Chanakya Niti: ಈ ನಾಲ್ಕು ವಿಚಾರಗಳಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಾರೆ

ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾದ ಚಾಣಕ್ಯ ಹೇಳಿರುವ ಸೂಕ್ಷ್ಮ ವಿಚಾರಗಳು ನಮ್ಮ ಬದುಕಿಗೆ ಸೂಕ್ತ ದಿಕ್ಕನ್ನೂ ಗೊತ್ತು ಮಾಡಿಕೊಡಬಲ್ಲವು. ಇಂದು ಜೀವನದ ತಪ್ಪು ಒಪ್ಪುಗಳ ಬಗ್ಗೆ ಕೌಟಿಲ್ಯ ಅವರ ಒಳನೋಟ ಏನಿತ್ತು ಎಂಬುದನ್ನು ತಿಳಿಯೋಣ.

Chanakya Niti: ಈ ನಾಲ್ಕು ವಿಚಾರಗಳಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಾರೆ
ಚಾಣಕ್ಯ ನೀತಿ
Follow us
Skanda
|

Updated on: May 21, 2021 | 12:41 PM

ಚಾಣಕ್ಯ ಎನ್ನುವ ಹೆಸರಿಗೆ ಇಂದಿಗೂ ಮಹತ್ವವಿದೆ. ಅಂದು ಚಂದ್ರಗೌಪ್ತ ಮೌರ್ಯನನ್ನು ತನ್ನ ಬುದ್ಧಿಶಕ್ತಿ, ತಂತ್ರಗಾರಿಕೆ, ರಾಜಕಾರಣದಿಂದ ಸಾಮ್ರಾಟನನ್ನಾಗಿಸಿದ ಚಾಣಕ್ಯ ಇಂದಿನ ಕಾಲಕ್ಕೂ ಅನ್ವಯಿಸಬಲ್ಲ ಅದೆಷ್ಟೋ ವಿಚಾರಗಳನ್ನು ಬಿತ್ತಿ ಹೋಗಿದ್ದಾರೆ. ರಾಜತಾಂತ್ರಿಕತೆ, ಆರ್ಥಿಕತೆ, ನೈತಿಕತೆ ವಿಚಾರಗಳಾದಿಯಾಗಿ ಬದುಕಿನ ಹಲವು ತತ್ವಗಳಿಗೆ ಪೂರಕವಾಗುವ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಹೀಗಾಗಿಯೇ ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯರಿಗೆ ವಿಶೇಷ ಸ್ಥಾನಮಾನವಿದೆ. ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾದ ಚಾಣಕ್ಯ ಹೇಳಿರುವ ಸೂಕ್ಷ್ಮ ವಿಚಾರಗಳು ನಮ್ಮ ಬದುಕಿಗೆ ಸೂಕ್ತ ದಿಕ್ಕನ್ನೂ ಗೊತ್ತು ಮಾಡಿಕೊಡಬಲ್ಲವು. ಇಂದು ಜೀವನದ ತಪ್ಪು ಒಪ್ಪುಗಳ ಬಗ್ಗೆ ಕೌಟಿಲ್ಯ ಅವರ ಒಳನೋಟ ಏನಿತ್ತು ಎಂಬುದನ್ನು ತಿಳಿಯೋಣ.

1. ಒಂದು ರಾಷ್ಟ್ರದ ಎಲ್ಲಾ ಜನರು ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದರೆ ಅದರ ಸಂಪೂರ್ಣ ಹೊಣೆಗಾರಿಕೆ ಆ ದೇಶದ ರಾಜನದ್ದಾಗಿರುತ್ತದೆ ಎನ್ನುವುದು ಚಾಣಕ್ಯರ ಅಭಿಪ್ರಾಯ. ಏಕೆಂದರೆ, ಸಿಂಹಾಸನದಲ್ಲಿ ಕುಳಿತು ಅಧಿಕಾರ ನಡೆಸುವವನು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಮಾತ್ರ ಸಮಾಜ ದಿಕ್ಕು ತಪ್ಪುವುದು ಸಾಧ್ಯ. ಒಂದು ವೇಳೆ ಆತ ತನ್ನ ಜನರ ಮೇಲೆ ಸದಾ ಗಮನ ಹರಿಸುತ್ತಿದ್ದರೆ ತಪ್ಪು ಕಂಡ ಕೂಡಲೇ ಎಚ್ಚರಿಸಿ ಸರಿದಾರಿಗೆ ತರುವುದು ಸಾಧ್ಯ. ಅದನ್ನು ಬಿಟ್ಟು ತನ್ನದೇ ಲೋಕದಲ್ಲಿ ಮೈಮರೆತು ಹೋದರೆ ಸಮಸ್ಯೆ ಬಿಕ್ಕಟ್ಟಾಗಿ ಜನರು ರಾಜನ ಮಾತನ್ನೂ ಕೇಳದಷ್ಟು ಒರಟಾಗಿ ಬಿಡುತ್ತಾರೆ. ಹೀಗಾಗಿ ರಾಜನಾದವನು ಸದಾ ಎಚ್ಚರದಿಂದಿರಬೇಕು. ಇಲ್ಲದೇ ಹೋದರೆ ಆತ ಮಾಡಿದ ತಪ್ಪಿಗೆ ಇಡೀ ದೇಶ ಬೆಲೆ ತೆರಬೇಕಾಗುತ್ತದೆ.

2. ರಾಜನನ್ನು ಸರಿದಾರಿಯಲ್ಲಿಡುವ ಕರ್ತವ್ಯ ರಾಜಪುರೋಹಿತ ಹಾಗೂ ಮಂತ್ರಿಯದ್ದಾಗಿರುತ್ತದೆ. ಅಂದರೆ ಅಧಿಕಾರದಲ್ಲಿರುವವನ ನಿಕಟವರ್ತಿಗಳು ತಮ್ಮ ಪ್ರಭು ಎಡವುವ ಮುನ್ನವೇ ಎಚ್ಚರಿಸುವಂತಿರಬೇಕು. ಅಧಿಕಾರದ ಮದದಲ್ಲಿ ರಾಜಧರ್ಮ ಮರೆಯಾಗುತ್ತಿದೆ ಎನ್ನಿಸಿದರೆ ತಡಮಾಡದೇ ತಕ್ಷಣವೇ ಎಚ್ಚರಿಸುವುದು ಮಂತ್ರಿ ಹಾಗೂ ರಾಜಪುರೋಹಿತರ ಕರ್ತವ್ಯವಾಗಿರುತ್ತದೆ. ಇವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ ತಪ್ಪೆಸಗಿದರೆ ಅದು ರಾಜನನ್ನೂ ತಪ್ಪಿತಸ್ಥನನ್ನಾಗಿಸುವ ಜತೆಗೆ, ಜನರನ್ನೂ ಸಮಸ್ಯೆಗೀಡುಮಾಡುತ್ತದೆ.

3. ಇಂದಿಗೂ ದಂಪತಿ ಎಂದರೆ ಒಂದು ಜೀವ ಎರಡು ದೇಹ ಎನ್ನಲಾಗುತ್ತದೆ. ಹೀಗಾಗಿ ಪತಿ ತಪ್ಪು ಮಾಡಿದರೆ ಪತ್ನಿ ಹಾಗೂ ಪತ್ನಿ ತಪ್ಪೆಸಗಿದಾಗ ಪತಿ ಅದಕ್ಕೆ ಬೆಲೆ ತೆರುವಂತಾಗುತ್ತದೆ. ಇದು ಆಗಬಾರದೆಂದರೆ ದಾಂಪತ್ಯದಲ್ಲಿ ಪತಿ ಹಾಗೂ ಪತ್ನಿ ಇಬ್ಬರೂ ಪರಸ್ಪರ ಸಾಂಗತ್ಯವನ್ನು ಅನುಭವಿಸುವುದರ ಜತೆಗೆ ಒಬ್ಬರನ್ನೊಬ್ಬರು ಎಚ್ಚರಿಸುತ್ತಾ ಸರಿ ದಾರಿಯಲ್ಲಿ ಸಾಗಬೇಕು. ಇಬ್ಬರಲ್ಲಿ ಒಬ್ಬರು ಮೈಮರೆತರೂ ಇಡೀ ಸಂಸಾರ ಕಷ್ಟವನ್ನು ಅನುಭವಿಸಬೇಕಾಗುತ್ತದೆ.

4. ಭಾರತೀಯ ಸಂಸ್ಕೃತಿಯಲ್ಲಿ ಇಂದಿಗೂ ಗುರುವಿಗೆ ಪೂಜನೀಯ ಸ್ಥಾನಮಾನವಿದೆ. ಗುರುವೆಂದರೆ ನಮ್ಮನ್ನು ಅಂಧಕಾರದಿಂದ ಬೆಳಕಿಗೆ ತರುವವರು ಎನ್ನಲಾಗುತ್ತದೆ. ಆದರೆ, ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಗುರುವೇ ನಿರ್ಲಕ್ಷ್ಯ ತಾಳಿದರೆ ಅದು ಶಿಷ್ಯಂದಿರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಮುಂದೇ ಅದೇ ಶಿಷ್ಯರು ತಪ್ಪೆಸಗಿದಾಗ ಗುರುವೇ ಮಾತುಗಳನ್ನು ಕೇಳಬೇಕಾಗುತ್ತದೆ. ಹೀಗಾಗಿ ಗುರುವಿನ ಸ್ಥಾನದಲ್ಲಿರುವವರು ಬಹಳ ಎಚ್ಚರಿಕೆಯಿಂದರಬೇಕು. ಇಲ್ಲದೇ ಹೋದರೆ ಒಬ್ಬ ಗುರು ಮಾಡುವ ತಪ್ಪು ಇಡೀ ಶಿಷ್ಯ ವೃಂದವನ್ನು ಕತ್ತಲಿಗೆ ನೂಕುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Chanakya Niti: ಈ 6 ಅಭ್ಯಾಸಗಳಿಂದ ದೂರವಿರದಿದ್ದರೆ ಹಣ ನಿಮ್ಮ ಬಳಿ ಉಳಿಯುವುದೇ ಇಲ್ಲ 

Chanakya Niti: ಚಾಣಕ್ಯ ನೀತಿ ಪಾಲನೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆ ಸಾಧ್ಯ; ಉತ್ತಮ ಜೀವನಕ್ಕೆ ಇಲ್ಲಿದೆ ಕೆಲವು ಅಂಶ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ