Chanakya Niti: ಯಶಸ್ಸಿಗೆ ಚಾಣಕ್ಯ ಹೇಳಿದ 4 ಸೂತ್ರಗಳು; ಇವುಗಳನ್ನು ಪಾಲಿಸಿದರೆ ಯಾವುದೂ ಅಸಾಧ್ಯವಲ್ಲ

ಹಲವು ಶಾಸ್ತ್ರಗಳಲ್ಲಿ ಪ್ರವೀಣರಾಗಿರುವ ಆಚಾರ್ಯ ಚಾಣಕ್ಯರು ಯಶಸ್ಸಿಗೆ ನೀಡಿದ ಸೂಚನೆಗಳೇನು ಎಂಬುದರ ಮಾಹಿತಿ ಇಲ್ಲಿದೆ.

Chanakya Niti: ಯಶಸ್ಸಿಗೆ ಚಾಣಕ್ಯ ಹೇಳಿದ 4 ಸೂತ್ರಗಳು; ಇವುಗಳನ್ನು ಪಾಲಿಸಿದರೆ ಯಾವುದೂ ಅಸಾಧ್ಯವಲ್ಲ
ಆಚಾರ್ಯ ಚಾಣಕ್ಯ ಹೇಳಿದ ಯಶಸ್ಸಿನ ಸೂತ್ರ

Updated on: Jun 09, 2023 | 7:39 AM

ಯಶಸ್ಸಿಗಾಗಿ ಹುಚ್ಚುಚ್ಚಾಗಿ ಓಡುವವರಲ್ಲಿ ನಾವೂ ಸಹ ಒಬ್ಬರಾಗಿದ್ದೇವೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲರೂ ಯಶಸ್ಸಿಗೆ ಹತ್ತಿರವಾಗುವುದಿಲ್ಲ. ಆದರೆ ಆದಷ್ಟು ಬೇಗ ಜೀವನದಲ್ಲಿ ಯಶಸ್ಸು ಕಾಣಲು ಬಯಸುವವರು ಆಚಾರ್ಯ ಚಾಣಕ್ಯ (Chanakya) ಹೇಳಿದ ಸೂಚನೆಗಳನ್ನು ಪಾಲಿಸಿದರೆ ಸಾಕು. ಯಶಸ್ಸು ಅವರಿಗೆ ಒಲಿದು ಬರುತ್ತದೆ. ಹಲವು ಶಾಸ್ತ್ರಗಳಲ್ಲಿ ಪ್ರವೀಣರಾಗಿರುವ ಆಚಾರ್ಯ ಚಾಣಕ್ಯರು ಯಶಸ್ಸಿಗೆ ನೀಡಿದ ಸೂಚನೆಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಪ್ರಾಮಾಣಿಕತೆ: ನೀವು ಮಾಡುವ ಕೆಲಸದಲ್ಲಿ ನೀವು ಪ್ರಾಮಾಣಿಕವಾಗಿಲ್ಲದಿದ್ದರೆ, ನೀವು ಅದರಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ತಪ್ಪು ದಾರಿಯಲ್ಲಿ ಹಣ ಗಳಿಸುವುದು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ನಿಮ್ಮ ಕೆಲಸವನ್ನು ಪೂರ್ಣ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಮಾಡುವುದು ಯಾವಾಗಲೂ ಉತ್ತಮ. ಹೀಗೆ ಮಾಡುವುದರಿಂದ ನೀವು ಶಾಶ್ವತವಾದ ಯಶಸ್ಸನ್ನು ಹೊಂದುವಿರಿ.

ಕಷ್ಟವೇ ಭಾಗ್ಯ: ಆಚಾರ್ಯ ಚಾಣಕ್ಯನ ಪ್ರಕಾರ, ಪರಿಶ್ರಮ ಪಡುವವರು ಎಲ್ಲಿ ಬೇಕಾದರೂ ಯಶಸ್ಸು ಸಾಧಿಸಬಹುದು. ಏಕೆಂದರೆ ಸೋಮಾರಿಗಳು ಯಾವಾಗಲೂ ತಮ್ಮ ವೈಫಲ್ಯವನ್ನು ವಿಧಿಯ ಮೇಲೆ ದೂಷಿಸುತ್ತಾರೆ. ಆದರೆ ಶ್ರಮಜೀವಿಗಳು ತಮ್ಮ ಭವಿಷ್ಯವನ್ನು ಬರೆಯುತ್ತಾರೆ. ಅಂತಹವರು ವಿಜೇತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚಾಣಕ್ಯನ ನೀತಿಶಾಸ್ತ್ರ ಹೇಳುತ್ತದೆ.

ಅರ್ಥಪೂರ್ಣ ವಹಿವಾಟುಗಳು: ನಿಮ್ಮ ಬಳಿ ಹಣವಿದ್ದರೆ, ಅದನ್ನು ದೊಡ್ಡ ವಿಷಯಗಳಲ್ಲಿ ಮಾತ್ರ ಬಳಸುವುದು ಉತ್ತಮ. ಏಕೆಂದರೆ ವ್ಯರ್ಥ ಖರ್ಚು ನಿಮ್ಮ ಹಣವನ್ನು ನಾಶಪಡಿಸುವುದಲ್ಲದೆ ಅದನ್ನು ಬೆಳೆಸುವುದಿಲ್ಲ. ಒಳ್ಳೆಯ ಕಾರ್ಯಗಳಿಗೆ ಹಣವನ್ನು ಬಳಸುವುದು, ಅಂದರೆ ಇತರರಿಗೆ ಸಹಾಯ ಮಾಡುವುದು ಸಹ ನಿಮ್ಮ ಅಭಿವೃದ್ಧಿಗೆ ಸೋಪಾನವಾಗಬಹುದು ಎಂದು ಚಾಣಕ್ಯ ಹೇಳಿದ್ದಾರೆ.

ವಿನಯ: ಮೊದಲು ಎಲ್ಲರೂ ಹೇಳುವುದನ್ನು ಆಲಿಸಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಂತರ ವೈಯಕ್ತಿಕ ಅರಿವಿನಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಆಚಾರ್ಯರು ಹೇಳಿದ್ದಾರೆ. ಇತರರ ಮಾತನ್ನು ತಳ್ಳಿಹಾಕಬೇಡಿ, ಅದು ನಾಲ್ವರ ನಡುವೆ ನಮ್ಮ ಮೌಲ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಚಾಣಕ್ಯ ಎಚ್ಚರಿಸಿದ್ದಾರೆ.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us