತದೆ.

3. ನಿಮ್ಮ ಬಳಿ ಎಷ್ಟೇ ಹಣವಿದ್ದರೂ ಅದನ್ನು ಬೇರೆಯವರ ಬಳಿ ಹೇಳಿಕೊಳ್ಳಬೇಡಿ. ಹಣದ ವಿಷಯವನ್ನು ಗುಪ್ತವಾಗಿ ಇಟ್ಟಿರಬೇಕು. ಇಲ್ಲದಿದ್ದರೆ ಹೊಂಚುಹಾಕಿ ನಿಮ್ಮ ಹಣವನ್ನು ಕಬಳಿಸಲು ಮುಂದಾಗುತ್ತಾರೆ.

4. ಹಣವನ್ನು ಯಾವಾಗಲೂ ಕಷ್ಟಪಟ್ಟು ಸಂಪಾದಿಸಬೇಕು. ಹಣ ಗಳಿಸಲು ತಪ್ಪು ದಾರಿಯಲ್ಲಿ ಸಾಗಬಾರದು. ತಪ್ಪು ಮಾರ್ಗದಲ್ಲಿ ಹೊಡೆದ ಹಣ ಹೆಚ್ಚು ಕಾಲ ನಿಮ್ಮ ಬಳಿಯಿರುವುದಿಲ್ಲ. ಹಣವೂ ನಾಶವಾಗುತ್ತದೆ; ನಿಮ್ಮನ್ನು ನಾಶ ಮಾಡಿಬಿಡುತ್ತೆ. ಅದೇ ಕಷ್ಟಪಟ್ಟು ಸರಿಯಾದ ಮಾರ್ಗದಲ್ಲಿ ಹಣ ಗಳಿಸಿದ್ದರೆ ಅದು ನಿಮ್ಮ ಬಳಿಯೇ ಇರುತ್ತದೆ, ದೀರ್ಘ ಕಾಲ ನಿಮ್ಮ ಕೈಹಿಡಿಯುತ್ತದೆ.

5. ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅಂತಾದರೆ, ದೊಡ್ಡ ಬಂಗಲೆ- ಐಶ್ವರ್ಯ ಗಳಿಸಬೇಕು ಅಂತಾದರೆ ನಿಶ್ಚಿತ ರೂಪದಲ್ಲಿ ನಿಮಗೆ ಆದಾಯ ಬರುವ ಮಾರ್ಗಗಳನ್ನು ಕಂಡುಕೊಳ್ಳಿ.

6. ನಿಮ್ಮ ಬಳಿ ಹಣ ಹೆಚ್ಚಾಗಿದ್ದು, ಲಕ್ಷ್ಮಿ ದೇವಿ ನಿಮ್ಮ ಮೇಲೆ ಕೃಪೆ ಬೀರಿದ್ದಾಳೆ ಎಂತಾದರೆ ಅದನ್ನು ದಾನ ಧರ್ಮ ಮಾಡಿ ಪುಣ್ಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಯಾರ ಮನೆಯಲ್ಲಿ ಹೆಚ್ಚು ದಾನ ಮಾಡುತ್ತಾರೋ ಅವರ ಮನೆಯಲ್ಲಿ ತಾಯಿ ಲಕ್ಷ್ಮಿ ಸದಾ ನೆಲಸಿರಲು ಇಚ್ಛಿಸುತ್ತಾಳೆ.

(chanakya niti in kannada tips for money gain and success all should know)

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ